ದೇಶ

ಏ.9 ರಂದು ಪ್ರಧಾನಿ ಮೋದಿ ಕರ್ನಾಟಕಕ್ಕೆ ಮತ್ತೊಮ್ಮೆ ಭೇಟಿ

ಬಂಡಿಪುರ ಹುಲಿ ರಕ್ಷಿತಾರಣ್ಯದಲ್ಲಿ ಸಫಾರಿ ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಏ.9ರಂದು ಕರ್ನಾಟಕಕ್ಕೆ ಮತ್ತೊಮ್ಮೆ ಆಗಮಿಸಲಿದ್ದಾರೆ. ಆದರೆ ಈ ಸಲ ಮೋದಿ ಕರ್ನಾಟಕಕ್ಕೆ ಬರುತ್ತಿರುವುದು ಚುನಾವಣಾ ಪ್ರಚಾರಕ್ಕೆ ಅಲ್ಲ. ಹುಲಿ ನೀತಿಯ ಐವತ್ತನೇ ವರ್ಷಾಚರಣೆ ಬಂಡೀಪುರದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿಮ ಬರುತ್ತಿದ್ದಾರೆ. ಈ ವೇಳೆ ಬಂಡಿಪುರ ಹುಲಿ ರಕ್ಷಿತಾರಣ್ಯದಲ್ಲಿ ಪ್ರಧಾನಿ ಮೋದಿ ಅವರು ಸಫಾರಿ ಕೈಗೊಳ್ಳಲಿದ್ದಾರೆ.ವಿಶೇಷ ಎಂದರೆ ಏ.9ರಂದೇ ರಾಹುಲ್‌ ಗಾಂಧಿ ಕೋಲಾರದಲ್ಲಿ ಕಾಂಗ್ರೆಸಿನ ಜೈ ಭಾರತ್‌ ರ‍್ಯಾಲಿಗೆ ಚಾಲನೆ ನೀಡಲಿದ್ದಾರೆ.ವಿಧಾನಸಭೆ ಚುನಾವಣೆ […]

ಏ.9 ರಂದು ಪ್ರಧಾನಿ ಮೋದಿ ಕರ್ನಾಟಕಕ್ಕೆ ಮತ್ತೊಮ್ಮೆ ಭೇಟಿ Read More »

ಸೋಷಿಯಲ್‌ ಮೀಡಿಯಾ ಸೇರಿದಂತೆ ಎಲ್ಲ ರೀತಿಯ ಪ್ರಚಾರ ಮಾಧ್ಯಮಗಳ ಮೇಲೆ ಚುನಾವಣಾ ಅಧಿಕಾರಿಗಳ ಹದ್ದಿನ ಕಣ್ಣು

ನೀವು ಅಡ್ಮಿನ್‌ ಆಗಿದ್ದರೆ ಎಚ್ಚರಿಕೆ ವಹಿಸಿಕೊಳ್ಳಿ ಬೆಂಗಳೂರು : ರಾಜ್ಯದಲ್ಲಿ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸೋಷಿಯಲ್‌ ಮೀಡಿಯಾ ಸೇರಿದಂತೆ ಎಲ್ಲ ರೀತಿಯ ಪ್ರಚಾರ ಮಾಧ್ಯಮಗಳ ಮೇಲೆ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಸುದ್ದಿಪತ್ರಿಕೆಗಳು, ಸಾಮಾಜಿಕ ಜಾಲತಾಣಗಳು ಮತ್ತು ಇನ್ನಿತರ ಮೂಲಗಳಿಂದ ರಾಜಕೀಯ ಪ್ರಚಾರ ಮಾಡಬೇಕಿದ್ದಲ್ಲಿ ಮತ್ತು ರಾಜಕೀಯ ಪ್ರೇರಿತ ಹೇಳಿಕೆ ನೀಡಬೇಕಾದರೆ ಚುನಾವಣಾ ಸಂಬಂಧ ನೇಮಕ ಮಾಡಲಾಗಿರುವ ಸಮಿತಿಯಿಂದ ಪೂರ್ವ ಅನುಮತಿ ಪಡೆಯುವುದು ಕಡ್ಡಾಯ. ವಾಟ್ಸಪ್‌, ಫೇಸ್‌ಬುಕ್‌ ಮತ್ತಿತರ ಸೋಷಿಯಲ್‌ ಮೀಡಿಯಾ ಗ್ರೂಪ್‌ಗಳಿಗೂ ಈ ನಿಯಮ ಅನ್ವಯವಾಗುತ್ತದೆ.

ಸೋಷಿಯಲ್‌ ಮೀಡಿಯಾ ಸೇರಿದಂತೆ ಎಲ್ಲ ರೀತಿಯ ಪ್ರಚಾರ ಮಾಧ್ಯಮಗಳ ಮೇಲೆ ಚುನಾವಣಾ ಅಧಿಕಾರಿಗಳ ಹದ್ದಿನ ಕಣ್ಣು Read More »

ಮೋದಿಯವರ ಪದವಿ ಮತ್ತು ಸ್ನಾತಕೋತ್ತರ ಪ್ರಮಾಣಪತ್ರ ಕೇಳಿದ್ದ ದೆಹಲಿ ಸಿಎಂಗೆ 25 ಸಾವಿರ ರೂ. ದಂಡ

ದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರಮಾಣಪತ್ರ ಕೇಳಿದ್ದ ದೆಹಲಿ ಸಿಎಂ ಅರವಿಂದ ಕೇಜ್ರೀವಾಲ್ ಅವರಿಗೆ ಗುಜರಾತ್ ಹೈಕೋರ್ಟ್ ಮಾ. 31 ರಂದು 25 ಸಾವಿರ ರೂ. ದಂಡ ವಿಧಿಸಿದೆ. ಪ್ರಧಾನಿ ಕಾರ್ಯಾಲಯವು ಪ್ರಧಾನಿ ಮೋದಿ ಅವರ ಪದವಿ ಮತ್ತು ಸ್ನಾತಕೋತ್ತರ ಪ್ರಮಾಣಪತ್ರಗಳನ್ನು ನೀಡಬೇಕಾದ ಅಗತ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಆರ್‌ಟಿಐನಡಿ ಈ ಮಾಹಿತಿಯನ್ನು ಸಿಎಂ ಕೇಜ್ರೀವಾಲ್ ಕೇಳಿದ್ದಕ್ಕೆ ದಂಡ ವಿಧಿಸಲಾಗಿದೆ. ಆರ್‌ಟಿಐನಡಿ ಸಿಎಂ ಅರವಿಂದ ಕೇಜ್ರೀವಾಲ್ ಅರ್ಜಿ ಸಲ್ಲಿಸಿದ್ದ ಮೇರೆಗೆ

ಮೋದಿಯವರ ಪದವಿ ಮತ್ತು ಸ್ನಾತಕೋತ್ತರ ಪ್ರಮಾಣಪತ್ರ ಕೇಳಿದ್ದ ದೆಹಲಿ ಸಿಎಂಗೆ 25 ಸಾವಿರ ರೂ. ದಂಡ Read More »

ಹೊಸ ವಿದೇಶಿ ವ್ಯಾಪಾರ ನೀತಿ- 2023 ಬಿಡುಗಡೆ

ದೆಹಲಿ : ಹೊಸ ವಿದೇಶಿ ವ್ಯಾಪಾರ ನೀತಿ-2023ನ್ನು ಕೇಂದ್ರ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ್ದು, ಹೊಸ ನೀತಿಯಲ್ಲಿ 2030ರ ವೇಳೆಗೆ ಭಾರತದ ಸರಕು ರಫ್ತು ಪ್ರಮಾಣವನ್ನು 2 ಟ್ರಿಲಿಯನ್ ಡಾಲರ್​ಗೆ ಹೆಚ್ಚಿಸುವ​ ಗುರಿಯನ್ನು ಹೊಂದಲಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಅವರು ಇಂದು ದೆಹಲಿಯಲ್ಲಿ ವಿದೇಶಿ ವ್ಯಾಪಾರ ನೀತಿ 2023 ಅನ್ನು ಬಿಡುಗಡೆ ಮಾಡಿದರು.ಬಳಿಕ ಮಾತನಾಡಿದ ಗೋಯಲ್ ಅವರು 2030 ರ ವೇಳೆಗೆ ಭಾರತದ ರಫ್ತು ವ್ಯಾಪಾರವು 2 ಟ್ರಿಲಿಯನ್ ಡಾಲರ್ ತಲುಪಲಿದೆ

ಹೊಸ ವಿದೇಶಿ ವ್ಯಾಪಾರ ನೀತಿ- 2023 ಬಿಡುಗಡೆ Read More »

ದೇವಾಲಯದ ಮೆಟ್ಟಿಲು ಬಾವಿ ಕುಸಿತ ಪ್ರಕರಣ : ಸ್ಥಳಕ್ಕೆ ಸಿಎಂ ಚೌಹಾಣ್ ಭೇಟಿ

ಇಂದೋರ್ : ರಾಮನವಮಿ ನಿಮಿತ್ತ ಇಂದೋರ್’ನ ಬೇಲೇಶ್ವರ ದೇವಸ್ಥಾನದಲ್ಲಿ ಹೋಮ ಹವನ ಏರ್ಪಡಿಸಲಾಗಿತ್ತು. ಇದರಲ್ಲಿ ಪಾಲ್ಗೊಳ್ಳಲು ಭಾರೀ ಸಂಖ್ಯೆಯಲ್ಲಿ ಜನ ಬಂದು ನೂಕು ನುಗ್ಗಲು ಏರ್ಪಟ್ಟಿತ್ತು. ಈ ವೇಳೆ ದೇಗುಲದ ಬಾವಿ ಬಳಿಯ ಭೂಮಿ ಕುಸಿದಿದ್ದು, ಇದರ ಪರಿಣಾಮ ಅಲ್ಲೇ ಇದ್ದ ಬಾವಿಯ ಕಬ್ಬಿಣದ ಸರಳಿನ ಮೇಲ್ಛಾವಣಿಯೂ ಕುಸಿದು ಬಿದ್ದಿತ್ತು. ಈ ವೇಳೆ ಸ್ಥಳದಲ್ಲಿದ್ದ ಹಲವು ಮಂದಿ ಭಕ್ತರು ಬಾವಿಗೆ ಬಿದ್ದಿದ್ದರು. ದುರ್ಘಟನೆಯಲ್ಲಿ ಈ ವರೆಗೂ 35 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಮಧ್ಯಪ್ರದೇಶದ ಮುಖ್ಯಮಂತ್ರಿ

ದೇವಾಲಯದ ಮೆಟ್ಟಿಲು ಬಾವಿ ಕುಸಿತ ಪ್ರಕರಣ : ಸ್ಥಳಕ್ಕೆ ಸಿಎಂ ಚೌಹಾಣ್ ಭೇಟಿ Read More »

ವಾಟ್ಸಪ್ ಸ್ಟೇಟಸ್ ಹಾಕಿ ಯುವಕ ಆತ್ಮಹತ್ಯೆ

ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಇಚಿಲಂಪಾಡಿ ಗ್ರಾಮದಲ್ಲಿ ಸಾಯುವ ಕುರಿತಾಗಿ ವಾಟ್ಸ್ಯಾಪ್ ಸ್ಟೇಟಸ್ ಹಾಕಿ ಬಳಿಕ ಮರವೊಂದಕ್ಕೆ ನೇಣು ಬಿಗಿದು ಯುವಕನೋರ್ವ ಆತ್ಮಹತ್ಯೆ ‌ಮಾಡಿಕೊಂಡ ಘಟನೆ ಮಾ. 31 ರಂದು ಸಂಭವಿಸಿದೆ. ರೆನೀಶ್ (27) ಎಂಬಾತನೇ ಮೃತ ಯುವಕ. ಮೃತ ರೆನೀಶ್ ತಂದೆ ತಾಯಿ ಮರಣ ಹೊಂದಿದ್ದು, ಇವನ ತಮ್ಮ ಕಳೆದ ಮೂರು ವರ್ಷದ ಹಿಂದೆ ಮಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ರೆನೀಶ್ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದು, ವಿದ್ಯುತ್ ಲೈನ್ ನ ಕೆಲಸಕ್ಕೆ ಹೋಗುತ್ತಿದ್ದ.

ವಾಟ್ಸಪ್ ಸ್ಟೇಟಸ್ ಹಾಕಿ ಯುವಕ ಆತ್ಮಹತ್ಯೆ Read More »

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಗೆ ಕಾರಣ : ಸಾಲಬಾಧೆ

ಮಂಗಳೂರು : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಕೆ.ಎಸ್. ರಾವ್ ರಸ್ತೆಯಲ್ಲಿರುವ ಕರುಣಾ ಲಾಡ್ಜ್‌ನಲ್ಲಿ ನಡೆದಿದೆ.ದೇವೇಂದ್ರ (48), ನಿರ್ಮಲಾ(48), ಚೈತ್ರಾ(09), ಚೈತನ್ಯ (09), ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ. ಇವರು ಮೂಲತಃ ಮೈಸೂರಿನ ವಿಜಯನಗರ ಮೂಲದವರಾಗಿದ್ದರು.ಕರುಣಾ ಲಾಡ್ಜ್‌ನಲ್ಲಿ ಘಟನೆ ನಡೆದಿದ್ದು, ಮೈಸೂರು ಮೂಲದ ದಂಪತಿ ಮತ್ತು ಅವಳಿ ಹೆಣ್ಣು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಡೆತ್‌ ನೋಟ್‌ ಸಿಕ್ಕಿದ್ದು, ಸಾಲಬಾಧೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಮಂಗಳೂರು ಪೊಲೀಸರು ಭೇಟಿ ನೀಡಿ,

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಗೆ ಕಾರಣ : ಸಾಲಬಾಧೆ Read More »

ಒಂದೇ ಕುಟುಂಬದ ನಾಲ್ವರು ಸಾಮೂಹಿಕವಾಗಿ ಆತ್ಮಹತ್ಯೆ

ಮೈಸೂರಿನ ವಾಣಿವಿಲಾಸದ ಕುಟುಂಬ ಮಂಗಳೂರು : ನಗರದ ಕೆ.ಎಸ್‌. ರಾವ್‌ ರಸ್ತೆಯ ಲಾಡ್ಜ್‌ವೊಂದರಲ್ಲಿ ಒಂದೇ ಕುಟುಂಬದ ನಾಲ್ವರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರು ಮೈಸೂರಿನ ವಾಣಿವಿಲಾಸದವರೆಂದು ತಿಳಿದುಬಂದಿದೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿಯೇ ಡೆತ್‌ನೋಟ್‌ ಪತ್ತೆಯಾಗಿದೆ. ನಾಲ್ವರಲ್ಲಿ ಓರ್ವ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಉಳಿದ ಮೂವರು ಮಲಗಿದ ಸ್ಥಿತಿಯಲ್ಲಿದ್ದರು. ಬಂದರು ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.ಒಂದೇ ಕುಟುಂಬದ ನಾಲ್ಕು ಜನ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಇಂದು(ಶುಕ್ರವಾರ) ನಡೆದಿದೆ. ಮಂಗಳೂರಿನ

ಒಂದೇ ಕುಟುಂಬದ ನಾಲ್ವರು ಸಾಮೂಹಿಕವಾಗಿ ಆತ್ಮಹತ್ಯೆ Read More »

ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ

ನಾಲ್ಕು ಹಂತಗಳ ಪರಿಶೀಲನೆ ಬಳಿಕ ಅಭ್ಯರ್ಥಿ ಹೆಸರು ಘೋಷಣೆ ಬೆಂಗಳೂರು : ಬಿಜೆಪಿ ಈ ಸಲ ಟಿಕೆಟ್‌ ಹಂಚಿಕೆಗೆ ಮತದಾನದ ಪದ್ಧತಿ ಅಳವಡಿಸಿಕೊಂಡಿದೆ. ಜಿಲ್ಲಾವಾರು ಪದಾಧಿಕಾರಿಗಳು ಮತದಾನ ಮಾಡಲಿದ್ದು, ಬಳಿಕ ಎರಡು ದಿನ ಬೆಂಗಳೂರಿನಲ್ಲಿ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಿಸುವ ಪ್ರಕ್ರಿಯೆ ನಡೆಯಲಿದೆ. ಆ ಬಳಿಕ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳಲಿದೆ. ಬಿಜೆಪಿಯಲ್ಲಿ ಪ್ರತಿ ಕ್ಷೇತ್ರಕ್ಕೆ ಅನೇಕ ಮಂದಿ ಅಕಾಂಕ್ಷಿಗಳು ಇರುವುದು ಮತ್ತು ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎನ್ನುವ ಕಾರಣಕ್ಕೆ ಈ ಸಲ ಕರ್ನಾಟಕದಲ್ಲಿ ಕೇಸರಿ ಪಕ್ಷ

ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ Read More »

ಮೊಸರಿನ ಪ್ಯಾಕೆಟ್‌ ಮೇಲಿರುವ ದಹಿ ಆದೇಶ ಹಿಂಪಡೆದ ಎಫ್‌ಎಸ್‌ಎಸ್‌ಎಐ

ಕರ್ನಾಟಕ, ತಮಿಳುನಾಡಿನ ವಿರೋಧದ ಬಳಿಕ ಕ್ರಮ ದೆಹಲಿ : ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮೊಸರಿನ ಪ್ಯಾಕೆಟ್‌ಗಳ ಮೇಲೆ ಹಿಂದಿಯಲ್ಲಿ ದಹಿ ಎಂದು ಮುದ್ರಿಸುವಂತೆ ಹೊರಡಿಸಿದ್ದ ಆದೇಶವನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಹಿಂಪಡೆದಿದೆ.ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕಟುವಾಗಿ ಟೀಕೆ ಮಾಡಿದ ಬೆನ್ನಲ್ಲೇ ಎಫ್‌ಎಸ್‌ಎಸ್‌ಎಐಯ ಈ ನಿರ್ಧಾರ ಹೊರಬಿದ್ದಿದೆ. ಹಿಂದಿ ಹೇರಿಕೆಯ ನಾಚಿಕೆಯಿಲ್ಲದ ಒತ್ತಾಯಗಳು ಎಷ್ಟರ ಮಟ್ಟಿಗೆ ಅಂದರೆ, ಮೊಸರು ಪ್ಯಾಕೆಟ್‌

ಮೊಸರಿನ ಪ್ಯಾಕೆಟ್‌ ಮೇಲಿರುವ ದಹಿ ಆದೇಶ ಹಿಂಪಡೆದ ಎಫ್‌ಎಸ್‌ಎಸ್‌ಎಐ Read More »

error: Content is protected !!
Scroll to Top