ದೇಶ

ಕೂಲಿ ಕಾರ್ಮಿಕರಿಗೆ ಶ್ರಮಿಕ ನಿವಾಸ ನಿರ್ಮಿಸಲು ಮುಂದಾದ ರಾಜ್ಯ ಸರಕಾರ

ಬೆಂಗಳೂರು: ದೇಶದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಾದ್ಯಂತ ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸ ಮಾಡುವ ಕಟ್ಟಡ ಕಾರ್ಮಿಕರಿಗೆ, ವಿಶೇಷವಾಗಿ ವಲಸೆ ಕಾರ್ಮಿಕರಿಗೆ ರಾಜ್ಯ ಸರ್ಕಾರ ವಸತಿ ಸಮುಚ್ಚಯಗಳನ್ನು ನಿರ್ಮಾಣ ಮಾಡಿ, ನೆರವಿಗೆ ಮುಂದಾಗಿದೆ.ಈ ವಸತಿ ಸಮುಚ್ಚಯವು ರಸ್ತೆ ಬದಿಗಳಲ್ಲಿ ಟೆಂಟ್ ಗಳನ್ನು ಹಾಕಿಕೊಂಡು ಜೀವನ ನಡೆಸುವ ಕೂಲಿ ಕಾರ್ಮಿಕರಿಗೆ ಗೌರವಯುತವಾಗಿ ಜೀವನ ನಡೆಸಲು ಸಹಾಯ ಮಾಡುತ್ತದೆ. ಕಟ್ಟಡ ಕಾಮಗಾರಿಗಳು ಪೂರ್ಣಗೊಳ್ಳುವವರೆಗೂ ಕಾರ್ಮಿಕರು ಅಲ್ಲಿ ಜೀವನ ನಡೆಸಬಹುದು ಎಂದು ಕಾರ್ಮಿಕ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. ಕಾರ್ಮಿಕ ಇಲಾಖೆಯು ಈಗಾಗಲೇ […]

ಕೂಲಿ ಕಾರ್ಮಿಕರಿಗೆ ಶ್ರಮಿಕ ನಿವಾಸ ನಿರ್ಮಿಸಲು ಮುಂದಾದ ರಾಜ್ಯ ಸರಕಾರ Read More »

ಈಶಾನ್ಯ ಭಾರತದ ಚುನಾವಣಾ ಫಲಿತಾಂಶ ದೇಶದ ಪ್ರಗತಿ, ಸ್ಥಿರತೆಗೆ ಪ್ರೇರಣೆ ಎಂದ ಮೋದಿ

ತ್ರಿಪುರಾ, ನಾಗಾಲ್ಯಾಂಡ್ ಎನ್.ಡಿ.ಎ.ಗೆ ಸ್ಪಷ್ಟ ಬಹುಮತ | ಮೇಘಾಲಯದಲ್ಲಿ ಎನ್.ಸಿ.ಪಿ. ಜೊತೆ ಬಿಜೆಪಿ ಸರ್ಕಾರ! ನವದೆಹಲಿ: ಗುರುವಾರ ಪ್ರಕಟವಾದ ಈಶಾನ್ಯ ಭಾರತದ ಚುನಾವಣಾ ಫಲಿತಾಂಶ ದೇಶದ ಪ್ರಗತಿ, ಸ್ಥಿರತೆಗೆ ಪ್ರೇರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸರಣಿ ಟ್ವೀಟಿನಲ್ಲಿ ತಿಳಿಸಿದ್ದಾರೆ. ತ್ರಿಪುರಾ, ನಾಗಾಲ್ಯಾಂಡಿನಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಸ್ಪಷ್ಟ ಬಹುಮತ ಪಡೆದಿದ್ದರೆ, ಮೇಘಾಲಯದಲ್ಲಿ ಎನ್.ಸಿ.ಪಿ. ಜೊತೆಗೆ ಬಿಜೆಪಿ ಮೈತ್ರಿ ಸರಕಾರ ರಚನೆಯಾಗಲಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ನರೇಂದ್ರ ಮೋದಿ, ‘ಧನ್ಯವಾದ ತ್ರಿಪುರಾ! ಈ ಮತ ಪ್ರಗತಿ ಮತ್ತು ಸ್ಥಿರತೆಗಾಗಿ. ಬಿಜೆಪಿಯು ರಾಜ್ಯದ ಅಭಿವೃದ್ಧಿಯ ಪಥಕ್ಕೆ ಉತ್ತೇಜನ ನೀಡಲಿದೆ. ತ್ರಿಪುರಾದಲ್ಲಿ ಬೇರು ಮಟ್ಟದಿಂದ ಅದ್ಬುತವಾಗಿ ಶ್ರಮಿಸಿದ ಬಿಜೆಪಿಯ ಎಲ್ಲ ಕಾರ್ಯಕರ್ತರ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ತ್ರಿಪುರಾ ಫಲಿತಾಂಶ:

ಈಶಾನ್ಯ ಭಾರತದ ಚುನಾವಣಾ ಫಲಿತಾಂಶ ದೇಶದ ಪ್ರಗತಿ, ಸ್ಥಿರತೆಗೆ ಪ್ರೇರಣೆ ಎಂದ ಮೋದಿ Read More »

ನಾಗಾಲ್ಯಾಂಡ್​ನಲ್ಲಿ ಮೊದಲ ಬಾರಿಗೆ ಮಹಿಳಾ ಶಾಸಕಿ ಆಯ್ಕೆ : ಎನ್‌ಡಿಪಿಪಿಯ ಹೆಖಾನಿ ಜಖಾಲು ಅವರಿಗೆ ಐತಿಹಾಸಿಕ ಗೆಲುವು

ಕೋಹಿಮ: ನಾಗಾಲ್ಯಾಂಡ್ ರಾಜ್ಯ ಸ್ಥಾನಮಾನವನ್ನು ಪಡೆದ 60 ವರ್ಷಗಳ ನಂತರ ಇಂದು ಮೊದಲ ಬಾರಿ ಮಹಿಳಾ ಶಾಸಕಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ಮಿತ್ರಪಕ್ಷವಾದ ಎನ್‌ಡಿಪಿಪಿಯ ಹೆಕಾನಿ ಜಖಾಲು ಅವರು ದಿಮಾಪುರ್ 3 ಕ್ಷೇತ್ರದಿಂದ ಗೆದ್ದಿದ್ದಾರೆ. ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಒಟ್ಟು 183 ಅಭ್ಯರ್ಥಿಗಳ ಪೈಕಿ ನಾಲ್ವರು ಮಹಿಳೆಯರಲ್ಲಿ 48 ವರ್ಷದ ವಕೀಲೆ ಹೆಕಾನಿ ಜಖಾಲು ಒಬ್ಬರು. ಪಶ್ಚಿಮ ಅಂಗಮಿ ಕ್ಷೇತ್ರದಲ್ಲಿ ಎನ್‌ಡಿಪಿಪಿಯ ಮತ್ತೊಬ್ಬ ಮಹಿಳಾ ಅಭ್ಯರ್ಥಿ ಸಲ್ಹೌಟುನೊ ಕ್ರೂಸ್ ಮುನ್ನಡೆಯಲ್ಲಿದ್ದಾರೆ. ಆಡಳಿತಾರೂಢ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟ ರಾಜ್ಯದಲ್ಲಿ ಮೂರು

ನಾಗಾಲ್ಯಾಂಡ್​ನಲ್ಲಿ ಮೊದಲ ಬಾರಿಗೆ ಮಹಿಳಾ ಶಾಸಕಿ ಆಯ್ಕೆ : ಎನ್‌ಡಿಪಿಪಿಯ ಹೆಖಾನಿ ಜಖಾಲು ಅವರಿಗೆ ಐತಿಹಾಸಿಕ ಗೆಲುವು Read More »

ಬಿಜೆಪಿಗೆ ಹರಿದು ಬಂತು 1917 ಕೋ.ರೂ. ದೇಣಿಗೆ

ಕಾಂಗ್ರೆಸ್‌ ಹಿಂದಿಕ್ಕಿದ ಟಿಎಂಸಿ ದ್ವಿತೀಯ ಸ್ಥಾನದಲ್ಲಿ ಹೊಸದಿಲ್ಲಿ : ಬಿಜೆಪಿ 2021-22ನೇ ಸಾಲಿನ ಆರ್ಥಿಕ ವರ್ಷದಲ್ಲಿ ಬರೊಬ್ಬರಿ 1917 ಕೋಟಿ ದೇಣಿಗೆ ಪಡೆದುಕೊಂಡಿದೆ. ಎಂಟು ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷಗಳಿಗೆ ಭಾರತದಾದ್ಯಂತ ಒಟ್ಟು 3289.34 ಕೋಟಿ ರೂ ದೇಣಿಗೆ ಸಂದಾಯವಾಗಿದ್ದು, ಈ ಪೈಕಿ ಅರ್ಧಕ್ಕೂ ಹೆಚ್ಚು ಮೊತ್ತವನ್ನು ಬಿಜೆಪಿಯೊಂದೇ ಪಡೆದುಕೊಂಡಿದೆ. ಬಿಜೆಪಿಯ ಪ್ರಮುಖ ಎದುರಾಳಿಯಾಗಿರುವ ಕಾಂಗ್ರೆಸ್‌ಗೆ ಸಿಕ್ಕಿರುವುದು 541 ಕೋ. ರೂ. ಮಾತ್ರ. ವಿಶೇಷವೆಂದರೆ ಕಾಂಗ್ರೆಸ್‌ಗಿಂತ ಹೆಚ್ಚು ದೇಣಿಗೆ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್‌ಗೆ ಹರಿದುಬಂದಿದೆ. ಚುನಾವಣಾ

ಬಿಜೆಪಿಗೆ ಹರಿದು ಬಂತು 1917 ಕೋ.ರೂ. ದೇಣಿಗೆ Read More »

ಭಾರತೀಯ ಸೇನೆಯಿಂದ ಚೀನಾ, ಪಾಕ್ ಗಡಿ ಭಾಗಗಳಿಗೆ 307 ಹೊವಿಟ್ಜರ್‌ಗಳ ಖರೀದಿ

ನವದೆಹಲಿ : ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾದತ್ತ ದೃಢವಾದ ಹೆಜ್ಜೆ ಇರಿಸಲು ಚೀನಾ, ಪಾಕಿಸ್ತಾನ ಗಡಿಗಳಿಗೆ ನಿಯೋಜಿಸಲು ರಕ್ಷಣಾ ಸಚಿವಾಲಯ ಭಾರತೀಯ ಸೇನೆಯಿಂದ 307 ಅತ್ಯಾಧುನಿಕ ಟೋವ್ಡ್ ಆರ್ಟಿಲರಿ ಗನ್ ಸಿಸ್ಟಮ್ಸ್‌ಗಳ ಖರೀದಿಗೆ ಪ್ರಸ್ತಾವನೆ ಬಂದಿದೆ. ಈ ಪ್ರಸ್ತಾವನೆ 1 ಬಿಲಿಯನ್ ಡಾಲರ್ ಮೌಲ್ಯದ್ದಾಗಿದ್ದು, ಸಂಪುಟ ಸಮಿತಿ ಅನುಮೋದನೆಗೆ ಕಳಿಸಲಾಗಿದೆ. ಇದು ದೇಶಿಯವಾಗಿ ತಯಾರಾಗಲಿರುವ ಹೊವಿಟ್ಜರ್‌ಗಳ ಮೊದಲ ಖರೀದಿಯಾಗಿರಲಿದ್ದು, 50 ಕೀ.ಮೀ ವ್ಯಾಪ್ತಿವರೆಗಿನ ಟಾರ್ಗೆಟ್‌ಗಳನ್ನು ತಲುಪುವ ಸಾಮರ್ಥ್ಯವನ್ನು ಹೊಂದಿರಲಿದೆ. ಈ ಗನ್‌ಗಳ ಪರೀಕ್ಷಾರ್ಥ ಪ್ರಯೋಗವನ್ನು ಸೇನಾಪಡೆಗಳು

ಭಾರತೀಯ ಸೇನೆಯಿಂದ ಚೀನಾ, ಪಾಕ್ ಗಡಿ ಭಾಗಗಳಿಗೆ 307 ಹೊವಿಟ್ಜರ್‌ಗಳ ಖರೀದಿ Read More »

ಅಡುಗೆ ಅನಿಲ ಬೆಲೆ 50 ರೂ. ಏರಿಕೆ | ವಾಣಿಜ್ಯ ಬಳಕೆ ಸಿಲಿಂಡರ್‌ ಬೆಲೆ 350 ರೂ. ಹೆಚ್ಚಳ

ಹೊಸದಿಲ್ಲಿ : ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಯ ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆಯಾಗಿದೆ. ಗೃಹ ಬಳಕೆಯ ಸಿಲಿಂಡರ್‌ 50 ರೂ. ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆಯಲ್ಲಿ 350 ರೂ. ಏರಿಕೆ ಮಾಡುವ ಮೂಲಕ ತೈಲ ಕಂಪನಿಗಳು ಜನರಿಗೆ ಶಾಕ್‌ ನೀಡಿವೆ. ಅದರಲ್ಲೂ ಚುನಾವಣೆ ಎದುರಿಸುತ್ತಿರುವ ಕರ್ನಾಟಕದಲ್ಲಿ ವಿಪಕ್ಷಗಳ ಪಾಲಿಗೆ ಸರಕಾರವನ್ನು ಟೀಕಿಸಲು ಅತ್ಯುತ್ತಮ ಅಸ್ತ್ರ ಸಿಕ್ಕಿದಂತಾಗಿದೆ. ಬೆಲೆ ಏರಿಕೆ ಇಂದಿನಿಂದಲೇ ಜಾರಿಗೆ ಬರಲಿದೆ. ಹಲವು ತಿಂಗಳುಗಳ ಕಾಲ ಗೃಹಬಳಕೆಯ ಸಿಲಿಂಡರ್‌ ದರ ಪರಿಷ್ಕರಣೆಯಾಗಿರಲಿಲ್ಲ. ಆದರೆ

ಅಡುಗೆ ಅನಿಲ ಬೆಲೆ 50 ರೂ. ಏರಿಕೆ | ವಾಣಿಜ್ಯ ಬಳಕೆ ಸಿಲಿಂಡರ್‌ ಬೆಲೆ 350 ರೂ. ಹೆಚ್ಚಳ Read More »

ನಾಳೆ ಪಿಎಂ ಕಿಸಾನ್​​ 13ನೇ ಕಂತಿನ ಹಣ ಬಿಡುಗಡೆ ಮಾಡಲಿರುವ ಮೋದಿ

ಬೆಳಗಾವಿ: ಸಣ್ಣ ರೈತರ ಆರ್ಥಿಕ ಕೃಷಿಗಾರಿಕೆಗೆ ಹಣಕಾಸು ನೆರವು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ನೀಡುತ್ತಿರುವ ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಬಿಡುಗಡೆಗೆ ಕೊಂಚ ತಡವಾಗಿದೆ. ಕಳೆದ ತಿಂಗಳೇ ಕಂತು ಬಿಡುಗಡೆ ಆಗಬೇಕಿತ್ತು. ಆದರೆ, ವಿವಿಧ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಫೆ. 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಾವಿಗೆ ಆಗಮಿಸುತ್ತಿದ್ದು, ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಪಿಎಂ ಕಿಸಾನ್​​ ಸಮ್ಮಾನ್​​​​​ ಯೋಜನೆಯ 13ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ. ನಾಳೆ

ನಾಳೆ ಪಿಎಂ ಕಿಸಾನ್​​ 13ನೇ ಕಂತಿನ ಹಣ ಬಿಡುಗಡೆ ಮಾಡಲಿರುವ ಮೋದಿ Read More »

ಎಐಸಿಸಿ ಮಹಾ ಅಧಿವೇಶನ : ಪ್ರಿಯಾಂಕಾ ವಾದ್ರಾ ಸ್ವಾಗತಕ್ಕೆ ರಸ್ತೆಗೆ 6 ಟನ್ ಗುಲಾಬಿ ಹಾಕಿ ಸ್ವಾಗತ!

ರಾಯಪುರ : ಎಐಸಿಸಿ ಮಹಾ ಅಧಿವೇಶನದಲ್ಲಿ ಪಾಲ್ಗೊಳ್ಳಲೆಂದು ಫೆ.25ರಂದು ಛತ್ತೀಸ್‌ಗಢದ ರಾಯಪುರಕ್ಕೆ ಆಗಮಿಸಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ಇತರ ನಾಯಕರನ್ನು ಸ್ವಾಗತಿಸಲು ಇಡೀ ರಸ್ತೆಯನ್ನೇ ಗುಲಾಬಿ ಹೂವಿನಿಂದ ಸಿಂಗರಿಸಲಾಗಿದೆ. ಸುಮಾರು 6 ಟನ್ ಗುಲಾಬಿ ಹೂಗಳಿಂದ ರಸ್ತೆ ಸಿಂಗರಿಸಲಾಗಿದೆ. ಗುಲಾಬಿ ದಳಗಳಿಂದಾಗಿ ಇಡೀ ರಸ್ತೆ ಕೆಂಪಗೆ ಕಾಣುತ್ತಿರುವ ವಿಡಿಯೊ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್‌ ಅವರು ವಿಮಾನ ನಿಲ್ದಾಣದಲ್ಲಿ ಪ್ರಿಯಾಂಕಾ ಅವರಿಗೆ ಪುಷ್ಪಗುಚ್ಛ ನೀಡಿ ಬರಮಾಡಿಕೊಂಡರು. ನಂತರ

ಎಐಸಿಸಿ ಮಹಾ ಅಧಿವೇಶನ : ಪ್ರಿಯಾಂಕಾ ವಾದ್ರಾ ಸ್ವಾಗತಕ್ಕೆ ರಸ್ತೆಗೆ 6 ಟನ್ ಗುಲಾಬಿ ಹಾಕಿ ಸ್ವಾಗತ! Read More »

ಮೀನು ಮೃತಪಟ್ಟಿದ್ದಕ್ಕೆ ಮನನೊಂದು 13ರ ಬಾಲಕ ಆತ್ಮಹತ್ಯೆಗೆ ಶರಣು

ತಿರುವನಂತಪುರಂ : ಪ್ರೀತಿಯ ಮೀನು ಸಾವನ್ನಪ್ಪಿದ್ದಕ್ಕೆ 13 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಪೊನ್ನಾಯಿಯ ಚಂಗರಂಕುಲಂನಲ್ಲಿ ನಡೆದಿದೆ. ರೋಷನ್ ಮೆನನ್ ಮೃತ ಬಾಲಕ. ರೋಶನ್ ಮೂಕುತಲ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓದುತ್ತಿದ್ದ. ಪ್ರಾಣಿಗಳೆಂದರೆ ಆತನಿಗೆ ತುಂಬಾ ಇಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಅಕ್ವೇರಿಯಂ ಇತ್ತು. ಅಕ್ವೇರಿಯಂಯಲ್ಲಿ ಸಾಕಿದ್ದ ಮೀನು ಹಿಂದಿನ ದಿನ ಸಾವನ್ನಪ್ಪಿತ್ತು. ಇದರಿಂದಾಗಿ ರೋಷನ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಮರುದಿನ ರೋಷನ್ ಪಾರಿವಾಳಕ್ಕೆ ಆಹಾರ ನೀಡಲು ಮನೆಯಿಂದ ಹೊರಗೆ

ಮೀನು ಮೃತಪಟ್ಟಿದ್ದಕ್ಕೆ ಮನನೊಂದು 13ರ ಬಾಲಕ ಆತ್ಮಹತ್ಯೆಗೆ ಶರಣು Read More »

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಪುತ್ತೂರು ಗಾಂಧಿಕಟ್ಟೆಗೆ ಆಗಮಿಸಿ 90 ವರ್ಷ ಪೂರೈಕೆ | ಮುಂದಿನ ಒಂದು ವರ್ಷಗಳ ಕಾರ್ಯಕ್ರಮಕ್ಕೆ ಜಸ್ಟೀಸ್ ಸಂತೋಷ್ ಹೆಗ್ಡೆಯವರಿಂದ ಚಾಲನೆ

ಪುತ್ತೂರು :; ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ದೇಶದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಪುತ್ತೂರಿಗೆ ಆಗಮಿಸಿ ಪ್ರಸ್ತುತ ವರ್ಷಕ್ಕೆ 90 ವರ್ಷ ಪೂರೈಸಿದ್ದು, ಈ  ಸಂಭ್ರಮದಲ್ಲಿ ಒಂದು ವರ್ಷ ನಿರಂತರವಾಗಿ ಕಾರ್ಯಕ್ರಮಗಳು ಆಯೋಜಿಸಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಒಂದು ವರ್ಷಗಳ ಕಾರ್ಯಕ್ರಮಳಿಗೆ ಭಾನುವಾರ ಪುತ್ತೂರಿನ ಗಾಂಧಿ ಕಟ್ಟೆಯಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ .ಚಾಲನೆ ನೀಡಲಾಯಿತು. ನಿವೃತ್ತ ಲೋಕಾಯುಕ್ತ ಜಸ್ಟೀಸ್ ಎನ್.ಸಂತೋಷ್ ಹೆಗ್ಡೆ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಚಾಲನೆ ನೀಡಿದರು. ಗಾಂಧೀ ವಿಚಾರ ವೇದಿಕೆ ಪುತ್ತೂರು ಹಾಗೂ

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಪುತ್ತೂರು ಗಾಂಧಿಕಟ್ಟೆಗೆ ಆಗಮಿಸಿ 90 ವರ್ಷ ಪೂರೈಕೆ | ಮುಂದಿನ ಒಂದು ವರ್ಷಗಳ ಕಾರ್ಯಕ್ರಮಕ್ಕೆ ಜಸ್ಟೀಸ್ ಸಂತೋಷ್ ಹೆಗ್ಡೆಯವರಿಂದ ಚಾಲನೆ Read More »

error: Content is protected !!
Scroll to Top