ದೇಶ

ಇಸ್ರೇಲ್‌ ಪೇಜರ್‌ ಸ್ಫೋಟಿಸಿದಂತೆ ಮೋದಿ ಇವಿಎಂ ಹ್ಯಾಕ್‌ ಮಾಡಬಹುದು : ಕಾಂಗ್ರೆಸ್‌

ಬಿಜೆಪಿ ಇವಿಎಂ ಜೊತೆ ಆಟವಾಡುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್‌ ನಾಯಕ ಹೊಸದಿಲ್ಲಿ: ಇಸ್ರೇಲ್‌ ಉಗ್ರರ ಪೇಜರ್‌ ಸ್ಫೋಟಿಸಿದಂತೆ ನರೇಂದ್ರ ಮೋದಿ ಇವಿಎಂ ಹ್ಯಾಕ್‌ ಮಾಡಬಹುದು ಎಂದು ಕಾಂಗ್ರೆಸ್‌ ಅನುಮಾನ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿರುವ ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಇಸ್ರೇಲ್ ಪೇಜರ್‌ ಮತ್ತು ವಾಕಿಟಾಕಿ ಬಳಸಿ ಜನರನ್ನು ಕೊಲ್ಲಲು ಸಾಧ್ಯವಾದರೆ ಇವಿಎಂ ಅನ್ನು ಏನು ಬೇಕಾದರೂ ಮಾಡಬಹುದು. ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂದು ಹೇಳಿದ್ದಾರೆ.ಮಹಾರಾಷ್ಟ್ರದಲ್ಲಿ ಪ್ರತಿಪಕ್ಷಗಳು ಪೇಪರ್ ಬ್ಯಾಲೆಟ್ […]

ಇಸ್ರೇಲ್‌ ಪೇಜರ್‌ ಸ್ಫೋಟಿಸಿದಂತೆ ಮೋದಿ ಇವಿಎಂ ಹ್ಯಾಕ್‌ ಮಾಡಬಹುದು : ಕಾಂಗ್ರೆಸ್‌ Read More »

ಸಲ್ಮಾನ್‌ ಖಾನ್‌ಗೆ ಪ್ರಾಣ ಭೀತಿ : ಭದ್ರತೆ Y+ಗೇರಿಕೆ

ಬಾಬಾ ಸಿದ್ದಿಕಿ ಹತ್ಯೆ ನಂತರ ನಟನಿಗೆ ದಿನದ 24 ತಾಸು ಸಶಸ್ತ್ರ ಪೊಲೀಸರ ಸರ್ಪಗಾವಲು ಮುಂಬಯಿ: ಬಾಲಿವುಡ್‌ ನಟ ಸಲ್ಮಾನ್ ಖಾನ್‌ ಆಪ್ತರಾಗಿದ್ದ ಮಾಜಿ ಸಚಿವ ಬಾಬಾ ಸಿದ್ದಿಕಿಯನ್ನು ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ ಹತ್ಯೆ ಮಾಡಿದ ಬಳಿಕ ನಟ ಪ್ರಾಣ ಭೀತಿ ಎದುರಿಸುತ್ತಿದ್ದು, ಅವರ ಭದ್ರತೆಯನ್ನು Y+ ಕ್ಯಾಟಗರಿಗೆ ಏರಿಸಲಾಗಿದೆ.ಪೊಲೀಸ್ ಬೆಂಗಾವಲು ವಾಹನ ಈಗ ದಿನದ 24 ತಾಸು ಸಲ್ಮಾನ್ ಖಾನ್ ಅವರ ವಾಹನದ ಜೊತೆಗೆ ಇರಲಿದೆ. ಎಲ್ಲ ಶಸ್ತ್ರಾಸ್ತ್ರಗಳನ್ನು ಬಳಸಲು ತರಬೇತಿ ಪಡೆದ ಪೊಲೀಸ್‌ ಸಿಬ್ಬಂದಿ

ಸಲ್ಮಾನ್‌ ಖಾನ್‌ಗೆ ಪ್ರಾಣ ಭೀತಿ : ಭದ್ರತೆ Y+ಗೇರಿಕೆ Read More »

ಮಹಾರಾಷ್ಟ್ರ, ಜಾರ್ಖಂಡ್‌ ಚುನಾವಣೆಗೆ ಇಂದು ಮುಹೂರ್ತ ನಿಗದಿ

ಬಿಜೆಪಿ, ಕಾಂಗ್ರೆಸ್‌ ಪಾಲಿಗೆ ಮಾಡು ಇಲ್ಲವೆ ಮಡಿ ಹೋರಾಟದ ಕಣ ಹೊಸದಿಲ್ಲಿ: ಹರ್ಯಾಣ ಮತ್ತು ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ಮುಗಿದ ಬೆನ್ನಿಗೆ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆ ಎದುರಾಗಿದ್ದು, ಇದರ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಇಂದು ಮಧ್ಯಾಹ್ನ 3.30ಕ್ಕೆ ಪ್ರಕಟಿಸಲಿದೆ.288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯ ಅವಧಿ ನವೆಂಬರ್ 26ಕ್ಕೆ ಕೊನೆಗೊಳ್ಳಲಿದ್ದು, 81 ಸ್ಥಾನಗಳನ್ನು ಹೊಂದಿರುವ ಜಾರ್ಖಂಡ್ ವಿಧಾನಸಭೆಯು 2025ರ ಜನವರಿ 5ರಂದು ತನ್ನ ಅವಧಿಯನ್ನು ಪೂರ್ಣಗೊಳಿಸಲಿದೆ.ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನಾ ಮತ್ತು ಎನ್‌ಸಿಪಿ ಆಡಳಿತಾರೂಢ

ಮಹಾರಾಷ್ಟ್ರ, ಜಾರ್ಖಂಡ್‌ ಚುನಾವಣೆಗೆ ಇಂದು ಮುಹೂರ್ತ ನಿಗದಿ Read More »

ಕೋವಿಶೀಲ್ಡ್‌ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀ ಕೋರ್ಟ್‌

ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳಾಗಿರುವುದಕ್ಕೆ ಸಾಕ್ಷಿ ಇಲ್ಲ ಎಂದ ನ್ಯಾಯಾಲಯ ಹೊಸದಿಲ್ಲಿ: ಕೋವಿಡ್ ಲಸಿಕೆಗಳಿಂದ ಆರೋಗ್ಯದ ಮೇಲಾಗುವ ಅಡ್ಡ ಪರಿಣಾಮಗಳ ಕುರಿತು ತನಿಖೆ ಮಾಡಲು ಆಗ್ರಹಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇದು ಗೊಂದಲ ಉಂಟು ಮಾಡಿ ಪ್ರಚಾರ ಪಡೆಯುವ ಹುನ್ನಾರ ಎಂದು ಹೇಳಿ ವಜಾಗೊಳಿಸಿದೆ.ಕೋವಿಡ್‌ ಲಸಿಕೆಗಳು ರಕ್ತ ಹೆಪ್ಪುಗಟ್ಟುವಿಕೆಯಂತಹ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದರು. ಯುನೈಟೆಡ್ ಕಿಂಗ್‌ಡಂನಂತಹ ದೇಶಗಳಲ್ಲಿ ಅದೇ ಕಾಳಜಿಯ ಮೇಲೆ ಕ್ಲಾಸ್ ಆಕ್ಷನ್ ಮೊಕದ್ದಮೆಗಳನ್ನು

ಕೋವಿಶೀಲ್ಡ್‌ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀ ಕೋರ್ಟ್‌ Read More »

ಮಧ್ಯರಾತ್ರಿಯೊಳಗೆ ದೇಶ ಬಿಟ್ಟು ಹೋಗಿ : ಕೆನಡ ರಾಯಭಾರಿಗಳಿಗೆ ಭಾರತ ಖಡಕ್‌ ಆದೇಶ

ಭಾರತದ ರಾಯಭಾರಿ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ತಿರುಗೇಟು ಹೊಸದಿಲ್ಲಿ: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಪ್ರಕರಣದಲ್ಲಿ ಭಾರತೀಯ ರಾಯಭಾರಿಗಳ ವಿರುದ್ಧ ಪ್ರಕರಣ ದಾಖಲಿಸುವ ಕೆನಡ ಸರ್ಕಾರದ ನಡೆಯ ವಿರುದ್ಧ ದಿಟ್ಟ ನಿರ್ಧಾರ ಕೈಗೊಂಡಿರುವ ಭಾರತ 6 ಕೆನಡದ ರಾಜತಾಂತ್ರಿಕರನ್ನು ಹೊರಹಾಕಿದೆ. ಅಷ್ಟೇ ಅಲ್ಲ, ಅಕ್ಟೋಬರ್ 19ರ ಮಧ್ಯರಾತ್ರಿ 12 ಗಂಟೆಯೊಳಗೆ ಅಥವಾ ಅದಕ್ಕೂ ಮೊದಲು ಭಾರತವನ್ನು ತೊರೆಯುವಂತೆ ಕೇಂದ್ರ ಸರ್ಕಾರ ಖಡಕ್‌ ಸೂಚನೆ ನೀಡಿದೆ.ಹಂಗಾಮಿ ಹೈ ಕಮಿಷನರ್ ಸ್ಟೀವರ್ಟ್ ರಾಸ್ ವೀಲರ್, ಡೆಪ್ಯುಟಿ ಹೈ

ಮಧ್ಯರಾತ್ರಿಯೊಳಗೆ ದೇಶ ಬಿಟ್ಟು ಹೋಗಿ : ಕೆನಡ ರಾಯಭಾರಿಗಳಿಗೆ ಭಾರತ ಖಡಕ್‌ ಆದೇಶ Read More »

ಗುಜರಾತ್‌ನಲ್ಲಿ 5000 ಕೋ.ರೂ. ಮೌಲ್ಯದ ಕೊಕೇನ್‌ ವಶ

ಹೊಸದಿಲ್ಲಿ : ದಿಲ್ಲಿಯ ಬಳಿಕ ಈಗ ಗುಜರಾತ್‌ನಲ್ಲಿ ಭಾರಿ ಪ್ರಮಾಣದ ಮಾದಕ ವಸ್ತು ವಶವಾಗಿದೆ. ಗುಜರಾತಿನ ಅಂಕಲೇಶ್ವರ ನಗರದ ಗೋದಾಮೊಂದರಿಂದ ಪೊಲೀಸರು 5000 ಕೋ. ರೂ. ಬೆಲೆಬಾಳುವ ಕೊಕೇನ್‌ ಡ್ರಗ್‌ ವಶಪಡಿಸಿಕೊಂಡಿದ್ದಾರೆ. ದಿಲ್ಲಿ ಮತ್ತು ಗುಜರಾತ್‌ ಪೊಲೀಸರು ಆವ್ಕರ್‌ ಡ್ರಗ್ಸ್‌ ಲಿಮಿಟೆಡ್‌ ಕಂಪನಿಯ ಗೋದಾಮಿಗೆ ಖಚಿತ ಮಾಹಿತಿಯ ಆಧಾರದಲ್ಲಿ ದಾಳಿ ಮಾಡಿದಾಗ 518 ಕೆಜಿ ಕೊಕೇನ್‌ ವಶವಾಗಿದೆ. ಇದರ ಈಗಿನ ಮಾರುಕಟ್ಟೆ ಮೌಲ್ಯ 5000 ಕೋ.ರೂ.ಗೂ ಹೆಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲದಿನಗಳ ಹಿಂದೆಯಷ್ಟೇ ದಿಲ್ಲಿ ಪೊಲೀಸರು

ಗುಜರಾತ್‌ನಲ್ಲಿ 5000 ಕೋ.ರೂ. ಮೌಲ್ಯದ ಕೊಕೇನ್‌ ವಶ Read More »

ಬಾಬಾ ಸಿದ್ದಿಕಿ ಹತ್ಯೆ : ಬಾಲಿವುಡ್‌ನಲ್ಲಿ ಆಘಾತದ ಅಲೆ

ಅಂತಿಮ ದರ್ಶನಕ್ಕೆ ಧಾವಿಸಿದ ತಾರೆಯರು; ಬಿಕ್ಕಿ ಬಿಕ್ಕಿ ಅತ್ತ ಶಿಲ್ಪಾ ಶೆಟ್ಟಿ ಮುಂಬಯಿ: ಮಹಾರಾಷ್ಟ್ರದ ಮಾಜಿ ಸಚಿವ, ಎನ್‌ಸಿಪಿ ಅಜಿತ್ ಪವಾರ್ ಬಣದ ನಾಯಕ ಬಾಬಾ ಸಿದ್ದಿಕಿ (66) ಹತ್ಯೆ ಬಾಲಿವುಡ್‌ನಲ್ಲಿ ಆಘಾತದ ಅಲೆಯೆಬ್ಬಿಸಿದೆ. ಸಲ್ಮಾನ್‌ ಖಾನ್‌, ಶಾರೂಕ್‌ ಖಾನ್‌, ಶಿಲ್ಪಾ ಶೆಟ್ಟಿ ಸೇರಿದಂತೆ ಹಲವು ತಾರೆಯರು ಸಾವಿನ ಸುದ್ದಿ ತಿಳಿದ ಕೂಡಲೇ ಆಸ್ಪತ್ರೆಗೆ ಧಾವಿಸಿದ್ದಾರೆ. ಶಿಲ್ಪಾ ಶೆಟ್ಟಿ ಆಸ್ಪತ್ರೆಗೆ ಬರುವಾಗ ಬಿಕ್ಕಿ ಬಿಕ್ಕಿ ಅಳುತಿದ್ದರು. ಕಾರಿನಲ್ಲಿ ಕುಳಿತು ಕೂಡ ಅವರು ಅಳುತ್ತಿರುವುದು ಕಾಣಿಸಿತು.ನಿನ್ನೆ ರಾತ್ರಿ ಉಪನಗರ

ಬಾಬಾ ಸಿದ್ದಿಕಿ ಹತ್ಯೆ : ಬಾಲಿವುಡ್‌ನಲ್ಲಿ ಆಘಾತದ ಅಲೆ Read More »

ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಬಿಷ್ಣೋಯ್‌ ಗ್ಯಾಂಗ್‌ ಕೃತ್ಯ?

ಎನ್‌ಸಿಪಿ ನಾಯಕನ ಹತ್ಯೆಯಿಂದ ನಟ ಸಲ್ಮಾನ್‌ ಖಾನ್‌ಗೆ ನಡುಕ ಮುಂಬಯಿ: ಮಹಾರಾಷ್ಟ್ರದ ಮಾಜಿ ಸಚಿವ, ಪ್ರಭಾವಿ ಮುಸ್ಲಿಂ ನಾಯಕ ಬಾಬಾ ಸಿದ್ದಿಕಿ ಅವರನ್ನು ದಸರಾ ದಿನವೇ ಹತ್ಯೆ ಮಾಡಿರುವುದು ಆಘಾತದ ಅಲೆ ಎಬ್ಬಿಸಿದೆ. ಇದು ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ನ ಕೃತ್ಯವೇ ಎಂಬ ಅನುಮಾನ ಮೂಡಿದೆ. ಹತ್ಯೆ ಕೃತ್ಕಕ್ಕೆ ಸಂಬಂಧಿಸಿ ಸೆರೆಯಾಗಿರುವ ಇಬ್ಬರು ಶಂಕಿತರು ತಮ್ಮನ್ನು ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ ಸದಸ್ಯರು ಎಂದು ಹೇಳಿಕೊಂಡಿದ್ದಾರೆ. ಈ ಕಾರಣಕ್ಕೆ ಬಾಲಿವುಡ್‌ನಲ್ಲೂ ಬಾಬಾ ಸಿದ್ದಿಕಿಯ ಹತ್ಯೆ ತಲ್ಲಣ ಮೂಡಿಸಿದೆ. ನಿರ್ದಿಷ್ಟವಾಗಿ ನಟ

ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಬಿಷ್ಣೋಯ್‌ ಗ್ಯಾಂಗ್‌ ಕೃತ್ಯ? Read More »

ಐವರು ಕೈದಿಗಳು ಸಿನಿಮೀಯ ಶೈಲಿಯಲ್ಲಿ ಜೈಲಿನಿಂದ ಪರಾರಿ

ಬೆಡ್‌ಶೀಟ್‌, ಲುಂಗಿ ಜೋಡಿಸಿ ಗೋಡೆ ಹಾರಿದ ಕೈದಿಗಳು ಗುವಾಹಟಿ : ಐವರು ವಿಚಾರಣಾಧೀನ ಕೈದಿಗಳು ಜೈಲಿನ ಕಂಬಿಗಳನ್ನು ಮುರಿದು, ಬೆಡ್‌ಶೀಟ್‌ಗಳು ಮತ್ತು ಲುಂಗಿಗಳನ್ನು ಬಳಸಿ 20 ಅಡಿ ಕಾಂಪೌಂಡ್‌ನ್ನು ಇಳಿದು ಸಿನಿಮೀಯ ರೀತಿಯಲ್ಲಿ ಪರಾರಿಯಾದ ಘಟನೆ ಅಸ್ಸಾಂನಲ್ಲಿ ನಡೆದಿದೆ. ಜೈಲಿಂದ ತಪ್ಪಿಸಿಕೊಂಡ ಕೈದಿಗಳನ್ನು ಸೈಫುದ್ದೀನ್, ಜಿಯಾರುಲ್ ಇಸ್ಲಾಂ, ನೂರ್ ಇಸ್ಲಾಂ, ಮಫಿದುಲ್ ಮತ್ತು ಅಬ್ದುಲ್ ರಶೀದ್ ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ 1 ರಿಂದ 2 ಗಂಟೆಯ ಮಧ್ಯೆ ಮೋರಿಗಾಂವ್ ಜಿಲ್ಲಾ ಕಾರಾಗೃಹದಿಂದ ಪರಾರಿಯಾಗಿದ್ದಾರೆ. ಬ್ಯಾರಕ್‌ಗಳ ರಾಡ್‌ಗಳನ್ನು

ಐವರು ಕೈದಿಗಳು ಸಿನಿಮೀಯ ಶೈಲಿಯಲ್ಲಿ ಜೈಲಿನಿಂದ ಪರಾರಿ Read More »

ತಾಂತ್ರಿಕ ದೋಷದಿಂದ ಮೂರು ತಾಸು ಆಕಾಶದಲ್ಲಿ ಗಿರಕಿ ಹೊಡೆದ ವಿಮಾನ

140 ಪ್ರಯಾಣಿಕರ ಪ್ರಾಣ ಉಳಿಸಿದ ಪೈಲಟ್‌ಗೆ ಪ್ರಶಂಸೆಗಳ ಮಹಾಪೂರ ಚೆನ್ನೈ: ತಾಂತ್ರಿಕ ದೋಷ ಕಾಣಿಸಿಕೊಂಡ ಏರ್ ಇಂಡಿಯಾ ವಿಮಾನವೊಂದು ಶುಕ್ರವಾರ ರಾತ್ರಿ ಸುಮಾರು ಮೂರು ತಾಸು ಆಕಾಶದಲ್ಲೇ ಗಿರಕಿ ಹೊಡೆದು ಕೊನೆಗೂ ಸುರಕ್ಷಿತವಾಗಿ ಲ್ಯಾಂಡ್‌ ಆಗುವ ಮೂಲಕ 140 ಪ್ರಯಾಣೀಕರು ಮತ್ತು ವಿಮಾನದ ಸಿಬ್ಬಂದಿಯ ಪ್ರಾಣ ಉಳಿದಿದೆ. ತಮಿಳುನಾಡಿನ ತಿರುಚ್ಚಿ ವಿಮಾನ ನಿಲ್ದಾಣದಲ್ಲಿ ಈ ವಿಮಾನ ತುರ್ತು ತಿರುಚ್ಚಿಯಿಂದ ಶಾರ್ಜಾಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕ್‌ಆಫ್‌ ಆದ ಕೆಲವೇ ಕ್ಷಣಗಳಲ್ಲಿ ಅದರ ಹೈಡ್ರಾಲಿಕ್‌ನ ವ್ಯವಸ್ಥೆಯಲ್ಲಿ ದೋಷ

ತಾಂತ್ರಿಕ ದೋಷದಿಂದ ಮೂರು ತಾಸು ಆಕಾಶದಲ್ಲಿ ಗಿರಕಿ ಹೊಡೆದ ವಿಮಾನ Read More »

error: Content is protected !!
Scroll to Top