ದೇಶ

ಅರುಣಾಚಲ ಪ್ರದೇಶ: ಸೇನಾ ಹೆಲಿಕಾಪ್ಟರ್ ಪತನ

ಪೈಲಟ್‌ಗಳಿಗಾಗಿ ಶೋಧ ಕಾರ್ಯ ಅರುಣಾಚಲ ಪ್ರದೇಶ : ಭಾರತೀಯ ಸೇನಾ ಚೀತಾ ಹೆಲಿಕಾಪ್ಟರ್ ಮಾ. 16ರ ಬೆಳಿಗ್ಗೆ ಅರುಣಾಚಲ ಪ್ರದೇಶದ ಬೊಮ್ಡಿಲಾ ಬಳಿ ಪತನಗೊಂಡಿದ್ದು ಪೈಲಟ್‌ಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಚೀತಾ ಹೆಲಿಕಾಪ್ಟರ್ ಇಂದು ಬೆಳಗ್ಗೆ 09:15ರ ಸುಮಾರಿಗೆ ಕಾರ್ಯಾಚರಣೆ ಹಾರಾಟ ಪ್ರಾರಂಭಿಸಿತ್ತು. ಸ್ವಲ್ಪ ಸಮಯದ ನಂತರ ಹೆಲಿಕಾಪ್ಟರ್ ಎಟಿಸಿಯ ಸಂಪರ್ಕವನ್ನು ಕಳೆದುಕೊಂಡಿತು. ನಂತರ ಬೋಮ್ಡಿಲಾ ಪಶ್ಚಿಮದ ಮಂಡ್ಲಾ ಬಳಿ ಪತನಗೊಂಡಿದೆ ಎಂದು ವರದಿಯಾಗಿದೆ. ಸದ್ಯ ಪೈಲಟ್‌ಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. 2022ರಲ್ಲಿ ತವಾಂಗ್‌ನಲ್ಲಿ ಹೆಲಿಕಾಪ್ಟರ್ ಒಂದು […]

ಅರುಣಾಚಲ ಪ್ರದೇಶ: ಸೇನಾ ಹೆಲಿಕಾಪ್ಟರ್ ಪತನ Read More »

ಗುಳಿಗ ದೈವಕ್ಕೆ ಅವಮಾನ ಗೃಹ ಸಚಿವರ ಹೇಳಿಕೆ ವೈರಲ್

ಮಂಗಳೂರು : ವಿಜಯಕುಮಾರ್‌ ಕೊಡಿಯಾಲ್‌ಬೈಲ್‌ ನಿರ್ದೇಶನದ ಯಶಸ್ವಿ ತುಳು ನಾಟಕ ಶಿವದೂತೆ ಗುಳಿಗೆ ಕುರಿತು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ ಎನ್ನಲಾಗಿರುವ ವ್ಯಂಗ್ಯ ಮಾತೊಂದು ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ತುಳುವರ ಗುಳಿಗ ದೈವಕ್ಕೆ ಅಪಚಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆರಗ ಜ್ಞಾನೇಂದ್ರ ಅವರ ವ್ಯಂಗ್ಯ ಭಾಷಣದ ತುಣುಕನ್ನು ವೈರಲ್‌ಮಾಡಲಾಗಿದೆ. ಮಾ.14ರಂದು ತೀರ್ಥಹಳ್ಳಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಶಿವದೂತೆ ಗುಳಿಗೆ ನಾಟಕ ಆಯೋಜಿಸಿದ್ದರು. ಈ ನಾಟಕ ಪ್ರದರ್ಶನ ಕುರಿತು ಎಲ್ಲೆಡೆ ಪೋಸ್ಟರ್‌ ಅಂಟಿಸಲಾಗಿತ್ತು. ಈ ಬಗ್ಗೆ

ಗುಳಿಗ ದೈವಕ್ಕೆ ಅವಮಾನ ಗೃಹ ಸಚಿವರ ಹೇಳಿಕೆ ವೈರಲ್ Read More »

ಈ ಬೇಸಿಗೆಯಲ್ಲಿ ಇಲ್ಲ ಲೋಡ್‌ಶೆಡ್ಡಿಂಗ್‌ ರಗಳೆ: ನಿರಂತರ ವಿದ್ಯುತ್‌ ಪೂರೈಸಲು ಎಸ್ಕಾಂಗಳ ನಿರ್ಧಾರ

ಬೆಂಗಳೂರು : ಈ ಬೇಸಿಗೆಯಲ್ಲಿ ಜನರಿಗೆ ವಿದ್ಯುತ್‌ ಲೋಡ್‌ಶೆಡ್ಡಿಂಗ್‌ ಚಿಂತೆ ಇಲ್ಲ. ವಿದ್ಯಾರ್ಥಿಗಳ ಪರೀಕ್ಷೆ ಹಾಗೂ ರೈತರ ಹಿತದೃಷ್ಟಿ ಗಮನದಲ್ಲಿಟ್ಟುಕಂಡು ಮುಂದಿನ ಮೂರು ತಿಂಗಳ ಅವಧಿಗೆ ವಿದ್ಯುತ್‌ ಕಡಿತವಾಗದಂತೆ ನೋಡಿಕೊಳ್ಳಲು ಎಸ್ಕಾಂಗಳು ನಿರ್ಧರಿಸಿವೆ.ಬೆಸ್ಕಾಂ ಎಂಡಿ ಮಹಾಂತೇಶ್ ಬೀಳಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರು ಈ ಬೇಸಿಗೆಯಲ್ಲಿ ಜನರಿಗೆ ಲೋಡ್‌ಶೆಡ್ಡಿಂಗ್‌ ರಗಳೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಿದ್ದಾರೆ. ಇದೀಗ ಬೇಸಿಗೆ ಆರಂಭವಾಗಿದ್ದು, ವಿದ್ಯುತ್‌ ಬಳಕೆಯೂ ಹೆಚ್ಚಾಗಿದೆ. ಈಗಾಗಲೇ ಪರೀಕ್ಷೆಗಳು ಆರಂಭವಾಗಿವೆ. ಹಾಗೆಯೇ ರೈತರಿಗೂ

ಈ ಬೇಸಿಗೆಯಲ್ಲಿ ಇಲ್ಲ ಲೋಡ್‌ಶೆಡ್ಡಿಂಗ್‌ ರಗಳೆ: ನಿರಂತರ ವಿದ್ಯುತ್‌ ಪೂರೈಸಲು ಎಸ್ಕಾಂಗಳ ನಿರ್ಧಾರ Read More »

ಪ್ರಧಾನಿ ಮೋದಿಗೆ ನೋಬೆಲ್‌ ಶಾಂತಿ ಪ್ರಶಸ್ತಿ…?

ಚರ್ಚೆಗೆ ಗ್ರಾಸವಾದ ನೋಬೆಲ್‌ ಕಮಿಟಿಯ ವೈಸ್‌ ಚೇರ್‌ ಆಗಿರುವ ಅಸ್ಲೆ ಟೋಜೆ ಹೇಳಿಕೆ ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪ್ರತಿಷ್ಠಿತ ನೋಬೆಲ್‌ ಪ್ರಶಸ್ತಿ ಸಿಗಲಿದೆಯೇ? ಹೀಗೊಂದು ಪ್ರಶ್ನೆ ಈಗ ತೀವ್ರ ಚರ್ಚೆಗೆ ಒಳಪಟ್ಟಿದೆ. ಈ ಚರ್ಚೆ ಹುಟ್ಟು ಹಾಕಿದ್ದು ನೋಬೆಲ್‌ ಕಮಿಟಿಯ ವೈಸ್‌ ಚೇರ್‌ ಆಗಿರುವ ಅಸ್ಲೆ ಟೋಜೆ ಮಾಡಿರುವ ಒಂದು ಟ್ವೀಟ್‌. ಜಾಗತಿಕವಾಗಿ ಮೋದಿಯವರ ಜನಪ್ರಿಯತೆ ಹೆಚ್ಚಾಗುತ್ತಿದೆ. ರಷ್ಯಾ-ಯುಕ್ರೇನ್‌ ಸಮರ, ಜಾಗತಿಕ ಬಿಕ್ಕಟ್ಟುಗಳ ವಿಚಾರದಲ್ಲಿ ಪ್ರಧಾನಿ ಮೋದಿಯವರ ನಿಲುವು ಮತ್ತು ಮಾತುಗಳು ಜಗತ್ತಿನ ಮುಂಚೂಣಿ ರಾಷ್ಟ್ರಗಳಲ್ಲಿ

ಪ್ರಧಾನಿ ಮೋದಿಗೆ ನೋಬೆಲ್‌ ಶಾಂತಿ ಪ್ರಶಸ್ತಿ…? Read More »

ತಾಯಿಯನ್ನು ಕೊಂದು ಹೆಣವನ್ನು 3 ತಿಂಗಳು ಮನೆಯಲ್ಲಿಟ್ಟುಕೊಂಡ ಮಗಳು

ವಾಸನೆ ತಡೆಯಲು 500 ಬಾಟಲಿ ಸೆಂಟ್‌ ಚಿಮುಕಿಸಿದ್ದಳು ಮುಂಬಯಿ : ಮಗಳೇ ತಾಯಿಯನ್ನು ಕೊಂದು ಹೆಣವನ್ನು ಮೂರು ತಿಂಗಳು ಮನೆಯಲ್ಲಿಟ್ಟುಕೊಂಡ ಅಮಾನವೀಯ ಘಟನೆಯೊಂದು ಮುಂಬಯಿಯಲ್ಲಿ ಸಂಭವಿಸಿದೆ. ಮುಂಬಯಿಯ ಲಾಲ್‌ಬಾಗ್‌ನ ರಿಂಪಲ್‌ ಜೈನ್‌ (24) ಈ ಪಾಪಿ ಮಗಳು. ಕಳೆದ ಡಿಸೆಂಬರ್‌ನಲ್ಲಿ ಆಕೆ ತಾಯಿ ಬೀನಾ ಜೈನ್‌ರನ್ನು (55) ಕೊಲೆ ಮಾಡಿದ್ದಳು. ಬಳಿಕ ಶವವನ್ನು ಹಲವಾರು ತುಂಡು ಮಾಡಿ ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿಸಿ ಮನೆಯೊಳಗಿಟ್ಟಿದ್ದಳು. ಬುಧವಾರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿಸಿಟ್ಟಿದ್ದ ಹೆಣ ಪೊಲೀಸರು ತಪಾಸಣೆ

ತಾಯಿಯನ್ನು ಕೊಂದು ಹೆಣವನ್ನು 3 ತಿಂಗಳು ಮನೆಯಲ್ಲಿಟ್ಟುಕೊಂಡ ಮಗಳು Read More »

ತಲೆಮರೆಸಿಕೊಂಡಿದ್ದ 8 ಕುಖ್ಯಾತ ಆರೋಪಿಗಳ ಬಂಧನ: ಸಿಸಿಬಿ ಪೊಲೀಸರ ಕಾರ್ಯಾಚರಣೆ

ಮಂಗಳೂರು : ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಎಂಟು ಆರೋಪಿಗಳನ್ನು ಮಂಗಳೂರು ನಗರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬುಧವಾರ ಬಂಧಿಸಿದ್ದಾರೆ. ಕಾವೂರಿನ ರಾಜಾ ಅಲಿಯಾಸ್ ರೋಹನ್ ರೆಡ್ಡಿ , ಪಡೀಲ್-ಕಣ್ಣೂರಿನ ಪ್ರಕಾಶ್ ಶೆಟ್ಟಿ, ಕೃಷ್ಣಾಪುರದ ನಿಸ್ಸಾರ್ ಹುಸೇನ್, ಕಸಬಾ ಬೆಂಗ್ರೆಯ ಕಬೀರ್, ಅಚ್ಯುತ್ ಮತ್ತು ಕಾವೂರಿನ ರಿಜ್ವಾನ್ ಬಂಧಿತರಲ್ಲಿ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎಂಟು ಆರೋಪಿಗಳ ಪೈಕಿ ರೆಡ್ಡಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು, ಅಲ್ಲಿ ನಕಲಿ ಗುರುತಿನಡಿಯಲ್ಲಿ ವಾಸಿಸುತ್ತಿದ್ದನು.ಈತ 2013ರಲ್ಲಿ ಬಸ್ ಚಾಲಕನ ಕೊಲೆ ಪ್ರಕರಣದ

ತಲೆಮರೆಸಿಕೊಂಡಿದ್ದ 8 ಕುಖ್ಯಾತ ಆರೋಪಿಗಳ ಬಂಧನ: ಸಿಸಿಬಿ ಪೊಲೀಸರ ಕಾರ್ಯಾಚರಣೆ Read More »

ವಿಶ್ವಸಂಸ್ಥೆಯಲ್ಲಿ ವಿಶೇಷ ಭಾಷಣ ಮಾಡಲು ಕಾಂತಾರದ ರಿಷಬ್‌ಗೆ ಆಹ್ವಾನ

ಕನ್ನಡದಲ್ಲೇ ಮಾತನಾಡಿ ಕಾಡಂಚಿನ ಜನರ ಸಮಸ್ಯೆಗಳ ಬಗ್ಗೆ ವಿಶ್ವದ ಗಮನ ಸೆಳೆಯಲಿರುವ ರಿಷಬ್‌ ಬೆಂಗಳೂರು : ಕಾಂತಾರದ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರು ಕನ್ನಡದಲ್ಲಿ ಭಾಷಣ ಮಾಡಲಿದ್ದಾರೆ. ಈ ಮೂಲಕ ವಿಶ್ವಸಂಸ್ಥೆಯಲ್ಲಿ ಕನ್ನಡ ಭಾಷಣ ಮಾಡಲಿರುವ ಮೊದಲ ಕನ್ನಡಿಗ ಎನ್ನಿಸಿಕೊಳ್ಳಲಿದ್ದಾರೆ. ವಿಶ್ವಸಂಸ್ಥೆಯ ವಾರ್ಷಿಕ ಸಭೆ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದು, ವಿಶ್ವದ ಹಲವು ರಾಷ್ಟ್ರಗಳ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ. ಸಭೆಯಲ್ಲಿ ಪ್ರಚಲಿತ ಸಾಮಾನ್ಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದೆ. ಇದರಲ್ಲಿ ಮಾತನಾಡಲು ರಿಷಬ್‌ ಶೆಟ್ಟಿ ಆಯ್ಕೆಯಾಗಿದ್ದು,

ವಿಶ್ವಸಂಸ್ಥೆಯಲ್ಲಿ ವಿಶೇಷ ಭಾಷಣ ಮಾಡಲು ಕಾಂತಾರದ ರಿಷಬ್‌ಗೆ ಆಹ್ವಾನ Read More »

ವಿಧಾನಸಭೆ ಚುನಾವಣೆಗೆ ದಿನಗಣನೆ: ಹೆಚ್ಚುತ್ತಿರುವ ಬಿಟ್ಟಿ ಉಡುಗೊರೆಗಳ ಸುರಿಮಳೆ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಜಾರಿ ಮಾಡುವ ಮುನ್ನವೇ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಮತದಾರರಿಗೆ ಉಡುಗೊರೆಗಳ ಸುರಿಮಳೆಗೈಯುತ್ತಿದ್ದಾರೆ. ಈ ತಿಂಗಳ ಅಂತ್ಯದ ವೇಳೆಗೆ ಇಸಿ ಚುನಾವಣಾ ನೀತಿ ಸಂಹಿತೆ ಜಾರಿ ಮಾಡುವ ಸಾಧ್ಯತೆಯಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಸೇರಿದ ರಾಜಕೀಯ ಪಕ್ಷಗಳ ಮುಖಂಡರು ಮತದಾರರನ್ನು ಸೆಳೆಯಲು ಸೀರೆ, ಬೆಳ್ಳಿ, ಬಂಗಾರದ ವಸ್ತುಗಳು, ಪ್ರೆಷರ್ ಕುಕ್ಕರ್, ಮಿಕ್ಸರ್ ಗ್ರೈಂಡರ್, ಟೆಲಿವಿಷನ್ ಸೆಟ್, ಮೊಬೈಲ್‌ಗಳನ್ನು ಹಂಚುತ್ತಿದ್ದಾರೆ. ಹಾವೇರಿ ಜಿಲ್ಲೆಯ

ವಿಧಾನಸಭೆ ಚುನಾವಣೆಗೆ ದಿನಗಣನೆ: ಹೆಚ್ಚುತ್ತಿರುವ ಬಿಟ್ಟಿ ಉಡುಗೊರೆಗಳ ಸುರಿಮಳೆ Read More »

ಕೆಪಿಟಿಸಿಎಲ್ ನೌಕರರ ವೇತನ ಶೇ.20ರಷ್ಟು ಹೆಚ್ಚಳ: ಮುಷ್ಕರ ವಾಪಸ್

ಬೆಂಗಳೂರು: ವೇತನ ಹೆಚ್ಚಿಸುವಂತೆ ಕರ್ನಾಟಕ ವಿದ್ಯುತ್​ ಪ್ರಸರಣ ನಿಗಮ ನಿಯಮಿತ (KPTCL) ನೌಕರರ ಸಂಘ ನೀಡಿದ ಗಡುವು ಇಂದಿಗೆ ಅಂತ್ಯವಾಗಿ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಗದಿದ್ದಾಗ ನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದರು. ನೌಕರರ ಮುಷ್ಕರ ಆರಂಭಕ್ಕೆ ಮುನ್ನ ಇಂದು ರಾಜ್ಯ ಸರ್ಕಾರ ಕೆಪಿಟಿಸಿಎಲ್ ಮತ್ತು ಎಲ್ಲಾ ಎಸ್ಕಾಂಗಳ (ESCOM) ನೌಕರರ ವೇತನ ಪರಿಷ್ಕರಣೆ ಮಾಡಿದೆ. 2022ರ ಏಪ್ರಿಲ್​ನಿಂದ ಅನ್ವಯವಾಗುವಂತೆ, ಈಗಿರುವ ವೇತನದ ಮೇಲೆ ಶೇಕಡಾ 20ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ಇಂಧನ ಖಾತೆ ಸಚಿವ

ಕೆಪಿಟಿಸಿಎಲ್ ನೌಕರರ ವೇತನ ಶೇ.20ರಷ್ಟು ಹೆಚ್ಚಳ: ಮುಷ್ಕರ ವಾಪಸ್ Read More »

ರಾಜ್ಯದಲ್ಲಿ 115 ಹೆಚ್3ಎನ್2‌ ಪ್ರಕರಣ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಸದ್ದಿಲ್ಲದೆ ಏರಿಕೆಯಾಗುತ್ತಿದೆ. ಇದರ ನಡುವೆ ಹೆಚ್​3ಎನ್​2 ಭೀತಿ ಕೂಡ ಹೆಚ್ಚಿದ್ದು, ರಾಜ್ಯದಲ್ಲಿ ಪ್ರಸ್ತುತ ಕಳೆದ 82 ದಿನಗಳಲ್ಲಿ 115 ಹೆಚ್​3ಎನ್​2 ಪ್ರಕರಣಗಳು ಪತ್ತೆಯಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ 21 ಜಿಲ್ಲೆಗಳಲ್ಲಿ H3N2 ಸೋಂಕು ಪತ್ತೆಯಾಗಿದ್ದು, ರಾಜಧಾನಿಯಲ್ಲಿ 30 ಪ್ರಕರಣಗಳು ದಾಖಲಾಗಿವೆ. ಬಿಬಿಎಂಪಿ ವ್ಯಾಪ್ತಿ-30, ಶಿವಮೊಗ್ಗ-19, ಧಾರವಾಡ-14, ಮೈಸೂರು-09, ವಿಜಯಪುರ-08, ಬೆಳಗಾವಿ-05, ಹಾಸನ-05, ತುಮಕೂರು-03, ದಾವಣಗೆರೆ-03, ಹಾವೇರಿ-03, ದಕ್ಷಿಣ ಕನ್ನಡ-03, ಬೆಂಗಳೂರು ಗ್ರಾಮಾಂತರ-02, ಗದಗ-02, ರಾಮನಗರ-02, ಚಾಮರಾಜನಗರ-01, ಬಾಗಲಕೋಟೆ-01, ಉತ್ತರ ಕನ್ನಡ-01,

ರಾಜ್ಯದಲ್ಲಿ 115 ಹೆಚ್3ಎನ್2‌ ಪ್ರಕರಣ ಪತ್ತೆ Read More »

error: Content is protected !!
Scroll to Top