ರಾಜಕೀಯ

ಸಿ ಎಂ ವಿಷಯದಲ್ಲಿ ತೀರ್ಮಾನ ಹೈಕಮಾಂಡ್‌ನದ್ದು: ಡಾ. ಜಿ. ಪರಮೇಶ್ವರ್

ಬೆಂಗಳೂರು: ಸಿ ಎಂ ಆಯ್ಕೆ ವಿಷಯ ಹೈಕಮಾಂಡ್‌ಗೆ ಬಿಟ್ಟಿದ್ದು. ಅದರಲ್ಲಿ ಯಾವುದೇ ರೀತಿಯಲ್ಲಿ ತಾವು ಲಾಬಿ ನಡೆಸಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಸಿ ಎಂ ಆಗಬೇಕು ಎನ್ನುವ ಅಭಿಮಾನಿಗಳು ಕೂಗುತ್ತಿರುವ ಘೋಷಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಷಯದಲ್ಲಿ ಯಾವ ಗೊಂದಲಕ್ಕೂ ಒಳಗಾಗಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ನವದೆಹಲಿಗೆ ಹೋಗಿ ನಾನು ಯಾರನ್ನೂ ಭೇಟಿ ಮಾಡಿಲ್ಲ. ಕೆಲವರು ವ್ಯಕ್ತಪಡಿಸುವ ಅಭಿಪ್ರಾಯಗಳಿಗೆ ತಾವೇನೂ ಮಾಡಲು ಸಾಧ್ಯವಿಲ್ಲ. ಇಂತಹ ಚರ್ಚೆಗೆ ನಾನು […]

ಸಿ ಎಂ ವಿಷಯದಲ್ಲಿ ತೀರ್ಮಾನ ಹೈಕಮಾಂಡ್‌ನದ್ದು: ಡಾ. ಜಿ. ಪರಮೇಶ್ವರ್ Read More »

ಪ್ರಧಾನಿ ಮೋದಿ ದ್ವಿದಿನ ಇಸ್ರೇಲ್‌ ಭೇಟಿ : ಗುರುವಾರ ಸಂಸತ್ತಿನಲ್ಲಿ ಭಾಷಣ

ಭಾರತದ ಪ್ರಧಾನಿ ಭೇಟಿಗೆ ಇಸ್ರೇಲ್‌ನಲ್ಲಿ ಸಡಗರ; ಸಂಸತ್ತಿನ ತ್ರಿವರ್ಣ ದೀಪಾಲಂಕಾರ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಎರಡು ದಿನಗಳ ಕಾಲ ಇಸ್ರೇಲ್ ಪ್ರವಾಸ ಕೈಗೊಂಡಿದ್ದಾರೆ. ಮೋದಿ ಆಗಮನಕ್ಕೂ ಮುನ್ನ ಇಸ್ರೇಲ್‌ ಸಂಸತ್‌ನಲ್ಲಿ ತ್ರಿವರ್ಣ ದೀಪಗಳು ಕಂಗೊಳಿಸಿವೆ. ಪ್ರಧಾನಿ ಮೋದಿ ಫೆಬ್ರವರಿ 26ರಂದು ಇಸ್ರೇಲ್ ಸಂಸತ್ತಿನಲ್ಲಿ ಭಾಷಣ ಮಾಡಲಿದ್ದು, ಅಲ್ಲಿನ ಪ್ರಮುಖ ಪತ್ರಿಕೆ ಜೆರುಸಲೇಂ ಪೋಸ್ಟ್​​ನ ಮುಖಪುಟದಲ್ಲಿ ಪ್ರಧಾನಿಯದ್ದೇ ಸುದ್ದಿ ಪ್ರಕಟವಾಗಿದೆ. ಇದೇ ವೇಳೆ ಭಾರತದಲ್ಲಿ ಮೋದಿಯ ಇಸ್ರೇಲ್‌ ಭೇಟಿಯನ್ನು ಕಾಂಗ್ರೆಸ್‌ ಸೇರಿದಂತೆ ಒಂದು ವರ್ಗ ವಿರೋಧಿಸುತ್ತಿದೆ.

ಪ್ರಧಾನಿ ಮೋದಿ ದ್ವಿದಿನ ಇಸ್ರೇಲ್‌ ಭೇಟಿ : ಗುರುವಾರ ಸಂಸತ್ತಿನಲ್ಲಿ ಭಾಷಣ Read More »

ಎಐ ಶೃಂಗದಲ್ಲಿ ಅರೆ ಬೆತ್ತಲೆ ಪ್ರತಿಭಟನೆ : ಯುವ ಕಾಂಗ್ರೆಸ್‌ ಅಧ್ಯಕ್ಷನ ಬಂಧನ

ಪ್ರತಿಭಟನೆಗೆ ಸಂಚು ರೂಪಿಸಿದ್ದ ಉದಯ್‌ ಭಾನು ಚಿಬ್‌ ನವದೆಹಲಿ: ಭಾರತ ಎಐ ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಶರ್ಟ್‌ ಬಿಚ್ಚಿ ಅರೆ ಬೆತ್ತಲೆ ಪ್ರತಿಭಟನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಉದಯ್‌ ಭಾನು ಚಿಬ್‌ ಅವರನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಹಲವಾರು ಸುತ್ತಿನ ವಿಚಾರಣೆಯ ನಂತರ ಬಂಧಿಸಲಾಗಿದೆ. ತಿಲಕ್ ಮಾರ್ಗ ಪೊಲೀಸ್ ಠಾಣೆ ಪೊಲೀಸರಿಂದ ಬಂಧನ ಮಾಡಲಾಗಿದೆ. ಪೊಲೀಸ್ ಠಾಣೆ ಹೊರಗೆ ಭಾರಿ ಭದ್ರತೆ ಕಲ್ಪಿಸಲಾಗಿದೆ. ಎಐ ಸಭೆಯಲ್ಲಿ ಶರ್ಟ್‌ಲೆಸ್

ಎಐ ಶೃಂಗದಲ್ಲಿ ಅರೆ ಬೆತ್ತಲೆ ಪ್ರತಿಭಟನೆ : ಯುವ ಕಾಂಗ್ರೆಸ್‌ ಅಧ್ಯಕ್ಷನ ಬಂಧನ Read More »

ರೈತರ ಮೇಲೆ ಲಾಠಿ ಚಾರ್ಜ್‌ ಖಂಡಿಸಿ ಇಂದು ಶೃಂಗೇರಿ ಬಂದ್‌

ಕಾಡಾನೆ ದಾಳಿಯ ವಿರುದ್ಧ ಪ್ರತಿಭಟಿಸುತ್ತಿದ್ದವರ ಮೇಲೆ ಲಾಠಿ ಚಾರ್ಜ್‌ ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮಹಿಳೆ ಬಲಿಯಾಗಿದ್ದ ಪ್ರಕರಣ ಸಂಬಂಧ ಸರ್ಕಾರ, ಅರಣ್ಯ ಇಲಾಖೆ ವಿರುದ್ಧ ನಡೆಸಿದ ಪ್ರತಿಭಟನೆ ವೇಳೆ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿರುವುದನ್ನು ಖಂಡಿಸಿ ಇಂದು (ಫೆ.23) ಶೃಂಗೇರಿ, ಎನ್.ಆರ್.ಪುರ, ಕೊಪ್ಪ, ಖಾಂಡ್ಯ ಹೋಬಳಿ ಬಂದ್‌ಗೆ ಕರೆ ನೀಡಲಾಗಿದೆ. ರೈತ ಸಂಘಟನೆಗಳು ಬೆಳಗ್ಗೆ 8ರಿಂದ ಸಂಜೆ 5ರತನಕ ಬಂದ್‌ಗೆ ಕರೆ ನೀಡಿದ್ದು, ನಾಗರಿಕ ಹಿತ ರಕ್ಷಣಾ ವೇದಿಕೆ, ರೈತ ಒಕ್ಕೂಟ, ಆಟೋ ಚಾಲಕ-ಮಾಲೀಕರ ಸಂಘ,

ರೈತರ ಮೇಲೆ ಲಾಠಿ ಚಾರ್ಜ್‌ ಖಂಡಿಸಿ ಇಂದು ಶೃಂಗೇರಿ ಬಂದ್‌ Read More »

ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ ನಿಧನ

ಬಂಗಾಲದ ರಾಜಕೀಯ ಚಾಣಕ್ಯ ಎಂಬ ಹಿರಿಮೆ ಹೊಂದಿದ್ದ ನಾಯಕ ಕೋಲ್ಕತ್ತಾ: ಮಾಜಿ ರೈಲ್ವೆ ಸಚಿವ ಮತ್ತು ಒಂದು ಕಾಲದಲ್ಲಿ ತೃಣಮೂಲ ಕಾಂಗ್ರೆಸ್‌ನ ಎರಡನೇ ಕಮಾಂಡರ್ ಆಗಿದ್ದ ಮುಕುಲ್ ರಾಯ್ 71ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ರಾಯ್ ಅವರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಮಧ್ಯರಾತ್ರಿ 1.30ರ ಸುಮಾರಿಗೆ ಕೊನೆಯುಸಿರೆಳೆದರು. ನಿನ್ನೆ ರಾತ್ರಿ ಸುಮಾರು 1.30ರ ಸುಮಾರಿಗೆ ಅವರಿಗೆ ತೀವ್ರ ಹೃದಯಾಘಾತವಾಯಿತು. ವೈದ್ಯರ ಪ್ರಯತ್ನಗಳ ಹೊರತಾಗಿಯೂ ಅವರು ಬದುಕುಳಿಯಲು ಸಾಧ್ಯವಾಗಲಿಲ್ಲ ಎಂದು ಅವರ ಮಗ ಸುಭ್ರಾಂಗ್ಶು

ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ ನಿಧನ Read More »

ಕಾಂಗ್ರೆಸ್‌ ಭವನಗಳಿಗೆ ಸರ್ಕಾರಿ ಜಮೀನು ಅಕ್ರಮವಾಗಿ ಮಂಜೂರು : ಬಿಜೆಪಿ ಆರೋಪ

ಸಂಪುಟ ಸಭೆಯಲ್ಲೇ ಜಮೀನು ಲೂಟಿಯ ನೀಲಿನಕ್ಷೆ ತಯಾರಿ ಎಂದು ಟೀಕೆ ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್‌ ಪಕ್ಷದ ಕಚೇರಿಗಳನ್ನು ಸ್ಥಾಪಿಸಲು 31 ಸರ್ಕಾರಿ ಜಾಗಗಳನ್ನು ಅಕ್ರಮವಾಗಿ ಪಡೆದುಕೊಳ್ಳಲಾಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಈ ಕುರಿತು ಮಾತನಾಡಿರುವ ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸರ್ಕಾರ ಪಡೆದುಕೊಂಡ ಜಾಗಗಳನ್ನು ಸಂಬಂಧಿಸಿದ ಇಲಾಖೆಗೆ ಹಿಂತಿರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಜನರಿಗಿಲ್ಲದ ಜಾಗ, ಅತ್ಯಂತ ಕಡಿಮೆ ದರದಲ್ಲಿ ಕಾಂಗ್ರೆಸ್ ಭವನಕ್ಕೆ ಹೇಗೆ ಲಭ್ಯ? ಇದು ಜನಕಲ್ಯಾಣ ಸರ್ಕಾರವೋ

ಕಾಂಗ್ರೆಸ್‌ ಭವನಗಳಿಗೆ ಸರ್ಕಾರಿ ಜಮೀನು ಅಕ್ರಮವಾಗಿ ಮಂಜೂರು : ಬಿಜೆಪಿ ಆರೋಪ Read More »

ಕುರ್ಚಿ ಕಿತ್ತಾಟದ ಮಧ್ಯೆ ವಿದೇಶಕ್ಕೆ ಹಾರಿದ ಶಾಸಕರು

ಕಾಂಗ್ರೆಸ್‌ ಶಾಸಕರ ವಿದೇಶ ಪ್ರವಾಸಕ್ಕೆ ನಾನಾ ಅರ್ಥ ಬೆಂಗಳೂರು : ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟ ತೀವ್ರಗೊಂಡಿರುವಾಗಲೇ ಕೆಲವು ಶಾಸಕರು ಮತ್ತು ಎಂಎಲ್‌ಸಿಗಳು ವಿದೇಶಕ್ಕಡಡ ಹಾರಿದ್ದಾರೆ. ಇವರೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದವರು ಎನ್ನುವುದು ಗಮನಾರ್ಹ. ಮೊದಲು ಸರ್ಕಾರಿ ಪ್ರಾಯೋಜಿತ ಎಂದು ಹೇಳಲಾಗಿದ್ದ ಈ ಟೂರ್, ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಖಾಸಗಿ ಟ್ರಿಪ್ ಎಂದು ಬದಲಾಗಿದೆ. ಮಂಗಳವಾರ ಮಧ್ಯರಾತ್ರಿ 12.20ರ ವಿಮಾನದಲ್ಲಿ 11 ಶಾಸಕರು, ಎಂಎಲ್​ಸಿಗಳು ವಿದೇಶಕ್ಕೆ ಹಾರಿದ್ದಾರೆ. ಶಾಸಕರಾದ ದೇವೇಂದ್ರಪ್ಪ, ಎಚ್.ಡಿ ತಮ್ಮಯ್ಯ, ಹಂಪನಗೌಡ ಬಾದರ್ಲಿ,

ಕುರ್ಚಿ ಕಿತ್ತಾಟದ ಮಧ್ಯೆ ವಿದೇಶಕ್ಕೆ ಹಾರಿದ ಶಾಸಕರು Read More »

ಸುಳ್ಳು ಜಾಹೀರಾತು ಕೇಸ್‌ : ರಾಹುಲ್‌ ಗಾಂಧಿಗೆ ರಿಲೀಫ್‌

ತಾಂತ್ರಿಕ ಕಾರಣಗಳ ನೆಲೆಯಲ್ಲಿ ರಾಹುಲ್‌ ಗಾಂಧಿ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್‌ ಬೆಂಗಳೂರು: ಸುಳ್ಳು ಜಾಹೀರಾತು ಪ್ರಕರಣದಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿಗೆ ಕರ್ನಾಟಕ ಹೈಕೋರ್ಟ್‌ ರಿಲೀಫ್‌ ನೀಡಿದೆ. ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡಿ ಬಿಜೆಪಿ ವರ್ಚಸ್ಸಿಗೆ ಧಕ್ಕೆ ತಂದ ಆರೋಪದಡಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಹೈಕೋರ್ಟ್‌ ರದ್ದುಪಡಿಸಿದೆ. ತನ್ನ ವಿರುದ್ಧ ದಾಖಲಾಗಿರುವ ಖಾಸಗಿ ದೂರನ್ನು ರದ್ದುಪಡಿಸಬೇಕು ಎಂದು ಕೋರಿ ರಾಹುಲ್‌ ಗಾಂಧಿ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿ

ಸುಳ್ಳು ಜಾಹೀರಾತು ಕೇಸ್‌ : ರಾಹುಲ್‌ ಗಾಂಧಿಗೆ ರಿಲೀಫ್‌ Read More »

ವೋಟ್ ಚೋರಿ ಕಹಾಂ ಹೈ? ಕಾಂಗ್ರೆಸ್ ಪಾರ್ಟಿ ಮೇ ಹೈ : ಅಶೋಕ್‌ ಲೇವಡಿ

ಶಾಸಕ ಸ್ಥಾನದಿಂದ ಎಸ್.ಎನ್.ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಂಡಿರುವ ಹಿನ್ನೆಲೆಯಲ್ಲಿ ಟೀಕೆ ಬೆಂಗಳೂರು: ಬಾಗೇಪಲ್ಲಿ ಶಾಸಕ ಸ್ಥಾನದಿಂದ ಎಸ್.ಎನ್. ಸುಬ್ಬಾರೆಡ್ಡಿ ಆಯ್ಕೆಯನ್ನು ಅಸಿಂಧುಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ ಬೆನ್ನಲ್ಲೇ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಾಂಗ್ರೆಸ್‌ನ ಕಾಲೆಳೆದಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅಶೋಕ್, ವೋಟ್ ಚೋರಿ ಕಹಾ ಹೈ? ಕಾಂಗ್ರೆಸ್ ಪಾರ್ಟಿ ಮೇ ಹೈ! ರಾಹುಲ್ ಗಾಂಧಿ ಈಗ ಬಾಗೇಪಲ್ಲಿಗೆ ಬಂದು ವೋಟ್ ಚೋರಿ, ಇಲೆಕ್ಷನ್ ಚೋರಿ ವಿರುದ್ಧ ಪ್ರತಿಭಟನೆ ಮಾಡ್ತಾರಾ? ಎಂದು

ವೋಟ್ ಚೋರಿ ಕಹಾಂ ಹೈ? ಕಾಂಗ್ರೆಸ್ ಪಾರ್ಟಿ ಮೇ ಹೈ : ಅಶೋಕ್‌ ಲೇವಡಿ Read More »

ಜಿಎಸ್‌ಟಿ ವಂಚಿಸಿದ್ದಕ್ಕೆ ಸುಬ್ಬಾರೆಡ್ಡಿ ಶಾಸಕ ಸ್ಥಾನ ಅಸಿಂಧು

ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾದ ಹೈಕೋರ್ಟ್‌ ತೀರ್ಪು ಬೆಂಗಳೂರು: ಕಾಂಗ್ರೆಸ್‌ನ ಶ್ರೀಮಂತ ಶಾಸಕರಲ್ಲಿ ಒಬ್ಬರಾಗಿರುವ 300 ಕೊಟಿ. ರೂ.ಗೂ ಅಧಿಕ ಸಂಪತ್ತು ಹೊಂದಿರುವ ಬಾಗೇಪಲ್ಲಿಯ ಶಾಸಕ ಸುಬ್ಬಾರೆಡ್ಡಿಯವರ ಆಯ್ಕೆಯನ್ನು ಅಸಿಂಧುಗೊಳಿಸಿ ಹೈಕೋರ್ಟ್‌ ನಿನ್ನೆ ಮಹತ್ವದ ಆದೇಶ ಹೊರಡಿಸಿದೆ. ನಾಮಪತ್ರ ಸಲ್ಲಿಕೆ ವೇಳೆ ಸಂಪೂರ್ಣ ಆಸ್ತಿ ಘೋಷಣೆ ಮಾಡಿಲ್ಲ, ಕ್ರಿಮಿನಲ್ ಕೇಸ್‌ಗಳ ಮಾಹಿತಿಯನ್ನು ಮರೆಮಾಚಿದ್ದಾರೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮುನಿರಾಜು 2023 ಜೂನ್ 24ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಆಸ್ತಿ ಮಾಹಿತಿಯನ್ನು ಉಲ್ಲಂಘನೆ ಮಾಡಿದ್ದು ದೃಢಪಟ್ಟ

ಜಿಎಸ್‌ಟಿ ವಂಚಿಸಿದ್ದಕ್ಕೆ ಸುಬ್ಬಾರೆಡ್ಡಿ ಶಾಸಕ ಸ್ಥಾನ ಅಸಿಂಧು Read More »

error: Content is protected !!
Scroll to Top