ದೇಶ

ಭಕ್ತರೊಬ್ಬರಿಂದ ನಿರ್ಮಾಣವಾಯಿತು ಪಾರ್ಲೆ-ಜಿ ಬಿಸ್ಕೆಟ್‍ ನಿಂದ ರಾಮ ಮಂದಿರ ಪ್ರತಿಕೃತಿ | 20 ಕೆ.ಜಿ. ಬಿಸ್ಕೆಟ್ ಬಳಕೆ

20 ಕೆ.ಜಿ.ಪಾರ್ಲೆ-ಜಿ ಬಿಸ್ಕೆಟ್ ಬಳಸಿ ಅಯೋಧ್ಯೆ ರಾಮ ಮಂದಿರದ ಪ್ರತಿಕೃತಿ ನಿರ್ಮಿಸುವ ಮೂಲಕ ವ್ಯಕ್ತಿಯೊಬ್ಬರು ರಾಮಭಕ್ತಿ ತೋರಿಸಿದ್ದಾರೆ. ಪಶ್ಚಿಮ ಬಂಗಾಳದ ದುರ್ಗಾಪುರ ಜಿಲ್ಲೆಯ ಛೋಟಾನ್ ಘೋಷ್ ಎಂಬವರು ಪಾರ್ಲೆ- ಜಿ ಬಿಸ್ಕೆಟ್ ಬಳಸಿ ನಾಲ್ಕು ಅಡಿ ಎತ್ತರದ ರಾಮಮಂದಿರ ಪ್ರತಿಕೃತಿ ರಚಿಸಿದ್ದಾರೆ. ಐದು ದಿನಗಳಲ್ಲಿ ಈ ಕೆಲಸ ಪೂರ್ಣಗೊಳಿಸಿದ್ದು, ನಿರ್ಮಾಣಕ್ಕೆ ಪ್ಲೈವುಡ್, ಅಂಟು ಬಳಸಲಾಗಿದೆ.  ಸ್ನೇಹಿತರು ಸಹಾಯ ಮಾಡಿದ್ದಾರೆ ಎಂದಿದ್ದಾರೆ ಛೋಟಾನ್ ಘೋಷ್

ಭಕ್ತರೊಬ್ಬರಿಂದ ನಿರ್ಮಾಣವಾಯಿತು ಪಾರ್ಲೆ-ಜಿ ಬಿಸ್ಕೆಟ್‍ ನಿಂದ ರಾಮ ಮಂದಿರ ಪ್ರತಿಕೃತಿ | 20 ಕೆ.ಜಿ. ಬಿಸ್ಕೆಟ್ ಬಳಕೆ Read More »

ಪಥನಗೊಂಡಿದ್ದ ಭಾರತೀಯ ವಾಯುಸೇನೆ ವಿಮಾನದ ಅವಶೇಷ ಪತ್ತೆ | ಬರೋಬ್ಬರಿ 8 ವರ್ಷಗಳ ಬಳಿಕ ಪತ್ತೆ

ನವದೆಹಲಿ: 29 ಸಿಬ್ಬಂದಿಗಳನ್ನು ಹೊತ್ತುಕೊಂಡು ಹೋಗಿದ್ದ ಎಎನ್‍-32 ವಿಮಾನ ನಾಪತ್ತೆಯಾಗಿದ್ದ ಭಾರತೀಯ ವಾಯುಸೇನೆಯ ಟ್ರಾನ್ಸ್‍ ಪೋರ್ಟ್‍ ವಿಮಾನದ ಅವಶೇಷಗಳು ಚೆನ್ನೈ ಕಡಲ ತೀರದಿಂದ 310 ಕಿ.ಮೀ. ಆಳದಲ್ಲಿ ಪತ್ತೆಯಾಗಿದ್ದು, ಈ ಕುರಿತು ಇಂಡಿಯನ್ ಏರ್‍ ಪೋರ್ಸ್ ನಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದೆ. ಎಂಟು ವರ್ಷಗಳ ಹಿಂದೆ ಅಂದರೆ 2016 ಜುಲೈ 22 ರಂದು ಬೆಳಿಗ್ಗೆ ಈ ವಿಮಾನ ಚೆನ್ನೈನಿಂದ ಪೋರ್ಟ್‍ ಬ್ಲೇರ್ ಗೆ ಹೊರಟಿತ್ತು. 29 ಪ್ರಯಾಣಿಕರನ್ನು ಹೊತ್ತ ಈ ವಿಮಾನ ಹಾರಾಟ ಆರಂಭವಾದ ಕೆಲವೇ

ಪಥನಗೊಂಡಿದ್ದ ಭಾರತೀಯ ವಾಯುಸೇನೆ ವಿಮಾನದ ಅವಶೇಷ ಪತ್ತೆ | ಬರೋಬ್ಬರಿ 8 ವರ್ಷಗಳ ಬಳಿಕ ಪತ್ತೆ Read More »

ನಾಳೆ ಭಾರತದ ಅತಿ ಉದ್ದದ ಸಮುದ್ರ ಸೇತು ಲೋಕಾರ್ಪಣೆ | ಪ್ರಧಾನಿ ಉದ್ಘಾಟಿಸಲಿರುವ ಈ ಅಟಲ್ ಸೇತು ಹಲವು ವೈಶಿಷ್ಟ್ಯಗಳ ಕೇಂದ್ರ ಬಿಂದು

ಭಾರತದ ಅತಿ ಉದ್ದದ  ಸಮುದ್ರ ಸೇತುವೆ (ಟ್ರಾನ್ಸ್ ಹಾರ್ಬರ್ ಲಿಂಕ್) ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಜ.12ರಂದು ಉದ್ಘಾಟಿಸಲಿದ್ದಾರೆ. ಈ ಸೇತುವೆ ಮಾರ್ಗಕ್ಕೆ ‘ಅಟಲ್ ಸೇತು’ ಎಂದು ನಾಮಕರಣ ಮಾಡಲಾಗಿದೆ. ಭಾರತದಲ್ಲಿ ನಿರ್ಮಿಸಲಾದ ಅತಿ ಉದ್ದದ ಸಮುದ್ರ ಸೇತುವೆ ಇದಾಗಿದ್ದು, ಸಮುದ್ರದ ಮೇಲೆ 16.5 ಕಿ.ಮೀ. ಮತ್ತು ನೆಲದ ಮೇಲೆ 5.5 ಕಿ.ಮೀ. ಉದ್ದವಿದ್ದು ಒಟ್ಟು 21.8 ಕಿ.ಮೀ. ಉದ್ದ ಹೊಂದಿದೆ. ಈ ಸೇತುವೆ ಮುಂಬೈನ ಸೆವ್ರಿಯಿಂದ ಆರಂಭಗೊಂಡು ರಾಯಗಡ ಜಿಲ್ಲೆಯ ಉರಾನ್ ತಾಲೂಕಿನಲ್ಲಿ ಕೊನೆಗೊಳ್ಳುತ್ತದೆ. ಸೇತುವೆ

ನಾಳೆ ಭಾರತದ ಅತಿ ಉದ್ದದ ಸಮುದ್ರ ಸೇತು ಲೋಕಾರ್ಪಣೆ | ಪ್ರಧಾನಿ ಉದ್ಘಾಟಿಸಲಿರುವ ಈ ಅಟಲ್ ಸೇತು ಹಲವು ವೈಶಿಷ್ಟ್ಯಗಳ ಕೇಂದ್ರ ಬಿಂದು Read More »

ಅಯೋಧ್ಯಾ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ! | ಆಹ್ವಾನ ತಿರಸ್ಕರಿಸಿ ಅಧಿಕೃತ ಪ್ರಕಟಣೆ ಹೊರಡಿಸಿ ಕಾರಣ ತಿಳಿಸಿದ ಕಾಂಗ್ರೆಸ್

ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವ ಭವ್ಯ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ಹಾಜರಾಗೋದಿಲ್ಲ ಎಂದು ಕಾಂಗ್ರೆಸ್ ಪಕ್ಷ ಅಧಿಕೃತ ಪ್ರಕಟಣೆ ಹೊರಡಿಸಿದೆ. ಜನವರಿ 22 ರಂದು ಮಧ್ಯಾಹ್ನ 12 ಗಂಟೆಗೆ ಅಯೋಧ್ಯಾ ಶ್ರೀರಾಮ ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದ್ದು, ಈ ಮೂಲಕ ರಾಮ ಮಂದಿರ ಉದ್ಘಾಟನೆ ಆಗಲಿದೆ. ಈ ಕಾರ್ಯಕ್ರಮದಿಂದ ದೂರ ಉಳಿಯಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ. ಅಯೋಧ್ಯಾ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮವನ್ನು ಬಿಜೆಪಿಯ ರಾಜಕೀಯ ಯೋಜನೆ ಎಂದು

ಅಯೋಧ್ಯಾ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ! | ಆಹ್ವಾನ ತಿರಸ್ಕರಿಸಿ ಅಧಿಕೃತ ಪ್ರಕಟಣೆ ಹೊರಡಿಸಿ ಕಾರಣ ತಿಳಿಸಿದ ಕಾಂಗ್ರೆಸ್ Read More »

ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಲ್ಲಿ ಎಲ್.ಕೆ. ಅಡ್ವಾಣಿ ಭಾಗಿ: ವಿ.ಹೆಚ್.ಪಿ.

ನವದೆಹಲಿ: ಬಿಜೆಪಿ ಹಿರಿಯ ನಾಯಕ, ಅಯೋಧ್ಯೆಯಲ್ಲಿ ರಾಮ ಮಂದಿರವಾಗಲು ಪ್ರಮುಖ ಕಾರಣಕರ್ತರಾದ ಎಲ್‌ಕೆ ಅಡ್ವಾಣಿ ಅವರು ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ‘ಪ್ರಾಣ ಪ್ರತಿಷ್ಠಾ’ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡರು ದೃಢಪಡಿಸಿದ್ದಾರೆ. 96ರ ಹರೆಯದ ಎಲ್‌.ಕೆ. ಅಡ್ವಾಣಿ ಅವರು ರಾಮ ಜನ್ಮಭೂಮಿ ಆಂದೋಲನದ ನೇತೃತ್ವ ವಹಿಸಿದ್ದ ಬಿಜೆಪಿ ನಾಯಕರಲ್ಲಿ ಒಬ್ಬರಾಗಿರುವ ಕಾರಣ ರಾಮಮಂದಿರ ಪ್ರಾಣ ಪ್ರತಿಷ್ಠಾನ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವರ ನಿರ್ಧಾರ ಇಲ್ಲಿ ಪ್ರಮುಖವಾಗಿದೆ.  ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಡಿಸೆಂಬರ್‌ನಲ್ಲಿ ಬಿಜೆಪಿ

ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಲ್ಲಿ ಎಲ್.ಕೆ. ಅಡ್ವಾಣಿ ಭಾಗಿ: ವಿ.ಹೆಚ್.ಪಿ. Read More »

ನೌಕಾಪಡೆಗೆ ಸೇರ್ಪಡೆಗೊಂಡ ಭಾರತದ ಪ್ರಥಮ ದೃಷ್ಠಿ 10 `ಸ್ಟಾರ್‌ ಲೈನರ್‌’ ಡ್ರೋನ್‌!

ಹೈದರಾಬಾದ್: ಭಾರತದ ಮೊದಲ ದೇಶೀಯವಾಗಿ ನೌಕಾಪಡೆಗೆ ನಿರ್ಮಿಸಲಾದ ದೃಷ್ಟಿ 10 ʼಸ್ಟಾರ್‌ಲೈನರ್ʼ‌ ಮಾನವರಹಿತ ಡ್ರೋನ್ ಬುಧವಾರ ನೌಕಾಪಡೆ ಮುಖ್ಯಸ್ಥರಾದ ಅಡ್ಮಿರಲ್‌ ಆರ್‌ ಹರಿಕುಮಾರ್‌ ಹಸಿರು ನಿಶಾನೆ ತೋರಿಸಿದರು. ಅತ್ಯಾಧುನಿಕ ಡ್ರೋನ್‌ ಈ ಕ್ಷೇತ್ರದಲ್ಲಿ ಭಾರತಕ್ಕೆ ಮಹತ್ವದ ಸ್ವಾಯತ್ತತೆ ಮತ್ತು ತಂತ್ರಜ್ಞಾನ ನಾಯಕತ್ವಕ್ಕೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಅದಾನಿ ಸಂಸ್ಥೆಯು ಈ ಅತ್ಯಾಧುನಿಕ ಡ್ರೋನ್‌ ಅನ್ನು ಅದಾನಿ ಡಿಫೆನ್ಸ್‌ ಎಂಡ್‌ ಏರೋಸ್ಪೇಸ್‌ ಸಂಸ್ಥೆ ಮೂಲಕ ತಯಾರಿಸಿದೆ. ಇಂದಿನ ಸಮಾರಂಭ ಹೈದರಾಬಾದ್‌ನ ಅದಾನಿ ಏರೋಸ್ಪೇಸ್‌ ಪಾರ್ಕ್‌ನಲ್ಲಿ ನಡೆದಿದೆ.

ನೌಕಾಪಡೆಗೆ ಸೇರ್ಪಡೆಗೊಂಡ ಭಾರತದ ಪ್ರಥಮ ದೃಷ್ಠಿ 10 `ಸ್ಟಾರ್‌ ಲೈನರ್‌’ ಡ್ರೋನ್‌! Read More »

ಜ. 25ರಿಂದ ಅಯೋಧ್ಯೆಗೆ ದೇಶದ 430 ಕಡೆಯಿಂದ 35 ರೈಲು ಸಂಚಾರ!

ನವದೆಹಲಿ: ದೇಶದ 430 ಕಡೆಯಿಂದ ಆಯೋಧ್ಯೆಗೆ ರೈಲು ಸೇವೆ ನೀಡಲು ನಿರ್ಧರಿಸಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಜನವರಿ 25 ರಿಂದ 60 ದಿನಗಳ ಕಾಲ ವಿಶೇಷ ಹಾಗೂ ಹೆಚ್ಚುವರಿ ರೈಲುಗಳು ಆಯೋಧ್ಯೆಯತ್ತ ಸಂಚರಿಸಲಿವೆ. ಪ್ರತಿ ದಿನ 35 ರೈಲುಗಳು ಆಯೋಧ್ಯೆ ತೆರಳುವ ಭಕ್ತರಿಗೆ ಸೇವೆ ನೀಡಲಿವೆ ಎಂದು ಬಿಜೆಪಿ ಸಭೆಯಲ್ಲಿ ಹೇಳಿದರು. ಈ‌ ಮೂಲಕ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಶ್ರೀರಾಮ ಮಂದಿರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಿದೆ. ದೇಶಾದ್ಯಂತ ದೀಪಾವಳಿ ಸಡಗರ ಮನೆ

ಜ. 25ರಿಂದ ಅಯೋಧ್ಯೆಗೆ ದೇಶದ 430 ಕಡೆಯಿಂದ 35 ರೈಲು ಸಂಚಾರ! Read More »

ಅರ್ಜುನ ಪ್ರಶಸ್ತಿ ಪಡೆದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ

ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಅವರಿಗೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅರ್ಜುನ ಪ್ರಶಸ್ತಿಯನ್ನು ನೀಡಿದರು. 2023ರ ಏಕದಿನ ವಿಶ್ವಕಪ್‌ನಲ್ಲಿನ ಅವರ ಸಾಧನೆಯನ್ನು ಗಣನೆಗೆ ತೆಗೆದುಕೊಂಡ ನಂತರ ಬಿಸಿಸಿಐ ಶಮಿ ಹೆಸರನ್ನು ಪ್ರಶಸ್ತಿಗಾಗಿ ಶಿಫಾರಸು ಮಾಡಿತ್ತು. ಕೇವಲ 7 ಪಂದ್ಯಗಳಿಂದ 24 ವಿಕೆಟ್ ಕಬಳಿಸುವ ಮೂಲಕ ಶಮಿ 2023ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಬೌಲರ್ ಆಗಿ ಮಿಂಚಿದ್ದರು. ನಾನು ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಕ್ಕೆ ಸಂತೋಷವಾಗಿದೆ. ನನ್ನ ಜೀವನದಲ್ಲಿ ಈ ಪ್ರಶಸ್ತಿಯನ್ನು ಪಡೆದ ಅನೇಕರನ್ನು ನೋಡಿದ್ದೇನೆ.

ಅರ್ಜುನ ಪ್ರಶಸ್ತಿ ಪಡೆದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ Read More »

ಚಳಿ ಕಾಯಿಸಲು ಹಾಕಿದ್ದ ಬೆಂಕಿಗೆ ಅವಳಿ ಕಂದಮ್ಮಗಳು ಸಜೀವ ದಹನ!!

ಉತ್ತರಪ್ರದೇಶ: ಮೈನ್‌ಪುರಿ ಜಿಲ್ಲೆಯಲ್ಲಿ ಅಜಾಗರೂಕತೆಯಿಂದ ಭೀಕರ ಅಪಘಾತವೇ ಸಂಭವಿಸಿದೆ. ಮಂಚಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಆರು ತಿಂಗಳ ಅವಳಿ ಕಂದಮ್ಮಗಳು ಸಜೀವ ದಹನವಾಗಿದ್ದಾರೆ. ಮೈನ್‌ಪುರಿ ಜಿಲ್ಲೆಯ ಬೆಂಚಾ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಮೈನ್ಪುರಿ ರಸ್ತೆ ಬಳಿ ವಾಸಿಸುವ ಗೌರವ್ ಅಲಿಯಾಸ್ ದಿಲೀನ್ ಕುಮಾರ್ ಸೋಮವಾರ ಮಧ್ಯಾಹ್ನ ಮನೆಯಿಂದ ಹೊರಗೆ ಹೋಗಿದ್ದರು. ಮನೆಯಲ್ಲಿ ಅವರ ಪತ್ನಿ ರಜನಿ ಅವರ ಆರು ತಿಂಗಳ ಅವಳಿ ಹೆಣ್ಣು ಮಕ್ಕಳಾದ ರಿದ್ಧಿ ಮತ್ತು ಸಿದ್ಧಿ ಇದ್ದರು. ರಜನಿ ಟೆರೇಸ್​​​​ನಲ್ಲಿರುವ ಕೋಣೆಯಲ್ಲಿ ನೇವಾರ್ ಕಾಟ್

ಚಳಿ ಕಾಯಿಸಲು ಹಾಕಿದ್ದ ಬೆಂಕಿಗೆ ಅವಳಿ ಕಂದಮ್ಮಗಳು ಸಜೀವ ದಹನ!! Read More »

ರಾಮಮಂದಿರ ಉದ್ಘಾಟನೆಯಂದು ಮೌನ ವ್ರತ ಮುರಿಯಲಿದ್ದಾರೆ ಮೌನಿ ಮಾತಾ!!

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಂತರ ಮೌನ ಮುರಿಯುತ್ತೇನೆ ಎಂದು ಶಪಥಗೈದಿದ್ದ ಮಹಿಳೆಯೊಬ್ಬರು ಬರೋಬ್ಬರಿ 30 ವರ್ಷದ ನಂತರ ಮಾತನಾಡಲಿದ್ದಾರೆ. ಜಾರ್ಖಂಡ್ನ 85 ವರ್ಷದ ಸರಸ್ವತಿ ದೇವಿ 1992ರ ಡಿ. 6ರಂದು ಜನ್ಮಸ್ಥಾನದಲ್ಲಿ ದಾಳಿಕೋರರು ನಿರ್ಮಿಸಿದ್ದ ಕಟ್ಟಡ ಕರಸೇವಕರಿಂದ ನೆಲಸಮವಾಗಿದ್ದು, ಅಂದು ಸರಸ್ವತಿ ದೇವಿ ಮೌನವ್ರತ ಕೈಗೊಂಡಿದ್ದರು. ಜ.22 ರಂದು ಸರಸ್ವತಿ ದೇವಿ ಅಗರ್ವಾಲ್ ತಮ್ಮ ಕನಸು ನನಸಾಗುತ್ತಿರುವುದರಿಂದ ಅಂದಿನಿಂದ ಮತ್ತೆ ಮಾತನಾಡಲು ತೀರ್ಮಾನಿಸಿದ್ದಾರೆ. 30 ವರ್ಷದ ಅವರ ಮೌನ ದೀಕ್ಷೆ ಕೊನೆಗೊಳ್ಳುವ ಕಾಲ ರಾಮಮಂದಿರ ನಿರ್ಮಾಣದೊಂದಿಗೆ ಸನ್ನಿಹಿತವಾಗಿದೆ.

ರಾಮಮಂದಿರ ಉದ್ಘಾಟನೆಯಂದು ಮೌನ ವ್ರತ ಮುರಿಯಲಿದ್ದಾರೆ ಮೌನಿ ಮಾತಾ!! Read More »

error: Content is protected !!
Scroll to Top