ದೇಶ

ಹನಿಟ್ರ್ಯಾಪ್‌ ತನಿಖೆಗೆ ಆಗ್ರಹಿಸಿದ್ದ ಅರ್ಜಿದಾರನಿಗೆ ಸುಪ್ರೀಂ ಕೋರ್ಟ್‌ ಹಿಗ್ಗಾಮುಗ್ಗಾ ತರಾಟೆ

ಇಷ್ಟಕ್ಕೂ ಸರ್ವೋಚ್ಚ ನ್ಯಾಯಾಲಯದಲ್ಲಿ ಇಂದು ನಡೆದದ್ದೇನು? ನವದೆಹಲಿ: ದೇಶವಿಡೀ ಸುದ್ದಿ ಮಾಡುತ್ತಿರುವ ಕರ್ನಾಟಕದ ಸಚಿವರು ಮತ್ತು ನ್ಯಾಯಾಧೀಶರ ಮೇಲೆ ನಡೆದಿದೆ ಎನ್ನಲಾದ ಹನಿಟ್ರ್ಯಾಪ್‌ ಪ್ರಕರಣದ ತನಿಖೆ ಕೋರಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರನನ್ನು ಸುಪ್ರೀಂ ಕೋರ್ಟ್‌ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆದಿದೆ.ಹನಿಟ್ರ್ಯಾಪ್‌ ಪ್ರಕರಣದ ಕುರಿತು ತನಿಖೆಗೆ ಆಗ್ರಹಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಇಂದು ವಜಾಗೊಳಿಸಿ ಅರ್ಜಿದಾರನನ್ನು ತರಾಟೆಗೆತ್ತಿಕೊಂಡಿದೆ.ಸುಪ್ರೀಂ ಕೋರ್ಟ್‌ನ ನ್ಯಾ.ವಿಕ್ರಮ್‌ನಾಥ್ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿಯನ್ನು ವಿಚಾರಣೆಗೊಳಪಡಿಸಿ ವಜಾಗೊಳಿಸಿತು. ವಿಚಾರಣೆ ವೇಳೆ […]

ಹನಿಟ್ರ್ಯಾಪ್‌ ತನಿಖೆಗೆ ಆಗ್ರಹಿಸಿದ್ದ ಅರ್ಜಿದಾರನಿಗೆ ಸುಪ್ರೀಂ ಕೋರ್ಟ್‌ ಹಿಗ್ಗಾಮುಗ್ಗಾ ತರಾಟೆ Read More »

ಹೆಂಡತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಯೋಗ ಶಿಕ್ಷಕನನ್ನು 7 ಅಡಿ ಗುಂಡಿಯಲ್ಲಿ ಜೀವಂತ ಹೂತು ಹಾಕಿದ ಗಂಡ

ಮೂರು ತಿಂಗಳ ಬಳಿಕ ಬೆಳಕಿಗೆ ಬಂದ ಆಘಾತಕಾರಿ ಕೊಲೆ ಪ್ರಕರಣ ಚಂಡೀಗಢ : ತನ್ನ ಹೆಂಡತಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಯೋಗ ಶಿಕ್ಷಕನನ್ನು ವ್ಯಕ್ತಿಯೊಬ್ಬ 7 ಅಡಿ ಗುಂಡಿ ಅಗೆದು ಜೀವಂತ ಹೂತು ಹಾಕಿದ ಘಟನೆಯೊಂದು ಹರ್ಯಾಣದ ಚರ್ಖಿ ದಾದ್ರಿ ಎಂಬಲ್ಲಿ ಮೂರು ತಿಂಗಳ ಬೆಳಕಿಗೆ ಬಂದಿದೆ. ರೋಹ್ಟಕ್‌ನ ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ಯೋಗ ಉಪನ್ಯಾಸಕನಾಗಿದ್ದ ಜಗದೀಪ್‌ ಕೊಲೆಯಾದ ವ್ಯಕ್ತಿ. ಮಾ.24ರಂದು ಪೊಲೀಸರು ಅವನ ಶವವನ್ನು ಮೇಲೆತ್ತಿ ಪೋಸ್ಟ್‌ಮಾರ್ಟಂಗೆ ಕಳುಹಿಸಿದ್ದಾರೆ.ಕಳೆದ ಡಿ.24ರಂದು ಜಗದೀಪ್‌ ಕಾಲೇಜಿನಿಂದ ಮನೆಗೆ ಹಿಂದಿರುಗುತ್ತಿದ್ದಾಗ

ಹೆಂಡತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಯೋಗ ಶಿಕ್ಷಕನನ್ನು 7 ಅಡಿ ಗುಂಡಿಯಲ್ಲಿ ಜೀವಂತ ಹೂತು ಹಾಕಿದ ಗಂಡ Read More »

ಮಾ.27ರಂದು ಸಂಸತ್ತಿನಲ್ಲಿ ಛಾವಾ ಸಿನಿಮಾದ ವಿಶೇಷ ಪ್ರದರ್ಶನ

ಚಿತ್ರ ವೀಕ್ಷಿಸಲಿರುವ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ನವದೆಹಲಿ: ಈಗಾಗಲೇ ಜಾಗತಿಕವಾಗಿ ಭರ್ಜರಿ ಯಶಸ್ಸು ಕಂಡಿರುವ ಹಾಗೂ ಒಂದು ವರ್ಗದ ಆಕ್ರೋಶಕ್ಕೂ ಗುರಿಯಾಗಿರುವ ಹಿಂದಿಯ ಛಾವಾ ಸಿನಿಮಾ ಮಾ.27ರಂದು ಸಂಸತ್ತಿನಲ್ಲಿ ಪ್ರದರ್ಶನಗೊಳ್ಳಲಿದೆ. ಸಂಸತ್ತಿನಲ್ಲಿ ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸಚಿವರು ವಿಕ್ಕಿ ಕೌಶಲ್ ನಟನೆಯ ಛಾವಾ ಸಿನಿಮಾ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಮರಾಠ ದೊರೆ ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಸಂಭಾಜಿ ಮಹಾರಾಜರ ಜೀವನಾಧಾರಿತ ಛಾವಾ ಸಿನಿಮಾವನ್ನು ಸಂಸತ್ತಿನ ಗ್ರಂಥಾಲಯ ಕಟ್ಟಡದಲ್ಲಿರುವ ಬಾಲಯೋಗಿ ಸಭಾಂಗಣದಲ್ಲಿ

ಮಾ.27ರಂದು ಸಂಸತ್ತಿನಲ್ಲಿ ಛಾವಾ ಸಿನಿಮಾದ ವಿಶೇಷ ಪ್ರದರ್ಶನ Read More »

ಶ್ರೀಶೈಲಂ ಸುರಂಗ ಕುಸಿತ : ಒಂದು ತಿಂಗಳಾದರೂ ಮುಗಿಯದ ರಕ್ಷಣಾ ಕಾರ್ಯಾಚರಣೆ

ಇನ್ನೊಂದು ಶವಪತ್ತೆ; ಮೃತರ ಸಂಖ್ಯೆ 2ಕ್ಕೇರಿಕೆ, ಒಳಗೆ ಸಿಲುಕಿದ್ದಾರೆ ಇನ್ನೂ ಆರು ಕಾರ್ಮಿಕರು ಹೈದರಾಬಾದ್‌ : ತೆಲಂಗಾಣದ ನಾಗಕರ್ನೂಲ್‌ ಜಿಲ್ಲೆಯಲ್ಲಿ ಸಂಭವಿಸಿದ ಸುರಂಗ ಕುಸಿತದ ರಕ್ಷಣಾ ಕಾರ್ಯಾಚರಣೆ ಒಂದು ತಿಂಗಳಾದರೂ ಮುಗಿದಿಲ್ಲ. ನಿನ್ನೆ ಸುರಂಗದೊಳಗೆ ಇನ್ನೋರ್ವ ಕಾರ್ಮಿಕನ ಶವ ಪತ್ತೆಯಾಗಿದ್ದು, ಇದರೊಂದಿಗೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಅಧಿಕೃತವಾಗಿ ಎರಡಕ್ಕೇರಿದೆ. ಇನ್ನೂ ಆರು ಮಂದಿ ಸುರಂಗದೊಳಗಿದ್ದು, ಅವರ ಸ್ಥಿತಿ ಏನಾಗಿದೆ ಎಂದು ಗೊತ್ತಾಗಿಲ್ಲ. ಮಾ.9ರಂದು ಗುರುಪ್ರೀತ್‌ ಸಿಂಗ್‌ ಎಂಬ ಕಾರ್ಮಿಕನ ಶವ ಪತ್ತೆಯಾಗಿತ್ತು. ನಿನ್ನೆ ಪತ್ತೆಯಾದ ಶವದ

ಶ್ರೀಶೈಲಂ ಸುರಂಗ ಕುಸಿತ : ಒಂದು ತಿಂಗಳಾದರೂ ಮುಗಿಯದ ರಕ್ಷಣಾ ಕಾರ್ಯಾಚರಣೆ Read More »

ಮಂಗಳೂರು-ಮುಂಬಯಿ ಮಧ್ಯೆ ವಂದೇ ಭಾರತ್‌ ರೈಲು ಓಡಿಸಲು ಸಿದ್ಧತೆ

12 ತಾಸಿನಲ್ಲಿ ಮುಂಬಯಿಯಿಂದ ಮಂಗಳೂರು ತಲುಪಲಿರುವ ರೈಲು ಮಂಗಳೂರು: ಮುಂಬಯಿಯಲ್ಲಿ ನೆಲೆಸಿರುವ ಕರಾವಳಿ ಭಾಗದ ಜನರಿಗೆ ರೈಲ್ವೆ ಸಿಹಿಸುದ್ದಿ ನೀಡಿದೆ. ಭಾರಿ ಜನಮೆಚ್ಚುಗೆಗೆ ಪಾತ್ರವಾಗಿರುವ ವಂದೇ ಭಾರತ್ ರೈಲು ಸೇವೆ ಮಂಗಳೂರು-ಮುಂಬಯಿ ಮಧ್ಯೆ ಶುರುವಾಗಲಿದ್ದು, ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಪ್ರಸ್ತುತ ಮುಂಬಯಿ-ಮಂಗಳೂರು ನಡುವಿನ ರೈಲು ಪ್ರಯಾಣಕ್ಕೆ 15-16 ತಾಸು ಹಿಡಿಯುತ್ತದೆ. ವಂದೇ ಭಾರತ್‌ ರೈಲು ಕೇವಲ 12 ತಾಸಿನಲ್ಲಿ ತಲುಪುತ್ತದೆ. ಹೀಗಾಗಿ ವಂದೇ ಭಾರತ್‌ನಿಂದ ಜನರ ಸಮಯ ಬಹಳಷ್ಟು ಉಳಿತಾಯವಾಗಲಿದೆ. ವಂದೇ ಭಾರತ್‌ ಪ್ರಯಾಣ ಆರಾಮದಾಯಕವೂ ಹೌದು.

ಮಂಗಳೂರು-ಮುಂಬಯಿ ಮಧ್ಯೆ ವಂದೇ ಭಾರತ್‌ ರೈಲು ಓಡಿಸಲು ಸಿದ್ಧತೆ Read More »

ಐಪಿಎಲ್‌ 2025: ಇಂದು ಮೊದಲ ಪಂದ್ಯ; ಆರ್‌ಸಿಬಿ-ಕೆಕೆಆರ್‌ ಮುಖಾಮುಖಿ

ತಾರೆಯರ ಮೆರುಗಿನೊಂದಿಗೆ ಕೋಲ್ಕತ್ತಾದಲ್ಲಿ ಉದ್ಘಾಟನೆ ಹೊಸದಿಲ್ಲಿ : ಕ್ರಿಕೆಟ್‌ ಪ್ರೇಮಿಗಳು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಐಪಿಎಲ್‌-2025 ಕ್ರಿಕೆಟ್‌ ಟೂರ್ನಿ ಇಂದಿನಿಂದ ಶುರುವಾಗಲಿದ್ದು, ಅದ್ದೂರಿ ಉದ್ಘಾಟನೆಗೆ ಎಲ್ಲ ತಯಾರಿ ನಡೆದಿದೆ. ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಇಂದು ರಾತ್ರಿ ಸಿನೆಮಾ ತಾರೆಯರು, ಕ್ರಿಕೆಟ್‌ ದಿಗ್ಗಜರು ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಈ ಋತುವಿನ ಐಪಿಎಲ್‌ ಶೂಭಾರಂಭವಾಗಲಿದೆ. ಇದು ಐಪಿಎಲ್‌ 18ನೇ ಆವೃತ್ತಿಯಾಗಿದ್ದು, ಲೀಗ್‌ ಹಂತದ ಮೊದಲ ಪಂದ್ಯ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು

ಐಪಿಎಲ್‌ 2025: ಇಂದು ಮೊದಲ ಪಂದ್ಯ; ಆರ್‌ಸಿಬಿ-ಕೆಕೆಆರ್‌ ಮುಖಾಮುಖಿ Read More »

ವಿಮಾನದಲ್ಲೇ ಪ್ರಯಾಣಿಕ ಸಾವು

ಲ್ಯಾಂಡ್‌ ಆದ ಬಳಿಕವಷ್ಟೆ ಸಿಬ್ಬಂದಿಗೆ ತಿಳಿಯಿತು ಲಖನೌ: ದೆಹಲಿಯಿಂದ ಲಕ್ನೋಗೆ ಬಂದಿಳಿದ ಏರ್​ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಇಂದು ಸಂಭವಿಸಿದೆ. ಆದರೆ ಪ್ರಯಾಣಿಕ ಮೃತಪಟ್ಟ ವಿಚಾರ ವಿಮಾನದ ಸಿಬ್ಬಂದಿಗೆ ತಿಳಿದದ್ದು ವಿಮಾನ ಲ್ಯಾಂಡ್‌ ಆದ ಬಳಿಕ. ಮೃತ ವ್ಯಕ್ತಿಯನ್ನು ಆಸಿಫುಲ್ಲಾ ಅನ್ಸಾರಿ ಎಂದು ಗುರುತಿಸಲಾಗಿದೆ. ಬೆಳಗ್ಗೆ 8.10ಕ್ಕೆ ವಿಮಾನ ಲಖನೌ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿತ್ತು, ಸಿಬ್ಬಂದಿ ಪ್ರಯಾಣಿಕನನ್ನು ಎಬ್ಬಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ವಿಮಾನದಲ್ಲಿದ್ದ ವೈದ್ಯರು ಪ್ರಯಾಣಿಕನನ್ನು

ವಿಮಾನದಲ್ಲೇ ಪ್ರಯಾಣಿಕ ಸಾವು Read More »

ಐಪಿಎಲ್‌ ಕ್ರಿಕೆಟ್‌ ಹಬ್ಬಕ್ಕೆ ಕ್ಷಣಗಣನೆ : ಈ ಸಲ ಹಲವು ನಿಯಮ ಬದಲಾವಣೆ

ನಾಳೆಯಿಂದ ಶುರುವಾಗಲಿದೆ ಎರಡು ತಿಂಗಳ ಕ್ರಿಕೆಟ್‌ ಸಂಭ್ರಮ ಮುಂಬಯಿ: ಚಾಂಪಿಯನ್‌ ಟ್ರೋಫಿ ಮುಗಿದ ಬೆನ್ನಿಗೆ ಇಂಡಿಯನ್ ಪ್ರೀಮಿಯರ್ ಲೀಗ್-2025 (ಐಪಿಎಲ್‌) ಕ್ರಿಕೆಟ್ ಟೂರ್ನಿಗೆ ಕ್ಷಣಗಣನೆ ಪ್ರಾರಂಭವಾಗಿದೆ. 10 ತಂಡಗಳು ಎರಡು ತಿಂಗಳ ಕ್ರಿಕೆಟ್‌ ಹಬ್ಬಕ್ಕೆ ತಯಾರಾಗಿರುವಂತೆಯೇ ಬಿಸಿಸಿಐ ಈ ಸಲ ಐಪಿಎಲ್‌ ನಿಯಮಾವಳಿಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.ಮಾರ್ಚ್ 22ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಚುಟುಕು ಕ್ರಿಕೆಟ್ ಟೂರ್ನಿ ಶುರುವಾಗುತ್ತದೆ. ಐಪಿಎಲ್ 18ನೇ ಋತುವಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐ ಮುಂದಾಗಿದ್ದು, ಕೊರೊನಾ ಸಂದರ್ಭದಲ್ಲಿ ನಿಷೇಧಿಸಲಾಗಿದ್ದ ಹಳೆ ನಿಯಮ

ಐಪಿಎಲ್‌ ಕ್ರಿಕೆಟ್‌ ಹಬ್ಬಕ್ಕೆ ಕ್ಷಣಗಣನೆ : ಈ ಸಲ ಹಲವು ನಿಯಮ ಬದಲಾವಣೆ Read More »

ಪಾಕಿಸ್ಥಾನಕ್ಕೆ ರಕ್ಷಣಾ ಮಾಹಿತಿ ರವಾನಿಸುತ್ತಿದ್ದ ಐಎಸ್‌ಐ ಏಜೆಂಟ್‌ ಸೆರೆ

ಬೆಂಗಳೂರಿನ ಬಿಇಎಲ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಬೆಂಗಳೂರು : ಗುಪ್ತಚರ ಇಲಾಖೆ ಹಾಗೂ ಸೇನಾ ಇಂಟೆಲಿಜೆನ್ಸ್ ವಿಭಾಗ ನಡೆಸಿದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಪಾಕಿಸ್ಥಾನಕ್ಕೆ ರಕ್ಷಣಾ ಮಾಹಿತಿ ರವಾನಿಸುತ್ತಿದ್ದ ಗೂಢಚಾರನೊಬ್ಬನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.ಉತ್ತರಪ್ರದೇಶದ ಗಾಜಿಯಾಬಾದ್​​​ ಮೂಲದ ನಿವಾಸಿ ಬಿಇಎಲ್​​​ನಲ್ಲಿ ಕೆಲಸ ಮಾಡುತ್ತಿದ್ದ ದೀಪ್‌ರಾಜ್​ ಚಂದ್ರ ಎಂಬಾತ ಬಂಧನಕ್ಕೊಳಗಾದ ವ್ಯಕ್ತಿ. ಈತ ಪಾಕಿಸ್ಥಾನದ ಗೂಢಚಾರ ಸಂಸ್ಥೆ ಐಎಸ್‌ಐ ಪರವಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಬಾಹ್ಯಾಕಾಶ ಮತ್ತು ಸೇನೆಗಾಗಿ ಆಧುನಿಕ ರಕ್ಷಣಾ ಉಪಕರಣಗಳನ್ನು ತಯಾರಿಸುವ ಕೇಂದ್ರ ಸರಕಾರ ಸ್ವಾಮ್ಯದ ಬಿಇಎಲ್​ನ ಪ್ರಾಡಕ್ಟ್​​​

ಪಾಕಿಸ್ಥಾನಕ್ಕೆ ರಕ್ಷಣಾ ಮಾಹಿತಿ ರವಾನಿಸುತ್ತಿದ್ದ ಐಎಸ್‌ಐ ಏಜೆಂಟ್‌ ಸೆರೆ Read More »

ನಾಗಪುರ ಹಿಂಸಾಚಾರಕ್ಕೆ ಕುರಾನ್‌ ಸುಟ್ಟ ವದಂತಿ ಕಾರಣ

ಹಿಂಸಾಚಾರಕ್ಕೆ ಮೊದಲೇ ತಯಾರಿ ನಡೆದಿತ್ತು ಎಂದು ಬಿಜೆಪಿ ಆರೋಪ ಮುಂಬಯಿ: ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯಿರುವ ನಾಗಪುರ ನಗರದ ಮಹಲ್‌ನಲ್ಲಿ ನಿನ್ನೆ ತಡರಾತ್ರಿ ನಡೆದಿರುವ ಕೋಮು ಹಿಂಸಾಚಾರ ಪೂರ್ವ ನಿಯೋಜಿತ ಎಂದು ಬಿಜೆಪಿ ಆರೋಪಿಸಿದೆ. ಹಿಂದುಗಳ ಅಂಗಡಿ, ಮನೆ ಮತ್ತು ವಾಹನಗಳನ್ನು ಗುರಿಮಾಡಿಕೊಂಡು ದಾಳಿ ಮಾಡಲಾಗಿದೆ. ಇದಕ್ಕೂ ಮೊದಲು ಈ ಭಾಗದಲ್ಲಿರುವ ಎಲ್ಲ ಸಿಸಿಟಿವಿಗಳನ್ನು ಧ್ವಂಸ ಮಾಡಿದ್ದಾರೆ. ಭಾರಿ ಪ್ರಮಾಣದಲ್ಲಿ ಕಲ್ಲು ತೂರಾಟವಾಗಿದ್ದು ಪೊಲೀಸರ ಸಹಿತ ಅನೇಕ ಮಂದಿ ಗಾಯಗೊಂಡಿದ್ದಾರೆ. ಇವೆಲ್ಲ ಪೂರ್ವ ನಿಯೋಜಿತ ಕೃತ್ಯ. ಗಲಭೆಗೆ ಮೊದಲೇ

ನಾಗಪುರ ಹಿಂಸಾಚಾರಕ್ಕೆ ಕುರಾನ್‌ ಸುಟ್ಟ ವದಂತಿ ಕಾರಣ Read More »

error: Content is protected !!
Scroll to Top