ಪಾಕಿಸ್ಥಾನದ ಭೂಸೇನಾ ಮುಖ್ಯಸ್ಥ ಮುನೀರ್‌ನನ್ನು ಉಗ್ರ ಒಸಾಮ ಬಿನ್ ಲಾಡೆನ್‌ಗೆ ಹೋಲಿಸಿದ ಅಮೆರಿಕದ ಮಾಜಿ ರಕ್ಷಣಾ ಅಧಿಕಾರಿ
ಪಹಲ್ಗಾಮ್ ದಾಳಿಗೆ ಮುನೀರ್ ಕಾರಣ ಎಂದು ನೇರ ಆರೋಪ ವಾಷಿಂಗ್ಟನ್ : ಪಾಕಿಸ್ತಾನದ ಭೂಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರನ್ನು ಅಮೆರಿಕ ಅಲ್ ಕಾಯಿದಾ ಉಗ್ರ ಒಸಾಮಾ ಬಿನ್ ಲಾಡೆನ್‌ಗೆ ಹೋಲಿಸಿದೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರನ್ನು ಬಲಿ ಪಡೆದ ಭಯಾನಕ ದಾಳಿಯಲ್ಲಿ ಪಾಕಿಸ್ಥಾನದ ಪಾತ್ರವಿದೆ ಎಂದು ಅಮೆರಿಕದ ಮಾಜಿ ರಕ್ಷಣಾ ಅಧಿಕಾರಿ ಮೈಕಲ್ ರೂಬಿನ್ ನೇರವಾಗಿ ಆರೋಪಿಸಿದ್ದಾರೆ. ಜನರಲ್ ಮುನೀರ್ ಅರಮನೆಯಲ್ಲಿ ವಾಸಿಸುತ್ತಿದ್ದರೆ, ಬಿನ್ ಲಾಡೆನ್ ಗುಹೆಯಲ್ಲಿ ವಾಸಿಸುತ್ತಿದ್ದ. ಇವರಿಬ್ಬರ ನಡುವೆ ಇದೊಂದೇ ವ್ಯತ್ಯಾಸ […]