ದೇಶ

ಕೋವಿಡ್‌ ಹೆಚ್ಚಳ : ಆರು ರಾಜ್ಯಗಳಿಗೆ ಮುನ್ನೆಚ್ಚರಿಕೆ

ರಾಜ್ಯಕ್ಕೆ ಕೇಂದ್ರದಿಂದ ನಿಯಂತ್ರಣ ನಿರ್ದೇಶನ ದೆಹಲಿ : ದೇಶದಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಾದ ನಿಗಾ ವಹಿಸಲು ಮತ್ತು ಕೋವಿಡ್ ಹರಡುವುದನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಮಿಳುನಾಡು, ಕೇರಳ, ಕರ್ನಾಟಕ ಮತ್ತು ತೆಲಂಗಾಣ ಸೇರಿದಂತೆ ಆರು ರಾಜ್ಯಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ. ಕೇಂದ್ರ ಆರೋಗ್ಯ ಸಚಿವಾಲಯ, ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಕೋವಿಡ್ ಪರೀಕ್ಷೆ ಹೆಚ್ಚಿಸುವಂತೆ, ಹೊಸ ಕೋವಿಡ್ ಪ್ರಕರಣಗಳನ್ನು ಮತ್ತು ಕ್ಲಸ್ಟರ್‌ಗಳ ಮೇಲ್ವಿಚಾರಣೆ ಮಾಡುವಂತೆ […]

ಕೋವಿಡ್‌ ಹೆಚ್ಚಳ : ಆರು ರಾಜ್ಯಗಳಿಗೆ ಮುನ್ನೆಚ್ಚರಿಕೆ Read More »

ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌: ‘ವರ್ಷದ ಗವರ್ನರ್’ ಪ್ರಶಸ್ತಿ

ಮುಂಬಯಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರಿಗೆ ಇಂಟರ್‌ನ್ಯಾಷನಲ್ ಎಕನಾಮಿಕ್ ರಿಸರ್ಚ್ ಜರ್ನಲ್ ಸೆಂಟ್ರಲ್ ಬ್ಯಾಂಕಿಂಗ್ 2023 ರ ವರ್ಷದ ಗವರ್ನರ್ ಪ್ರಶಸ್ತಿ ನೀಡಿದೆ. ಕಷ್ಟದ ಸಮಯದಲ್ಲಿ ಅವರ ಸ್ಥಿರ ನಾಯಕತ್ವಕ್ಕಾಗಿ ದಾಸ್ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೋವಿಡ್‌ 19 ಮತ್ತು ಉಕ್ರೇನ್‌- ರಷ್ಯಾ ನಡುವಿನ ಯುದ್ಧದಿಂದಾಗಿ ಸೃಷ್ಟಿಯಾದ ಬಿಕ್ಕಟ್ಟನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದಕ್ಕೆ ಅಂತರರಾಷ್ಟ್ರೀಯ ಆರ್ಥಿಕ ಸಂಶೋಧನಾ ಜರ್ನಲ್‌ ಆಗಿರುವ ಸೆಂಟ್ರಲ್‌ ಬ್ಯಾಂಕಿಂಗ್‌ 2023ರ ವರ್ಷದ ಗವರ್ನರ್‌ ಪ್ರಶಸ್ತಿ ನೀಡಿದೆ. ಕೋವಿಡ್‌

ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌: ‘ವರ್ಷದ ಗವರ್ನರ್’ ಪ್ರಶಸ್ತಿ Read More »

ರಾಜ್ಯದ 865 ಗಡಿ ಗ್ರಾಮಗಳಲ್ಲಿ ಮಹಾರಾಷ್ಟ್ರದ ಆರೋಗ್ಯ ವಿಮೆ ಯೋಜನೆ: ಅಮಿತ್ ಶಾ ಗೆ ದೂರು- ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದ 865 ಗಡಿ ಗ್ರಾಮಗಳಲ್ಲಿ ಆರೋಗ್ಯ ವಿಮಾ ಯೋಜನೆ ಜಾರಿಗೊಳಿಸುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು ಕ್ಷಮಿಸಲಾರದ ಅಪರಾಧವಾಗಿದ್ದು, ಈ ವಿಚಾರದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ಸಲ್ಲಿಸಲಾಗುವುದು ಎಂದಿದ್ದಾರೆ.ಕಳೆದ ಡಿಸೆಂಬರ್ ನಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದಾಗ ಅಮಿತ್ ಶಾ ಉಭಯ ರಾಜ್ಯಗಳ ಮುಖ್ಯಮಂತ್ರಿ ಸಭೆ ಕರೆದು, ಸುಪ್ರೀಂಕೋರ್ಟ್ ಆದೇಶ ನೀಡುವವರೆಗೂ ಗಡಿ ವಿಚಾರ ಕುರಿತಂತೆಯೂ ಯಾರೊಬ್ಬರೂ

ರಾಜ್ಯದ 865 ಗಡಿ ಗ್ರಾಮಗಳಲ್ಲಿ ಮಹಾರಾಷ್ಟ್ರದ ಆರೋಗ್ಯ ವಿಮೆ ಯೋಜನೆ: ಅಮಿತ್ ಶಾ ಗೆ ದೂರು- ಸಿಎಂ ಬೊಮ್ಮಾಯಿ Read More »

ಗುಳಿಗ ದೈವವನ್ನು ನಾನು ಟೀಕಿಸಿಲ್ಲ – ಆರಗ ಜ್ಞಾನೇಂದ್ರ ಸ್ಪಷ್ಟನೆ

ಶಿವಮೊಗ್ಗ : ಕರಾವಳಿಯ ಆರಾಧ್ಯ ದೈವ ಗುಳಿಗದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಪಮಾನ ಮಾಡಿದ್ದಾರೆಂಬ ವಿಚಾರದ ಬಗ್ಗೆ ಭಾರೀ ಟೀಕೆ ಎದುರಾಗುತ್ತಿದೆ. ಈ ಬಗ್ಗೆ ಸ್ವತಃ ಸಚಿವರೇ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ವಿರುದ್ಧ ಟೀಕೆ ಮಾಡುವವರು ಯಾರು? ನನಗೆ ಗುಳಿಗ, ಪಂಜುರ್ಲಿ ಕುರಿತು ಗೌರವ ಭಕ್ತಿಯಿದೆ. ನಿನ್ನೆ ಕೂಡ ಒಂದು ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದೇನೆ. ಯಾರಿಗೆ ಈ ದೈವದ ಬಗ್ಗೆ ನಂಬಿಕೆಯಿಲ್ಲ, ವಿಶ್ವಾಸ ಇಲ್ಲ, ಮೂಢನಂಬಿಕೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದವರು ನಿನ್ನೆ ತೀರ್ಥಹಳ್ಳಿಯಲ್ಲಿ

ಗುಳಿಗ ದೈವವನ್ನು ನಾನು ಟೀಕಿಸಿಲ್ಲ – ಆರಗ ಜ್ಞಾನೇಂದ್ರ ಸ್ಪಷ್ಟನೆ Read More »

ಸಭಾಪತಿ ಅವಕಾಶ ನೀಡಿದರೆ ಸಂಸತ್ತಿನಲ್ಲಿ ಮಾತನಾಡುತ್ತೇನೆ: ರಾಹುಲ್ ಗಾಂಧಿ

ದೆಹಲಿ: ವಿದೇಶದಿಂದ ವಾಪಸ್ಸಾದ ಬಳಿಕ ಗುರುವಾರ ಸಂಸತ್ ಭವನಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಲಂಡನ್ ಪ್ರವಾಸದ ವೇಳೆ ಭಾರತ ಅಥವಾ ಸಂಸತ್ತಿನ ವಿರುದ್ಧವಾಗಿ ನಾನು ಏನನ್ನೂ ಮಾತನಾಡಿಲ್ಲ ಎಂದು ಹೇಳಿದ್ದಾರೆ. ಸಭಾಪತಿ ಅವಕಾಶ ನೀಡಿದರೆ ಸಂಸತ್ತಿನಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.ಅವರು ನನಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಿದರೆ, ನಂತರ ನನ್ನ ಅನಿಸಿಕೆಗಳನ್ನು ನಾನು ಹೇಳುತ್ತೇನೆ. ಸಂಸತ್ತಿನ ಒಳಗೆ ಮಾತನಾಡುವುದು ಬಿಜೆಪಿಗೆ ಇಷ್ಟವಾಗುವುದಿಲ್ಲ. ಅವಕಾಶ ನೀಡದಿದ್ದರೆ ಸಂಸತ್ತಿನ ಹೊರಗೆ ಮಾತನಾಡುವುದಾಗಿ’ ಅವರು ಸಂಸತ್ತಿನಿಂದ ಹೊರಡುವಾಗ ಸುದ್ದಿಗಾರರಿಗೆ

ಸಭಾಪತಿ ಅವಕಾಶ ನೀಡಿದರೆ ಸಂಸತ್ತಿನಲ್ಲಿ ಮಾತನಾಡುತ್ತೇನೆ: ರಾಹುಲ್ ಗಾಂಧಿ Read More »

ಅರುಣಾಚಲ ಪ್ರದೇಶ: ಸೇನಾ ಹೆಲಿಕಾಪ್ಟರ್ ಪತನ

ಪೈಲಟ್‌ಗಳಿಗಾಗಿ ಶೋಧ ಕಾರ್ಯ ಅರುಣಾಚಲ ಪ್ರದೇಶ : ಭಾರತೀಯ ಸೇನಾ ಚೀತಾ ಹೆಲಿಕಾಪ್ಟರ್ ಮಾ. 16ರ ಬೆಳಿಗ್ಗೆ ಅರುಣಾಚಲ ಪ್ರದೇಶದ ಬೊಮ್ಡಿಲಾ ಬಳಿ ಪತನಗೊಂಡಿದ್ದು ಪೈಲಟ್‌ಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಚೀತಾ ಹೆಲಿಕಾಪ್ಟರ್ ಇಂದು ಬೆಳಗ್ಗೆ 09:15ರ ಸುಮಾರಿಗೆ ಕಾರ್ಯಾಚರಣೆ ಹಾರಾಟ ಪ್ರಾರಂಭಿಸಿತ್ತು. ಸ್ವಲ್ಪ ಸಮಯದ ನಂತರ ಹೆಲಿಕಾಪ್ಟರ್ ಎಟಿಸಿಯ ಸಂಪರ್ಕವನ್ನು ಕಳೆದುಕೊಂಡಿತು. ನಂತರ ಬೋಮ್ಡಿಲಾ ಪಶ್ಚಿಮದ ಮಂಡ್ಲಾ ಬಳಿ ಪತನಗೊಂಡಿದೆ ಎಂದು ವರದಿಯಾಗಿದೆ. ಸದ್ಯ ಪೈಲಟ್‌ಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. 2022ರಲ್ಲಿ ತವಾಂಗ್‌ನಲ್ಲಿ ಹೆಲಿಕಾಪ್ಟರ್ ಒಂದು

ಅರುಣಾಚಲ ಪ್ರದೇಶ: ಸೇನಾ ಹೆಲಿಕಾಪ್ಟರ್ ಪತನ Read More »

ಗುಳಿಗ ದೈವಕ್ಕೆ ಅವಮಾನ ಗೃಹ ಸಚಿವರ ಹೇಳಿಕೆ ವೈರಲ್

ಮಂಗಳೂರು : ವಿಜಯಕುಮಾರ್‌ ಕೊಡಿಯಾಲ್‌ಬೈಲ್‌ ನಿರ್ದೇಶನದ ಯಶಸ್ವಿ ತುಳು ನಾಟಕ ಶಿವದೂತೆ ಗುಳಿಗೆ ಕುರಿತು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ ಎನ್ನಲಾಗಿರುವ ವ್ಯಂಗ್ಯ ಮಾತೊಂದು ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ತುಳುವರ ಗುಳಿಗ ದೈವಕ್ಕೆ ಅಪಚಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆರಗ ಜ್ಞಾನೇಂದ್ರ ಅವರ ವ್ಯಂಗ್ಯ ಭಾಷಣದ ತುಣುಕನ್ನು ವೈರಲ್‌ಮಾಡಲಾಗಿದೆ. ಮಾ.14ರಂದು ತೀರ್ಥಹಳ್ಳಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಶಿವದೂತೆ ಗುಳಿಗೆ ನಾಟಕ ಆಯೋಜಿಸಿದ್ದರು. ಈ ನಾಟಕ ಪ್ರದರ್ಶನ ಕುರಿತು ಎಲ್ಲೆಡೆ ಪೋಸ್ಟರ್‌ ಅಂಟಿಸಲಾಗಿತ್ತು. ಈ ಬಗ್ಗೆ

ಗುಳಿಗ ದೈವಕ್ಕೆ ಅವಮಾನ ಗೃಹ ಸಚಿವರ ಹೇಳಿಕೆ ವೈರಲ್ Read More »

ಈ ಬೇಸಿಗೆಯಲ್ಲಿ ಇಲ್ಲ ಲೋಡ್‌ಶೆಡ್ಡಿಂಗ್‌ ರಗಳೆ: ನಿರಂತರ ವಿದ್ಯುತ್‌ ಪೂರೈಸಲು ಎಸ್ಕಾಂಗಳ ನಿರ್ಧಾರ

ಬೆಂಗಳೂರು : ಈ ಬೇಸಿಗೆಯಲ್ಲಿ ಜನರಿಗೆ ವಿದ್ಯುತ್‌ ಲೋಡ್‌ಶೆಡ್ಡಿಂಗ್‌ ಚಿಂತೆ ಇಲ್ಲ. ವಿದ್ಯಾರ್ಥಿಗಳ ಪರೀಕ್ಷೆ ಹಾಗೂ ರೈತರ ಹಿತದೃಷ್ಟಿ ಗಮನದಲ್ಲಿಟ್ಟುಕಂಡು ಮುಂದಿನ ಮೂರು ತಿಂಗಳ ಅವಧಿಗೆ ವಿದ್ಯುತ್‌ ಕಡಿತವಾಗದಂತೆ ನೋಡಿಕೊಳ್ಳಲು ಎಸ್ಕಾಂಗಳು ನಿರ್ಧರಿಸಿವೆ.ಬೆಸ್ಕಾಂ ಎಂಡಿ ಮಹಾಂತೇಶ್ ಬೀಳಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರು ಈ ಬೇಸಿಗೆಯಲ್ಲಿ ಜನರಿಗೆ ಲೋಡ್‌ಶೆಡ್ಡಿಂಗ್‌ ರಗಳೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಿದ್ದಾರೆ. ಇದೀಗ ಬೇಸಿಗೆ ಆರಂಭವಾಗಿದ್ದು, ವಿದ್ಯುತ್‌ ಬಳಕೆಯೂ ಹೆಚ್ಚಾಗಿದೆ. ಈಗಾಗಲೇ ಪರೀಕ್ಷೆಗಳು ಆರಂಭವಾಗಿವೆ. ಹಾಗೆಯೇ ರೈತರಿಗೂ

ಈ ಬೇಸಿಗೆಯಲ್ಲಿ ಇಲ್ಲ ಲೋಡ್‌ಶೆಡ್ಡಿಂಗ್‌ ರಗಳೆ: ನಿರಂತರ ವಿದ್ಯುತ್‌ ಪೂರೈಸಲು ಎಸ್ಕಾಂಗಳ ನಿರ್ಧಾರ Read More »

ಪ್ರಧಾನಿ ಮೋದಿಗೆ ನೋಬೆಲ್‌ ಶಾಂತಿ ಪ್ರಶಸ್ತಿ…?

ಚರ್ಚೆಗೆ ಗ್ರಾಸವಾದ ನೋಬೆಲ್‌ ಕಮಿಟಿಯ ವೈಸ್‌ ಚೇರ್‌ ಆಗಿರುವ ಅಸ್ಲೆ ಟೋಜೆ ಹೇಳಿಕೆ ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪ್ರತಿಷ್ಠಿತ ನೋಬೆಲ್‌ ಪ್ರಶಸ್ತಿ ಸಿಗಲಿದೆಯೇ? ಹೀಗೊಂದು ಪ್ರಶ್ನೆ ಈಗ ತೀವ್ರ ಚರ್ಚೆಗೆ ಒಳಪಟ್ಟಿದೆ. ಈ ಚರ್ಚೆ ಹುಟ್ಟು ಹಾಕಿದ್ದು ನೋಬೆಲ್‌ ಕಮಿಟಿಯ ವೈಸ್‌ ಚೇರ್‌ ಆಗಿರುವ ಅಸ್ಲೆ ಟೋಜೆ ಮಾಡಿರುವ ಒಂದು ಟ್ವೀಟ್‌. ಜಾಗತಿಕವಾಗಿ ಮೋದಿಯವರ ಜನಪ್ರಿಯತೆ ಹೆಚ್ಚಾಗುತ್ತಿದೆ. ರಷ್ಯಾ-ಯುಕ್ರೇನ್‌ ಸಮರ, ಜಾಗತಿಕ ಬಿಕ್ಕಟ್ಟುಗಳ ವಿಚಾರದಲ್ಲಿ ಪ್ರಧಾನಿ ಮೋದಿಯವರ ನಿಲುವು ಮತ್ತು ಮಾತುಗಳು ಜಗತ್ತಿನ ಮುಂಚೂಣಿ ರಾಷ್ಟ್ರಗಳಲ್ಲಿ

ಪ್ರಧಾನಿ ಮೋದಿಗೆ ನೋಬೆಲ್‌ ಶಾಂತಿ ಪ್ರಶಸ್ತಿ…? Read More »

ತಾಯಿಯನ್ನು ಕೊಂದು ಹೆಣವನ್ನು 3 ತಿಂಗಳು ಮನೆಯಲ್ಲಿಟ್ಟುಕೊಂಡ ಮಗಳು

ವಾಸನೆ ತಡೆಯಲು 500 ಬಾಟಲಿ ಸೆಂಟ್‌ ಚಿಮುಕಿಸಿದ್ದಳು ಮುಂಬಯಿ : ಮಗಳೇ ತಾಯಿಯನ್ನು ಕೊಂದು ಹೆಣವನ್ನು ಮೂರು ತಿಂಗಳು ಮನೆಯಲ್ಲಿಟ್ಟುಕೊಂಡ ಅಮಾನವೀಯ ಘಟನೆಯೊಂದು ಮುಂಬಯಿಯಲ್ಲಿ ಸಂಭವಿಸಿದೆ. ಮುಂಬಯಿಯ ಲಾಲ್‌ಬಾಗ್‌ನ ರಿಂಪಲ್‌ ಜೈನ್‌ (24) ಈ ಪಾಪಿ ಮಗಳು. ಕಳೆದ ಡಿಸೆಂಬರ್‌ನಲ್ಲಿ ಆಕೆ ತಾಯಿ ಬೀನಾ ಜೈನ್‌ರನ್ನು (55) ಕೊಲೆ ಮಾಡಿದ್ದಳು. ಬಳಿಕ ಶವವನ್ನು ಹಲವಾರು ತುಂಡು ಮಾಡಿ ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿಸಿ ಮನೆಯೊಳಗಿಟ್ಟಿದ್ದಳು. ಬುಧವಾರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿಸಿಟ್ಟಿದ್ದ ಹೆಣ ಪೊಲೀಸರು ತಪಾಸಣೆ

ತಾಯಿಯನ್ನು ಕೊಂದು ಹೆಣವನ್ನು 3 ತಿಂಗಳು ಮನೆಯಲ್ಲಿಟ್ಟುಕೊಂಡ ಮಗಳು Read More »

error: Content is protected !!
Scroll to Top