ರಾಷ್ಟ್ರಪಿತ ಮಹಾತ್ಮಾ ಗಾಂಧಿ ಪುತ್ತೂರು ಗಾಂಧಿಕಟ್ಟೆಗೆ ಆಗಮಿಸಿ 90 ವರ್ಷ ಪೂರೈಕೆ | ಮುಂದಿನ ಒಂದು ವರ್ಷಗಳ ಕಾರ್ಯಕ್ರಮಕ್ಕೆ ಜಸ್ಟೀಸ್ ಸಂತೋಷ್ ಹೆಗ್ಡೆಯವರಿಂದ ಚಾಲನೆ
ಪುತ್ತೂರು :; ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ದೇಶದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಪುತ್ತೂರಿಗೆ ಆಗಮಿಸಿ ಪ್ರಸ್ತುತ ವರ್ಷಕ್ಕೆ 90 ವರ್ಷ ಪೂರೈಸಿದ್ದು, ಈ ಸಂಭ್ರಮದಲ್ಲಿ ಒಂದು ವರ್ಷ ನಿರಂತರವಾಗಿ ಕಾರ್ಯಕ್ರಮಗಳು ಆಯೋಜಿಸಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಒಂದು ವರ್ಷಗಳ ಕಾರ್ಯಕ್ರಮಳಿಗೆ ಭಾನುವಾರ ಪುತ್ತೂರಿನ ಗಾಂಧಿ ಕಟ್ಟೆಯಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ .ಚಾಲನೆ ನೀಡಲಾಯಿತು. ನಿವೃತ್ತ ಲೋಕಾಯುಕ್ತ ಜಸ್ಟೀಸ್ ಎನ್.ಸಂತೋಷ್ ಹೆಗ್ಡೆ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಚಾಲನೆ ನೀಡಿದರು. ಗಾಂಧೀ ವಿಚಾರ ವೇದಿಕೆ ಪುತ್ತೂರು ಹಾಗೂ […]