ಮನರಂಜನೆ

ಬನ್ನೆಂಗಳದ ಸಮೃದ್ಧಿ ನಿವಾಸದಲ್ಲಿ ಭಾನುಮತಿ ಕಲ್ಯಾಣ ತಾಳಮದ್ದಳೆ

ಉಪ್ಪಿನಂಗಡಿ : ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಸುವರ್ಣ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಮಹಾಭಾರತ ಸರಣಿಯ 56ನೇ ತಾಳಮದ್ಧಳೆ ಭಾನುಮತಿ ಕಲ್ಯಾಣ  ಬನ್ನೆಂಗಳ ಸಮೃದ್ಧಿ ನಿವಾಸದಲ್ಲಿ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ಸುರೇಶ್ ರಾವ್. ಬಿ,ನಿತೀಶ್ ಕುಮಾರ್. ವೈ, ಹಿಮ್ಮೇಳದಲ್ಲಿ ದಿವಾಕರ ಆಚಾರ್ಯ ನೇರೆಂಕಿ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ, ಶ್ರೀಪತಿ ಭಟ್ ಉಪ್ಪಿನಂಗಡಿ, ಅರ್ಥಧಾರಿಗಳಾಗಿ ಪಾತಾಳ ಅಂಬಾ ಪ್ರಸಾದ್, ಗುಡ್ಡಪ್ಪ ಬಲ್ಯ (ಬಾಹ್ಲಿಕ ರಾಜ ), ಶ್ಶ್ರುತಿ  ವಿಸ್ಮಿತ್ (ವನಚರರು, ಮಂತ್ರಿ […]

ಬನ್ನೆಂಗಳದ ಸಮೃದ್ಧಿ ನಿವಾಸದಲ್ಲಿ ಭಾನುಮತಿ ಕಲ್ಯಾಣ ತಾಳಮದ್ದಳೆ Read More »

ಪುಷ್ಪ-2 ಸಿನೆಮಾ ನೋಡುವಾಗ ಅಭಿಮಾನಿಗಳ ನೂಕುನುಗ್ಗಲು : ಕಾಲ್ತುಳಿತಕ್ಕೆ ಮಹಿಳೆ ಬಲಿ

ಮಗನ ಸ್ಥಿತಿ ಚಿಂತಾಜನಕ; ಅನೇಕ ಮಂದಿಗೆ ಗಾಯ ಹೈದರಾಬಾದ್:‌ ಸ್ಟಾರ್‌ ನಟ ಅಲ್ಲು ಅರ್ಜುನ್‌ ಅಭಿನಯದ ಪುಷ್ಪ 2 ಸಿನೆಮಾದ ಪ್ರೀಮಿಯರ್‌ ಶೋ ವೇಳೆ ಜನರ ನೂಕುನುಗ್ಗಲು ಸಂಭವಿಸಿ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ.ಹೈದರಾಬಾದ್‌ನ ಆರ್‌ಟಿಸಿ ಕ್ರಾಸ್‌ರೋಡ್ಸ್‌ನ ಸಂಧ್ಯಾ ಥಿಯೇಟರ್‌ನಲ್ಲಿ ನಿನ್ನೆ ರಾತ್ರಿ ಈ ದುರಂತ ಸಂಭವಿಸಿದೆ. ಮೃತ ಮಹಿಳೆಯನ್ನು ದಿಲ್‌ಸುಖ್‌ನಗರದ ರೇವತಿ ಎಂದು ಗುರುತಿಸಲಾಗಿದೆ. ಪತಿ ಭಾಸ್ಕರ್ ಮತ್ತು ಇಬ್ಬರು ಮಕ್ಕಳೊಂದಿಗೆ ಸಿನೆಮಾಕ್ಕೆ ಬಂದಿದ್ದರು.ರಾತ್ರಿ 10.30ರ ಸುಮಾರಿಗೆ ಥಿಯೇಟರ್‌ನಲ್ಲಿ ಪ್ರೇಕ್ಷಕರು ಕಿಕ್ಕಿರಿದು ಸೇರಿದ್ದರು.

ಪುಷ್ಪ-2 ಸಿನೆಮಾ ನೋಡುವಾಗ ಅಭಿಮಾನಿಗಳ ನೂಕುನುಗ್ಗಲು : ಕಾಲ್ತುಳಿತಕ್ಕೆ ಮಹಿಳೆ ಬಲಿ Read More »

ಕೋಟಿಗಟ್ಟಲೆ ರೂಪಾಯಿ ವಂಚನೆ : ತುಳುಚಿತ್ರ ನಿರ್ಮಾಪಕನ ವಿರುದ್ಧ ಕೇಸ್‌

ಬಂಟ್ವಾಳದ ಉದ್ಯಮಿಗೆ ಕೋಟಿಗಳ ವ್ಯವಹಾರದ ಕಥೆ ಹೇಳಿ ವಂಚನೆ ಬೆಂಗಳೂರು: ತುಳು-ಕನ್ನಡ ಚಿತ್ರ ನಿರ್ಮಾಪಕ ಅರುಣ್‌ ರೈ ವಿರುದ್ಧ ಕೋಟಿಗಟ್ಟಲೆ ರೂಪಾಯಿ ವಂಚನೆ ಕೇಸ್‌ ದಾಖಲಾಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ತುಳುಚಿತ್ರ ಜೀಟಿಗೆ ಸಹಿತ ತುಳು ಮತ್ತು ಕನ್ನಡದಲ್ಲಿ ಕೆಲವು ಚಿತ್ರಗಳನ್ನು ನಿರ್ಮಿಸಿರುವ ಅರುಣ್‌ ರೈ ಬಂಟ್ವಾಳದ ಉದ್ಯಮಿಯೊಬ್ಬರನ್ನು ಕೋಟಿ ಕೋಟಿಗಳ ಲೆಕ್ಕದಲ್ಲಿ ವ್ಯವಹಾರದ ಕಥೆ ಹೇಳಿ ವಂಚಿಸಿದ್ದಾರೆ ಎನ್ನಲಾಗಿದೆ.ಅರುಣ್ ರೈ ವಿರುದ್ಧ ಬೆಂಗಳೂರಿನ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕನ್ನಡದ ವೀರಕಂಬಳ ಸಿನಿಮಾವನ್ನು ಸಹ

ಕೋಟಿಗಟ್ಟಲೆ ರೂಪಾಯಿ ವಂಚನೆ : ತುಳುಚಿತ್ರ ನಿರ್ಮಾಪಕನ ವಿರುದ್ಧ ಕೇಸ್‌ Read More »

ಧರ್ಮಸ್ಥಳ ವಸ್ತು ಪ್ರದರ್ಶನ ಮಂಟಪದಲ್ಲಿ ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ತಾಳಮದ್ದಳೆ

ಪುತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ರಾಜ್ಯಮಟ್ಟದ  ವಸ್ತು ಪ್ರದರ್ಶನ ಮಂಟಪದಲ್ಲಿ ಪುತ್ತೂರು  ಬೊಳುವಾರು  ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವಿಂಶತಿ ಸಂಭ್ರಮದ 15ನೇ ಸರಣಿ  ತಾಳಮದ್ದಳೆ “ಶರಸೇತುಬಂಧ ಜರಗಿತು. ಭಾಗವತರಾಗಿ ಮುರಳೀಕೃಷ್ಣ ಶಾಸ್ತ್ರಿ ತೆಂಕಬೈಲು, ಚೆಂಡೆ, ಮದ್ದಲೆಗಳಲ್ಲಿ ಪಿ.ಟಿ. ಜಯರಾಮ್ ಭಟ್, ಪಿ.ಜಿ.ಜಗನ್ನಿವಾಸ ರಾವ್, ಮುಮ್ಮೇಳದಲ್ಲಿ ಶುಭಾ ಅಡಿಗ (ಹನೂಮಂತ), ಪ್ರೇಮಲತಾರಾವ್ (ಶ್ರೀ ರಾಮ), ಕಿಶೋರಿ ದುಗ್ಗಪ್ಪ ನಡುಗಲ್ಲು (ಅರ್ಜುನ),  ಹರಿಣಾಕ್ಷಿ .ಜೆ.ಶೆಟ್ಟಿ (ವೃದ್ಧ ಬ್ರಾಹ್ಮಣ) ಭಾಗವಹಿಸಿದ್ದರು. ಸಂಘದ ನಿರ್ದೇಶಕ ಭಾಸ್ಕರ

ಧರ್ಮಸ್ಥಳ ವಸ್ತು ಪ್ರದರ್ಶನ ಮಂಟಪದಲ್ಲಿ ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ತಾಳಮದ್ದಳೆ Read More »

ನ.28 ರಿಂದ 30 : ಪುತ್ತೂರಿನಲ್ಲಿ ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವ

ಪುತ್ತೂರು: ಸಂಸಾರ ಜೋಡುಮಾರ್ಗ, ರೋಟರಿ ಪುತ್ತೂರು ಎಲೈಟ್ ಹಾಗೂ ನಿರತ ನಿರಂತ ಬಹುವಚನಂ ಆಶ್ರಯದಲ್ಲಿ ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವ ನ.28 ರಿಂದ 30 ರ ವರೆಗೆ ಪುತ್ತೂರು ಸುದಾನ ವಿದ್ಯಾಸಂಸ್ಥೆಯ ಎಡ್ವರ್ಡ್ ಹಾಲ್ ನಲ್ಲಿ ನಡೆಯಲಿದೆ. ನ.28 ರ ಗುರುವಾರ ಸಂಜೆ  ಸಾಗರದ  ಕಿನ್ನರ ಮೇಳ ತುಮರಿ ತಂಡದಿಂದ “ಇರುವೆ ಪುರಾಣ” ನಾಟಕ ಪ್ರದರ್ಶಗೊಳ್ಳಲಿದೆ.  ನ.29 ರ ಶುಕ್ರವಾರ ರಂಗಾಯಣ ಕಲಾವಿದ ರಾಕೇಶ್ ಆಚಾರ್ಯ ನಿರ್ದೇಶನದಲ್ಲಿ ವೀರಮಂಗಲ ಪಿಎಂ ಶ್ರೀ ಸರ್ಕಾರಿ ಹಿ.ಪ್ರಾ. ಶಾಲಾ ಮಕ್ಕಳಿಂದ “ರಂಗಗೀತೆಗಳ

ನ.28 ರಿಂದ 30 : ಪುತ್ತೂರಿನಲ್ಲಿ ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವ Read More »

ಕಾಳಿಕಾಂಬ ಯಕ್ಷಗಾನ  ಕಲಾಸೇವಾ ಸಂಘದಿಂದ ಮಹಾಭಾರತ ಸರಣಿ ತಾಳಮದ್ದಳೆ

ಹಾಸ್ಯಗಾರ ದಿ.ಬಂಟ್ವಾಳ ಜಯರಾಮ ಆಚಾರ್ಯರಿಗೆ ಶ್ರದ್ಧಾಂಜಲಿ  ಅರ್ಪಣೆ ಸುಳ್ಯ : ಹಾಸ್ಯಗಾರ ಬಂಟ್ವಾಳ ಜಯರಾಮ ಆಚಾರ್ಯರು ತೆಂಕುತಿಟ್ಟಿನ ಹಾಸ್ಯಗಾರರಲ್ಲಿ ಅನನ್ಯ ಸ್ಥಾನವನ್ನು ಪಡೆದ ಕಲಾವಿದರಾಗಿದ್ದು ಯಕ್ಷಗಾನದಲ್ಲಿ ಹಾಸ್ಯ ಪಾತ್ರಗಳನ್ನು ಮಾದರಿಯಾಗಿ ರೂಪಿಸಿದವರು. ಈ ಪರಂಪರೆಯನ್ನು ಮುಂದುವರಿಸುವ ಹಾಸ್ಯ ಕಲಾವಿದರು ಯಕ್ಷರಂಗದಲ್ಲಿ ಮೂಡಿ ಬರಬೇಕೆಂದು  ಜಯರಾಮ ಆಚಾರ್ಯರ ಮೂರು ದಶಕಗಳ ಒಡನಾಡಿ ಕಲಾವಿದ ಪಾತಾಳ ಅಂಬಾಪ್ರಸಾದ್ ತಿಳಿಸಿದರು.  ಕೊಂಬೋಟು ಕುಟುಂಬಸ್ಥರ ತರವಾಡು ಮನೆ ಉಬರಡ್ಕ ಸುಳ್ಯ ಇಲ್ಲಿ ವೃಶ್ಚಿಕ ಸಂಕ್ರಮಣದ ಪ್ರಯುಕ್ತ ಜರಗಿದ ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ

ಕಾಳಿಕಾಂಬ ಯಕ್ಷಗಾನ  ಕಲಾಸೇವಾ ಸಂಘದಿಂದ ಮಹಾಭಾರತ ಸರಣಿ ತಾಳಮದ್ದಳೆ Read More »

ಹಿರಿಯ ನಟ ಡೆಲ್ಲಿ ಗಣೇಶ್‌ ನಿಧನ

400ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಬಹಭಾಷಾ ಕಲಾವಿದ ಚೆನ್ನೈ : ನೂರಾರು ಸಿನಿಮಾಗಳಲ್ಲಿ ನಟಿಸಿರುವ ತಮಿಳು ನಟ ಡೆಲ್ಲಿ ಗಣೇಶ್ ನಿಧನ ಹೊಂದಿದ್ದಾರೆ. ಡೆಲ್ಲಿ ಗಣೇಶ್ ಅವರ ಪುತ್ರ ಮಹದೇವನ್ ಅವರು ‘ಡೆಲ್ಲಿ ಗಣೇಶ್ ಅವರು, ನಿನ್ನೆ ತಡರಾತ್ರಿ 11 ಗಂಟೆ ಸುಮಾರಿಗೆ ನಿಧನ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ಡೆಲ್ಲಿ ಗಣೇಶನ್ ಅವರಿಗೆ 80 ವರ್ಷ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಅವರು ಬಳಲುತ್ತಿದ್ದರು. 40 ವರ್ಷಗಳಿಗಿಂತಲೂ ಹೆಚ್ಚು ಸಮಯ ಅವರು ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. 400ಕ್ಕೂ

ಹಿರಿಯ ನಟ ಡೆಲ್ಲಿ ಗಣೇಶ್‌ ನಿಧನ Read More »

ಸಲ್ಮಾನ್‌ ಖಾನ್‌ಗೆ ಮತ್ತೆ ಜೀವ ಬೆದರಿಕೆ ಕರೆ

5 ಕೋಟಿ ರೂ. ಕೊಟ್ಟು, ದೇವಸ್ಥಾನಕ್ಕೆ ಹೋಗಿ ಕ್ಷಮೆ ಯಾಚಿಸದಿದ್ದರೆ ಫಿನಿಶ್‌ ಎಂದು ಧಮಕಿ ಮುಂಬಯಿ : ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ಮತ್ತೊಂದು ಜೀವ ಬೆದರಿಕೆ ಕರೆ ಬಂದಿದೆ. ಈ ಸಲ ಬೆದರಿಕೆ ಹಾಕಿದವ ಲಾರೆನ್ಸ್‌ ಬಿಷ್ಣೋಯ್‌ಯ ಸಹೋದರನ ಹೆಸರು ಹೇಳಿಕೊಂಡಿದ್ದಾನೆ. ಇದರೊಂದಿಗೆ ಕಳೆದ 10 ದಿನಗಳಲ್ಲಿ ಸಲ್ಮಾನ್‌ಗೆ ಮೂರು ಬೆದರಿಕೆಗಳು ಬಂದಿವೆ.ಮುಂಬಯಿ ಟ್ರಾಫಿಕ್‌ ಪೊಲೀಸರಿಗೆ ಕರೆ ಬಂದಿದ್ದು, ಸಲ್ಮಾನ್ ಖಾನ್ ದೇವಸ್ಥಾನಕ್ಕೆ ಹೋಗಿ ತಪ್ಪಾಯ್ತು ಎಂದು ಕ್ಷಮೆ ಕೇಳಬೇಕು ಅಥವಾ 5 ಕೋಟಿ ರೂ.

ಸಲ್ಮಾನ್‌ ಖಾನ್‌ಗೆ ಮತ್ತೆ ಜೀವ ಬೆದರಿಕೆ ಕರೆ Read More »

ಹನುಮನ ಅವತಾರದಲ್ಲಿ ರಿಷಬ್‌ ಶೆಟ್ಟಿ

ಕುತೂಹಲ ಕೆರಳಿಸಿದ ಕಾಂತಾರ ನಟನ ಲುಕ್‌ ಬೆಂಗಳೂರು : ಕಾಂತಾರ ಮೂಲಕ ದೇಶದಲ್ಲೇ ಸ್ಟಾರ್‌ ನಟನಾಗಿ ಗುರುತಿಸಿಕೊಂಡಿರುವ ರಿಷಬ್‌ ಶೆಟ್ಟಿ ಈಗ ಹನುಮಾನ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕಾಂತಾರ ಮುಂದಿನ ಭಾಗದ ಚಿತ್ರೀಕರಣ ನಡೆಯುತ್ತಿರುವಂತೆಯೇ ರಿಷಬ್‌ ಶೆಟ್ಟಿ ಜೈ ಹನುಮಾನ್‌ ಚಿತ್ರದಲ್ಲಿ ಹನುಮಾನ್‌ ಆಗಿ ನಟಿಸುತ್ತಿರುವ ಸುದ್ದಿ ಹೊರಬಿದ್ದಿದೆ.ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಹನು-ಮ್ಯಾನ್ ಸಿನಿಮಾ ಭಾರಿ ಯಶಸ್ಸು ಕಂಡಿತ್ತು. ಈ ಸಿನಿಮಾದ ಮುಂದುವರಿದ ಭಾಗ ‘ಜೈ ಹನುಮಾನ್’ ತೆರೆಗೆ ಬರಲಿದೆ. ಚಿತ್ರೀಕರಣ ನಡೆಯುತ್ತಿದ್ದು ಈ

ಹನುಮನ ಅವತಾರದಲ್ಲಿ ರಿಷಬ್‌ ಶೆಟ್ಟಿ Read More »

ಮಲ್ಟಿಪ್ಲೆಕ್ಸ್‌ಗಳಿಗೆ ಬೀಳಲಿದೆ ಮೂಗುದಾರ : ಟಿಕೆಟ್‌ ದರ ನಿಗದಿಗೆ ಮಾನದಂಡ

ಟಿಕೆಟ್‌ ದರ 250 ರೂ. ಮೀರದಂತೆ ಆದೇಶ ಹೊರಡಿಸುವ ಭರವಸೆ ಬೆಂಗಳೂರು : ಸಿಕ್ಕಾಪಟ್ಟೆ ಟಿಕೆಟ್‌ ದರ ವಸೂಲು ಮಾಡುವ ಮಲ್ಟಿಪ್ಲೆಕ್ಸ್‌ಗಳಿಗೆ ಮೂಗುದಾರ ಹಾಕಲು ಸರಕಾರ ಮುಂದಾಗಿದೆ. ಮುಂಬಯಿ ಬಿಟ್ಟರೆ ಕರ್ನಾಟಕದಲ್ಲೇ ಸಿನಿಮಾ ಟಿಕೆಟ್ ದರ ಹೆಚ್ಚಿದೆ. ರಾಜ್ಯದಲ್ಲಿ ಟಿಕೆಟ್ ದರ ನಿಗದಿಗೆ ಯಾವುದೇ ಮಾನದಂಡಗಳಿಲ್ಲರುವುದರಿಂದ ಮಲ್ಟಿಪ್ಲೆಕ್ಸ್‌ಗಳು ತಮಗಿಚ್ಚೆ ಬಂದಂತೆ ಟಿಕೆಟ್‌ ದರ ನಿಗದಿ ಮಾಡಿ ಪ್ರೇಕ್ಷಕರನ್ನು ಸುಲಿಯುತ್ತಿವೆ. ಸ್ಟಾರ್‌ ನಟರ ಸಿನೆಮಾ ಬಿಡುಗಡೆಯಾದರೆ ಟಿಕೆಟ್‌ ದರ 1000-1200 ಆಗುವುದೂ ಇದೆ. ಈ ಹಿನ್ನೆಲೆಯಲ್ಲಿ ಮಲ್ಟಿಪ್ಲೆಕ್ಸ್‌ಗಳ ಟಿಕೆಟ್‌

ಮಲ್ಟಿಪ್ಲೆಕ್ಸ್‌ಗಳಿಗೆ ಬೀಳಲಿದೆ ಮೂಗುದಾರ : ಟಿಕೆಟ್‌ ದರ ನಿಗದಿಗೆ ಮಾನದಂಡ Read More »

error: Content is protected !!
Scroll to Top