ಮಂಗಳೂರು-ದುಬೈ ವಿಮಾನ ಯಾನ ದರ ಏರಿಕೆ | ರಜೆಯ ಸಮಯ ಬಳಕೆ ಮಾಡಿಕೊಂಡ ಇಂಡಿಯೋ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್
ಮಂಗಳೂರು: ಮಂಗಳೂರು-ದುಬೈ ವಿಮಾನಯಾನ ದರ ಏರಿಕೆಯಾಗಿದ್ದು, ಈ ಮೂಲಕ ಕರಾವಳಿ ಭಾಗದಿಂದ ಉದ್ಯೋಗಕ್ಕೆಂದು ದುಬೈನಲ್ಲಿ ತೆರಳುವವರಿಗೆ ಶಾಕ್ ಎದುರಾಗಿದೆ. ಬಕ್ರೀದ್ ರಜೆಯಲ್ಲಿ ಊರಿಗೆ ಮರಳಬೇಕು ಎಂದುಕೊಂಡಿರುವ ಮಧ್ಯಮವರ್ಗದ ಭಾರತೀಯರು ವಿಮಾನಯಾನದ ದರ ಕೇಳಿ ಸುಸ್ತಾಗಿದ್ದಾರೆ. ದುಬೈನಲ್ಲಿ ಸೆಖೆ ವಿಪರೀತಗೊಳ್ಳುವ ಹಿನ್ನೆಲೆಯಲ್ಲಿ ಹಲವೆಡೆ ಬೇಸಿಗೆ ರಜೆ ಆರಂಭಗೊಂಡಿದೆ, ಅಲ್ಲದೇ ಬಕ್ರೀದ್ ಹಬ್ಬ ಬೇರೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕರಾವಳಿಯ ಅನೇಕರು ವೆಕೇಷನ್ನಲ್ಲಿ ಊರಿಗೆ ಮರಳುವ ಸಿದ್ಧತೆಯಲ್ಲಿದ್ದಾರೆ. ಆದರೆ ಏಕಾಏಕಿ ಏರಿಕೆಗೊಂಡಿರುವ ವಿಮಾನಯಾನ ದರದಿಂದ ಊರಿಗೆ ಬರುವ ನಿರ್ಧಾರದಿಂದ ಹಿಂದೆ ಸರಿಯುವಂತಾಗಿದೆ.ದುಬೈ […]










