ದೇಶ

ಮಂಗಳೂರಿಗೆ ಬರಲಿದೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು

ಮಂಗಳೂರು : ಸೆಮಿ ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳೂರಿಗೆ ಆಗಮಿಸಲಿದೆ. ರೈಲು ಸಂಚಾರಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿರ್ವಹಣೆಗಾಗಿ ಮೂಲಸೌಕರ್ಯ ಒದಗಿಸಲು ಟೆಂಡರ್ ಕರೆಯಲಾಗಿದೆ. ರೈಲ್ವೆಯ ಪಾಲಕ್ಕಾಡ್ ವಿಭಾಗ ಮತ್ತು ದಕ್ಷಿಣ ರೈಲ್ವೆ ವಿಭಾಗ ಜಂಟಿಯಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿರ್ವಹಣೆಗಾಗಿ ಮೂಲಸೌಕರ್ಯ ಒದಗಿಸಲು ಟೆಂಡರ್ ಕರೆದಿದೆ. ಈ ಮೂಲಕ ಕರ್ನಾಟಕದ ಕರಾವಳಿಗೆ ಭಾರತೀಯ ರೈಲ್ವೆಯ ಮೊದಲ ಸೆಮಿ ಹೈ […]

ಮಂಗಳೂರಿಗೆ ಬರಲಿದೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು Read More »

ಕಲಬುರುಗಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1.90 ಕೋಟಿ ರೂ. ವಶ

ಕಲಬುರಗಿ : ಚುನಾವಣೆ ಘೋಷಣೆಯಾಗುವುದಕ್ಕೂ ಮೊದಲೇ ಹಣ ಮತ್ತು ಉಡುಗೊರೆ ಹಂಚುವ ಭರಾಟೆ ಶುರುವಾಗಿದೆ. ಕಲಬುರಗಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು 1.90 ಕೋಟಿ ರೂ.ಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸ್ಥಾಪಿಸಲಾದ ಚೆಕ್ ಪೋಸ್ಟ್‌ಗಳಲ್ಲಿ ಬುಧವಾರ ಯಾವುದೇ ದಾಖಲೆ ಇಲ್ಲದ ಅಂದಾಜು 1.90 ಕೋಟಿ ರೂ. ಸಾಗಿಸುತ್ತಿದ್ದಾಗ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ ವಿ.‌ ಗುರುಕರ್ ತಿಳಿಸಿದ್ದಾರೆ. ಇದರಲ್ಲಿ ಕಮಲಾಪುರ ತಾಲ್ಲೂಕಿನ ಕಿಣ್ಣಿಸಡಕ್ ಚೆಕ್‌ಪೋಸ್ಟ್ ಬಳಿ 1.40 ಕೋಟಿ ರೂ ಹಾಗೂ

ಕಲಬುರುಗಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1.90 ಕೋಟಿ ರೂ. ವಶ Read More »

ಇಂದಿನಿಂದ ರಮ್ಜಾನ್‌ ಉಪವಾಸ ಪ್ರಾರಂಭ

ಕೇರಳದ ಕಲ್ಲಿಕೋಟೆಯ ಕಾಪಾಡ್‌ನಲ್ಲಿ ಚಂದ್ರ ದರ್ಶನ ಮಂಗಳೂರು : ಗುರುವಾರದಿಂದ ಮುಸ್ಲಿಮರ ರಮ್ಜಾನ್‌ ಉಪವಾಸ ಪ್ರಾರಂಭವಾಗುತ್ತದೆ. ರಮ್ಜಾನ್‌ ಉಪವಾಸದ ಪ್ರಥಮ ಚಂದ್ರ ದರ್ಶನ ಬುಧವಾರ ಕೇರಳದ ಕಲ್ಲಿಕೋಟೆಯ ಕಾಪಾಡ್ ಎಂಬಲ್ಲಿ ಆಗಿರುವುದರಿಂದ ಗುರುವಾರದಿಂದ ರಮ್ಜಾನ್ ಉಪವಾಸ ಆಚರಿಸಲು ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಪರವಾಗಿ ಕೇಂದ್ರ ಜುಮಾ ಮಸೀದಿಯ ಖತೀಬ್ ಅಲ್ ಹಾಜಿ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ಮತ್ತು ಉಡುಪಿ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಸಂಯುಕ್ತ ಖಾಝಿ ಅಲ್‌ಹಾಜ್ ಅಬ್ದುಲ್ ಹಮೀದ್

ಇಂದಿನಿಂದ ರಮ್ಜಾನ್‌ ಉಪವಾಸ ಪ್ರಾರಂಭ Read More »

ಪಿಎಫ್‌ಐ ನಿಷೇಧ : ಕೇಂದ್ರದ ಕ್ರಮ ಸರಿ ಎಂದ ನ್ಯಾಯಾಧಿಕರಣ

ಯುಎಪಿಎ ಕಾಯಿದೆಯಡಿ 5 ವರ್ಷ ನಿಷೇಧಕ್ಕೆ ಸಮರ್ಥನೆ ಹೊಸದಿಲ್ಲಿ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧಿಸಿದ ಕೇಂದ್ರ ಸರ್ಕಾರದ ಆದೇಶವನ್ನು ಯುಎಪಿಎ ನ್ಯಾಯಾಧಿಕರಣ ಎತ್ತಿ ಹಿಡಿದಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪಿಎಫ್‍ಐ ಮೇಲೆ ವಿಧಿಸಿದ ನಿಷೇಧವನ್ನು ಪರಿಶೀಲಿಸಲು ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅಧ್ಯಕ್ಷತೆಯಲ್ಲಿ ನ್ಯಾಯಾಧಿಕರಣ ರಚಿಸಲಾಗಿತ್ತು.ಪಿಎಫ್‍ಐ ಮೇಲೆ ನಿಷೇಧ ಹೇರಿದ ಕ್ರಮದ ಬಗ್ಗೆ ದೇಶದ ವಿವಿಧೆಡೆ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ ಕೇಂದ್ರದ ಆದೇಶವನ್ನು ಎತ್ತಿ ಹಿಡಿದೆ.ಕಳೆದ ವರ್ಷ ಸೆಪ್ಟೆಂಬರ್ 28 ರಂದು ಯುಎಪಿಎ ಸೆಕ್ಷನ್

ಪಿಎಫ್‌ಐ ನಿಷೇಧ : ಕೇಂದ್ರದ ಕ್ರಮ ಸರಿ ಎಂದ ನ್ಯಾಯಾಧಿಕರಣ Read More »

ಯುಗದ ಆದಿ – ನೂತನ ವರ್ಷದ ಬುನಾದಿ

ಶೋಭಾಕೃತ್ ನಾಮ ಸಂವತ್ಸರದ ಶುಭಾಗಮನ ನಮ್ಮೆಲ್ಲ ಓದುಗ ಪ್ರಭುಗಳಿಗೆ ಚಾಂದ್ರಮಾನ ಯುಗಾದಿ ಹಬ್ಬದ ಶುಭಾಶಯಗಳು. ಹಿಂದೂಗಳು ತಮ್ಮ ವರ್ಷದ ಮೊದಲ ದಿನವಾಗಿ ಆಚರಣೆ ಮಾಡುವ ದಿನ ಇದು. ಅಂತೆಯೇ ಇಂದು ಒಂದು ಸಂವತ್ಸರ ಕಳೆದು ಹೋಗಿ ಶೋಭಾಕೃತ್ ಸಂವತ್ಸರ ಹೊಸ್ತಿಲು ದಾಟಿ ಬಂದಿದೆ. ಪ್ರಕೃತಿಯ ದೃಷ್ಟಿಯಿಂದಲೂ ಯುಗಾದಿಯೆ ವರ್ಷದ ಆರಂಭ ಬ್ರಿಟಿಷ್ ಕ್ಯಾಲೆಂಡರ್ ಪ್ರಕಾರ ನಾವು ಜನವರಿ 1ರಂದು ಆಚರಿಸುವ ಹೊಸ ವರ್ಷ ಪ್ರಕೃತಿಗೆ ಪೂರಕವಿಲ್ಲ. ಆಗ ತೀವ್ರವಾದ ಶಿಶಿರದ ದಟ್ಟ ಪ್ರಭಾವದಿಂದ ಎಲೆಗಳೆಲ್ಲ ಉದುರಿಹೋಗಿ ಗಿಡ

ಯುಗದ ಆದಿ – ನೂತನ ವರ್ಷದ ಬುನಾದಿ Read More »

ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ ಎಂದ ನಟ ಚೇತನ್‌ ಬಂಧನ

ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಹಿಂದುತ್ವ ಹಾಗೂ ಹಿಂದೂ ಧರ್ಮದ ವಿರುದ್ಧ ಕೆಟ್ಟದಾಗಿ ಪೋಸ್ಟ್‌ ಮಾಡಿದ ಹಿನ್ನೆಲೆಯಲ್ಲಿ ಶೇಷಾದ್ರಿಪುರ ಠಾಣೆ ಪೊಲೀಸರು ನಟ ಚೇತನ್‌ನನ್ನು ಬಂಧಿಸಿದ್ದಾರೆ. ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ ಎಂದು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಟ್ವೀಟ್‌ ಮಾಡಿಕೊಂಡು ಅದಕ್ಕೊಂದು ಫೋಟೊ ಕೂಡ ಹಂಚಿಕೊಂಡಿದ್ದರು. ಜತೆಗೆ, ಉರಿಗೌಡ ಮತ್ತು ನಂಜೇಗೌಡ ಬಗ್ಗೆ ಟ್ವೀಟ್ ಮಾಡಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ ಬೆನ್ನಲ್ಲೇ ಶಿವಕುಮಾರ್ ಎಂಬವರು ಶೇಷಾದ್ರಿಪುರ ಠಾಣೆಗೆ ದೂರು ದಾಖಲಿಸಿದ್ದರು. ಹಿಂದೂ ಭಾವನೆಗಳಿಗೆ ಧಕ್ಕೆ

ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ ಎಂದ ನಟ ಚೇತನ್‌ ಬಂಧನ Read More »

ಆಝಾನ್‌ ಕೂಗಿದ ಸ್ಥಳವನ್ನು ಗೋಮೂತ್ರ ಸಿಂಪಡಿಸಿ ಶುದ್ಧಿ

ಶಿವಮೊಗ್ಗ : ಹಿರಿಯ ನಾಯಕ ಈಶ್ವರಪ್ಪನವರ ಹೇಳಿಕೆ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲ ಮೇಲೆ ಆಜಾನ್ ಕೂಗಿದ್ದ ಸ್ಥಳವನ್ನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗ ದಳದ ಕಾರ್ಯಕರ್ತರು ಸೋಮವಾರ ಗೋಮೂತ್ರ ಸಿಂಪಡಿಸಿ ಶುದ್ಧೀಕರಿಸಿದ್ದಾರೆ.ಪೊಲೀಸರ ಪ್ರತಿರೋಧದ ನಡುವೆಯೂ ಗೋಮೂತ್ರ ಸಿಂಪಡಣೆ ಮಾಡಲಾಯಿತು. ಇದರಿಂದ ಡಿಸಿ ಕಚೇರಿ ಆವರಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲ ಮೇಲೆ ಆಜಾನ್ ಕೂಗಿದ್ದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. ಈ

ಆಝಾನ್‌ ಕೂಗಿದ ಸ್ಥಳವನ್ನು ಗೋಮೂತ್ರ ಸಿಂಪಡಿಸಿ ಶುದ್ಧಿ Read More »

ಧಾರ್ಮಿಕ ಸಂಕೇತವಾದ ಕಮಲದ ಚಿಹ್ನೆಯನ್ನು ಬ್ಯಾನ್‌ ಮಾಡಬೇಕು: ಮುಸ್ಲಿಂ ಲೀಗ್‌

ದೆಹಲಿ: ಧಾರ್ಮಿಕ ಹೆಸರು ಮತ್ತು ಧಾರ್ಮಿಕ ಸಂಕೇತಗಳನ್ನು ಚುನಾವಣಾ ಚಿಹ್ನೆಯಾಗಿ ಬಳಸಬಾರದು ಎಂಬ ನಿಯಮದಡಿ ಬಿಜೆಪಿಯ ತಾವರೆ ಚಿಹ್ನೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಮುಸ್ಲಿಂ ಲೀಗ್‌ ಕೋರ್ಟಿನ ಮೆಟ್ಟಿಲೇರಿದೆ.ʻಕಮಲʼ ಧಾರ್ಮಿಕ ಪಾವಿತ್ರ್ಯ ಹೊಂದಿರುವ ಚಿಹ್ನೆ. ಬಿಜೆಪಿಯ ಚುನಾವಣಾ ಚಿಹ್ನೆ ಕೂಡ ʻಕಮಲʼ. ಆದ್ದರಿಂದ ಬಿಜೆಪಿಯ ಚುನಾವಣಾ ಚಿಹ್ನೆ ಬ್ಯಾನ್‌ ಮಾಡಬೇಕು. ಈ ಪ್ರಕರಣದಲ್ಲಿ ಬಿಜೆಪಿಯನ್ನು ಪ್ರತಿವಾದಿಯನ್ನಾಗಿಸಬೇಕು ಎಂದು ಆಗ್ರಹಿಸಿ ಐಯುಎಂಎಲ್‌ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.ಮುಸ್ಲಿಂ ಲೀಗ್ ಪರವಾಗಿ ಹಿರಿಯ ವಕೀಲ ದುಷ್ಯಂತ್ ದವೆ ವಾದಿಸುತ್ತಿದ್ದಾರೆ. ಈ ವಿಷಯದಲ್ಲಿ

ಧಾರ್ಮಿಕ ಸಂಕೇತವಾದ ಕಮಲದ ಚಿಹ್ನೆಯನ್ನು ಬ್ಯಾನ್‌ ಮಾಡಬೇಕು: ಮುಸ್ಲಿಂ ಲೀಗ್‌ Read More »

ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ 2,500 ಕೋ. ರೂ. ಟಿಡಿಆರ್‌ ಹಗರಣ ಎಂದು ಬಿಜೆಪಿ ಆರೋಪ

ಬೆಂಗಳೂರು : ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಟಿಡಿಆರ್‌ಗೆ ಸಂಬಂಧಿಸಿದಂತೆ ನಡೆದಿರುವ ಬೃಹತ್‌ ಹಗರಣವನ್ನು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಬಯಲಿಗೆಳೆದಿದ್ದು, ದಾಖಲೆ ಬಿಡುಗಡೆ ಮಾಡಿದ್ದಾರೆ.ಈ ಸಂಬಂಧ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಬಿಬಿಎಂಪಿ ಇತಿಹಾಸದಲ್ಲಿಯೇ 2,500 ಕೋಟಿ ರೂ. ಮೊತ್ತದ ಅತಿ ದೊಡ್ಡ ಹಗರಣವಾಗಿದ್ದು, ಬಿಬಿಎಂಪಿ ಎಂದು ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್‌ ಪ್ರದೇಶ ಯೋಜನಾ ಪ್ರಾಧಿಕಾರ (ಬಿಎಂಐಸಿಎಪಿಎ) ಅಧಿಕಾರಿಗಳು ಭಾಗಿಯಾಗಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿ

ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ 2,500 ಕೋ. ರೂ. ಟಿಡಿಆರ್‌ ಹಗರಣ ಎಂದು ಬಿಜೆಪಿ ಆರೋಪ Read More »

ಅಯೋಧ್ಯೆಗೆ ತಲುಪಿದ ಕೃಷ್ಣಶಿಲೆ

ಉಚಿತವಾಗಿ ಟ್ರಕ್‌ ಮತ್ತು ಚಾಲಕರನ್ನು ಒದಗಿಸಿದ ಬಿಜೆಪಿಯ ಹಿರಿಯ ನಾಯಕ ನಾಗರಾಜ ಶೆಟ್ಟಿ ಕಾರ್ಕಳ : ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದಲ್ಲಿ ಪ್ರತಿಷ್ಥಾಪನೆಯಾಗಲಿರುವ ಭವ್ಯ ಶ್ರೀರಾಮನ ಮೂರ್ತಿಯನ್ನು ಕೆತ್ತಲು ಕಾರ್ಕಳದಿಂದ ಕೃಷ್ಣ ಶಿಲೆಯನ್ನು ಸಾಗಿಸಿದ್ದು ಹಿರಿಯ ಬಿಜೆಪಿ ನಾಯಕ, ಮಾಜಿ ಸಚಿವ ನಾಗರಾಜ ಶೆಟ್ಟಿಯವರ ಟ್ರಾನ್ಸ್‌ಪೋರ್ಟ್‌ ಕಂಪನಿ. ಮೂರು ದಿನಗಳಲ್ಲಿ ಬೃಹತ್‌ ಶಿಲೆ ಅಯೋಧ್ಯೆ ತಲುಪಿದೆ. ಒಂಭತ್ತು ಟನ್ ತೂಕದ ಶಿಲೆಯನ್ನು ಅಯೋಧ್ಯೆಯಲ್ಲಿ ನಾಗರಾಜ ಶೆಟ್ಟಿ ನೇತೃತ್ವದಲ್ಲಿ ಸೋಮವಾರ ಮಧ್ಯಾಹ್ನ ಸ್ವಾಗತಿಸಲಾಯಿತು. ಉದ್ಯಮಿ ನಾಗರಾಜ ಶೆಟ್ಟಿ ಮಾಲಕತ್ವದ

ಅಯೋಧ್ಯೆಗೆ ತಲುಪಿದ ಕೃಷ್ಣಶಿಲೆ Read More »

error: Content is protected !!
Scroll to Top