ಆಟೋಟ ಸ್ಪರ್ಧೆಗಳು ಕೇವಲ ಬಹುಮಾನಕ್ಕೆ ಸೀಮಿತವಾಗಿರಬಾರದು | ಸವಣೂರು ಯುವಕ ಮಂಡಲದಿಂದ ‘ಕೆಸರ್ ಡ್ ಒಂಜಿ ದಿನ’ ಕಾರ್ಯಕ್ರಮದಲ್ಲಿ ಕೆ.ಸೀತಾರಾಮ ರೈ ಸವಣೂರು
ಸವಣೂರು: ಸವಣೂರು ಯುವಕ ಮಂಡಲದ ವತಿಯಿಂದ ಕೆಸರ್ ಡ್ ಒಂಜಿ ದಿನ ಕಾರ್ಯಕ್ರಮ ಭಾನುವಾರ ಸವಣೂರು ಬಸದಿ ವಠಾರದಲ್ಲಿರುವ ನಿರ್ಮಲ್ ಕುಮಾರ್ ಜೈನ್ ಅವರ ಗದ್ದೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ, ಸಹಕಾರಿ ರತ್ನ ಕೆ.ಸೀತಾರಾಮ ರೈ ಸವಣೂರು ಉದ್ಘಾಟಿಸಿ ಮಾತನಾಡಿ, ಆಟೋಟ ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುವುದು ಮುಖ್ಯ ಅಲ್ಲ. ಬದಲಾಗಿ ಭಾಗವಹಿಸುವುದೇ ಮುಖ್ಯ. ಸವಣೂರು ಯುವಕ ಮಂಡಲದ ಒಳ್ಳೆಯ ಕಾರ್ಯಕ್ಕೆ ಪ್ರೋತ್ಸಾಹಿಸಬೇಕು ಎಂದ ಅವರು, ಕೆಸರಿನಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಔಷಧವಿದೆ. ಈ ನಿಟ್ಟಿನಲ್ಲಿ […]