ದೇಶ

ಎಸ್‌ಡಿಪಿಐ ಮೇಲೂ ನಿಷೇಧದ ತೂಗುಗತ್ತಿ?

ಬೆಂಗಳೂರು ಗಲಭೆ ಹಿನ್ನೆಲೆಯಲ್ಲಿ ನಿಷೇಧಿಸಲು ಶಿಫಾರಸ್ಸು ಹೊಸದಿಲ್ಲಿ : ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ರಾಜಕೀಯ ಘಟಕ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ ಕೂಡ ನಿಷೇಧವಾಗುತ್ತಾ? ಬೆಂಗಳೂರಿನಲ್ಲಿ 2020ರಲ್ಲಿ ನಡೆದ ಗಲಭೆಯಲ್ಲಿ ಎಸ್‌ಡಿಪಿಐ ಕೈವಾಡ ಇರುವುದು ದೃಢಪಟ್ಟ ಕಾರಣ ರಾಜ್ಯ ಬಿಜೆಪಿ ಸರ್ಕಾರ ಈ ಚಿಂತನೆ ನಡೆಸಿದೆ ಎಂದು ವರದಿಯೊಂದು ಹೇಳಿದೆ.ಮ್ಯಾಜಿಸ್ಟ್ರೇಟ್‌ ತನಿಖಾ ವರದಿ ಕೂಡ 2020ರ ಗಲಭೆಯಲ್ಲಿ ಎಸ್‌ಡಿಪಿಐ ಕೈವಾಡವನ್ನು ದೃಢೀಕರಿಸುತ್ತಿದೆ. ಎಸ್‌ಡಿಪಿಐ ಸದಸ್ಯರು ಬೆಂಗಳೂರಿನ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆಗಳಲ್ಲಿ ಭಯೋತ್ಪಾದಕರಂತೆ […]

ಎಸ್‌ಡಿಪಿಐ ಮೇಲೂ ನಿಷೇಧದ ತೂಗುಗತ್ತಿ? Read More »

ಸಮ್ಮದ್ ಶಿಖರ್‌ಜಿಗಾಗಿ ಸಲ್ಲೇಖನ ವ್ರತ ಕೈಗೊಂಡಿದ್ದ ಜೈನ ಸನ್ಯಾಸಿ ಸಾವು

ಪ್ರವಾಸಿ ತಾಣ ಮಾಡಿದ ನಿರ್ಧಾರ ವಿರೋಧಿಸಿ ಸಲ್ಲೇಖನ ವ್ರತ ಜಾರ್ಖಂಡ್: ಶ್ರೀ ಸಮ್ಮದ್ ಶಿಖರ್‌ಜಿಯನ್ನು ಪ್ರವಾಸಿ ಸ್ಥಳವಾಗಿ ಘೋಷಿಸಿದ ಜಾರ್ಖಂಡ್ ಸರ್ಕಾರದ ನಿರ್ಧಾರದ ವಿರುದ್ಧ ಸಲ್ಲೇಖನ ವ್ರತ ಕೈಗೊಂಡಿದ್ದ ಜೈನ ಸನ್ಯಾಸಿ ಸಮರ್ಥ್ ಸಾಗರ್ (74) ಎಂಬವರು ಮೃತಪಟ್ಟಿದ್ದಾರೆ.ಜೈಪುರದಲ್ಲಿ ಸಮರ್ಥ್ ಸಾಗರ್ ನಿಧನರಾಗಿದ್ದು, ಕಳೆದ 5 ದಿನಗಳಿಂದ ಅವರು ಸಲ್ಲೇಖನ ವ್ರತ ಕೈಗೊಂಡಿದ್ದರು. ಇದಕ್ಕೂ ಮುನ್ನ ಇದೇ ವಿಷಯವಾಗಿ ಜೈನ ಸನ್ಯಾಸಿ ಸುಗ್ಯೇಯಸಾಗರ ಮಹಾರಾಜ್ (72) ಸರ್ಕಾರದ ನಿರ್ಧಾರವನ್ನು ಖಂಡಿಸಿ ಉಪವಾಸ ಕೈಗೊಂಡು ದೇವಾಲಯದಲ್ಲಿ ಸಾವನ್ನಪ್ಪಿದ್ದರು.ಜಾರ್ಖಂಡ್ ನ

ಸಮ್ಮದ್ ಶಿಖರ್‌ಜಿಗಾಗಿ ಸಲ್ಲೇಖನ ವ್ರತ ಕೈಗೊಂಡಿದ್ದ ಜೈನ ಸನ್ಯಾಸಿ ಸಾವು Read More »

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ವ್ಯಕ್ತಿ ನೌಕರಿಯಿಂದ ವಜಾ

ದೂರು ಕೊಡಬೇಡಿ, ಹೆಂಡತಿ ಮಕ್ಕಳಿದ್ದಾರೆ ಎಂದು ಕ್ಷಮೆ ಯಾಚಿಸಿದ್ದ ಹೊಸದಿಲ್ಲಿ : ನ್ಯೂಯಾರ್ಕ್‌-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಸಹ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಶಂಕರ್ ಮಿಶ್ರಾ ಎಂಬಾತನನ್ನು ಅಮೆರಿಕದ ಕಂಪನಿ ನೌಕರಿಯಿಂದ ಕೆಲಸದಿಂದ ವಜಾಗೊಳಿಸಿದೆ. ಯುನೈಟೆಡ್ ಸ್ಟೇಟ್ಸ್ ಹಣಕಾಸು ಸೇವೆಗಳ ಕಂಪನಿ ವೆಲ್ಸ್ ಫಾರ್ಗೋದಲ್ಲಿ ಆತ ಉದ್ಯೋಗಿಯಾಗಿದ್ದ.ಶಂಕರ್ ಮಿಶ್ರಾ ವಿರುದ್ಧದ ಆರೋಪ ತುಂಬ ‘ಗಾಢವಾಗಿ ಮನಸ್ಸನ್ನು ಕಲಕಿದೆ’. ಈ ವ್ಯಕ್ತಿಯನ್ನು ವೆಲ್ ಫಾರ್ಗೋದಿಂದ ವಜಾಗೊಳಿಸಲಾಗಿದೆ ಎಂದು ಅಮೆರಿಕದ ವೆಲ್ಸ್ ಫಾರ್ಗೋ ಕಂಪನಿ ಹೇಳಿದೆ.

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ವ್ಯಕ್ತಿ ನೌಕರಿಯಿಂದ ವಜಾ Read More »

ಜ.16-17 : ದಿಲ್ಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ

ಜೆ.ಪಿ.ನಡ್ಡಾ ಅಧ್ಯಕ್ಷರಾಗಿ ಮರು ಆಯ್ಕೆ ಸಾಧ್ಯತೆ ಹೊಸದಿಲ್ಲಿ : ಬಿಜೆಪಿಯ ಮಹತ್ವದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಜ.16, 17 ರಂದುನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತೊಂದು ಅವಧಿಗೆ ಪುನರಾಯ್ಕೆಯಾಗುವ ಸಾಧ್ಯತೆಗಳಿವೆ.ಮುಂಬರುವ ವಿಧಾನಸಭಾ ಚುನಾವಣೆಗಳು ಹಾಗೂ 2024 ರ ಲೋಕಸಭಾ ಚುನಾವಣೆಗಳ ತಯಾರಿ ಹಾಗೂ ಕಾರ್ಯತಂತ್ರಗಳ ಬಗ್ಗೆ ಸಭೆಯಲ್ಲಿ ಮಹತ್ವದ ಚರ್ಚೆ, ನಿರ್ಧಾರಗಳಾಗಲಿವೆ. ಪ್ರಧಾನಿ ನರೇಂದ್ರ ಮೋದಿ ಸೇರಿ, ದೇಶಾದ್ಯಂತ ಇರುವ ಪಕ್ಷದ ಹಿರಿಯ ನಾಯಕರು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲಿದ್ದಾರೆ.ಕಾಂಗ್ರೆಸ್‌ನ ಭಾರತ್ ಜೋಡೊ ಯಾತ್ರೆ ಹಾಗೂ

ಜ.16-17 : ದಿಲ್ಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ Read More »

ಅಣ್ಣಾಮಲೈ ವಿರುದ್ಧ ಆರೋಪ ಹೊರಿಸಿ ಬಿಜೆಪಿಗೆ ಗುಡ್‌ಬೈ ಹೇಳಿದ ನಟಿ

ಅಣ್ಣಾಮಲೈ ನಾಯಕತ್ವದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂಬ ಆರೋಪ ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ, ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ವಿರುದ್ಧ ಆರೋಪ ಹೊರಿಸಿ ಬಿಜೆಪಿ ನಾಯಕಿ ಗಾಯತ್ರಿ ರಘುರಾಮ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ಮಹಿಳೆಯರಿಗೆ ಗೌರವ, ಸಮಾನ ಅವಕಾಶಗಳು ಸಿಗುತ್ತಿಲ್ಲ. ಭಾರವಾದ ಹೃದಯದಿಂದ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಅಣ್ಣಾಮಲೈ ಅವರ ನಾಯಕತ್ವದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ. ಇದರಿಂದಾಗಿ ನಾನು ಪಕ್ಷ ತೊರೆಯುತ್ತಿದ್ದೇನೆ ಎಂದು ಗಾಯತ್ರಿ ರಘುರಾಮ್‌ ಟ್ವೀಟ್‌ ಮಾಡಿದ್ದಾರೆ.ಮೋದಿಜಿ ನೀವು ವಿಶೇಷ,

ಅಣ್ಣಾಮಲೈ ವಿರುದ್ಧ ಆರೋಪ ಹೊರಿಸಿ ಬಿಜೆಪಿಗೆ ಗುಡ್‌ಬೈ ಹೇಳಿದ ನಟಿ Read More »

ಆರ್‌ಎಸ್‌ಎಸ್‌ ಕಚೇರಿ ಸ್ಫೋಟಿಸುವ ಬೆದರಿಕೆ

ಫೋನ್‌ ಕರೆ ಮಾಡಿ ಬೆದರಿಕೆಯೊಡ್ಡಿದ ದುಷ್ಕರ್ಮಿ ನಾಗಪುರ : ಮಹಾರಾಷ್ಟ್ರದ ನಾಗಪುರದಲ್ಲಿರುವ ಆರ್‌ಎಸ್‌ಎಸ್‌ ಪ್ರಧಾನ ಕಚೇರಿಯನ್ನು ಸ್ಫೋಟಿಸುವುದಾಗಿ ವ್ಯಕ್ತಿಯೊಬ್ಬ ಕರೆ ಮಾಡಿ ಬೆದರಿಕೆಯೊಡ್ಡಿದ ಬಳಿಕ ಕಚೇರಿಗೆ ಬಿಗು ಭದ್ರತೆ ಒದಗಿಸಲಾಗಿದೆ.ಶನಿವಾರ ಅಜ್ಞಾತ ವ್ಯಕ್ತಿಯೊಬ್ಬ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಫೋನ್‌ ಮಾಡಿ ಆರ್‌ಎಸ್‌ಎಸ್‌ ಕಚೇರಿಯನ್ನು ಸ್ಫೋಟಿಸುವ ಬೆದರಿಕೆಯೊಡ್ಡಿದ್ದಾನೆ. ಕೂಡಲೇ ಪೊಲೀಸರು ಬಾಂಬ್‌ ಶೋಧ ತಂಡ ಮತ್ತು ಶ್ವಾನ ಪಡೆಯೊಂದಿಗೆ ತೆರಳಿ ಆರ್‌ಎಸ್‌ಎಸ್‌ ಕಚೇರಿಯನ್ನು ಶೋಧಿಸಿ ಬಳಿಕ ಬಿಗು ಭದ್ರತೆ ಒದಗಿಸಿದ್ದಾರೆ. ಕಚೇರಿ ಸುತ್ತ ಹೆಚ್ಚುವರಿ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ.

ಆರ್‌ಎಸ್‌ಎಸ್‌ ಕಚೇರಿ ಸ್ಫೋಟಿಸುವ ಬೆದರಿಕೆ Read More »

ಹೊಸ ವರ್ಷ ಮತ್ತು ಭಾರತ

2022 ಅಂತ್ಯವಾಗುತ್ತಿದೆ. 2023 ಕಾಲಿಡಲು ಕ್ಷಣಗಣನೆ ಶುರುವಾಗಿದೆ. ಕೊರೋನಾದ ಭಯವನ್ನು ಒಳಗೊಳಗೇ ಅದುಮಿಕೊಂಡು, ಕ್ಯಾಲೆಂಡರ್ ಬದಲಿಸಲು ಸಿದ್ಧರಾಗಿದ್ದೇವೆ. ಇದು ಸಂಭ್ರಮಿಸುವ ಸಮಯ ಅಲ್ಲದೇ ಇದ್ದರೂ, ವಿಶ್ವಾದ್ಯಂತ ಹೊಸ ವರ್ಷವನ್ನು ಅದ್ಧೂರಿಯಾಗಿಯೇ ಸ್ವಾಗತಿಸಲು ಸಜ್ಜಾಗಿದ್ದೇವೆ. ವಿಶ್ವಾದ್ಯಂತ ಏನೇ ನಡೆಯಲಿ, ಭಾರತದ ಸ್ಥಿತಿಗತಿ ಮಾತ್ರ ಭಿನ್ನ. ಇಲ್ಲಿನ ಮಣ್ಣಿನ ಗುಣವೋ ಏನೋ, ಭಾರತದಲ್ಲಿ ಹೊಸ ವರ್ಷಾಚರಣೆಗೆ ತನ್ನದೇ ಆದ ಅರ್ಥವಿದೆ. ಹೊಸ ವರ್ಷ ಎಂದರೆ ಹೊಸತನ. ಮನುಷ್ಯರಿಗೆ ಪ್ರತಿದಿನವೂ ಹೊಸತನವೇ. ಆದರೆ ಪ್ರಕೃತಿಗೆ… ಮನುಷ್ಯನ ದಿನವೊಂದರಲ್ಲಿ ಆಗುವ ಬದಲಾವಣೆಗಳು, ಪ್ರಕೃತಿಯಲ್ಲಿ

ಹೊಸ ವರ್ಷ ಮತ್ತು ಭಾರತ Read More »

ಬಿಜೆಪಿಗೆ 351.50 ಕೋ.ರೂ. ದೇಣಿಗೆ

ಒಂದು ವರ್ಷದಲ್ಲಿ ಒಟ್ಟು ದೇಣಿಗೆಯ ಶೇ.72.17 ಬಿಜೆಪಿಗೆ ಹೊಸದಿಲ್ಲಿ : ಬಿಜೆಪಿ ಈ ವರ್ಷ ಬಿಜೆಪಿಯು ಚುನಾವಣಾ ಟ್ರಸ್ಟ್‌ಗಳಿಂದ 351.50 ಕೋಟಿ ರೂಪಾಯಿಗಳನ್ನು ಸ್ವೀಕರಿಸಿದೆ. ಇದು ರಾಜಕೀಯ ಪಕ್ಷಗಳಿಗೆ ಸಂದಾಯವಾದ ಒಟ್ಟು ದೇಣಿಗೆಯ ಶೇ.72.17 ಆಗುತ್ತದೆ. ಬಿಜೆಪಿ 2021-22ನೇ ಸಾಲಿನಲ್ಲಿ ಚುನಾವಣಾ ಟ್ರಸ್ಟ್‌ಗಳ ಮೂಲಕ ಅತಿ ಹೆಚ್ಚು ದೇಣಿಗೆಗಳನ್ನು ಸ್ವೀಕರಿಸಿದೆ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿ ತಿಳಿಸಿದೆ. ಕೆಲ ಹೊಸ ಪಕ್ಷಗಳಿಗೆ ಹೋಲಿಕೆ ಮಾಡಿದರೆ, ದೇಶದ ಹಳೆ ಪಕ್ಷವಾದ ಕಾಂಗ್ರೆಸ್‌ ಅತಿ ಕಡಿಮೆ

ಬಿಜೆಪಿಗೆ 351.50 ಕೋ.ರೂ. ದೇಣಿಗೆ Read More »

2024ರಲ್ಲೂ ರಾಹುಲ್‌ ಗಾಂಧಿಯೇ ಪ್ರತಿಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿ

ಹಿರಿಯ ನಾಯಕ ಕಮಲನಾಥ್‌ ಘೋಷಣೆ ಹೊಸದಿಲ್ಲಿ : 2024ರ ಲೋಕಸಭಾ ಚುನಾವಣೆಗೆ ರಾಹುಲ್ ಗಾಂಧಿ ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಹೇಳಿದ್ದಾರೆ. ದೇಶಾದ್ಯಂತ ಕಾಂಗ್ರೆಸ್‌ನ ಭಾರತ್ ಜೋಡೊ ಯಾತ್ರೆಯನ್ನು ಮುನ್ನಡೆಸಿದ್ದಕ್ಕಾಗಿ ಕಮಲನಾಥ್ ರಾಹುಲ್ ಗಾಂಧಿಯನ್ನು ಶ್ಲಾಘಿಸಿದ್ದಾರೆ. ರಾಹುಲ್ ಗಾಂಧಿ ಅಧಿಕಾರಕ್ಕಾಗಿ ರಾಜಕೀಯ ಮಾಡುತ್ತಿಲ್ಲ, ಅವರು ದೇಶದ ಸಾಮಾನ್ಯ ಜನರಿಗಾಗಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ, ರಾಹುಲ್ ಗಾಂಧಿ ಕೇವಲ ಪ್ರತಿಪಕ್ಷಗಳ ಮುಖವಾಗಿರುವುದಿಲ್ಲ.

2024ರಲ್ಲೂ ರಾಹುಲ್‌ ಗಾಂಧಿಯೇ ಪ್ರತಿಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿ Read More »

ರಿಷಭ್‌ ಪಂತ್‌ ಚಿಕಿತ್ಸೆ ಹೊಣೆ ಬಿಸಿಸಿಯದ್ದು

ತಲೆಗೆ ಗಾಯ, ಕಾಲು, ಬೆನ್ನುಮೂಳೆ ಮುರಿತ ಮುಂಬಯಿ : ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಸ್ಥಿತಿಯ ಬಗ್ಗೆ ಊಹಾಪೋಹಗಳು ಹರಿದಾಡುತ್ತಿರುವಂತೆಯೇ ಪಂತ್ ಆರೋಗ್ಯ ಕುರಿತು ಬಿಸಿಸಿಐ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ರಿಷಬ್ ಪಂತ್ ಉತ್ತರಖಂಡದ ರೂರ್ಕಿ ಬಳಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಸದ್ಯ ಪಂತ್ ಆರೋಗ್ಯ ಸ್ಥಿರವಾಗಿದೆ. ಗಾಯದ ಪ್ರಮಾಣ ಹೆಚ್ಚಿದೆ. ಇದೀಗ ರಿಷಬ್ ಪಂತ್ ಅವರನ್ನು ಡೆಹ್ರಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪಂತ್ ಕುಟುಂಬದ

ರಿಷಭ್‌ ಪಂತ್‌ ಚಿಕಿತ್ಸೆ ಹೊಣೆ ಬಿಸಿಸಿಯದ್ದು Read More »

error: Content is protected !!
Scroll to Top