ವಿದೇಶ

ಇರಾನ್‌ ರಾಜಧಾನಿ ಟೆಹ್ರಾನ್‌ ಮೇಲೆ ಇಸ್ರೇಲ್‌ ದಾಳಿ

ಸೇನಾನೆಲೆಗಳನ್ನು ಗುರಿಯಾಗಿಸಿ ವೈಮಾನಿಕ ದಾಳಿ; ಭೀಕರ ಸ್ಫೋಟ ಟೆಹ್ರಾನ್‌: ಕಳೆದ ಅಕ್ಟೋಬರ್ 1 ರಂದು ನಡೆದಿದ್ದ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಇರಾನ್‌ನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್ ಶನಿವಾರ ಮುಂಜಾನೆ ವೈಮಾನಿಕ ದಾಳಿ ಆರಂಭಿಸಿದೆ. ದಾಳಿಯಿಂದಾದ ಸಾವುನೋವಿನ ಬಗ್ಗೆ ತಕ್ಷಣದ ಮಾಹಿತಿ ಸಿಕ್ಕಿಲ್ಲ. ಇರಾನ್‌ನ ಮಿಲಿಟರಿ ಗುರಿಗಳ ಮೇಲೆ ನಡೆಸಲಾದ ನಿಖರವಾದ ದಾಳಿ ಎಂದು ಇಸ್ರೇಲ್ ಮಿಲಿಟರಿ ಹೇಳಿಕೊಂಡಿದೆ. ಇರಾನಿನ ರಾಜಧಾನಿ ಟೆಹ್ರಾನ್‌ನಲ್ಲಿ ಭೀಕರ ಸ್ಫೋಟದ ಸದ್ದು ಕೇಳಿಸಿದೆ. ಕನಿಷ್ಠ ಏಳು ಸ್ಫೋಟಗಳು ಮುಂಜಾನೆ ವೇಳೆ ಸಂಭವಿಸಿವೆ. […]

ಇರಾನ್‌ ರಾಜಧಾನಿ ಟೆಹ್ರಾನ್‌ ಮೇಲೆ ಇಸ್ರೇಲ್‌ ದಾಳಿ Read More »

ಹಮಾಸ್‌ ಮುಖ್ಯಸ್ಥ ಯಾಹ್ಯಾ ಸಿನ್ವರ್‌ನನ್ನು ಹತ್ಯೆಗೈದು ಇರಾನ್‌ಗೆ ಸಂದೇಶ ರವಾನಿಸಿದ ಇಸ್ರೇಲ್‌

1200 ಇಸ್ರೇಲ್‌ ನಾಗರಿಕರನ್ನು ಕೊಂದಿದ್ದ ಸಿನ್ವರ್‌ ಟೆಲ್‌ ಅವಿವ್‌: ಕಳೆದ ವರ್ಷ ಅಕ್ಟೋಬರ್ 7ರಂದು ತನ್ನ ಮೇಲೆ ನಡೆಸಿ 1200 ಮಂದಿಯ ಸಾವಿಗೆ ಕಾರಣವಾದ ದಾಳಿಯ ಮಾಸ್ಟರ್ ಮೈಂಡ್ ಹಮಾಸ್ ಉಗ್ರ ಸಂಘಟನೆಯ ನಾಯಕ ಯಾಹ್ಯಾ ಸಿನ್ವರ್‌ನನ್ನು ಮುಗಿಸುವ ಮೂಲಕ ಇಸ್ರೇಲ್‌ ಪ್ರೀಕಾರ ತೀರಿಸಿಕೊಂಡಿದೆ. ಸಿನ್ವರ್‌ ಸತ್ತಿರುವುದು ದೃಢವಾಗುತ್ತಲೇ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಇರಾನ್‌ಗೆ ಈ ಕುರಿತು ಸಂದೇಶ ರವಾನಿಸಿತನ್ನ ಜೊತೆ ಕಾಲುಕೆರೆದು ಜಗಳಕ್ಕೆ ಬರುವ್ರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಇರಾನ್‌ ಪೋಷಿಸಿಕೊಂಡು ಬಂದಿದ್ದ ಉಗ್ರವಾದದ ರೆಕ್ಕೆಗಳನ್ನು

ಹಮಾಸ್‌ ಮುಖ್ಯಸ್ಥ ಯಾಹ್ಯಾ ಸಿನ್ವರ್‌ನನ್ನು ಹತ್ಯೆಗೈದು ಇರಾನ್‌ಗೆ ಸಂದೇಶ ರವಾನಿಸಿದ ಇಸ್ರೇಲ್‌ Read More »

ಹಸನ್‌ ನಸ್ರುಲ್ಲನ ಉತ್ತರಾಧಿಕಾರಿ ಒಂದೇ ವಾರದಲ್ಲಿ ಫಿನಿಶ್‌?

ನಿನ್ನೆ ಮಧ್ಯರಾತ್ರಿ ಮತ್ತೆ ಹಿಜ್ಬುಲ್ಲ ಬಂಕರ್‌ ಮೇಲೆ ಬಾಂಬ್‌ ಮಳೆಗರೆದ ಇಸ್ರೇಲ್‌ ಟೆಲ್‌ ಅವೀವ್‌ : ಇಸ್ರೇಲ್‌ ಗುರುವಾರ ಮಧ್ಯರಾತ್ರಿ ಮತ್ತೊಮ್ಮೆ ಲೆಬನಾನ್‌ನ ಬೇರೂತ್‌ ನಗರದ ಮೇಲೆ ಬಾಂಬ್‌ಗಳ ಸುರಿಮಳೆಗೈದಿದೆ. ಈ ಸಲ ಇಸ್ರೇಲ್‌ ಗುರಿ ಹಿಜ್ಬುಲ್ಲ ಉಗ್ರ ಸಂಘಟನೆಯ ಹೊಸ ಮುಖ್ಯಸ್ಥ ಹಾಶೆಮ್‌ ಸಫಿಯುದ್ದೀನ್‌ ಆಗಿದ್ದ. ಹಿಜ್ಬುಲ್ಲ ಮುಖ್ಯಸ್ಥ ಹಸನ್‌ ನಸ್ರಲ್ಲನನ್ನು ಇಸ್ರೇಲ್‌ ಸೆ.27ರಂದು ಬಾಂಬ್‌ ದಾಳಿ ಮಾಡಿ ಕೊಂದು ಹಾಕಿದೆ. ಇದರ ಬೆನ್ನಿಗೆ ಅವನ ಸಮಕಾಲೀನ ಹಾಶೆಮ್‌ ಸಫಿಯುದ್ದೀನ್‌ ಉತ್ತರಾಧಿಕಾರಿಯಾಗಿ ನೇಮಕವಾಗಿದ್ದ.ಆದರೆ ಹಾಶೆಮ್‌ ಸಫಿಯುದ್ದೀನ್‌

ಹಸನ್‌ ನಸ್ರುಲ್ಲನ ಉತ್ತರಾಧಿಕಾರಿ ಒಂದೇ ವಾರದಲ್ಲಿ ಫಿನಿಶ್‌? Read More »

ರೈಲು ನಿಲ್ದಾಣದಲ್ಲಿ ಯದ್ವಾತದ್ವಾ ಗುಂಡು ಹಾರಿಸಿದ ಉಗ್ರರು : 8 ಮಂದಿ ಸಾವು

ಇಸ್ರೇಲ್‌ ಮೇಲೆ ಇನ್ನೊಂದು ಭಯೋತ್ಪಾದಕ ದಾಳಿ ಟೆಲ್‌ ಅವಿವ್‌: ಇಸ್ರೇಲ್‌ನ ಟೆಲ್ ಅವಿವ್‌ ಸಮೀಪ ಜಾಫಾ ಪಟ್ಟಣದ ರೈಲು ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ನಡೆದ ಉಗ್ರರ ದಾಳಿಯಲ್ಲಿ ಕನಿಷ್ಠ ಎಂಟು ಮಂದಿ ಮೃತರಾಗಿದ್ದಾರೆ.ಇಬ್ಬರು ಬಂದೂಕುಧಾರಿಗಳು ಮನ ಬಂದಂತೆ ಗುಂಡು ಹಾರಿಸಿದ್ದಾರೆ. ನಂತರ ಅವರನ್ನು ಭದ್ರತಾ ಪಡೆ ಹತ್ಯೆ ಮಾಡಿದೆ. ಈ ಇಬ್ಬರು ವೆಸ್ಟ್‌ಬ್ಯಾಂಕ್‌ನ ಹೆಬ್ರಾನ್‌ನಿಂದ ಆಗಮಿಸಿದ್ದರು ಎಂದು ರಕ್ಷಣಾ ಪಡೆ ತಿಳಿಸಿದೆ.ರೈಲು ನಿಲ್ದಾಣದ ಟ್ರಾಫಿಕ್ ಕ್ರಾಸಿಂಗ್ ಬಳಿ ಗುಂಡಿನ ದಾಳಿ ನಡೆದಿದ್ದು, ಆಗ ರೈಲೊಂದು ನಿಂತಿತ್ತು. ಹೆಚ್ಚಿನ

ರೈಲು ನಿಲ್ದಾಣದಲ್ಲಿ ಯದ್ವಾತದ್ವಾ ಗುಂಡು ಹಾರಿಸಿದ ಉಗ್ರರು : 8 ಮಂದಿ ಸಾವು Read More »

ಇಸ್ರೇಲ್‌ ಮೇಲೆ ಇರಾನ್‌ ಭಯಾನಕ ಕ್ಷಿಪಣಿ ದಾಳಿ

ಬೆಲೆ ತೆರಬೇಕಾಗುತ್ತದೆ ಎಂದು ನೆತನ್ಯಾಹು ಗುಡುಗು 400ಕ್ಕೂ ಅಧಿಕ ಕ್ಷಿಪಣಿಗಳಿಂದ ದಾಳಿ; ಮಧ್ಯಪ್ರಾಚ್ಯ ಧಗಧಗ ಬೈರೂತ್: ಇಸ್ರೇಲ್‌ನ ಮಿಲಿಟರಿ ನೆಲೆಗಳು ಮತ್ತು ವಿಮಾನ ನಿಲ್ದಾಣಗಳನ್ನು ಗುರಿ ಮಾಡಿಕೊಂಡು ಮಂಗಳವಾರ ರಾತ್ರಿ ಇರಾನ್‌ 400ಕ್ಕೂ ಅಧಿಕ ಕ್ಷಿಪಣಿಗಳ ಮೂಲ ಭಯಾನಕ ದಾಳಿ ನಡೆಸಿದೆ. ಇದರಿಂದಾಗಿರುವ ನಾಶ ನಷ್ಟಗಳ ವರದಿ ಇನ್ನೂ ಬಹಿರಂಗವಾಗಿಲ್ಲ. ಆದರೆ ಮಧ್ಯಪ್ರಾಚ್ಯದಲ್ಲಿ ಯುದ್ಧ ಉಲ್ಬಣಗೊಂಡಿದ್ದು, ಈ ದಾಳಿಗೆ ಪ್ರತೀಕಾರ ತೀರಿಸದೆ ಬಿಡುವುದಿಲ್ಲ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಗುಡುಗಿದ್ದಾರೆ.ಇರಾನ್​​ ದಾಳಿ ಮಾಡುವ ಸಿದ್ಧತೆ ನಡೆಸಿದೆ

ಇಸ್ರೇಲ್‌ ಮೇಲೆ ಇರಾನ್‌ ಭಯಾನಕ ಕ್ಷಿಪಣಿ ದಾಳಿ Read More »

ನೇಪಾಳ : ಭೀಕರ ಪ್ರವಾಹಕ್ಕೆ 112 ಬಲಿ

80 ಮಂದಿ ನಾಪತ್ತೆ; ಭೂ ಕುಸಿತ, ನೂರಾರು ಮನೆಗಳು ಜಲಾವೃತ ಕಠ್ಮಂಡು: ನಿರಂತರ ಮಳೆಯಿಂದ ನೇಪಾಳದಲ್ಲಿ ಪ್ರವಾಹ ಉಂಟಾಗಿ 100ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಮತ್ತು ಸುಮಾರು 80 ಮಂದಿ ನಾಪತ್ತೆಯಾಗಿದದಾರೆ. ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತ ಉಂಟಾಗಿದ್ದು, ವ್ಯಾಪಕ ನಾಶ ನಷ್ಟ ಸಂಭವಿಸಿದೆ.ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಮನೆ ಕಳೆದುಕೊಂಡು ನಿರಾಶ್ರಿತರಾದ ಜನರನ್ನು ರಕ್ಷಣಾ ಪಡೆಗಳು ಸ್ಥಳಾಂತರಿಸುತ್ತಿವೆ. ನಿರಾಶ್ರಿತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ನೇಪಾಳ ಸರ್ಕಾರ ಸೂಚನೆ ನೀಡಿದೆ. ಶನಿವಾರ ಹೆಲಿಕಾಪ್ಟರ್‌ಗಳು ಮತ್ತು ಮೋಟಾರ್‌ಬೋಟ್‌ಗಳೊಂದಿಗೆ 3,000 ಕ್ಕೂ

ನೇಪಾಳ : ಭೀಕರ ಪ್ರವಾಹಕ್ಕೆ 112 ಬಲಿ Read More »

ಇಸ್ರೇಲ್‌ ದಾಳಿಗೆ ಹಿಜ್ಬುಲ್ಲ ಕೇಂದ್ರ ಕಚೇರಿ ಧ್ವಂಸ : ಇಬ್ಬರು ಕಮಾಂಡರ್‌ಗಳು ಬಲಿ

ಹಿಜ್ಬುಲ್ಲ ಮುಖ್ಯಸ್ಥ ಹಸನ್ ನಸ್ರಲ್ಲಾ ಗುರಿ ಮಾಡಿಕೊಂಡು ದಾಳಿ ಜೆರುಸಲೆಂ: ಇಸ್ರೇಲ್ ಮತ್ತು ಹಿಜ್ಬುಲ್ಲ ನಡುವಿನ ಸಮರ ತೀವ್ರಗೊಂಡಿದ್ದು, ಶುಕ್ರವಾರ ಸಂಜೆ ಇಸ್ರೇಲ್‌ ವಾಯುಪಡೆ ಲೆಬನಾನ್‌ನ ರಾಜಧಾನಿ ಬೈರುತ್‌ನಲ್ಲಿ ಭಾರಿ ದಾಳಿ ನಡೆಸಿ ಹಿಜ್ಬುಲ್ಲದ ಕೇಂದ್ರ ಕಚೇರಿಯನ್ನು ಧ್ವಂಸಗೊಳಿಸಿದೆ.ದಾಳಿಯ ಗುರಿ ಹಿಜ್ಬುಲ್ಲ ಮುಖ್ಯಸ್ಥ ಹಸನ್ ನಸ್ರಲ್ಲಾ ಆಗಿದ್ದ. ಆದರೆ ಈತ ತಪ್ಪಿಸಿಕೊಂಡಿದ್ದಾನೆ. ಆದರೆ ಹಿಜ್ಬುಲ್ಲದ ಇಬ್ಬರು ಉನ್ನತ ಕಮಾಂಡರ್‌ಗಳು ಬಲಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ದಾಳಿಗೆ 8 ಬಲಿಯಾಗಿ 76 ಮಂದಿಗೆ ಗಾಯಗೊಂಡಿದ್ದಾರೆ.ನೆತನ್ಯಾಹು ವಿಶ್ವಸಂಸ್ಥೆಯಲ್ಲಿ ಹಿಜ್ಬುಲ್ಲಾ ಉಗ್ರರ

ಇಸ್ರೇಲ್‌ ದಾಳಿಗೆ ಹಿಜ್ಬುಲ್ಲ ಕೇಂದ್ರ ಕಚೇರಿ ಧ್ವಂಸ : ಇಬ್ಬರು ಕಮಾಂಡರ್‌ಗಳು ಬಲಿ Read More »

ಕಮಲಾ ಹ್ಯಾರಿಸ್‌ ಕಚೇರಿ ಮೇಲೆ ಗುಂಡಿನ ದಾಳಿ

ಪ್ರತಿಸ್ಪರ್ಧಿ ಡೊನಾಲ್ಡ್‌ ಟ್ರಂಪ್‌ ಬಳಿಕ ಕಮಲಾ ಹ್ಯಾರಿಸ್‌ ಗುರಿ ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಅವರ ಕಚೇರಿ ಮೇಲೆ ಗುಂಡಿನ ದಾಳಿ ನಡೆದಿದೆ. ಅಮೆರಿಕದ ಅರಿಜೋನಾದಲ್ಲಿರುವ ಕಮಲಾ ಹ್ಯಾರಿಸ್ ಕಚೇರಿ ಮೇಲೆ ದುಷ್ಕರ್ಮಿಗಳು ನಿನ್ನೆ ಮಧ್ಯರಾತ್ರಿ ವೇಳೆ ಗುಂಡಿನ ದಾಳಿ ನಡೆಸಿದ್ದಾರೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್‌ ಬಿರುಸಿನ ಪ್ರಚಾರ ನಡೆಸುತ್ತಿರುವಾಗಲೇ ಈ ಘಟನೆ ನಡೆದಿದೆ.ಈ ಮೊದಲು ಅವರ ಪ್ರತಿಷ್ಪರ್ಧಿ ರಿಪಬ್ಲಿಕನ್‌ ಪಕ್ಷದ

ಕಮಲಾ ಹ್ಯಾರಿಸ್‌ ಕಚೇರಿ ಮೇಲೆ ಗುಂಡಿನ ದಾಳಿ Read More »

ಲೆಬನಾನ್‌ ಮೇಲೆ ಇಸ್ರೇಲ್‌ ಮಾರಕ ದಾಳಿ : 492 ಮಂದಿ ಸಾವು

28 ವರ್ಷಗಳ ಬಳಿಕ ಲೆಬನಾನ್‌ ಮೇಲೆ ನಡೆದ ಭೀಕರ ದಾಳಿ ಬೇರುತ್:‌ ಲೆಬನಾನ್‌–ಇಸ್ರೇಲ್‌ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿರುವುದರಿಂದ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಆವರಿಸಿದೆ. ಲೆಬನಾನ್‌ನ ದಕ್ಷಿಣ ಹಾಗೂ ಪೂರ್ವ ಪ್ರಾಂತ್ಯದ ಮೇಲೆ ಇಸ್ರೇಲ್‌ ವಾಯುದಾಳಿ ನಡೆಸಿದ್ದು, ಇದಕ್ಕೆ ಪ್ರತೀಕಾರವಾಗಿ ಉತ್ತರ ಇಸ್ರೇಲ್‌ನ ಸೇನಾ ನೆಲೆಗಳ ಮೇಲೆ ಲೆಬನಾನ್‌ ನಡೆಸಿದೆ.ಪೇಜರ್‌, ವಾಕಿಟಾಕಿ ಸ್ಫೋಟಕ್ಕೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದ ಇರಾನ್‌ ಬೆಂಬಲಿತ ಲೆಬನಾನ್‌ ಬಂಡುಕೋರ ಪಡೆಯ ಮೇಲೆ ಸೋಮವಾರ ಇಸ್ರೇಲ್‌ ಮಾರಣಾಂತಿಕ ದಾಳಿ ನಡೆಸಿದೆ. ಹಿಜ್ಜುಲ್ಲಾ

ಲೆಬನಾನ್‌ ಮೇಲೆ ಇಸ್ರೇಲ್‌ ಮಾರಕ ದಾಳಿ : 492 ಮಂದಿ ಸಾವು Read More »

ಪೇಜರ್‌ ಬಳಿಕ ಲೆಬನಾನ್‌ನಲ್ಲಿ ವಾಕಿಟಾಕಿ ಸ್ಫೋಟ : 20 ಮಂದಿ ಸಾವು

ಜಗತ್ತನ್ನು ಚಕಿತಗೊಳಿಸಿದ ಹೊಸ ರೀತಿಯ ಯುದ್ಧತಂತ್ರ ಬೇರುತ್‌ : ಮಂಗಳವಾರವಷ್ಟೇ ಲೆಬನಾನ್​ನಲ್ಲಿ ಹಿಜ್ಬುಲ್ಲಾ ಉಗ್ರರು ಬಳಸುತ್ತಿದ್ದ ಸಾವಿರಾರು ಪೇಜರ್​ಗಳು ಸ್ಫೋಟಗೊಂಡು 10 ಮಂದಿ ಸತ್ತು 3,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಇದರ ಬೆನ್ನಲ್ಲೇ ಈಗ ವಾಕಿಟಾಕಿಗಳು ಸ್ಫೋಟಗೊಂಡಿವೆ. ಮಂಗಳವಾರದ ಸ್ಫೋಟದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆ ಬುಧವಾರ ನಡೆಯುತ್ತಿರುವಾಗಲೇ ವಾಕಿಟಾಕಿಗಳು ಹಾಗೂ ಇತರ ಉಪಕರಣಗಳು ಸ್ಫೋಟಗೊಂಡು 20ಕ್ಕೂ ಅಧಿಕ ಮಂದಿ ಸಾವಿಒಗೀಡಾಗಿದ್ದಾರೆ ಹಾಗೂ 500ರಷ್ಟು ಮಂದಿ ಗಾಯಗೊಂಡಿದ್ದಾರೆ.ಇದು ಕೂಡ ಇಸ್ರೇಲ್‌ನದ್ದೇ ಕೃತ್ಯ ಎನ್ನಲಾಗಿದೆ. ಇಸ್ರೇಲ್‌ ಸಾರಿರುವ ಈ ಹೊಸ ಸಮರವನ್ನು

ಪೇಜರ್‌ ಬಳಿಕ ಲೆಬನಾನ್‌ನಲ್ಲಿ ವಾಕಿಟಾಕಿ ಸ್ಫೋಟ : 20 ಮಂದಿ ಸಾವು Read More »

error: Content is protected !!
Scroll to Top