ವಿದೇಶ

ಕರಾಮ ಡೇ ಟು ಡೇ ಶಾಪಿಂಗ್‍ ಸೆಂಟರ್ ನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ | ಇಬ್ಬರು ಮೃತ್ಯು

ದುಬೈ : ಕೊಲ್ಲಿ ರಾಷ್ಟ್ರ ದುಬೈ ಅಲ್ ಕರಾಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಭಾರತೀಯರು ಸಾವನ್ನಪ್ಪಿದ್ದು, 8 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಕರಾಮ ‘ಡೇ ಟು ಡೇ’ ಶಾಪಿಂಗ್ ಸೆಂಟರ್ ಬಳಿಯ ಬಿನ್ಹೈದರ್ ಬಿಲ್ಡಿಂಗ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೇರಳ ಮಲಪ್ಪುರಂ ಮೂಲದ ಯಾಕೂಬ್ ಅಬ್ದುಲ್ಲಾ ಮತ್ತು ತಲಶ್ಶೇರಿ ಟೆಂಪಲ್ ಗೇಟ್‌ನಲ್ಲಿರುವ ನಿಟ್ಟೂರು ಮನೆಯ ನಿದಿನ್ ದಾಸ್ ಸಾವನ್ನಪ್ಪಿದವರು. ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ 8 ಜನರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗುರುವಾರ ಸಂಜೆ ಈ […]

ಕರಾಮ ಡೇ ಟು ಡೇ ಶಾಪಿಂಗ್‍ ಸೆಂಟರ್ ನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ | ಇಬ್ಬರು ಮೃತ್ಯು Read More »

ಗಾಝಾದಲ್ಲಿ ಆಸ್ಪತ್ರೆ ಮೇಲೆ ಇಸ್ರೇಲ್ ದಾಳಿ | ಭಾರತ ಮೂಲದ ಉಡುಪು ತಯಾರಿಕಾ ಕಂಪೆನಿ ವ್ಯಾಪಾರ ಕಡಿದುಕೊಳ್ಳಲು ನಿರ್ಧಾರ

ಹೊಸದಿಲ್ಲಿ: ಗಾಝಾದಲ್ಲಿಯ ಆಸ್ಪತ್ರೆಯ ಮೇಲೆ ಬಾಂಬ್‌ ದಾಳಿಯನ್ನು ಪ್ರತಿಭಟಿಸಿ ಇಸ್ರೇಲಿ ಪೋಲಿಸ್ – ಸಮವಸ್ತ್ರಗಳನ್ನು ಪೂರೈಸುವ ಭಾರತದ ಉಡುಪು ತಯಾರಿಕೆ ಕಂಪನಿಯೊಂದು ಅದರೊಂದಿಗೆ ವ್ಯಾಪಾರ ಕಡಿದುಕೊಳ್ಳಲು ನಿರ್ಧರಿಸಿದೆ. ಕೇರಳದ ಕಣ್ಣೂರಿನಲ್ಲಿರುವ ಮರಿಯನ್ ಅಪರೆಲ್ ಪ್ರೈ.ಲಿ. 2015ರಿಂದಲೂ ಇಸ್ರೇಲಿ ಪೋಲಿಸ್‌ ಪಡೆಗಾಗಿ ವಾರ್ಷಿಕ ಒಂದು ಲಕ್ಷ ಸಮವಸ್ತ್ರಗಳನ್ನು ತಯಾರಿಸುತ್ತಿತ್ತು. ಪ್ರಸ್ತುತ ನಡೆಯುತ್ತಿರುವ ಯುದ್ಧದ ಸಂದರ್ಭದಲ್ಲೂ ಸಮವಸ್ತ್ರ ಒದಗಿಸುತ್ತಿತ್ತು. ಇಸ್ರೇಲ್‌ನಿಂದ ಬಲವಂತದಿಂದ ಸ್ಥಳಾಂತರಗೊಳಿಸಲ್ಪಟ್ಟ ಸಾವಿರಾರು ಜನರಿಗೆ ಆಶ್ರಯವನ್ನು ಒದಗಿಸಿದ್ದ ಗಾಝಾ ನಗರದ ಹೃದಯಭಾಗದಲ್ಲಿರುವ ಅಲ್ ಅಹ್ ಅರಬ್ ಹಾಸ್ಪಿಟಲ್ ಮೇಲೆ

ಗಾಝಾದಲ್ಲಿ ಆಸ್ಪತ್ರೆ ಮೇಲೆ ಇಸ್ರೇಲ್ ದಾಳಿ | ಭಾರತ ಮೂಲದ ಉಡುಪು ತಯಾರಿಕಾ ಕಂಪೆನಿ ವ್ಯಾಪಾರ ಕಡಿದುಕೊಳ್ಳಲು ನಿರ್ಧಾರ Read More »

ಇಸ್ರೇಲ್ ಪರ ಪೋಸ್ಟ್ : ಮಂಗಳೂರಿನ ವೈದ್ಯರೊಬ್ಬರು ಬೆಹ್ರೈನ್ ನಲ್ಲಿ ಕೆಲಸದಿಂದ ವಜಾ, ಬಂಧನ

ಮಂಗಳೂರು : ಇಸ್ರೇಲ್ ಪರ ಪೋಸ್ಟ್ ಹಾಕಿರುವ ಕಾರಣಕ್ಕೆ ಭಾರತದ ವೈದ್ಯರೊಬ್ಬರನ್ನು ಕೆಲಸದಿಂದ ವಜಾ ಮಾಡಿದ್ದಲ್ಲದೆ ಬೆಹ್ರೈನ್  ಪೊಲೀಸರು ಬಂಧಿಸಿದ್ದಾರೆ. ಬೆಣೈನಲ್ಲಿ ಹತ್ತು ವರ್ಷಗಳಿಂದ ವೈದ್ಯರಾಗಿರುವ, ಮಂಗಳೂರು ಮೂಲದ ವೈದ್ಯ ಡಾ.ಸುನಿಲ್ ರಾವ್ ಬಂಧಿತ ವೈದ್ಯರಾಗಿದ್ದಾರೆ. ಇಸ್ರೇಲ್ ದೇಶದ ಪರವಾಗಿ ಡಾ.ಸುನಿಲ್ ರಾವ್ ಹಾಕಿದ್ದ ಟ್ವಿಟರ್ ಪೋಸ್ಟ್ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೆಲವರು ಈ ಪೋಸ್ಟ್ ನ್ನು ಬೆಹ್ರೈನ್ ಆಡಳಿತಕ್ಕೆ ಟ್ಯಾಗ್ ಮಾಡಿ, ಕ್ರಮಕ್ಕೆ ಆಗ್ರಹ ಮಾಡಿದ್ದರು. ಪ್ಯಾಲೆಸ್ತೀನ್ ವಿರೋಧಿಸಿ ಪೋಸ್ಟ್ ಹಾಕಿದ್ದಾರೆಂದು ಆಡಳಿತದ ಗಮನಕ್ಕೆ ತಂದಿದ್ದರು.

ಇಸ್ರೇಲ್ ಪರ ಪೋಸ್ಟ್ : ಮಂಗಳೂರಿನ ವೈದ್ಯರೊಬ್ಬರು ಬೆಹ್ರೈನ್ ನಲ್ಲಿ ಕೆಲಸದಿಂದ ವಜಾ, ಬಂಧನ Read More »

ಗಾಜಾಪಟ್ಟಿ ವಶಕ್ಕೆ ಇಸ್ರೇಲ್ ಸೇನೆಗೆ ಆದೇಶ: ವರದಿ

ಟೆಲ್ ಅವೀವ್: ಹಮಾಸ್ ಉಗ್ರರ ದಾಳಿ ಬೆನ್ನಲ್ಲೇ ಗಾಜಾಪಟ್ಟಿ ಮೇಲೆ ದಾಳಿ ಆರಂಭಿಸಿರುವ ಇಸ್ರೇಲ್ ಸೇನೆಗೆ ಇದೀಗ ಇಡೀ ಗಾಜಾಪಟ್ಟಿಯನ್ನೇ ವಶಕ್ಕೆ ಪಡೆಯುವಂತೆ ಆದೇಶ ನೀಡಲಾಗಿದೆ. ಈ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ಭಾನುವಾರ ವರದಿ ಮಾಡಿದ್ದು, ಗಾಜಾ ನಗರವನ್ನು ವಶಪಡಿಸಿಕೊಳ್ಳಲು ಮತ್ತು ಹಮಾಸ್ನ ಪ್ರಸ್ತುತ ನಾಯಕತ್ವವನ್ನು ನಾಶ ಮಾಡಲು ಹತ್ತಾರು ಸಾವಿರ ಸೈನಿಕರೊಂದಿಗೆ ಶೀಘ್ರದಲ್ಲೇ ಗಾಜಾ ಪಟ್ಟಿಯ ಮೇಲೆ ದಾಳಿ ಮಾಡಲು ಇಸ್ರೇಲಿ ಮಿಲಿಟರಿ ಸಿದ್ಧತೆಗಳನ್ನು ಪ್ರಾರಂಭಿಸಿದೆ ಎನ್ನಲಾಗಿದೆ. ಅಂತೆಯೇ ಪ್ರಸ್ತುತ ಹಮಾಸ್ ಭಯೋತ್ಪಾದಕ ಗುಂಪಿನ ಉನ್ನತ

ಗಾಜಾಪಟ್ಟಿ ವಶಕ್ಕೆ ಇಸ್ರೇಲ್ ಸೇನೆಗೆ ಆದೇಶ: ವರದಿ Read More »

235 ಭಾರತೀಯರನ್ನು ಹೊತ್ತ ಎರಡನೇ ವಿಮಾನ ಭಾರತಕ್ಕೆ ಆಗಮನ

ನವದೆಹಲಿ: ‘ಆಪರೇಷನ್ ಅಜಯ್’ ಭಾಗವಾಗಿ ಆಯೋಜಿಸಲಾಗಿದ್ದ ವಿಶೇಷ ವಿಮಾನದಲ್ಲಿ ಭಾರತೀಯರ ಎರಡನೇ ತಂಡ ಇಂದು ಮುಂಜಾನೆ ಯುದ್ಧ ಪೀಡಿತ ಇಸ್ರೇಲ್‌ನಿಂದ ಸುರಕ್ಷಿತವಾಗಿ ಮನೆಗೆ ಮರಳಿದರು. ಎರಡು ಶಿಶುಗಳು ಸೇರಿದಂತೆ 235 ಭಾರತೀಯರನ್ನು ಹೊತ್ತ ವಿಮಾನ ಶನಿವಾರ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್‌ ಇಸ್ರೇಲ್ ಮೇಲೆ ದಾಳಿ ನಡೆಸಿದ ಬಳಿಕ ಆರಂಭವಾದ ಯುದ್ದದ ಬಳಿಕ ಇಸ್ರೇಲ್ ನಲ್ಲಿ ಸಾವಿರಾರು ಭಾರತೀಯರು ಸಿಲುಕಿಕೊಂಡಿದ್ದರು ಆ ಬಳಿಕ ಭಾರತ ತಮ್ಮ ದೇಶದ

235 ಭಾರತೀಯರನ್ನು ಹೊತ್ತ ಎರಡನೇ ವಿಮಾನ ಭಾರತಕ್ಕೆ ಆಗಮನ Read More »

ಪಠಾಣ್ ಕೋಟ್ ದಾಳಿಯ ಮಾಸ್ಟರ್ ಮೈಂಡ್ ಪಾಕಿನಲ್ಲಿ ಹತ್ಯೆ!

ನವದೆಹಲಿ: ಪಠಾಣ್ ಕೋಟ್ ದಾಳಿಯ ಮಾಸ್ಟರ್ ಮೈಂಡ್ ಮತ್ತು ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾದ ಶಾಹಿದ್ ಲತೀಫ್’ನನ್ನು ಪಾಕಿಸ್ತಾನದ ಸಿಯಾಲ್ಕೋಟ್’ನಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಶಾಹಿದ್ ಲತೀಫ್ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಇಎಂ)ನ ಪ್ರಮುಖ ಸದಸ್ಯ. ಭಾರತದಲ್ಲಿ 16 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ ನಂತರ ಲತೀಫ್ ನನ್ನು 2010ರಲ್ಲಿ ವಾಘಾ ಮೂಲಕ ಗಡಿಪಾರು ಮಾಡಲಾಯಿತು. 1994ರ ನವೆಂಬರ್ 12ರಂದು ಆತನನ್ನು ಬಂಧಿಸಲಾಗಿತ್ತು. ಲತೀಫ್ ನನ್ನು ಭಾರತ ಸರ್ಕಾರವು ಭಯೋತ್ಪಾದಕ ಎಂದು ಪಟ್ಟಿ ಮಾಡಿದೆ

ಪಠಾಣ್ ಕೋಟ್ ದಾಳಿಯ ಮಾಸ್ಟರ್ ಮೈಂಡ್ ಪಾಕಿನಲ್ಲಿ ಹತ್ಯೆ! Read More »

ಪ್ರಧಾನಿ ಮೋದಿಗೆ ಕರೆ ಮಾಡಿದ ಇಸ್ರೇಲ್ ಪ್ರಧಾನಿ

ಹೊಸದಿಲ್ಲಿ: ಇಸ್ರೇಲ್ ದೇಶ ಎದುರಿಸುತ್ತಿರುವ ಸಂಕಷ್ಟದ ಸನ್ನಿವೇಶದಲ್ಲಿ ಭಾರತ ದೇಶದ ಜನರು ಇಸ್ರೇಲ್ ಜನತೆಯ ಪರವಾಗಿ ಬಲವಾಗಿ ನಿಲ್ಲುತ್ತಾರೆ ಎಂದು ಪ್ರಧಾನಿ ಮೋದಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಭರವಸೆ ನೀಡಿದ್ದಾರೆ. ಇಸ್ರೇಲ್ ಪ್ರಧಾನಿ ಜೊತೆ ದೂರವಾಣಿ ಮೂಲಕ ಮಾತನಾಡಿದ ಪ್ರಧಾನಿ ಮೋದಿ ಅವರಿಗೆ ಇಸ್ರೇಲ್‌ನ ಸದ್ಯದ ಸ್ಥಿತಿಗತಿಗಳ ಕುರಿತಾಗಿ ಬೆಂಜಮಿನ್ ನೆತನ್ಯಾಹು ಮಾಹಿತಿ ನೀಡಿದರು. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ದೂರವಾಣಿ ಕರೆ ಮಾಡಿದ್ದಕ್ಕೆ

ಪ್ರಧಾನಿ ಮೋದಿಗೆ ಕರೆ ಮಾಡಿದ ಇಸ್ರೇಲ್ ಪ್ರಧಾನಿ Read More »

ಯುದ್ಧಪೀಡಿತ ಇಸ್ರೇಲ್’ನಲ್ಲಿದ್ದಾರೆ 12 ಸಾವಿರ ಕನ್ನಡಿಗರು: ರಕ್ಷಣೆಗಾಗಿ ಹೀಗಿದೆ ವ್ಯವಸ್ಥೆ

ಕಾರವಾರ: ಯುದ್ಧ ಪೀಡಿತ ಇಸ್ರೇಲ್‌ನ ವಿವಿಧ ನಗರಗಳಲ್ಲಿ 12,000ಕ್ಕೂ ಹೆಚ್ಚು ಕನ್ನಡಿಗರಿದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆಂದು ತಿಳಿದುಬಂದಿದೆ. ಇಸ್ರೇಲ್’ನಲ್ಲಿ ಸಿಲುಕಿರುವ ಕನ್ನಡಿಗರಿಗೆ ಭಾರತ ಮತ್ತು ಇಸ್ರೇಲಿ ಸರ್ಕಾರಗಳು ಬೆಂಬಲ ನೀಡುತ್ತಿದ್ದು, ಭಾರತೀಯ ರಾಯಭಾರ ಕಚೇರಿ ಟೋಲ್-ಫ್ರೀ ಸಂಖ್ಯೆಯನ್ನೂ ನೀಡಿದೆ. ಯಾವುದೇ ತುರ್ತು ಸಂದರ್ಭದಲ್ಲಿ ಈ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಸುರಕ್ಷಿತ ಸ್ಥಳದಲ್ಲಿರುವ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಕರೆ ಮಾಡಿ ತಾವು ಸುರಕ್ಷಿತರಾಗಿರುವ ಬಗ್ಗೆ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆಂದು ತಿಳಿದುಬಂದಿದೆ. ಟೆಲ್ ಅವೀವ್’ನಲ್ಲಿರುವ ಕನ್ನಡಿಗ ದೀಪಕ್ ಪಿಂಟೋ ಅವರು ದೂರವಾಣಿ

ಯುದ್ಧಪೀಡಿತ ಇಸ್ರೇಲ್’ನಲ್ಲಿದ್ದಾರೆ 12 ಸಾವಿರ ಕನ್ನಡಿಗರು: ರಕ್ಷಣೆಗಾಗಿ ಹೀಗಿದೆ ವ್ಯವಸ್ಥೆ Read More »

ಇಸ್ರೇಲ್ – ಹಮಾಸ್ ಘರ್ಷಣೆ: ಕೇರಳ ಮೂಲದ ನರ್ಸ್’ಗೆ ಗಂಭೀರ ಗಾಯ

ಗಾಜಾ ಪಟ್ಟಿ: ಇಸ್ರೇಲ್ ಹಾಗೂ ಹಮಾಸ್ ನಡುವೆ ನಡೆಯುತ್ತಿರುವ ಘರ್ಷಣೆಯ ವೇಳೆ ಕೇರಳ ಮೂಲದ ನರ್ಸ್ ಒಬ್ಬರು ಗಂಭೀರ ಗಾಯಗೊಂಡಿದ್ದಾರೆ. ಈ ಕುರಿತು ಮಾಹಿತಿ ಲಭ್ಯವಾಗಿದ್ದು, ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿರುವ ಕೇರಳದ ಮೂಲದ ಮಹಿಳೆ ಶೀಜಾ ಆನಂದ್ ಭಾರತದಲ್ಲಿ ವಾಸಿಸುತ್ತಿರುವ ತನ್ನ ಪತಿಯೊಂದಿಗೆ ವೀಡಿಯೊ ಕರೆ ಮಾಡಿ ಸಂಭಾಷಣೆ ನಡೆಸುತ್ತಿದ್ದ ವೇಳೆ ಪ್ಯಾಲೆಸ್ತೀನಿನ ಹಮಾಸ್‌ ದಾಳಿ ಮಾಡಿದ್ದು ಪರಿಣಾಮ ಗಂಭೀರ ಗಾಯಗೊಂಡಿದ್ದಾರೆ. ಏಳು ವರ್ಷಗಳಿಂದ ಇಸ್ರೇಲ್‌ನಲ್ಲಿರುವ ಶೀಜಾ ಆನಂದ್ ಶನಿವಾರ ಮುಂಜಾನೆ ಇಸ್ರೇಲ್‌ನ ಮೇಲೆ ಹಮಾಸ್ ಅನಿರೀಕ್ಷಿತ

ಇಸ್ರೇಲ್ – ಹಮಾಸ್ ಘರ್ಷಣೆ: ಕೇರಳ ಮೂಲದ ನರ್ಸ್’ಗೆ ಗಂಭೀರ ಗಾಯ Read More »

ಇಸ್ರೇಲ್’ನಲ್ಲಿ 600 ದಾಟಿದ ನಾಗರಿಕರ ಸಾವು, ಗಾಜಾದಲ್ಲಿ 300ಕ್ಕೂ ಹೆಚ್ಚು ಮೃತ್ಯು! | ಗುಪ್ತಚರ ವೈಫಲ್ಯಕ್ಕೆ ಬಲಿಯಾಯಿತೇ ಇಸ್ರೇಲ್??

ಟೆಲ್ ಅವಿವ್: ಇಸ್ರೇಲಿ ಸೈನಿಕರು ನಿನ್ನೆ ಭಾನುವಾರ ದಕ್ಷಿಣ ಇಸ್ರೇಲ್ನ ಬೀದಿಗಳಲ್ಲಿ ಹಮಾಸ್ ಉಗ್ರರ ವಿರುದ್ಧ ಯುದ್ಧಕ್ಕಿಳಿದಿದ್ದು, ಗಾಜಾದಲ್ಲಿ ಕಟ್ಟಡಗಳನ್ನು ನೆಲಸಮಗೊಳಿಸಿದ ಪ್ರತೀಕಾರದ ದಾಳಿಯನ್ನು ಪ್ರಾರಂಭಿಸಿದರು. ಆದರೆ ಉತ್ತರ ಇಸ್ರೇಲ್ನಲ್ಲಿ ಲೆಬನಾನ್ನ ಹಿಜ್ಬುಲ್ಲಾ ಉಗ್ರಗಾಮಿ ಗುಂಪಿನೊಂದಿಗೆ ನಡೆದ ದಾಳಿ ದೊಡ್ಡ ಯುದ್ಧಕ್ಕೆ ದಾರಿಮಾಡಿಕೊಟ್ಟಿತು. ಗಾಜಾದಿಂದ ಅನಿರೀಕ್ಷಿತ ದಾಳಿಯ 24 ಗಂಟೆಗಳ ನಂತರ ಇನ್ನೂ ದಾಳಿ ಮುಂದುವರಿದಿದೆ. ಇದರಲ್ಲಿ ಹಮಾಸ್ ಉಗ್ರಗಾಮಿಗಳು ಇಸ್ರೇಲ್ನ ಭದ್ರತಾ ತಡೆಗೋಡೆಯನ್ನು ಭೇದಿಸಿ ಮತ್ತು ಹತ್ತಿರದ ಸ್ಥಳಗಳ ಮೂಲಕ ಆಗಮಿಸಿದರು. ಇಸ್ರೇಲ್ನಲ್ಲಿ ಕನಿಷ್ಠ 600

ಇಸ್ರೇಲ್’ನಲ್ಲಿ 600 ದಾಟಿದ ನಾಗರಿಕರ ಸಾವು, ಗಾಜಾದಲ್ಲಿ 300ಕ್ಕೂ ಹೆಚ್ಚು ಮೃತ್ಯು! | ಗುಪ್ತಚರ ವೈಫಲ್ಯಕ್ಕೆ ಬಲಿಯಾಯಿತೇ ಇಸ್ರೇಲ್?? Read More »

error: Content is protected !!
Scroll to Top