ವಿದೇಶ

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ವ್ಯಕ್ತಿ ನೌಕರಿಯಿಂದ ವಜಾ

ದೂರು ಕೊಡಬೇಡಿ, ಹೆಂಡತಿ ಮಕ್ಕಳಿದ್ದಾರೆ ಎಂದು ಕ್ಷಮೆ ಯಾಚಿಸಿದ್ದ ಹೊಸದಿಲ್ಲಿ : ನ್ಯೂಯಾರ್ಕ್‌-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಸಹ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಶಂಕರ್ ಮಿಶ್ರಾ ಎಂಬಾತನನ್ನು ಅಮೆರಿಕದ ಕಂಪನಿ ನೌಕರಿಯಿಂದ ಕೆಲಸದಿಂದ ವಜಾಗೊಳಿಸಿದೆ. ಯುನೈಟೆಡ್ ಸ್ಟೇಟ್ಸ್ ಹಣಕಾಸು ಸೇವೆಗಳ ಕಂಪನಿ ವೆಲ್ಸ್ ಫಾರ್ಗೋದಲ್ಲಿ ಆತ ಉದ್ಯೋಗಿಯಾಗಿದ್ದ.ಶಂಕರ್ ಮಿಶ್ರಾ ವಿರುದ್ಧದ ಆರೋಪ ತುಂಬ ‘ಗಾಢವಾಗಿ ಮನಸ್ಸನ್ನು ಕಲಕಿದೆ’. ಈ ವ್ಯಕ್ತಿಯನ್ನು ವೆಲ್ ಫಾರ್ಗೋದಿಂದ ವಜಾಗೊಳಿಸಲಾಗಿದೆ ಎಂದು ಅಮೆರಿಕದ ವೆಲ್ಸ್ ಫಾರ್ಗೋ ಕಂಪನಿ ಹೇಳಿದೆ. […]

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ವ್ಯಕ್ತಿ ನೌಕರಿಯಿಂದ ವಜಾ Read More »

ಫುಟ್ಬಾಲ್‌ ದಂತಕಥೆ ಪೀಲೆ ನಿಧನ

ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಬ್ರೆಸಿಲಿಯಾ : ವಿಶ್ವ ಫುಟ್‌ಬಾಲ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ, ಬ್ರೆಜಿಲ್‌ಗೆ 3 ವಿಶ್ವಕಪ್‌ಗಳನ್ನು ತಂದುಕೊಟ್ಟಿದ್ದ ಖ್ಯಾತ ಆಟಗಾರ ಪೀಲೆ (82) ಅನಾರೋಗ್ಯ ಕಾರಣದಿಂದ ನಿಧನರಾದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪೀಲೆ ಅವರು 2021ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಹಲವು ಕಾಯಿಲೆಗಳ ಕಾರಣದಿಂದಾಗಿ ಅವರನ್ನು ನ.29ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಫುಟ್‌ಬಾಲ್‌ ಇತಿಹಾಸದಲ್ಲಿ ದಂಥಕತೆಯಾಗಿದ್ದ ಪೀಲೆ ಬ್ರೆಜಿಲಿಯಾ ಫುಟ್‌ಬಾಲ್‌ ಕ್ಲಬ್‌ ಸ್ಯಾಂಟೋಸ್‌ ಮತ್ತು ಬ್ರೆಜಿಲ್‌ ರಾಷ್ಟ್ರೀಯ ತಂಡದೊಂದಿಗೆ ಸುಮಾರು 2 ದಶಕಗಳ ಕಾಲ ಆಡಿದ್ದರು. ಮೈದಾನದಲ್ಲಿ ತಮ್ಮ ವೇಗದ

ಫುಟ್ಬಾಲ್‌ ದಂತಕಥೆ ಪೀಲೆ ನಿಧನ Read More »

ಇಸ್ರೇಲ್ ಪ್ರಧಾನಿಯಾಗಿ‌ ಬೆಂಜಮಿನ್ ನೆಥನ್ಯಾಹು ಪ್ರಮಾಣವಚನ

ಟೆಲ್ಅವೀವ್: ಇಸ್ರೇಲ್ನ ನೂತನ ಪ್ರಧಾನಿಯಾಗಿ ಬೆಂಜಮಿನ್ ನೆಥನ್ಯಾಹು ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.  ಇದರೊಂದಿಗೆ ಇಸ್ರೇಲ್ ಇತಿಹಾಸದಲ್ಲೇ ಕಟ್ಟಾ ಬಲಪಂಥೀಯ ಸರಕಾರದ ನೇತೃತ್ವವನ್ನು 73 ವರ್ಷದ ನೆಥನ್ಯಾಹು ವಹಿಸಿದಂತಾಗಿದೆ. 1996ರಿಂದ 1999ರ ನಡುವಿನ ಅವಧಿ ಹಾಗೂ 2009ರಿಂದ 2021ರ ಅವಧಿಯಲ್ಲಿ ಇಸ್ರೇಲ್ ಪ್ರಧಾನಿಯಾಗಿ ಅವರು ಕಾರ್ಯನಿರ್ವಹಿಸಿದ್ದಾರೆ.   ಗುರುವಾರ ಇಸ್ರೇಲ್ ನ ಸಂಸತ್ತು ನೆಥನ್ಯಾಹು ಅವರ ಸರಕಾರದ ಪರ ವಿಶ್ವಾಸ ವ್ಯಕ್ತಪಡಿಸಿದ ಬಳಿಕ ನೆಥನ್ಯಾಹು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 120 ಸದಸ್ಯ ಬಲದ ಸಂಸತ್ತಿನಲ್ಲಿ 63 ಸದಸ್ಯರು

ಇಸ್ರೇಲ್ ಪ್ರಧಾನಿಯಾಗಿ‌ ಬೆಂಜಮಿನ್ ನೆಥನ್ಯಾಹು ಪ್ರಮಾಣವಚನ Read More »

ಫುಟ್ಬಾಲ್ ದಂತಕಥೆ ಪೀಲೆ ನಿಧನ

ಸಾವೊಪಾಲೊ: ಕ್ಯಾನ್ಸರ್ ಜೊತೆಗೆ ಮೂತ್ರಪಿಂಡ ಹಾಗೂ ಹೃದಯದ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರ, ಬ್ರೆಝಿಲ್ ನ ಫುಟ್ಬಾಲ್ ದಂತಕತೆ ಪೀಲೆ (Pele) ನಿಧನರಾಗಿದ್ದಾರೆ. ಪೀಲೆ ಅವರಿಗೆ 82 ವರ್ಷ ವಯಸ್ಸಾಗಿತ್ತು.  ಮೂರು ಬಾರಿ ವಿಶ್ವಕಪ್ ವಿಜೇತ ಪೀಲೆ ಅವರು ನ.29ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಪೀಲೆಗೆ ಇತ್ತೀಚೆಗೆ ಕೋವಿಡ್-19 ಸೋಂಕು ತಗಲಿತ್ತು.  ತನ್ನ 16ನೇ ವಯಸ್ಸಿನಲ್ಲಿ ಬ್ರೆಝಿಲ್ ರಾಷ್ಟ್ರೀಯ ತಂಡದ ಪರ ಆಡಲು ಆರಂಭಿಸಿದ ಪೀಲೆ 1958, 1962 ಹಾಗೂ 1970ರಲ್ಲಿ ಬ್ರೆಝಿಲ್ ಫಿಫಾ ವಿಶ್ವಕಪ್

ಫುಟ್ಬಾಲ್ ದಂತಕಥೆ ಪೀಲೆ ನಿಧನ Read More »

ಭಾರತದಿಂದ ರಫ್ತಾದ ಕೆಮ್ಮಿನ ಸಿರಪ್‌ ಸೇವಿಸಿ 18 ಮಕ್ಕಳು ಸಾವು

ಗ್ಯಾಂಬಿಯಾ ಬಳಿಕ ಉಜ್ಬೇಕಿಸ್ಥಾನ ಆರೋಪ ತಾಷ್ಕೆಂಟ್: ತನ್ನ ದೇಶದ ಸುಮಾರು 18 ಮಕ್ಕಳ ಸಾವಿನಲ್ಲಿ ಭಾರತದಲ್ಲಿ ತಯಾರಿಸಲಾದ ಕೆಮ್ಮಿನ ಸಿರಪ್‌ನ ಪಾತ್ರವಿದೆ ಎಂದು ಉಜ್ಬೇಕಿಸ್ಥಾನ ಆರೋಪಿಸಿದೆ.ಕೆಲ ತಿಂಗಳ ಹಿಂದೆ ಗ್ಯಾಂಬಿಯಾ ದೇಶದ ಸುಮಾರು 70 ಮಕ್ಕಳ ಸಾವಿಗೆ ಭಾರತದಲ್ಲಿ ತಯಾರಿಸಿದ ಕೆಮ್ಮಿನ ಸಿರಪ್ ಕಾರಣ ಎಂದು ಆರೋಪ ಮಾಡಲಾಗಿತ್ತು. ಇದೀಗ ಉಜ್ಬೇಕಿಸ್ಥಾನ ಕೂಡ ಇದೇ ರೀತಿಯ ಆರೋಪ ಮಾಡಿದೆ. ಭಾರತದಲ್ಲಿ ತಯಾರಿಸಿದ ಕೆಮ್ಮಿನ ಸಿರಪ್ ಸೇವಿಸಿ ದೇಶದಲ್ಲಿ ಕನಿಷ್ಠ 18 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಉಜ್ಬೇಕಿಸ್ತಾನ ಹೇಳಿಕೊಂಡಿದೆ.

ಭಾರತದಿಂದ ರಫ್ತಾದ ಕೆಮ್ಮಿನ ಸಿರಪ್‌ ಸೇವಿಸಿ 18 ಮಕ್ಕಳು ಸಾವು Read More »

ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧಕ್ಕೆ ಸಿದ್ಧ: ಚೀನಾ

ಬೀಜಿಂಗ್‌: ‘ಭಾರತದೊಂದಿಗೆ ‘ಸ್ಥಿರ ಮತ್ತು ಉತ್ತಮ ಬೆಳವಣಿಗೆ’ಯ ದ್ವಿಪಕ್ಷೀಯ ಸಂಬಂಧವನ್ನು ಹೊಂದಲು ಚೀನಾ ಸಿದ್ಧವಿದೆ’ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಭಾನುವಾರ ಹೇಳಿದರು. ‘2020ರಿಂದ ಈಚೆಗೆ ಚೀನಾ–ಭಾರತ ಮಧ್ಯೆ ಉಲ್ಬಣಿಸಿರುವ ಗಡಿ ವಿವಾದ ಸಂಬಂಧ ಗಡಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಎರಡೂ ದೇಶಗಳು ಬದ್ಧವಾಗಿದೆ’ ಎಂದೂ ಹೇಳಿದರು. ಅಂತರರಾಷ್ಟ್ರೀಯ ಸ್ಥಿತಿಗತಿ ಮತ್ತು ಚೀನಾದ ವಿದೇಶಾಂಗ ಸಂಬಂಧ 2022 ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಭಾರತ ಹಾಗೂ ಚೀನಾವು ಯಾವಾಗಲೂ ರಾಜತಾಂತ್ರಿಕ ಮತ್ತು ಸೇನಾಮಟ್ಟದ ಸಂಪರ್ಕವನ್ನು

ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧಕ್ಕೆ ಸಿದ್ಧ: ಚೀನಾ Read More »

ನೇಪಾಳದಲ್ಲಿ ಭಾರತದ ವ್ಯಕ್ತಿಯ ಹತ್ಯೆ

ಕಠ್ಮಂಡು: ‘ದಕ್ಷಿಣ ಭಾಗದ ನೇಪಾಳದಲ್ಲಿ ಐವರು ಅನಾಮಧೇಯ ಬಂದೂಕುಧಾರಿಗಳು ಭಾರತದ ವ್ಯಕ್ತಿಯೊಬ್ಬರನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ’ ಎಂದು ಪೊಲೀಸರು ಶನಿವಾರ ತಿಳಿಸಿದರು. ‘ಶಿವ ಪೂಜನ್‌ ಯಾದವ್‌ (45) ಹತ್ಯೆಯಾದ ವ್ಯಕ್ತಿ. ಮಹಾಗಧಿಮಯಿ ನಗರಸಭೆಯಲ್ಲಿ ಯಾದವ್‌ ಅವರ ಹತ್ಯೆ ಮಾಡಲಾಗಿದೆ. ಎರಡು ಬೈಕ್‌ಗಳಲ್ಲಿ ಬಂದ ಐವರು ಬಂದೂಕುಧಾರಿ ವ್ಯಕ್ತಿಗಳು ಯಾದವ್ ಅವರ ಮೇಲೆ ಗುಂಡು ಹಾರಿಸಿದರು. ಇದರ ಪರಿಣಾಮ ಯಾದವ್‌ ಅವರು ಗಂಭೀರವಾಗಿ ಗಾಯಗೊಂಡರು’ ಎಂದು ಪೊಲೀಸರು ವಿವರಿಸಿದರು. ‘ಘಟನೆ ನಡೆದ ತಕ್ಷಣದಲ್ಲಿ ಯಾದವ್‌ ಅವರನ್ನು ಹತ್ತಿರ

ನೇಪಾಳದಲ್ಲಿ ಭಾರತದ ವ್ಯಕ್ತಿಯ ಹತ್ಯೆ Read More »

ರಶ್ಯ: ವೃದ್ಧಾಶ್ರಮದಲ್ಲಿ ಬೆಂಕಿ ದುರಂತ 20 ಮಂದಿ ಮೃತ್ಯು

ಮಾಸ್ಕೊ: ರಶ್ಯದ ಸೈಬೀರಿಯಾ ಪ್ರಾಂತದ ಕೆಮೆರೊವೊ ನಗರದ ವೃದ್ಧಾಶ್ರಮದಲ್ಲಿ ಶುಕ್ರವಾರ ಸಂಭವಿಸಿದ ಬೆಂಕಿ ದುರಂತದಲ್ಲಿ 20 ಮಂದಿ ಮೃತಪಟ್ಟಿರುವುದಾಗಿ ತಾಸ್ ಸುದ್ಧಿಸಂಸ್ಥೆ ವರದಿ ಮಾಡಿದೆ. ಕಟ್ಟಡದ ಎರಡನೇ ಮಹಡಿ ಬೆಂಕಿಯಿಂದ ಸಂಪೂರ್ಣ ಸುಟ್ಟುಹೋಗಿದೆ. ಅಗ್ನಿಶಾಮಕ ಸಿಬಂದಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ 20 ಮಂದಿ ಮೃತಪಟ್ಟಿದ್ದಾರೆ. ತಾಪಮಾನ ಕನಿಷ್ಟ ಮಟ್ಟಕ್ಕೆ ಇಳಿದಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ‘ತಾಸ್’ ವರದಿ ಮಾಡಿದೆ.

ರಶ್ಯ: ವೃದ್ಧಾಶ್ರಮದಲ್ಲಿ ಬೆಂಕಿ ದುರಂತ 20 ಮಂದಿ ಮೃತ್ಯು Read More »

ಅಮೆರಿಕ, ಕೊರಿಯ, ಜಪಾನ್‌ನಲ್ಲೂ ಕೋವಿಡ್ ಉಲ್ಬಣ: ಡಬ್ಲ್ಯೂ.ಎಚ್.ಓ.

ವಾಷಿಂಗ್ಟನ್: ಚೀನಾವಷ್ಟೇ ಅಲ್ಲ, ಅಮೆರಿಕ, ದಕ್ಷಿಣ ಕೊರಿಯಾ, ಬ್ರೆಝಿಲ್ ಮತ್ತು ಜಪಾನ್‌ನಲ್ಲೂ ಕೋವಿಡ್-19 ಸೋಂಕಿನ ಪ್ರಕರಣ ಏಕಾಏಕಿ ಉಲ್ಬಣಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಕೋವಿಡ್ ವಿರುದ್ಧದ ಲಸಿಕೆಯ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದೆ. 2020ರಲ್ಲಿ ಕೋವಿಡ್ ಸೋಂಕು ಆರಂಭಗೊಂಡಂದಿನಿಂದ ಇದುವರೆಗೆ ಅಮೆರಿಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 100 ದಶಲಕ್ಷದ ಗಡಿ ದಾಟಿದೆ. ಅಮೆರಿಕದಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 10 ಲಕ್ಷ ದಾಟಿದೆ ಎಂದು ಅಮೆರಿಕದ ಜಾನ್ಸ್ ಹಾಪ್ಕಿನ್ಸ್ ವಿವಿ ಹೇಳಿದೆ. ಕೋವಿಡ್ ಸೋಂಕಿನಿಂದಾಗಿ ವಿಶ್ವದಲ್ಲಿ ಪ್ರತೀ

ಅಮೆರಿಕ, ಕೊರಿಯ, ಜಪಾನ್‌ನಲ್ಲೂ ಕೋವಿಡ್ ಉಲ್ಬಣ: ಡಬ್ಲ್ಯೂ.ಎಚ್.ಓ. Read More »

ಹೆಣ್ಣುಮಕ್ಕಳ ವಿಶ್ವವಿದ್ಯಾಲಯ ಶಿಕ್ಷಣಕ್ಕೆ ತಾಲಿಬಾನ್‌ ತಡೆ

ಅಫ್ಘಾನಿಸ್ಥಾನದಲ್ಲಿ ಹೆಣ್ಣು ಮಕ್ಕಳು ವಿವಿ ಮೆಟ್ಟಿಲು ಹತ್ತದಂತೆ ಆದೇಶ ಕಾಬೂಲ್ : ಅಫ್ಘಾನಿಸ್ಥಾನದ ತಾಲಿಬಾನ್‌ ಆಡಳಿತ ಮಹಿಳೆಯರ ಮೇಲೆ ಇನ್ನಷ್ಟು ನಿರ್ಬಂಧ ವಿಧಿಸಿದೆ. ಈದೀಗ ತಾಲಿಬಾನ್ ಸರ್ಕಾರ ಮಹಿಳೆಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣವನ್ನು ನಿಷೇಧಿಸುವಂತೆ ಆದೇಶಿಸಿದೆ. ಕಳೆದ ವರ್ಷ ಅಧಿಕಾರವನ್ನು ವಶಪಡಿಸಿಕೊಂಡಾಗ ಸರಳ ಹಾಗೂ ಜನಸ್ನೇಹಿ ಆಡಳಿತದ ಭರವಸೆ ನೀಡಿದ್ದರೂ, ತಾಲಿಬಾನ್ ಅಂತರರಾಷ್ಟ್ರೀಯ ಆಕ್ರೋಶವನ್ನು ನಿರ್ಲಕ್ಷಿಸಿ ಮಹಿಳೆಯರ ಜೀವನದ ಎಲ್ಲಾ ಅಂಶಗಳ ಮೇಲೆ ನಿರ್ಬಂಧಗಳನ್ನು ಹೆಚ್ಚಿಸುತ್ತಿದೆ.ಮಹಿಳಾ ಶಿಕ್ಷಣವನ್ನು ಅಮಾನತುಗೊಳಿಸುವ ಆದೇಶವನ್ನು ತಕ್ಷಣವೇ ಜಾರಿಗೆ ತರಲು ತಿಳಿಸಲಾಗಿದೆ ಎಂದು ಉನ್ನತ

ಹೆಣ್ಣುಮಕ್ಕಳ ವಿಶ್ವವಿದ್ಯಾಲಯ ಶಿಕ್ಷಣಕ್ಕೆ ತಾಲಿಬಾನ್‌ ತಡೆ Read More »

error: Content is protected !!
Scroll to Top