ದೇಶ

ಏಷ್ಯನ್ ಗೇಮ್ಸ್ ಏರ್ ರೈಫಲ್: ಚೀನಾದ ದಾಖಲೆ ಮುರಿದು ವಿಶ್ವ ದಾಖಲೆ ಬರೆದ ಭಾರತ!!

ಹ್ಯಾಂಗ್ ಝೂ: ಪ್ರತಿಷ್ಠಿತ 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಪುರುಷರ 10 ಮೀ ಏರ್ ರೈಫಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ವಿಶ್ವದಾಖಲೆಯನ್ನೇ ಬರೆದಿದೆ. ರುದ್ರಂಕ್ಷ್ ಪಾಟೀಲ್, ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಮತ್ತು ದಿವ್ಯಾಂಶ್ ಸಿಂಗ್ ಪನ್ವಾರ್ ಅವರ ಮೂವರು ಒಟ್ಟು 1893.7 ಸ್ಕೋರ್‌ನೊಂದಿಗೆ ವಿಶ್ವ ದಾಖಲೆಯನ್ನು ಮುರಿದು 2023 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದು ಭಾರತದ ಗರಿಮೆಯನ್ನು ಮೇಲಕ್ಕೆತ್ತಿದ್ದಾರೆ. ಆಗಸ್ಟ್ 2022 ರಲ್ಲಿ ಬಾಕು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ […]

ಏಷ್ಯನ್ ಗೇಮ್ಸ್ ಏರ್ ರೈಫಲ್: ಚೀನಾದ ದಾಖಲೆ ಮುರಿದು ವಿಶ್ವ ದಾಖಲೆ ಬರೆದ ಭಾರತ!! Read More »

ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸೇರಿದ ಜೆಡಿಎಸ್ | ಸೀಟು ಹಂಚಿಕೆಯ ಗೊಂದಲದ ಬಗ್ಗೆಯೂ ಮಾತನಾಡಿದ ಎಚ್.ಡಿ.ಕೆ.

ನವದೆಹಲಿ: ಜೆಡಿಎಸ್ ಅಧಿಕೃತವಾಗಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟ ಸೇರಿದೆ. ಇಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಮಾತನಾಡಿದ ಕುಮಾರಸ್ವಾಮಿ, ಅಧಿಕೃತವಾಗಿ ಮೈತ್ರಿ ಬಗ್ಗೆ ಕೆಲ ವಿಚಾರ ಚರ್ಚೆ ನಡೆಸಿದ್ದೇವೆ. ಮೈತ್ರಿ ಬಗ್ಗೆ ಎಲ್ಲಾ ರೀತಿಯಲ್ಲೂ ಸುಗಮವಾಗಿ ಚರ್ಚೆ ನಡೆಯುತ್ತಿದೆ. ಎಷ್ಟು ಸೀಟ್‌ ನಮಗೆ ಕೊಡುತ್ತಾರೆಂಬುದು ಮುಖ್ಯವಲ್ಲ ಎಂದಿದ್ದಾರೆ. ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ, ಜೆಡಿಎಸ್ ಗೆಲ್ಲುವುದೇ ನಮ್ಮ ಗುರಿ.

ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸೇರಿದ ಜೆಡಿಎಸ್ | ಸೀಟು ಹಂಚಿಕೆಯ ಗೊಂದಲದ ಬಗ್ಗೆಯೂ ಮಾತನಾಡಿದ ಎಚ್.ಡಿ.ಕೆ. Read More »

ಸನಾತನ ಧರ್ಮವನ್ನು ಡೆಂಗ್ಯೂ-ಮಲೇರಿಯಾ ಎಂದಿದ್ದ ಸ್ಟಾಲಿನ್‌ಗೆ ಸಂಕಷ್ಟ!!

ನವದೆಹಲಿ: ಸನಾತನ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಿಸಿ ತಮಿಳುನಾಡು ಸರ್ಕಾರ ಮತ್ತು ಸಚಿವ ಉದಯನಿಧಿ ಸ್ಟಾಲಿನ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ. “ಸನಾತನ ಧರ್ಮವನ್ನು ನಿರ್ಮೂಲನೆ ಮಾಡಿ” ಎಂದು ವಿವಾದಾತ್ಮಕವಾಗಿ ಹೇಳಿಕೆ ನೀಡಿರುವ ಉದಯನಿಧಿ ಸ್ಟಾಲಿನ್ ಹಾಗೂ ಡಿಎಂಕೆ ಮಾಜಿ ಸಂಸದ ಎ. ರಾಜಾ ವಿರುದ್ಧ ಅರ್ಜಿ ದಾಖಲಾಗಿದ್ದು ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನೋಟೀಸ್ ನೀಡಿದೆ. ಸೆಪ್ಟೆಂಬರ್ 2ರಂದು ಸನಾತನ ನಿರ್ಮೂಲನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ

ಸನಾತನ ಧರ್ಮವನ್ನು ಡೆಂಗ್ಯೂ-ಮಲೇರಿಯಾ ಎಂದಿದ್ದ ಸ್ಟಾಲಿನ್‌ಗೆ ಸಂಕಷ್ಟ!! Read More »

ಹೊಸ ಸಮವಸ್ತ್ರವನ್ನು ಸಂಸತ್ ಭದ್ರತಾ ಸಿಬ್ಬಂದಿ ಧರಿಸುವುದಿಲ್ಲವಂತೆ!!

ನವದೆಹಲಿ: ಹೊಸ ಸಂಸತ್ತಿನ ಕಟ್ಟಡಕ್ಕಾಗಿ ಸರ್ಕಾರ ತಂದ ಹೊಸ ಬಟ್ಟೆಗಳನ್ನು ಸಂಸತ್ತಿನ ಭದ್ರತಾ ವಿಭಾಗವು ಇನ್ನು ಮುಂದೆ ಧರಿಸುವುದಿಲ್ಲ, ಹಲವಾರು ಭದ್ರತಾ ಸಿಬ್ಬಂದಿಗಳು ಬಟ್ಟೆಗಳ ವಸ್ತುವು ಸಿಂಥೆಟಿಕ್ ಮತ್ತು ಶಾಖವನ್ನು ಉಂಟುಮಾಡುತ್ತದೆ ಎಂದು ದೂರಿದ್ದಾರೆ. ಬುಧವಾರ ಬೆಳಿಗ್ಗೆ ತುರ್ತು ಸಭೆಯ ನಂತರ, ಹಳೆಯ ನೇವಿ ಬ್ಲೂ ಸಫಾರಿ ಸೂಟ್ಗಳನ್ನು ಧರಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯ ವಿನ್ಯಾಸಗಳೊಂದಿಗೆ ಟೇಬಲ್ ಆಫೀಸ್, ನೋಟಿಸ್ ಆಫೀಸ್ ಮತ್ತು ಪಾರ್ಲಿಮೆಂಟರಿ ರಿಪೋರ್ಟಿಂಗ್ ವಿಭಾಗಗಳಲ್ಲಿನ ಸಿಬ್ಬಂದಿ ಸದಸ್ಯರು ಮತ್ತು

ಹೊಸ ಸಮವಸ್ತ್ರವನ್ನು ಸಂಸತ್ ಭದ್ರತಾ ಸಿಬ್ಬಂದಿ ಧರಿಸುವುದಿಲ್ಲವಂತೆ!! Read More »

ವಾಟ್ಸಪ್ ಚಾನೆಲ್ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ | ಜನಪ್ರಿಯವಾಗುತ್ತಿರುವ ವಾಟ್ಸಪ್‍ ನ ಹೊಸ ಫೀಚರ್ ಚಾನೆಲ್

ನವದೆಹಲಿ: ಬುಧವಾರವಷ್ಟೇ ಮೆಟಾ ಕಂಪನಿ ಲಾಂಚ್ ಮಾಡಿದ್ದ ವಾಟ್ಸಾಪ್ನ ಹೊಸ ಫೀಚರ್ ‘ಚಾನೆಲ್’ ಈಗ ಜನಪ್ರಿಯವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಈಗ ವಾಟ್ಸಾಪ್ ಚಾನೆಲ್ ಆರಂಭಿಸಿದ್ದಾರೆ. ವಾಟ್ಸಾಪ್ ಚಾನೆಲ್ನಲ್ಲಿ ತಮ್ಮ ಫಾಲೋವರ್ಸ್ಗೆ ಪಠ್ಯ, ಟೆಕ್ಸ್, ಫೋಟೋ, ವಿಡಿಯೋ, ಸ್ಟಿಕರ್ಸ್ ಷೇರ್ ಮಾಡಬಹುದು. ಜತೆಗೆ ಸಮೀಕ್ಷೆ ಕೂಡ ಕೈಗೊಳ್ಳಬಹುದು. ಜನ ಸಂಪರ್ಕಕ್ಕೆ ವಾಟ್ಸಪ್ ಚಾನೆಲ್ ಆರಂಭಿಸಿದ ದೇಶದ ಮೊಟ್ಟ ಮೊದಲ ಸಿಎಂ ಸಿದ್ದರಾಮಯ್ಯ ಏನಿದು ವಾಟ್ಸಾಪ್ ಚಾನೆಲ್?: ವಾಟ್ಸಾಪ್ ಚಾನೆಲ್, ಇದು ಒನ್ ವೇ ಬ್ರಾಡಕಾಸ್ಟರ್ ಸಾಧನವಾಗಿದೆ.

ವಾಟ್ಸಪ್ ಚಾನೆಲ್ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ | ಜನಪ್ರಿಯವಾಗುತ್ತಿರುವ ವಾಟ್ಸಪ್‍ ನ ಹೊಸ ಫೀಚರ್ ಚಾನೆಲ್ Read More »

ಕೇಂದ್ರ ಸರಕಾರ ಮಂಡಿಸಿರುವ ಮಹಿಳಾ ಮೀಸಲು ವಿಧೇಯಕದಲ್ಲೇನಿದೆ? ಯಾವಾಗಿನಿಂದ ಜಾರಿ?

ನವದೆಹಲಿ: ಕೇಂದ್ರ ಸರ್ಕಾರವು ಹೊಸ ಸಂಸತ್ ಭವನದ ಮೊದಲ ವಿಶೇಷ ಅಧಿವೇಶನದ ಕಲಾಪದ ವೇಳೆ, ನಿರೀಕ್ಷೆಯಂತೆ ಮಹಿಳಾ ಮೀಸಲು ವಿಧೇಯಕವನ್ನು ಮಂಡಿಸಿದೆ. ಈ ವಿಧೇಯಕಕ್ಕೆ ಕೇಂದ್ರ ಸರ್ಕಾರ ನಾರಿ ಶಕ್ತಿ ವಂದನ್ ಅಧಿನಿಯಮ್ ಎಂದು ಕರೆದಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ಮೀಸಲು ಕಲ್ಪಿಸುವ ವಿಧೇಯಕವು 27 ವರ್ಷಗಳಿಂದ ನನೆಗುದಿಗೆಗೆ ಬಿದ್ದಿತ್ತು. ಇದೀಗ ಈ ವಿಧೇಯಕವನ್ನು ಮಂಡಿಸಲಾಗಿದ್ದು, ಬಹುತೇಕ ಒಪ್ಪಿಗೆ ದೊರೆಯುವುದು ಪಕ್ಕಾ ಆಗಿದೆ. ಒಂದೊಮ್ಮೆ ಈ ವಿಧೇಯಕವು ಕಾಯ್ದೆಯಾಗಿ ಬದಲಾದರೂ, ಅದರ ಜಾರಿಗೆ

ಕೇಂದ್ರ ಸರಕಾರ ಮಂಡಿಸಿರುವ ಮಹಿಳಾ ಮೀಸಲು ವಿಧೇಯಕದಲ್ಲೇನಿದೆ? ಯಾವಾಗಿನಿಂದ ಜಾರಿ? Read More »

7 ದಿನಗಳ ಕೋಕರ್ನಾಗ್ ಎನ್‌ಕೌಂಟರ್ ಅಂತ್ಯ | ಎನ್’ಕೌಂಟರ್ ನಡೆದ ದಟ್ಟಾರಣ್ಯದಲ್ಲಿ ನಿರ್ಬಂಧ ಮುಂದುವರಿಸಿದ್ದೇಕೆ??

ಶ್ರೀನಗರ: ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್ ಕಮಾಂಡರ್ ಉಜೈರ್ ಖಾನ್ ಹತ್ಯೆಯಾಗಿದ್ದಾನೆ. ಮತ್ತೊಬ್ಬ ಉಗ್ರನ ಶವವನ್ನು ಸೇನೆ ಪತ್ತೆ ಮಾಡಿದೆ ಎಂದು ಕಾಶ್ಮೀರ ಎಡಿಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ. ಭಯೋತ್ಪಾದಕ ಉಜೈರ್ ಖಾನ್‌ ತಲೆಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಉಜೈರ್ ಹತ್ಯೆಯೊಂದಿಗೆ ಒಂದು ವಾರದ ಅನಂತನಾಗ್ ಎನ್‌ಕೌಂಟರ್ ಅಂತ್ಯಗೊಂಡಿದೆ. ಅನಂತ್‌ನಾಗ್ ಜಿಲ್ಲೆಯ ಗರೋಲ್ ಅರಣ್ಯದಲ್ಲಿ ಒಂದು ವಾರದ ಜಂಟಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ಕೊನೆಗೊಂಡಿದೆ ಆದರೆ ಶೋಧ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಕಾಶ್ಮೀರ

7 ದಿನಗಳ ಕೋಕರ್ನಾಗ್ ಎನ್‌ಕೌಂಟರ್ ಅಂತ್ಯ | ಎನ್’ಕೌಂಟರ್ ನಡೆದ ದಟ್ಟಾರಣ್ಯದಲ್ಲಿ ನಿರ್ಬಂಧ ಮುಂದುವರಿಸಿದ್ದೇಕೆ?? Read More »

ಹಳೆ ಸಂಸತ್ ಭವನಕ್ಕೆ ‘ಸಂವಿಧಾನ ಸದನ’ ಎಂದು ಕರೆಯಲು ಮೋದಿ ಸೂಚಿಸಿದ್ದೇಕೆ!!??

ದೆಹಲಿ: ಇಂದು ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನದ ಎರಡನೇ ದಿನವಾಗಿದೆ. ಇಂದಿನಿಂದ ಹಳೆ ಸಂಸತ್‌ ಭವನದಲ್ಲಿ ಕಲಾಪಕ್ಕೆ ವಿದಾಯ ಹೇಳುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಈ ವೇಳೆ ಹಳೆಯ ಸಂಸತ್ ಭವನದ ಬಗ್ಗೆ ಹಲವಾರು ವಿಷಯಗಳನ್ನು ಹಂಚಿಕೊಂಡರು. ಹಳೆ ಸಂಸತ್ ಭವನದ ತಮ್ಮ ಕೊನೆ ಭಾಷಣದಲ್ಲಿ ಮಾತನಾಡಿದ ಅವರು, ‘ನಾವು ಹೊಸ ಭವಿಷ್ಯವನ್ನು ಆರಂಭಿಸಲಿದ್ದೇವೆ. ಹೊಸ ಸಂಸತ್ ಭವನದತ್ತ ಹೆಜ್ಜೆ ಇಡುತ್ತಿದ್ದೇವೆ. ಸೆಂಟ್ರಲ್‌ಹಾಲ್ ನಮ್ಮ ಭಾವನೆಗಳಿಂದ ತುಂಬಿದೆ. ಹಳೆ ಸಂಸತ್ ಭವನದಲ್ಲಿ 4000ಕ್ಕೂ

ಹಳೆ ಸಂಸತ್ ಭವನಕ್ಕೆ ‘ಸಂವಿಧಾನ ಸದನ’ ಎಂದು ಕರೆಯಲು ಮೋದಿ ಸೂಚಿಸಿದ್ದೇಕೆ!!?? Read More »

ಅಭಿನವ ಹಾಲಶ್ರೀ ಬಂಧನ! | ಮತ್ತಷ್ಟು ಹೊಸ ಸಾಧ್ಯತೆಗಳಿಗೆ ತೆರೆದುಕೊಂಡ ಚೈತ್ರಾ ವಂಚನೆ ಪ್ರಕರಣ!!

ಬೆಂಗಳೂರು: ಚುನಾವಣೆ ಟಿಕೆಟ್ ಕೊಡಿಸುವುದಾಗಿ ಕೋಟ್ಯಾಂತರ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಮೂರನೇ ಆರೋಪಿ ಅಭಿನವ ಹಾಲಶ್ರೀಯನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಒಡಿಶಾದ ಕಟಕ್ ಬಳಿ ರೈಲಿನಲ್ಲಿ ಭುವನೇಶ್ವರದಿಂದ ಬೋಧಯಾಗೆ ತೆರಳುತ್ತಿದ್ದ ವೇಳೆ ಹಾಲಶ್ರೀಯನ್ನು ಇಂದು ಮುಂಜಾನೆ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ. ಈಗಾಗಲೇ ಪ್ರಕರಣ ಮುಖ್ಯ ಆರೋಪಿಗಳಾದ ಚೈತ್ರಾ ಕುಂದಾಪುರ ಹಾಗೂ ಗಗನ್ ಕಡೂರು ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಮೂರನೇ ಆರೋಪಿ ವಿಜಯನಗರ ಜಿಲ್ಲೆಯ ಅಭಿನವ ಹಾಲಶ್ರೀ ಬಂಧನಕ್ಕೆ ಸಿಸಿಬಿ ಬಲೆ ಬೀಸಿತ್ತು.

ಅಭಿನವ ಹಾಲಶ್ರೀ ಬಂಧನ! | ಮತ್ತಷ್ಟು ಹೊಸ ಸಾಧ್ಯತೆಗಳಿಗೆ ತೆರೆದುಕೊಂಡ ಚೈತ್ರಾ ವಂಚನೆ ಪ್ರಕರಣ!! Read More »

ನಟ ವಿಜಯ್ ಆಂಟೋನಿ ಪುತ್ರಿ ಮೀರಾ ಆತ್ಮಹತ್ಯೆ

ಚೆನ್ನೈ: ನಟ, ನಿರ್ಮಾಪಕ, ಸಂಗೀತ ನಿರ್ದೇಶಕ ವಿಯಜ್ ಆಂಟೋನಿ ಪುತ್ರಿ ಮೀರಾ (16) ಇಂದು ಮುಂಜಾನೆ ತಮ್ಮ ಮನೆಯ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಖಿನ್ನತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಆಟ, ಓದುಗಳಲ್ಲಿ ಚುರುಕಾಗಿದ್ದ ಅವರ ಖಿನ್ನತೆಗೆ ಕಾರಣಗಳು ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನಟ ವಿಜಯ್ ಆಂಟೋನಿ ಪುತ್ರಿ ಮೀರಾ ಆತ್ಮಹತ್ಯೆ Read More »

error: Content is protected !!
Scroll to Top