ದೇಶ

ಸಿದ್ದರಾಮಯ್ಯ ಅವಧಿಯಲ್ಲಿ ಟೀ-ಬಿಸ್ಕತ್‌ ಹೆಸರಲ್ಲಿ 200 ಕೋ. ರೂ. ಲೂಟಿ

ದಾಖಲೆ ಸಹಿತ ಬಿಜೆಪಿ ಆರೋಪ ಬೆಂಗಳೂರು : ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೇವಲ ಕಾಫಿ, ತಿಂಡಿ, ಬಿಸ್ಕಿಟ್‌ಗಳ ಹೆಸರಿನಲ್ಲಿ 200 ಕೋಟಿ ರೂ.ಗೂ ಹೆಚ್ಚು ಲೂಟಿ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ಬರೀ ಕಾಫಿ, ಬಿಸ್ಕಿಟ್‌ಗೆ 200 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ಬಿಜೆಪಿ ವಕ್ತಾರ ಎನ್.​ಆರ್. ರಮೇಶ್ ಗಂಭೀರ ಆರೋಪ ಮಾಡಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಎನ್.ಆರ್.ರಮೇಶ್ ದಾಖಲೆ ಸಮೇತ ಸಿದ್ದರಾಮಯ್ಯ ವಿರುದ್ಧ 200 ಕೋಟಿ ಹಗರಣದ ನಾಹಿತಿ […]

ಸಿದ್ದರಾಮಯ್ಯ ಅವಧಿಯಲ್ಲಿ ಟೀ-ಬಿಸ್ಕತ್‌ ಹೆಸರಲ್ಲಿ 200 ಕೋ. ರೂ. ಲೂಟಿ Read More »

ಮಂಗಳೂರು ಕುಕ್ಕರ್‌ ಸ್ಫೋಟದ ಉಗ್ರ ಆಸ್ಪತ್ರೆಯಿಂದ ಬಿಡುಗಡೆ

ಎರಡೂವರೆ ತಿಂಗಳು ಸರಕಾರಿ ಖರ್ಚಿನಲ್ಲಿ ಚಿಕಿತ್ಸೆ ಬೆಂಗಳೂರು : ಮಂಗಳೂರು ಆಟೋರಿಕ್ಷಾ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಉಗ್ರ ಮೊಹಮ್ಮದ್ ಶಾರಿಕ್ ಸೋಮವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅವನನ್ನು ವಶಕ್ಕೆ ತೆಗೆದುಕೊಂಡಿದೆ.ಕಳೆದ ನ.19 ರಂದು ಮಂಗಳೂರಿನ ಕಂಕನಾಡಿ ಬಳಿ ಆಟೋರಿಕ್ಷಾದಲ್ಲಿ ಕುಕ್ಕರ್‌ನಲ್ಲಿ ಬಾಂಬಿಟ್ಟುಕೊಂಡು ಸಾಗಿಸುತ್ತಿದ್ದಾಗ ಅದು ಸ್ಫೋಟಿಸಿ ಶಾರಿಕ್‌ ಜತೆ ರಿಕ್ಷಾ ಚಾಲಕ ಪುರುಷೋತ್ತಮ್ ಗಾಯಗೊಂಡಿದ್ದರು. 24 ವರ್ಷದ ತೀರ್ಥಹಳ್ಳಿ ಮೂಲದ ಆರೋಪಿ ಶಾರಿಕ್ ಗಂಭೀರ ಸ್ವರೂಪದ ಗಾಯವಾಗಿತ್ತು. ಮಂಗಳೂರಿನ

ಮಂಗಳೂರು ಕುಕ್ಕರ್‌ ಸ್ಫೋಟದ ಉಗ್ರ ಆಸ್ಪತ್ರೆಯಿಂದ ಬಿಡುಗಡೆ Read More »

ಶೂಟಿಂಗ್‌ ವೇಳೆ ಬಿದ್ದು ಗಾಯಗೊಂಡ ಅಮಿತಾಭ್‌ ಬಚ್ಚನ್‌

ಮುಂಬಯಿ : ಹಿರಿಯ ನಟ ಅಮಿತಾಭ್ ಬಚ್ಚನ್​ ಅವರು ಶೂಟಿಂಗ್ ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಶೂಟಿಂಗ್ ವೇಳೆ ಬಿದ್ದ ಬಿರುಸಿಗೆ ಅಮಿತಾಭ್ ಬಚ್ಚನ್​ ಪಕ್ಕೆಲುಬು ಬಳಿ ಗಾಯವಾಗಿವಾಗಿದೆ.‘ಪ್ರಾಜೆಕ್ಟ್ ಕೆ’ ಚಿತ್ರದ ಶೂಟಿಂಗ್ ವೇಳೆ ಘಟನೆ ಸಂಭವಿಸಿದೆ.ಚಿತ್ರೀಕರಣ ಹೈದರಾಬಾದ್ ಬಳಿ ನಡೆಯುತ್ತಿತ್ತು, ಸದ್ಯ ಮುಂಬಯಿಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ಮೇರುನಟರಾಗಿರುವ ಅಮಿತಾಭ್‌ ಬಚ್ಚನ್‌ ಎರಡು ಬಾರಿ ಕೋವಿಡ್‌ ಗೆದ್ದಿದ್ದರು. ದೇಹದ ಕೆಲವೊಂದು ಅಂಗಾಂಗಗಳು ವೈಫಲ್ಯವಾಗಿದ್ದವು ಎಂದು ಅಮಿತಾಭ್‌ ಹೇಳಿಕೊಂಡಿದ್ದರು. ಆಗ ಕೆಲವು ಅಂಗಾಂಗಗಳು ಕೆಲಸ

ಶೂಟಿಂಗ್‌ ವೇಳೆ ಬಿದ್ದು ಗಾಯಗೊಂಡ ಅಮಿತಾಭ್‌ ಬಚ್ಚನ್‌ Read More »

ಭ್ರಷ್ಟಾಚಾರ ಆರೋಪಿ ಶಾಸಕ ವಿರೂಪಾಕ್ಷಪ್ಪ ಜಾಮೀನಿಗೆ ಅರ್ಜಿ

ಬೆಂಗಳೂರು : ಲಂಚ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನಿಗಾಗಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಶಾಸಕರ ಪುತ್ರ ಪ್ರಶಾಂತ್ ಮಾಡಾಳ್‌ 40 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಶಾಸಕರು ನಾಪತ್ತೆಯಾಗಿದ್ದಾರೆ. ಲೋಕಾಯುಕ್ತ ಪೊಲೀಸರು ಸೋಮವಾರ ವಿಚಾರಣೆಗೆ ಬರುವಂತೆ ಮಾಡಾಳ್ ವಿರೂಪಾಕ್ಷಪ್ಪಗೆ ನೋಟಿಸ್ ನೀಡಿದ್ದಾರೆ.ಸೋಮವಾರ ವಕೀಲರ ಮೂಲಕ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನಿಗಾಗಿ ಕರ್ನಾಟಕ ಹೈಕೋರ್ಟ್‌ಗೆ

ಭ್ರಷ್ಟಾಚಾರ ಆರೋಪಿ ಶಾಸಕ ವಿರೂಪಾಕ್ಷಪ್ಪ ಜಾಮೀನಿಗೆ ಅರ್ಜಿ Read More »

ಕೂಲಿ ಕಾರ್ಮಿಕರಿಗೆ ಶ್ರಮಿಕ ನಿವಾಸ ನಿರ್ಮಿಸಲು ಮುಂದಾದ ರಾಜ್ಯ ಸರಕಾರ

ಬೆಂಗಳೂರು: ದೇಶದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಾದ್ಯಂತ ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸ ಮಾಡುವ ಕಟ್ಟಡ ಕಾರ್ಮಿಕರಿಗೆ, ವಿಶೇಷವಾಗಿ ವಲಸೆ ಕಾರ್ಮಿಕರಿಗೆ ರಾಜ್ಯ ಸರ್ಕಾರ ವಸತಿ ಸಮುಚ್ಚಯಗಳನ್ನು ನಿರ್ಮಾಣ ಮಾಡಿ, ನೆರವಿಗೆ ಮುಂದಾಗಿದೆ.ಈ ವಸತಿ ಸಮುಚ್ಚಯವು ರಸ್ತೆ ಬದಿಗಳಲ್ಲಿ ಟೆಂಟ್ ಗಳನ್ನು ಹಾಕಿಕೊಂಡು ಜೀವನ ನಡೆಸುವ ಕೂಲಿ ಕಾರ್ಮಿಕರಿಗೆ ಗೌರವಯುತವಾಗಿ ಜೀವನ ನಡೆಸಲು ಸಹಾಯ ಮಾಡುತ್ತದೆ. ಕಟ್ಟಡ ಕಾಮಗಾರಿಗಳು ಪೂರ್ಣಗೊಳ್ಳುವವರೆಗೂ ಕಾರ್ಮಿಕರು ಅಲ್ಲಿ ಜೀವನ ನಡೆಸಬಹುದು ಎಂದು ಕಾರ್ಮಿಕ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. ಕಾರ್ಮಿಕ ಇಲಾಖೆಯು ಈಗಾಗಲೇ

ಕೂಲಿ ಕಾರ್ಮಿಕರಿಗೆ ಶ್ರಮಿಕ ನಿವಾಸ ನಿರ್ಮಿಸಲು ಮುಂದಾದ ರಾಜ್ಯ ಸರಕಾರ Read More »

ಈಶಾನ್ಯ ಭಾರತದ ಚುನಾವಣಾ ಫಲಿತಾಂಶ ದೇಶದ ಪ್ರಗತಿ, ಸ್ಥಿರತೆಗೆ ಪ್ರೇರಣೆ ಎಂದ ಮೋದಿ

ತ್ರಿಪುರಾ, ನಾಗಾಲ್ಯಾಂಡ್ ಎನ್.ಡಿ.ಎ.ಗೆ ಸ್ಪಷ್ಟ ಬಹುಮತ | ಮೇಘಾಲಯದಲ್ಲಿ ಎನ್.ಸಿ.ಪಿ. ಜೊತೆ ಬಿಜೆಪಿ ಸರ್ಕಾರ! ನವದೆಹಲಿ: ಗುರುವಾರ ಪ್ರಕಟವಾದ ಈಶಾನ್ಯ ಭಾರತದ ಚುನಾವಣಾ ಫಲಿತಾಂಶ ದೇಶದ ಪ್ರಗತಿ, ಸ್ಥಿರತೆಗೆ ಪ್ರೇರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸರಣಿ ಟ್ವೀಟಿನಲ್ಲಿ ತಿಳಿಸಿದ್ದಾರೆ. ತ್ರಿಪುರಾ, ನಾಗಾಲ್ಯಾಂಡಿನಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಸ್ಪಷ್ಟ ಬಹುಮತ ಪಡೆದಿದ್ದರೆ, ಮೇಘಾಲಯದಲ್ಲಿ ಎನ್.ಸಿ.ಪಿ. ಜೊತೆಗೆ ಬಿಜೆಪಿ ಮೈತ್ರಿ ಸರಕಾರ ರಚನೆಯಾಗಲಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ನರೇಂದ್ರ ಮೋದಿ, ‘ಧನ್ಯವಾದ ತ್ರಿಪುರಾ! ಈ ಮತ ಪ್ರಗತಿ ಮತ್ತು ಸ್ಥಿರತೆಗಾಗಿ. ಬಿಜೆಪಿಯು ರಾಜ್ಯದ ಅಭಿವೃದ್ಧಿಯ ಪಥಕ್ಕೆ ಉತ್ತೇಜನ ನೀಡಲಿದೆ. ತ್ರಿಪುರಾದಲ್ಲಿ ಬೇರು ಮಟ್ಟದಿಂದ ಅದ್ಬುತವಾಗಿ ಶ್ರಮಿಸಿದ ಬಿಜೆಪಿಯ ಎಲ್ಲ ಕಾರ್ಯಕರ್ತರ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ತ್ರಿಪುರಾ ಫಲಿತಾಂಶ:

ಈಶಾನ್ಯ ಭಾರತದ ಚುನಾವಣಾ ಫಲಿತಾಂಶ ದೇಶದ ಪ್ರಗತಿ, ಸ್ಥಿರತೆಗೆ ಪ್ರೇರಣೆ ಎಂದ ಮೋದಿ Read More »

ನಾಗಾಲ್ಯಾಂಡ್​ನಲ್ಲಿ ಮೊದಲ ಬಾರಿಗೆ ಮಹಿಳಾ ಶಾಸಕಿ ಆಯ್ಕೆ : ಎನ್‌ಡಿಪಿಪಿಯ ಹೆಖಾನಿ ಜಖಾಲು ಅವರಿಗೆ ಐತಿಹಾಸಿಕ ಗೆಲುವು

ಕೋಹಿಮ: ನಾಗಾಲ್ಯಾಂಡ್ ರಾಜ್ಯ ಸ್ಥಾನಮಾನವನ್ನು ಪಡೆದ 60 ವರ್ಷಗಳ ನಂತರ ಇಂದು ಮೊದಲ ಬಾರಿ ಮಹಿಳಾ ಶಾಸಕಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ಮಿತ್ರಪಕ್ಷವಾದ ಎನ್‌ಡಿಪಿಪಿಯ ಹೆಕಾನಿ ಜಖಾಲು ಅವರು ದಿಮಾಪುರ್ 3 ಕ್ಷೇತ್ರದಿಂದ ಗೆದ್ದಿದ್ದಾರೆ. ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಒಟ್ಟು 183 ಅಭ್ಯರ್ಥಿಗಳ ಪೈಕಿ ನಾಲ್ವರು ಮಹಿಳೆಯರಲ್ಲಿ 48 ವರ್ಷದ ವಕೀಲೆ ಹೆಕಾನಿ ಜಖಾಲು ಒಬ್ಬರು. ಪಶ್ಚಿಮ ಅಂಗಮಿ ಕ್ಷೇತ್ರದಲ್ಲಿ ಎನ್‌ಡಿಪಿಪಿಯ ಮತ್ತೊಬ್ಬ ಮಹಿಳಾ ಅಭ್ಯರ್ಥಿ ಸಲ್ಹೌಟುನೊ ಕ್ರೂಸ್ ಮುನ್ನಡೆಯಲ್ಲಿದ್ದಾರೆ. ಆಡಳಿತಾರೂಢ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟ ರಾಜ್ಯದಲ್ಲಿ ಮೂರು

ನಾಗಾಲ್ಯಾಂಡ್​ನಲ್ಲಿ ಮೊದಲ ಬಾರಿಗೆ ಮಹಿಳಾ ಶಾಸಕಿ ಆಯ್ಕೆ : ಎನ್‌ಡಿಪಿಪಿಯ ಹೆಖಾನಿ ಜಖಾಲು ಅವರಿಗೆ ಐತಿಹಾಸಿಕ ಗೆಲುವು Read More »

ಬಿಜೆಪಿಗೆ ಹರಿದು ಬಂತು 1917 ಕೋ.ರೂ. ದೇಣಿಗೆ

ಕಾಂಗ್ರೆಸ್‌ ಹಿಂದಿಕ್ಕಿದ ಟಿಎಂಸಿ ದ್ವಿತೀಯ ಸ್ಥಾನದಲ್ಲಿ ಹೊಸದಿಲ್ಲಿ : ಬಿಜೆಪಿ 2021-22ನೇ ಸಾಲಿನ ಆರ್ಥಿಕ ವರ್ಷದಲ್ಲಿ ಬರೊಬ್ಬರಿ 1917 ಕೋಟಿ ದೇಣಿಗೆ ಪಡೆದುಕೊಂಡಿದೆ. ಎಂಟು ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷಗಳಿಗೆ ಭಾರತದಾದ್ಯಂತ ಒಟ್ಟು 3289.34 ಕೋಟಿ ರೂ ದೇಣಿಗೆ ಸಂದಾಯವಾಗಿದ್ದು, ಈ ಪೈಕಿ ಅರ್ಧಕ್ಕೂ ಹೆಚ್ಚು ಮೊತ್ತವನ್ನು ಬಿಜೆಪಿಯೊಂದೇ ಪಡೆದುಕೊಂಡಿದೆ. ಬಿಜೆಪಿಯ ಪ್ರಮುಖ ಎದುರಾಳಿಯಾಗಿರುವ ಕಾಂಗ್ರೆಸ್‌ಗೆ ಸಿಕ್ಕಿರುವುದು 541 ಕೋ. ರೂ. ಮಾತ್ರ. ವಿಶೇಷವೆಂದರೆ ಕಾಂಗ್ರೆಸ್‌ಗಿಂತ ಹೆಚ್ಚು ದೇಣಿಗೆ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್‌ಗೆ ಹರಿದುಬಂದಿದೆ. ಚುನಾವಣಾ

ಬಿಜೆಪಿಗೆ ಹರಿದು ಬಂತು 1917 ಕೋ.ರೂ. ದೇಣಿಗೆ Read More »

ಭಾರತೀಯ ಸೇನೆಯಿಂದ ಚೀನಾ, ಪಾಕ್ ಗಡಿ ಭಾಗಗಳಿಗೆ 307 ಹೊವಿಟ್ಜರ್‌ಗಳ ಖರೀದಿ

ನವದೆಹಲಿ : ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾದತ್ತ ದೃಢವಾದ ಹೆಜ್ಜೆ ಇರಿಸಲು ಚೀನಾ, ಪಾಕಿಸ್ತಾನ ಗಡಿಗಳಿಗೆ ನಿಯೋಜಿಸಲು ರಕ್ಷಣಾ ಸಚಿವಾಲಯ ಭಾರತೀಯ ಸೇನೆಯಿಂದ 307 ಅತ್ಯಾಧುನಿಕ ಟೋವ್ಡ್ ಆರ್ಟಿಲರಿ ಗನ್ ಸಿಸ್ಟಮ್ಸ್‌ಗಳ ಖರೀದಿಗೆ ಪ್ರಸ್ತಾವನೆ ಬಂದಿದೆ. ಈ ಪ್ರಸ್ತಾವನೆ 1 ಬಿಲಿಯನ್ ಡಾಲರ್ ಮೌಲ್ಯದ್ದಾಗಿದ್ದು, ಸಂಪುಟ ಸಮಿತಿ ಅನುಮೋದನೆಗೆ ಕಳಿಸಲಾಗಿದೆ. ಇದು ದೇಶಿಯವಾಗಿ ತಯಾರಾಗಲಿರುವ ಹೊವಿಟ್ಜರ್‌ಗಳ ಮೊದಲ ಖರೀದಿಯಾಗಿರಲಿದ್ದು, 50 ಕೀ.ಮೀ ವ್ಯಾಪ್ತಿವರೆಗಿನ ಟಾರ್ಗೆಟ್‌ಗಳನ್ನು ತಲುಪುವ ಸಾಮರ್ಥ್ಯವನ್ನು ಹೊಂದಿರಲಿದೆ. ಈ ಗನ್‌ಗಳ ಪರೀಕ್ಷಾರ್ಥ ಪ್ರಯೋಗವನ್ನು ಸೇನಾಪಡೆಗಳು

ಭಾರತೀಯ ಸೇನೆಯಿಂದ ಚೀನಾ, ಪಾಕ್ ಗಡಿ ಭಾಗಗಳಿಗೆ 307 ಹೊವಿಟ್ಜರ್‌ಗಳ ಖರೀದಿ Read More »

ಅಡುಗೆ ಅನಿಲ ಬೆಲೆ 50 ರೂ. ಏರಿಕೆ | ವಾಣಿಜ್ಯ ಬಳಕೆ ಸಿಲಿಂಡರ್‌ ಬೆಲೆ 350 ರೂ. ಹೆಚ್ಚಳ

ಹೊಸದಿಲ್ಲಿ : ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಯ ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆಯಾಗಿದೆ. ಗೃಹ ಬಳಕೆಯ ಸಿಲಿಂಡರ್‌ 50 ರೂ. ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆಯಲ್ಲಿ 350 ರೂ. ಏರಿಕೆ ಮಾಡುವ ಮೂಲಕ ತೈಲ ಕಂಪನಿಗಳು ಜನರಿಗೆ ಶಾಕ್‌ ನೀಡಿವೆ. ಅದರಲ್ಲೂ ಚುನಾವಣೆ ಎದುರಿಸುತ್ತಿರುವ ಕರ್ನಾಟಕದಲ್ಲಿ ವಿಪಕ್ಷಗಳ ಪಾಲಿಗೆ ಸರಕಾರವನ್ನು ಟೀಕಿಸಲು ಅತ್ಯುತ್ತಮ ಅಸ್ತ್ರ ಸಿಕ್ಕಿದಂತಾಗಿದೆ. ಬೆಲೆ ಏರಿಕೆ ಇಂದಿನಿಂದಲೇ ಜಾರಿಗೆ ಬರಲಿದೆ. ಹಲವು ತಿಂಗಳುಗಳ ಕಾಲ ಗೃಹಬಳಕೆಯ ಸಿಲಿಂಡರ್‌ ದರ ಪರಿಷ್ಕರಣೆಯಾಗಿರಲಿಲ್ಲ. ಆದರೆ

ಅಡುಗೆ ಅನಿಲ ಬೆಲೆ 50 ರೂ. ಏರಿಕೆ | ವಾಣಿಜ್ಯ ಬಳಕೆ ಸಿಲಿಂಡರ್‌ ಬೆಲೆ 350 ರೂ. ಹೆಚ್ಚಳ Read More »

error: Content is protected !!
Scroll to Top