ಮನರಂಜನೆ

ಉಪ್ಪಿನಂಗಡಿ ಗೆಜ್ಜೆಗಿರಿ ಮೇಳದಿಂದ ಯಕ್ಷಗಾನ ಪ್ರದರ್ಶನ

ಶ್ರೀ ಆದಿ ಧೂಮವತಿ ಶ್ರೀ ದೇವಿ ಬೈದ್ಯೇತಿ  ಕೃಪಾಪೋಷಿತ ಯಕ್ಷಗಾನ ಮಂಡಳಿ ಗೆಜ್ಜೆಗಿರಿ ಮೇಳದ ಮೂರನೇ ವರ್ಷದ ತಿರುಗಾಟದ ಕೊನೆಯ ಪ್ರದರ್ಶನವು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವಠಾರದಲ್ಲಿ ಪತ್ತನಾಜೆಯಂದು ಜರಗಿತು. ಉಪ್ಪಿನಂಗಡಿಯಲ್ಲಿ ಪ್ರಥಮ ಬಾರಿಗೆ ಮೇಳದ ಪ್ರದರ್ಶನವನ್ನು ಗೆಜ್ಜೆಗಿರಿ ಭಕ್ತವೃಂದ ಉಪ್ಪಿನಂಗಡಿ ಆಯೋಜಿಸಿತ್ತು. ಶ್ರೀ ಸಹಸ್ರಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಪ್ರಧಾನ ಅರ್ಚಕರಾದ ಹರೀಶ ಉಪಾಧ್ಯಾಯರು ಪ್ರಾರ್ಥನೆ ಸಲ್ಲಿಸಿದರು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಸದಸ್ಯರು ಮತ್ತು ಕಾರ್ಯಕ್ರಮದ ಸಂಘಟಕರು ಉಪಸ್ಥಿತರಿದ್ದರು. ಬಳಿಕ ಜರಗಿದ ಸಭಾ ಕಾರ್ಯಕ್ರಮದಲ್ಲಿ ಮೂರು […]

ಉಪ್ಪಿನಂಗಡಿ ಗೆಜ್ಜೆಗಿರಿ ಮೇಳದಿಂದ ಯಕ್ಷಗಾನ ಪ್ರದರ್ಶನ Read More »

ಶ್ರೀ ಮಹಾಭಾರತ ಸರಣಿ ಯಕ್ಷ ಪ್ರಶ್ನೆ ತಾಳಮದ್ದಳೆ

ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ  ಶ್ರೀ ಮಹಾಭಾರತ ಸರಣಿ ಯಲ್ಲಿ 76ನೇ ಕಾರ್ಯಕ್ರಮವಾಗಿ ಕವಿ ಶ್ರೀ ಶ್ರೀಧರ ಡಿ. ಯಸ್  ರಚಿತ    ಯಕ್ಷಪ್ರಶ್ನೆ    ತಾಳಮದ್ದಳೆಯು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಜರಗಿತು.           ಭಾಗವತರಾಗಿ ಪದ್ಮನಾಭ ಕುಲಾಲ್,  ಸುರೇಶ್ ರಾವ್. ಬಿ,  ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪರೀಕ್ಷಿತ್. ಯಚ್, ಅರ್ಥಧಾರಿಗಳಾಗಿ    ಪಾತಾಳ ಅಂಬಾಪ್ರಸಾದ್ (ಧರ್ಮರಾಯ, ಕೃತ್ಯ )ದಿವಾಕರ ಆಚಾರ್ಯ ಗೇರುಕಟ್ಟೆ(ಶಕುನಿ, ಯಕ್ಷ), ಜಿನೇಂದ್ರ ಜೈನ್ ಬಳ್ಳಮಂಜ(ಮಂತ್ರವಾದಿ), ರವೀಂದ್ರ ದರ್ಬೆ

ಶ್ರೀ ಮಹಾಭಾರತ ಸರಣಿ ಯಕ್ಷ ಪ್ರಶ್ನೆ ತಾಳಮದ್ದಳೆ Read More »

IPL ಪುನರಾರಂಭಕ್ಕೆ ದಿನಾಂಕ ನಿಗದಿ | ಬಿಸಿಸಿಐ ನಿರ್ಧಾರ

ಭಾರತ ಮತ್ತು ವಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ, ಐಪಿಎಲ್ 2025 ಅನ್ನು ಒಂದು ವಾರದವರೆಗೆ ಸ್ಥಗಿತಗೊಳಿಸಿದ ಅದ್ದರಿಂದ ಈ ವಾರ ನಿಗದಿಯಾಗಿದ್ದ ಎಲ್ಲಾ ಪಂದ್ಯಗಳನ್ನು ಮುಂದೂಡಲಾಗಿತ್ತು. ಇದೀಗ ಮತ್ತೆ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಪುನರಾರಂಭಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಮೇ 15 ಅಥವಾ 16 ರಂದು ಟೂರ್ನಿಯನ್ನು ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ. ಶನಿವಾರ ಸಂಜೆ ಭಾರತ ಮತ್ತು ಪಾಕಿಸ್ತಾನ್ ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ

IPL ಪುನರಾರಂಭಕ್ಕೆ ದಿನಾಂಕ ನಿಗದಿ | ಬಿಸಿಸಿಐ ನಿರ್ಧಾರ Read More »

ಇಂದು ಮುಳಿಯದಲ್ಲಿ “ಪುದರ್ ದೀತಿಜಿ” ತುಳು ಹಾಸ್ಯ ನಾಟಕ

ಪುತ್ತೂರು: ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಹೊಸತನದ ಶೋರೂಮ್ ಅನಾವರಣದ ಅಂಗವಾಗಿ ಇಂದು (ಮೇ 9) ರಂದು ಮುಳಿಯ ಆವರಣದಲ್ಲಿ  ಖ್ಯಾತ ಹಾಸ್ಯ ನಟರಿಂದ “ಪುದರ್ ದೀತಿಜಿ” ನಾಟಕ ಪ್ರದರ್ಶನ ನಡೆಯಲಿದೆ. ಸಂಜೆ 6 ಗಂಟೆಗೆ ಸರಿಯಾಗಿ ಆರಂಭವಾಗುವ ಈ ನಾಟಕದಲ್ಲಿ ಜನಪ್ರಿಯ ತುಳು ಹಾಸ್ಯ ನಟರು ಜನರನ್ನು ರಂಜಿಸಲಿದ್ದಾರೆ. ನಾಟಕ ಪ್ರಿಯರು ಈ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಿಸುವ ನಿರೀಕ್ಷೆ ಇದೆ.  ನಾಟಕ ಮುಗಿದ ನಂತರ ಭೋಜನದ ವ್ಯವಸ್ಥೆ ಇರಲಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಇಂದು ಮುಳಿಯದಲ್ಲಿ “ಪುದರ್ ದೀತಿಜಿ” ತುಳು ಹಾಸ್ಯ ನಾಟಕ Read More »

ಯಕ್ಷಧ್ರುವ ಪಟ್ಲ ಹವ್ಯಾಸಿ ಘಟಕದ ಸಭೆ

ಮಂಗಳೂರಿನ ಬಳ್ಳಾಲ್ ಬಾಗ್ ಪತ್ತುಮಡಿ ಸೌಧದಲ್ಲಿ ನೂತನವಾಗಿ ರಚಿತವಾದ ಯಕ್ಷಧ್ರುವ ಪಟ್ಲ ಫೌಂಡೇಶನ್ ಹವ್ಯಾಸಿ ಕಲಾವಿದರ ಘಟಕದ ಸಭೆಯು ಅಧ್ಯಕ್ಷರಾದ ರಾಜಾರಾಮ ಹೊಳ್ಳ ಕೈರಂಗಳ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಹವ್ಯಾಸಿ ಘಟಕದಿಂದ ಪ್ರತಿ ತಿಂಗಳಲ್ಲಿ ಒಂದು ಕಾರ್ಯಕ್ರಮವನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವ ಬಗ್ಗೆ, ಯಕ್ಷಗಾನ ಸಂಘಗಳ ಅರ್ಹ ಸದಸ್ಯರನ್ನು ಘಟಕಕ್ಕೆ ಸೇರ್ಪಡೆಗೊಳಿಸುವುದರೊಂದಿಗೆ ಆಯಾಯ ಪರಿಸರದಲ್ಲಿ ಯಕ್ಷಗಾನೀಯ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಚರ್ಚಿಸಲಾಯಿತು. ಜೂನ್ 1ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯುವ ಯಕ್ಷಧ್ರುವ ಪಟ್ಲ ಫೌಂಡೇಶನ್ ದಶಮಾನೋತ್ಸವ

ಯಕ್ಷಧ್ರುವ ಪಟ್ಲ ಹವ್ಯಾಸಿ ಘಟಕದ ಸಭೆ Read More »

ಐಪಿಎಲ್‌ನಲ್ಲಿ ಸೆಂಚುರಿ ಬಾರಿಸಿದ 14 ವರ್ಷದ ವೈಭವ್ ಸೂರ್ಯವಂಶಿ | ವೈಭವ್ ಆಟದ ಬಗ್ಗೆ ಮೋದಿ ಏನಂದ್ರು?

ಬೆಂಗಳೂರು : ಸಾಧಿಸುವ ಛಲವಿದ್ದಲ್ಲಿ ಎಂತಹ ಸಂಧಿಗ್ಧ ಸ್ಥಿತಿ ಎದುರಾದರು ಸಾಧಿಸಿಯೇ ಸಾಧಿಸುತ್ತಾರೆ. ಅಂತದ್ದೇ ಒಂದುಸಾಧನೆಯನ್ನು 14ವರ್ಷದ ಯುವಕ ಮಾಡಿದ್ದಾನೆ.  ಐಪಿಎಲ್‌ನಲ್ಲಿ ಅತಿ ವೇಗ ಸೆಂಚುರಿ ಬಾರಿಸಿದ 14 ವರ್ಷದ ವೈಭವ್ ಸೂರ್ಯವಂಶಿ ಇವತ್ತು ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇವರ ಆಕ್ರಮಣಾಕಾರಿ ಬ್ಯಾಟಿಂಗ್, ಬೌಂಡರಿ, ಸಿಕ್ಸರ್‌ ಶೈಲಿಗೆ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ. ರಾಜಸ್ಥಾನ ರಾಯಲ್ಸ್​ ತಂಡದ ಆಟಗಾರ ವೈಭವ್ ಸೂರ್ಯವಂಶಿ ಶತಕ ಸಾಧನೆಯನ್ನು ಮಾಡಿದ್ದಾರೆ. ಈ ಸಾಧನೆಯನ್ನು ಗುರುತಿಸಿದ

ಐಪಿಎಲ್‌ನಲ್ಲಿ ಸೆಂಚುರಿ ಬಾರಿಸಿದ 14 ವರ್ಷದ ವೈಭವ್ ಸೂರ್ಯವಂಶಿ | ವೈಭವ್ ಆಟದ ಬಗ್ಗೆ ಮೋದಿ ಏನಂದ್ರು? Read More »

ಪಾತಾಳ ಕಲಾಮಂಗಳ ಪ್ರಶಸ್ತಿ ಪ್ರದಾನ

ಉಪ್ಪಿನಂಗಡಿ ಪಾತಾಳ ಯಕ್ಷಪ್ರತಿಷ್ಠಾನದ  ಕಲಾಮಂಗಳ ಪ್ರಶಸ್ತಿ ಪ್ರದಾನ ಸಮಾರಂಭವು ಪಾತಾಳದ ಪೂರ್ಣ ಶ್ರೀ ಗೃಹದಲ್ಲಿ ಜರಗಿತು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಉದ್ಯಮಿ, ಕಲಾಪೋಷಕ ಶ್ರೀಪತಿ ಭಟ್ ಮೂಡಬಿದ್ರೆ, ಜನಾರ್ಧನ ಹಂದೆ ಮಂಗಳೂರು ಮುಖ್ಯ ಅಭ್ಯಾಗತರಾಗಿ ಶುಭ ಹಾರೈಸಿದರು. ಅಶ್ವತ್ಥಾಮ ಖ್ಯಾತಿಯ ಕಲಾವಿದ ಗುಂಡಿ ಮಜಲು ಗೋಪಾಲಕೃಷ್ಣ ಭಟ್ ಮತ್ತು ಕಟೀಲು ಮೇಳದ ಕಲಾವಿದ,

ಪಾತಾಳ ಕಲಾಮಂಗಳ ಪ್ರಶಸ್ತಿ ಪ್ರದಾನ Read More »

ಯಕ್ಷದ್ರುವ ಪಟ್ಲ ಫೌಂಡೇಶನ್ ಹವ್ಯಾಸಿ ಕಲಾವಿದರ ಘಟಕ: ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರಿನ ಬಳ್ಳಾಲ್ ಬಾಗ್ ಹೋಟೆಲ್ ಪತ್ತುಮುಡಿ ಸಭಾಭವನದಲ್ಲಿ  ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ನೇತೃತ್ವದಲ್ಲಿ ಜರಗಿದ ಸಭೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್ ಹವ್ಯಾಸಿ ಕಲಾವಿದರ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಮಧುಕರ ಭಾಗವತ ಕುಳಾಯಿ, ಅಧ್ಯಕ್ಷರಾಗಿ ರಾಜಾರಾಮ ಹೊಳ್ಳ ಕೈರಂಗಳ, ಕಾರ್ಯದರ್ಶಿಯಾಗಿ ವಿನಯ ಆಚಾರ್ ಹೊಸಬೆಟ್ಟು ಸಂಚಾಲಕರಾಗಿ ಸದಾಶಿವ ಆಳ್ವ ತಲಪಾಡಿ, ಕೋಶಾಧಿಕಾರಿಯಾಗಿ ವಿಜಯ ಶಂಕರ ಆಳ್ವ ಮಿತ್ತಳಿಕೆ, ಉಪಾಧ್ಯಕ್ಷರಾಗಿ ತೋನ್ಸೇ ಪುಷ್ಕಳ ಕುಮಾರ್ ಮತ್ತು ದಿವಾಕರ ಆಚಾರ್ಯ ಗೇರುಕಟ್ಟೆ, ಸಹ ಕಾರ್ಯದರ್ಶಿಗಳಾಗಿ

ಯಕ್ಷದ್ರುವ ಪಟ್ಲ ಫೌಂಡೇಶನ್ ಹವ್ಯಾಸಿ ಕಲಾವಿದರ ಘಟಕ: ನೂತನ ಪದಾಧಿಕಾರಿಗಳ ಆಯ್ಕೆ Read More »

ಶರವೂರಿನಲ್ಲಿ ಇಂದ್ರಜಿತು ಕಾಳಗ ತಾಳಮದ್ದಳೆ

ಶ್ರೀ ದುರ್ಗಾಂಬ ಕಲಾಸಂಗಮ ಶ್ರೀ ಕ್ಷೇತ್ರ ಶರವೂರು ಆಲಂಕಾರು ವತಿಯಿಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ  ಇಂದ್ರಜಿತು ಕಾಳಗ ತಾಳಮದ್ದಳೆ ಜರಗಿತು. ಭಾಗವತರಾಗಿ ಡಿ. ಕೆ ಆಚಾರ್ಯ ಹಳೆನೇರೆಂಕಿ ಹಿಮ್ಮೇಳದಲ್ಲಿ  ಮುರಳೀಧರ ಕಲ್ಲೂರಾಯ,  ಚಂದ್ರ ದೇವಾಡಿಗ ನಗ್ರಿ ಅರ್ಥದಾರಿಗಳಾಗಿ (ರಾಮ1)  ಜಯರಾಮ ಗೌಡ ಬಲ್ಯ (ಇಂದ್ರಜಿತು), ಜಬ್ಬಾರ್ ಸಮೋ ಸಂಪಾಜೆ(ಹನುಮಂತ), ದಿವಾಕರ ಆಚಾರ್ಯ ಹಳೆನೇರೆಂಕಿ (ಮಾಯಾ ಸೀತೆ 1),  ಗುರು ಪ್ರಸಾದ್ ಆಲಂಕಾರು (ಮಾಯಾ ಸೀತೆ 2), ರಾಘವೇಂದ್ರ ಭಟ್ ತೋಟಂತಿಲ (ವಿಭೀಷಣ), ರಾಮ್

ಶರವೂರಿನಲ್ಲಿ ಇಂದ್ರಜಿತು ಕಾಳಗ ತಾಳಮದ್ದಳೆ Read More »

“ಸ್ಪಿಕ್ ಮೆಕೆ ಗುರುಕುಲ್ ಅನುಭವ್ ಸ್ಕಾಲರ್ ಶಿಪ್ 2025”ಕ್ಕೆ  ಅಚಲ್ ಬಿಳಿನೆಲೆ ಆಯ್ಕೆ.

ಸುಳ್ಯದ ಅಚಲ್ ಬಿಳಿನೆಲೆ ಬಿಹಾರದ “ಸ್ವಾಮಿ ತೇಜೋಮಯಾನಂದ ಸ್ಕೂಲ್ ಆಫ್ ಯೋಗ ಟ್ರೇಡಿಷನ್” ನಲ್ಲಿ ನಡೆಯಲಿರುವ ಸ್ಪಿಕ್ ಮೆಕೆ ಗುರುಕುಲ್ ಅನುಭವ್ ಸ್ಕಾಲರ್ ಶಿಪ್ 2025”ಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳು  ಹಿಂದಿನ ಕಾಲದ ಗುರುಕುಲ ಶಿಕ್ಷಣ  ಸಂಪ್ರದಾಯದ ಅನುಭವ ಪಡೆಯುವ  ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು  ಶ್ರೇಷ್ಟ ಗುರುಗಳ ಜೀವನ ವಿಧಾನಕ್ಕೆ ಒಡ್ಡಿಕೊಳ್ಳುವ ಪ್ರಯತ್ನವಾಗಿರುವ ಈ ಯೋಜನೆಯು ಬೇಸಿಗೆ ರಜೆಯಲ್ಲಿ ಒಂದು ತಿಂಗಳ ಕಾಲ ತಮ್ಮ ಕಲಾ ಕ್ಷೇತ್ರದ  ಗುರುವಿನೊಂದಿಗಿದ್ದು ಅಭ್ಯಾಸ ಮಾಡುವ  ವಿಭಿನ್ನ  ಅವಕಾಶವನ್ನು ಒದಗಿಸುತ್ತದೆ. ಸುಮಾರು

“ಸ್ಪಿಕ್ ಮೆಕೆ ಗುರುಕುಲ್ ಅನುಭವ್ ಸ್ಕಾಲರ್ ಶಿಪ್ 2025”ಕ್ಕೆ  ಅಚಲ್ ಬಿಳಿನೆಲೆ ಆಯ್ಕೆ. Read More »

error: Content is protected !!
Scroll to Top