ವಿದೇಶ

ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ : ಆಸ್ಪತ್ರೆಗೆ ದಾಖಲು

ಆರೋಗ್ಯ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಪಾಕಿಸ್ತಾನದ ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಟ್ಟುನಿಟ್ಟಿನ ಭದ್ರತೆಯಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸದ್ಯಕ್ಕೆ ಆಸ್ಪತ್ರೆಯ ಮಹಡಿಯಲ್ಲಿ ದಾವೂದ್ ನನ್ನು ಮಾತ್ರ ಇರಿಸಲಾಗಿದ್ದು ಹತ್ತಿರದ ಕುಟುಂಬ ಸದಸ್ಯರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗಿದೆ. ಆತ ವಿಷ ಸೇವಿಸಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದರೂ ಯಾವುದೇ ದೃಢೀಕರಣವಿಲ್ಲ. ಕ್ರಿಮಿನಲ್ ಚಟುವಟಿಕೆಗಳಿಗೆ ಹೆಸರಾದ ಕುಖ್ಯಾತ ವ್ಯಕ್ತಿ ಕಳೆದ ಎರಡು ದಿನಗಳಿಂದ ವೈದ್ಯಕೀಯ ಆರೈಕೆಯಲ್ಲಿದ್ದು, ವಿಷ ಸೇವಿಸಿರಬಹುದು […]

ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ : ಆಸ್ಪತ್ರೆಗೆ ದಾಖಲು Read More »

ಗಾಝಾದಲ್ಲಿ ಕದನ ವಿರಾಮ ಪರ ಭಾರತ ಮತ!

ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ತಕ್ಷಣದ ಮಾನವೀಯ ಕದನ ವಿರಾಮ ಘೋಷಿಸುವ ಮತ್ತು ಎಲ್ಲಾ ಒತ್ತೆಯಾಳುಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸುವ ಕರಡು ನಿರ್ಣಯದ ಪರವಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಮತ ಚಲಾಯಿಸಿದೆ. 193 ಸದಸ್ಯರ ಸಾಮಾನ್ಯ ಸಭೆಯಲ್ಲಿ 153 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದರೆ ಕೇವಲ 10 ದೇಶಗಳು ಮಾತ್ರ ವಿರುದ್ಧವಾಗಿ ಮತ ಚಲಾಯಿಸಿದ್ದವು. 23 ದೇಶಗಳು ಮತದಾನದಿಂದ ಹೊರಗುಳಿದವು. ನಿರ್ಣಯವನ್ನು ವಿರೋಧಿಸಿ ಅಮೆರಿಕ, ಇಸ್ರೇಲ್ ಜೊತೆಗೆ ಆಸ್ಟ್ರಿಯಾ, ಝೆಕ್ಚಿಯಾ, ಗ್ವಾಟೆಮಾಲಾ, ಲೈಬೀರಿಯಾ, ಮೈಕ್ರೋನ್ಸಿಯಾ, ನೌರು,

ಗಾಝಾದಲ್ಲಿ ಕದನ ವಿರಾಮ ಪರ ಭಾರತ ಮತ! Read More »

ತೈಲ ದಾಸ್ತಾನು ಮಾಡಿದರೆ ಜೈಲು!

ತೈಲದ ತೀವ್ರ ಕೊರತೆ ತಲೆದೋರಿದ ಹಿನ್ನೆಲೆಯಲ್ಲಿ ಲೈಸೆನ್ಸ್ ಪಡೆಯದೆ 180 ಲೀಟರಿಗಿಂತ ಅಧಿಕ ಪೆಟ್ರೋಲ್ ಸಂಗ್ರಹಿಸಿಟ್ಟುಕೊಂಡವರಿಗೆ ಜೈಲುಶಿಕ್ಷೆ ವಿಧಿಸುವುದಾಗಿ ವಿಧಿಸುವುದಾಗಿ ಮ್ಯಾನ್ಮಾರ್ ಸೇನಾಡಳಿತ ಘೋಷಿಸಿದೆ. ಲೈಸೆನ್ಸ್ ಪಡೆಯದೆ ಪೆಟ್ರೋಲ್ ಉತ್ಪನ್ನಗಳ ಸಂಗ್ರಹಣೆ ಮತ್ತು ಸಾಗಣೆ ಮಾಡುವುದನ್ನು ಪರಿಶೀಲಿಸುವ ಕಾರ್ಯಕ್ಕೆ ಪೆಟ್ರೋಲಿಯಂ ಉತ್ಪನ್ನಗಳ ನಿಯಂತ್ರಣ ಪ್ರಾಧಿಕಾರ ರವಿವಾರ ಚಾಲನೆ ನೀಡಿದೆ. ಲೈಸೆನ್ಸ್ ಇಲ್ಲದೆ 180 ಲೀಟರ್ ಗೂ ಅಧಿಕ ಪೆಟ್ರೋಲಿಯಂ ಉತ್ಪನ್ನಗಳನ್ನು ಸಂಗ್ರಹಿಸುವಾಗ ಅಥವಾ ಸಾಗಿಸುವಾಗ ಸಿಕ್ಕಿಬಿದ್ದವರಿಗೆ 1 ವರ್ಷ ಜೈಲುಶಿಕ್ಷೆ, 2,370 ಡಾಲರ್ ದಂಡ ವಿಧಿಸಲಾಗುವುದು ಎಂದು

ತೈಲ ದಾಸ್ತಾನು ಮಾಡಿದರೆ ಜೈಲು! Read More »

ಟಿಬೆಟ್‌ ಹೆಸರನ್ನೇ ಬದಲಿಸಿದ ಚೀನಾ!

ಟಿಬೆಟ್‌ ಮೇಲಿನ ತನ್ನ ಆಕ್ರಮಣವನ್ನು ಮತ್ತಷ್ಟು ಮುಂದುವರೆಸಿರುವ ಚೀನಾ ಸರ್ಕಾರ, ಇದೀಗ ಟಿಬೆಟ್ ಹೆಸರನ್ನೇ ಬದಲಾಯಿಸಿದೆ. ಬಹಳ ವರ್ಷಗಳಿಂದಲೂ ಟಿಬೆಟ್‌ ಮೇಲೆ ನಿಯಂತ್ರಣ ಸಾಧಿಸಿದ್ದರೂ, ಟಿಬೆಟ್‌ ಕುರಿತ ಮಾಹಿತಿ ನೀಡುವಾಗ ಟಿಬೆಟ್‌ ಎಂದೇ ಪ್ರಸ್ತಾಪಿಸಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಟಿಬೆಟ್‌ ಕುರಿತ ಶ್ವೇತಪತ್ರದಲ್ಲಿ ಟಿಬೆಟ್‌ನ ಹೆಸರಿನ ಇಂಗ್ಲಿಷ್‌ ಭಾವಾನುವಾದ `ಕ್ಸಿ ಜಾಂಗ್‌’ ಎಂದು ಪ್ರಸ್ತಾಪಿಸಲಾಗಿದೆ. ಈ ಮೂಲಕ ಟಿಬೆಟ್‌ ಹೆಸರನ್ನು ಅಧಿಕೃತವಾಗಿ ಬದಲಾಯಿಸುವ ಹುನ್ನಾರ ನಡೆಸಿದೆ ಎನ್ನಲಾಗಿದೆ. ಚೀನಾ ಈ ಹೆಸರನ್ನು ಶ್ವೇತಪತ್ರಗಳಲ್ಲಿ ಬಳಸಿರುವ ಹಿನ್ನೆಲೆಯಲ್ಲಿ

ಟಿಬೆಟ್‌ ಹೆಸರನ್ನೇ ಬದಲಿಸಿದ ಚೀನಾ! Read More »

ಪಾಕ್ ಜೊತೆ ಸಂಪರ್ಕ: ನಾಲ್ವರ ಬಂಧನ!

ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿರುವ ನಾಲ್ಕು ಮಂದಿಯನ್ನು ಜಿಲ್ಲೆಯಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪಾಕಿನ ಸೈಬರ್‌ ಅಪರಾಧ ಜಾಲದೊಂದಿಗೆ ನಂಟು ಹೊಂದಿದ್ದ ಬಂಧಿತರು ಜಾರ್ಖಂಡಿನ ರಾಜಧಾನಿ ರಾಂಚಿಯಿಂದ 105 ಕಿ.ಮೀ ದೂರದಲ್ಲಿರುವ ಕೊರ್ರಾ ಪ್ರದೇಶದಲ್ಲಿ ಸೆರೆಯಾಗಿದ್ದಾರೆ. ಈ ಗುಂಪು ಪಂಜಾಬ್‌ನಲ್ಲಿ ವ್ಯಕ್ತಿಯೊಬ್ಬರಿಗೆ ₹ 1.63 ಲಕ್ಷ ವಂಚಿಸಿತ್ತು. ಆದರೆ, ಅದಕ್ಕಾಗಿ ಬಳಸಿದ್ದ ಮೊಬೈಲ್‌ ಸಂಖ್ಯೆಯು ಜಾರ್ಖಂಡ್‌ ಪ್ರದೇಶದೊಂದಿಗೆ ಸಂಪರ್ಕ ಹೊಂದಿರುವುದು ಕಂಡುಬಂದಿತ್ತು. ಕಾರ್ಯಾಚರಣೆ ನಡೆಸಿದ ತನಿಖಾ ತಂಡ, ಬಂಧಿತರಿಂದ ಒಂದು ಕಾರು, ಎರಡು ದ್ವಿಚಕ್ರ ವಾಹನ, 10 ಮೊಬೈಲ್‌

ಪಾಕ್ ಜೊತೆ ಸಂಪರ್ಕ: ನಾಲ್ವರ ಬಂಧನ! Read More »

ಪುಟಿನ್ ಮತ್ತೆ ರಷ್ಯಾ ಅಧ್ಯಕ್ಷ!!??

2024ರ ಚುನಾವಣೆಯಲ್ಲಿ ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಬಗ್ಗೆ ದೃಢಪಡಿಸಿದ್ದು, ಮತ್ತೊಮ್ಮೆ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದ್ದಾರೆ. ಸುದೀರ್ಘ ಸೇವೆ ಸಲ್ಲಿಸಿರುವ ವಿಶ್ವದ ಕೆಲವೇ ಕೆಲವು ನಾಯಕರ ಪೈಕಿ ಪುಟಿನ್ ಗುರುತಿಸಿಕೊಂಡಿದ್ದಾರೆ. ಶುಕ್ರವಾರ ಉಕ್ರೇನ್ ಯುದ್ಧದಲ್ಲಿ ಸೇವೆ ಸಲ್ಲಿಸಿದ ಸೈನಿಕರ ಜೊತೆ ಮಾತನಾಡುತ್ತಾ, ತಾನು ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಇದೇ ಸಂದರ್ಭ ಝೋಗಾ ಅವರಿಗೆ ರಷ್ಯಾದ ಅತ್ಯುನ್ನತ ಮಿಲಿಟರಿ ಗೌರವವಾದ ಹೀರೋ ಆಫ್ ರಷ್ಯಾ ಗೋಲ್ಡ್ ಸ್ಟಾರ್ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ

ಪುಟಿನ್ ಮತ್ತೆ ರಷ್ಯಾ ಅಧ್ಯಕ್ಷ!!?? Read More »

ಚೀನಾಗೆ ಮತ್ತೊಂದು ಜಾಗತಿಕ ಹಿನ್ನಡೆ! | ಭಾರತದ ಸುತ್ತ ಆರ್ಥಿಕ ಪಥ ನಿರ್ಮಿಸುವ ‘ಒನ್ ಬೆಲ್ಟ್’ ಯೋಜನೆಗೆ ಮತ್ತೊಂದು ಹೊಡೆತ

ಚೀನಾಗೆ ಮತ್ತೊಂದು ಜಾಗತಿಕ ಹಿನ್ನಡೆಯಾಗಿದ್ದು, ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮಹತ್ವಾಕಾಂಕ್ಷಿ ಯೋಜನೆ ಒನ್‌ ಬೆಲ್ಟ್‌ನಿಂದ ಇಟಲಿ ದೇಶ ಹೊರಬಿದ್ದಿದೆ. ಚೀನಾದ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆ ಒನ್‌ ಬೆಲ್ಟ್- ಒನ್‌ ರೋಡ್‌ ಯೋಜನೆಯಿಂದ ಇಟಲಿ ನಿರ್ಗಮಿಸಿದ್ದು, ಭಾರತದ ಸುತ್ತ ಆರ್ಥಿಕ ಪಥ ನಿರ್ಮಿಸಿ ಹಿಡಿತ ಸಾಧಿಸುವ ಚೀನಾದ ಹುನ್ನಾರಕ್ಕೆ ಇಟಲಿ ನಿರ್ಗಮನ ಭಾರೀ ಹೊಡೆತ ನೀಡಿದಂತಾಗಿದೆ.  ಯೂರೋಪ್‌ ಮತ್ತು ಏಷ್ಯಾಗಳನ್ನು ಸಂಪರ್ಕಿಸುವ ಪುರಾತನ ವ್ಯಾಪಾರ ಮಾರ್ಗಗಳನ್ನು ಪುನರುಜ್ಜೀವನಗೊಳಿಸುವ ಜಾಗತಿಕ ಮೂಲಸೌಕರ್ಯ ಯೋಜನೆ ಇದಾಗಿದ್ದು, ಚೀನಾದ ಜತೆಗೆ ಈ

ಚೀನಾಗೆ ಮತ್ತೊಂದು ಜಾಗತಿಕ ಹಿನ್ನಡೆ! | ಭಾರತದ ಸುತ್ತ ಆರ್ಥಿಕ ಪಥ ನಿರ್ಮಿಸುವ ‘ಒನ್ ಬೆಲ್ಟ್’ ಯೋಜನೆಗೆ ಮತ್ತೊಂದು ಹೊಡೆತ Read More »

ಮೋದಿಗೆ ಬೇಡಿ ಹಾಕುವೆ ಎಂದ ಪಾಕ್ ಸೈನ್ಯಾಧಿಕಾರಿಯ ಬಾಯಿಗೆ ಬೀಗ ಜಡಿದ ನೆಟ್ಟಿಗರು!

ಭಾರತ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ನಾಲಿಗೆ ಹರಿಬಿಟ್ಟು ಮಂದಿಯ ಮುಂದೆ ಚಪ್ಪಾಳೆ ಗಿಟ್ಟಿಸಿಕೊಂಡ ಪಾಕಿಸ್ತಾನದ ಸೇನಾಧಿಕಾರಿಯೊಬ್ಬ ಆನ್‌ಲೈನ್‌ನಲ್ಲಿ ಭರ್ಜರಿ ಟ್ರೋಲ್‌ ಆಗುತ್ತಿದ್ದಾನೆ. ಪಾಕಿಸ್ತಾನದ ರಾಜಕಾರಣಿಗಳು ಹಾಗೂ ಕ್ರಿಕೆಟಿಗರು ಭಾರತದ ವಿರುದ್ಧ ಅಬ್ಬರದ ಹೇಳಿಕೆಗಳನ್ನು ನೀಡುವುದು ಸಾಮಾನ್ಯ. ಕಡೆಗೆ ತಮ್ಮ ನಾಲಿಗೆ ತಾವೇ ಕಚ್ಚಿಕೊಳ್ಳುವುದೂ ಸಾಮಾನ್ಯ. ಇದೂ ಕೂಡ ಅಂಥದೇ ಘಟನೆ. ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಯೊಬ್ಬ ಒಂದಷ್ಟು ಜನರ ಗುಂಪಿನ ನಡುವೆ “ಭಾರತವನ್ನು ವಶಪಡಿಸಿಕೊಳ್ಳುತ್ತೇವೆ, ಪ್ರಧಾನಿ ನರೇಂದ್ರ ಮೋದಿಯನ್ನು ಬಂಧಿಸುತ್ತೇವೆ ಎಂದೆಲ್ಲಾ ಹೇಳಿದ್ದಾನೆ.

ಮೋದಿಗೆ ಬೇಡಿ ಹಾಕುವೆ ಎಂದ ಪಾಕ್ ಸೈನ್ಯಾಧಿಕಾರಿಯ ಬಾಯಿಗೆ ಬೀಗ ಜಡಿದ ನೆಟ್ಟಿಗರು! Read More »

ಹೆಚ್ಚುತ್ತಿದೆ ಭಾರತ – ಪಾಕ್ ಪ್ರೇಮ ಪ್ರಸಂಗ!! | ಕೋಲ್ಕತಾ ನಿವಾಸಿಯನ್ನು ವರಿಸಲು ಬಂದ ಕರಾಚಿಯ ಜವೇರಿಯಾ!

ಚಂಡೀಗಢ: ಭಾರತ-ಪಾಕಿಸ್ಥಾನಗಳ ನಡುವಿನ ಪ್ರೇಮಪ್ರಸಂಗಗಳು ಹೆಚ್ಚುತ್ತಿವೆ. ಕೆಲವು ತಿಂಗಳ ಹಿಂದೆ ಪಾಕಿಸ್ಥಾನಿ ಸೀಮಾ ಹೈದರ್‌ ಭಾರತಕ್ಕೆ ಆಗಮಿಸಿ, ಸಚಿನ್‌ ಮೀನಾರನ್ನು ವಿವಾಹವಾಗಿದ್ದಾರೆ. ಅದರ ಬೆನ್ನಲ್ಲೇ ರಾಜಸ್ಥಾನದ ಅಂಜು ಎಂಬಾಕೆ ಪಾಕಿಸ್ಥಾನಕ್ಕೆ ತೆರಳಿದ್ದರು. ಇದೀಗ ಕರಾಚಿಯ ಜವೇರಿಯಾ ಖಾನುಮ್‌ ವಾಘಾ-ಅಟ್ಟಾರಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಮಂಗಳವಾರ ಭಾರತಕ್ಕೆ ಆಗಮಿಸಿದ್ದಾರೆ. ಅವರ ಉದ್ದೇಶ ಕೋಲ್ಕತಾದಲ್ಲಿರುವ ತಮ್ಮ ಪ್ರಿಯಕರ ಸಮೀರ್‌ ಖಾನ್‌ರನ್ನು ವಿವಾಹವಾಗುವುದು. ಜವೇರಿಯಾರನ್ನು ಅಮೃತಸರ ಜಿಲ್ಲೆಯ ಅಟ್ಟಾರಿಯಲ್ಲಿ ವರನ ಕಡೆಯವರು ಆತ್ಮೀಯವಾಗಿ ಬರಮಾಡಿಕೊಂಡರು. ಮುಂದಿನ ವರ್ಷ ಜನವರಿಯಲ್ಲಿ ಸಮೀರ್‌ ಖಾನ್‌ರೊಂದಿಗೆ

ಹೆಚ್ಚುತ್ತಿದೆ ಭಾರತ – ಪಾಕ್ ಪ್ರೇಮ ಪ್ರಸಂಗ!! | ಕೋಲ್ಕತಾ ನಿವಾಸಿಯನ್ನು ವರಿಸಲು ಬಂದ ಕರಾಚಿಯ ಜವೇರಿಯಾ! Read More »

ಗಾಜಾಗೆ ವಿಶ್ವಸಂಸ್ಥೆಯಿಂದ ರಾಕೆಟ್ ಪೂರೈಕೆ!!! | ಪರಿಹಾರದ ಬಾಕ್ಸ್’ನಲ್ಲಿ ಅಡಗಿಸಿಟ್ಟಿದ್ದ ರಾಕೆಟ್ ಪತ್ತೆ!!

ಗಾಜಾ: ಗಾಜಾಗೆ ವಿಶ್ವಸಂಸ್ಥೆಯ ಪರಿಹಾರ ಕಾರ್ಯಕ್ರಮ ಏಜೆನ್ಸಿಯಿಂದ ಪೂರೈಕೆಯಾಗುತ್ತಿದ್ದ ಬಾಕ್ಸ್ ಗಳಲ್ಲಿ ರಾಕೆಟ್ ಗಳನ್ನು ಅಡಗಿಸಿ ಇಡಲಾಗಿತ್ತು ಎಂದು ಇಸ್ರೇಲಿ ರಕ್ಷಣಾ ಪಡೆಗಳು (ಐಡಿಎಫ್) ಆರೋಪಿಸಿದೆ. ತನ್ನ 261ನೇ ಬ್ರಿಗೇಡ್‌ನ ಯುದ್ಧ ತಂಡದ 7007ನೇ ಬೆಟಾಲಿಯನ್‌ನ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ, ಡಜನ್‌ಗಟ್ಟಲೆ ರಾಕೆಟ್‌ಗಳನ್ನು UNRWA (ಗಾಜಾದಲ್ಲಿ ಯುಎನ್ ರಿಲೀಫ್ ವರ್ಕರ್ಸ್ ಏಜೆನ್ಸಿ) ಪೆಟ್ಟಿಗೆಗಳ ಅಡಿಯಲ್ಲಿ ಪತ್ತೆ ಮಾಡಿದೆ. ಪೆಟ್ಟಿಗೆಗಳ ಅಡಿಯಲ್ಲಿ ಸುಮಾರು 30 ಗ್ರಾಡ್ ಕ್ಷಿಪಣಿಗಳು (ರಷ್ಯನ್ ನಿರ್ಮಿತ ಸ್ವಯಂ ಚಾಲಿತ 122 ಎಂಎಂ ಮಲ್ಟಿಪಲ್ ರಾಕೆಟ್ ಲಾಂಚರ್)

ಗಾಜಾಗೆ ವಿಶ್ವಸಂಸ್ಥೆಯಿಂದ ರಾಕೆಟ್ ಪೂರೈಕೆ!!! | ಪರಿಹಾರದ ಬಾಕ್ಸ್’ನಲ್ಲಿ ಅಡಗಿಸಿಟ್ಟಿದ್ದ ರಾಕೆಟ್ ಪತ್ತೆ!! Read More »

error: Content is protected !!
Scroll to Top