ಚುನಾವಣೆ ಸಂದರ್ಭ ತೇಜೊವಧೆಯ ಫೊಟೋ ವೈರಲ್ ದ್ರೋಹ | ಫೊಟೋ ವೈರಲ್ ಕೃತ್ಯ ಎಸಗಿದ್ದು ಬಿಜೆಪಿಗರೇ ಎಂದ ಅಮಳ ರಾಮಚಂದ್ರ | ಮಹಿಳೆಯ ಅಗೌರವದ ವೀಡಿಯೋ ಬಗ್ಗೆ ಬಿಜೆಪಿ ಏಕೆ ಮೌನ? | ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ ಕಾಂಗ್ರೆಸ್
ಪುತ್ತೂರು: ಮಹಿಳೆಯೊಂದಿಗಿನ ಜನಪ್ರತಿನಿಧಿಯ ಫೊಟೋ ವೈರಲ್ ಮಾಡಿರುವುದು ಯಾವ ಸಂದರ್ಭದಲ್ಲಿ ಎನ್ನುವುದು ಮುಖ್ಯವಾಗುತ್ತದೆ. ಚುನಾವಣೆ ಸಂದರ್ಭದಲ್ಲಿ, ಅದೂ ಅಭ್ಯರ್ಥಿ ಆಯ್ಕೆಗೆ ಮೊದಲೇ ಮಹಿಳೆಯೊಂದಿಗಿನ ಫೊಟೋವನ್ನು ವೈರಲ್ ಮಾಡಿರುವುದು ದ್ರೋಹಕ್ಕೆ ಸಮನಾದ ಕೃತ್ಯ. ಆದ್ದರಿಂದ ಮಹಿಳೆಗೆ ಅಗೌರವ ತೋರಿಸಿದ ಈ ಘಟನೆಯ ಕುರಿತು ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಸತ್ಯವನ್ನು ಸಮಾಜಕ್ಕೆ ಬಹಿರಂಗಪಡಿಸುವಂತೆ ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಒತ್ತಾಯಿಸಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಇಂತಹ ಘಟನೆಗಳೇನು ಹೊಸತಲ್ಲ. ರೇಣುಕಾಚಾರ್ಯರಿಂದ ಹಿಡಿದು ಇಂದಿನವರೆಗೆ ಹಲವು ಘಟನೆಗಳಿಗೆ […]