ಚೀನಾಗೆ ಮತ್ತೊಂದು ಜಾಗತಿಕ ಹಿನ್ನಡೆ! | ಭಾರತದ ಸುತ್ತ ಆರ್ಥಿಕ ಪಥ ನಿರ್ಮಿಸುವ ‘ಒನ್ ಬೆಲ್ಟ್’ ಯೋಜನೆಗೆ ಮತ್ತೊಂದು ಹೊಡೆತ
ಚೀನಾಗೆ ಮತ್ತೊಂದು ಜಾಗತಿಕ ಹಿನ್ನಡೆಯಾಗಿದ್ದು, ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮಹತ್ವಾಕಾಂಕ್ಷಿ ಯೋಜನೆ ಒನ್ ಬೆಲ್ಟ್ನಿಂದ ಇಟಲಿ ದೇಶ ಹೊರಬಿದ್ದಿದೆ. ಚೀನಾದ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆ ಒನ್ ಬೆಲ್ಟ್- ಒನ್ ರೋಡ್ ಯೋಜನೆಯಿಂದ ಇಟಲಿ ನಿರ್ಗಮಿಸಿದ್ದು, ಭಾರತದ ಸುತ್ತ ಆರ್ಥಿಕ ಪಥ ನಿರ್ಮಿಸಿ ಹಿಡಿತ ಸಾಧಿಸುವ ಚೀನಾದ ಹುನ್ನಾರಕ್ಕೆ ಇಟಲಿ ನಿರ್ಗಮನ ಭಾರೀ ಹೊಡೆತ ನೀಡಿದಂತಾಗಿದೆ. ಯೂರೋಪ್ ಮತ್ತು ಏಷ್ಯಾಗಳನ್ನು ಸಂಪರ್ಕಿಸುವ ಪುರಾತನ ವ್ಯಾಪಾರ ಮಾರ್ಗಗಳನ್ನು ಪುನರುಜ್ಜೀವನಗೊಳಿಸುವ ಜಾಗತಿಕ ಮೂಲಸೌಕರ್ಯ ಯೋಜನೆ ಇದಾಗಿದ್ದು, ಚೀನಾದ ಜತೆಗೆ ಈ […]