ಮನರಂಜನೆ

ಸೆ. 7: ಬೆಂಗಳೂರಿನಲ್ಲಿ ಡ್ಯಾನ್ಸ್ ಅಂಡ್ ಬೀಟ್ಸ್ ನೃತ್ಯ ಸಂಸ್ಥೆಯ ನೃತ್ಯ ಪ್ರದರ್ಶನ

ಪುತ್ತೂರು: ಸೆ. 7 ರಂದು ಜೀವನ್ ಟಿ. ಎನ್. ಬೆಳ್ಳಾರೆ ನಿರ್ದೇಶನದ ಡ್ಯಾನ್ಸ್ ಅಂಡ್ ಬೀಟ್ಸ್ ನೃತ್ಯ ಸಂಸ್ಥೆಯ ನೃತ್ಯ ಪ್ರದರ್ಶನ ವಿಜಯನಗರ ಬಂಟರ ಸಂಘದ ಆವರಣದಲ್ಲಿ ನಡೆಯಲಿದೆ. ಬೆಳ್ಳಾರೆ, ಪಂಜ, ಸುಬ್ರಹ್ಮಣ್ಯ ಮತ್ತು ಕೈಕಂಬ ಶಾಖೆಗಳ ಸುಮಾರು 60 ಗ್ರಾಮೀಣ ಪ್ರದೇಶದ ನೃತ್ಯ ಪಟುಗಳು ಸೆಪ್ಟೆಂಬರ್ 7 ಆದಿತ್ಯವಾರದಂದು ತುಳುನಾಡ ಜವನೆರ್ ಬೆಂಗಳೂರು (ರಿ) ರವರು ಸಂಘಟಿಸಿರುವ ಅಷ್ಟೆಮಿದ ಐಸಿರ ಎಂಬ ಕಾರ್ಯಕ್ರಮದಲ್ಲಿ ಮಧ್ಯಾಹ್ನ 1 ರಿಂದ 2 ಗಂಟೆಯ ತನಕ ತುಳುವ ಸಿರಿ ಶೀರ್ಷಿಕೆಯಲ್ಲಿ […]

ಸೆ. 7: ಬೆಂಗಳೂರಿನಲ್ಲಿ ಡ್ಯಾನ್ಸ್ ಅಂಡ್ ಬೀಟ್ಸ್ ನೃತ್ಯ ಸಂಸ್ಥೆಯ ನೃತ್ಯ ಪ್ರದರ್ಶನ Read More »

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ

ಕೊಡಗು ಮೂಲದ ರೋಷನ್ ಜೊತೆ ನೆರವೇರಿದ ವಿವಾಹ ಬೆಂಗಳೂರು : ಕನ್ನಡದ ಖ್ಯಾತ ನಿರೂಪಕಿ ಹಾಗೂ ನಟಿ ಮಂಗಳೂರು ಮೂಲದ ಅನುಶ್ರೀ ಇಂದು (ಆ.28) ಕೊಡಗು ಮೂಲದ ರೋಷನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಕಿರುತೆರೆಯಲ್ಲಿ ಆಕರ್ಷಕ ನಿರೂಪಣೆಯಿಂದ ಜನಪ್ರಿಯತೆ ಗಳಿಸಿರುಜವ ಅನುಶ್ರೀ ತಮ್ಮ ಬಹುಕಾಲದ ಗೆಳೆಯ ರೋಷನ್ ಜೊತೆ ಹಸೆಮಣೆ ಏರಿದ್ದು, 10.56ರ ಶುಭ ಮೂಹೂರ್ತದಲ್ಲಿ ಅನುಶ್ರಿ ಹಾಗೂ ರೋಷನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಕಗ್ಗಲಿಪುರ ಬಳಿಯ ಹೊರವಲಯದ ರೆಸಾರ್ಟ್‌ನಲ್ಲಿ ಮದುವೆ ನೆರವೇರಿದ್ದು, ಕಿರುತೆರೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ Read More »

ಶಾರುಕ್‌ ಖಾನ್‌, ದೀಪಿಕಾ ಪಡುಕೋಣೆ ವಿರುದ್ಧ ವಂಚನೆ ದೂರು

ಹೇಗೆಲ್ಲ ಮೋಸ ಮಾಡುತ್ತಾರೆ ಈ ತಾರೆಯರು ಗೊತ್ತಾ? ನವದೆಹಲಿ: ಬಾಲಿವುಡ್‌ನ ಜನಪ್ರಿಯ ತಾರೆಯರಾದ ಶಾರುಕ್‌ ಖಾನ್‌ ಮತ್ತು ದೀಪಿಕಾ ಪಡುಕೋಣೆ ವಿರುದ್ಧ ವಂಚನೆ ದೂರು ದಾಖಲಾಗಿದೆ. ಉತ್ಪಾದನಾ ದೋಷಗಳನ್ನು ಹೊಂದಿರುವ ಹ್ಯುಂಡೈ ಕಾರು ಖರೀದಿಸಿದ್ದ ರಾಜಸ್ಥಾನದ ಭರತ್‌ಪುರದ ವ್ಯಕ್ತಿಯೊಬ್ಬರು ಆ ಕಾರಿನ ರಾಯಭಾರಿಗಳಾಗಿದ್ದ ಬಾಲಿವುಡ್ ನಟರಾದ ಶಾರುಕ್‌ ಖಾನ್ ಹಾಗೂ ದೀಪಿಕಾ ಪಡುಕೋಣೆ ಸೇರಿದಂತೆ ಒಟ್ಟು ಆರು ಮಂದಿಯ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. ರಾಜಸ್ಥಾನದ ಭರತ್‌ಪುರ ನಿವಾಸಿ ಕೀರ್ತಿ ಸಿಂಗ್ ದೂರು ದಾಖಲಿಸಿದವರು. ಹ್ಯುಂಡೈ ಕಾರನ್ನು

ಶಾರುಕ್‌ ಖಾನ್‌, ದೀಪಿಕಾ ಪಡುಕೋಣೆ ವಿರುದ್ಧ ವಂಚನೆ ದೂರು Read More »

ದರ್ಶನ್‌, ಪವಿತ್ರಾ ಸೇರಿ ಏಳು ಆರೋಪಿಗಳ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್‌

ಆರೋಪಿ ಎಷ್ಟೇ ದೊಡ್ಡವನಿದ್ದರೂ ಅವರು ಕಾನೂನಿಗಿಂತ ದೊಡ್ಡವರಲ್ಲ ಎಂದ ಕೋರ್ಟ್‌ ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಪವಿತ್ರಾ ಸೇರಿ 7 ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್​ ರದ್ದುಮಾಡಿ ತೀರ್ಪತ್ತಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ಆದೇಶ ಇಂದು ಹೊರಬಿದ್ದಿದೆ. ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್​ನ ಜಸ್ಟೀಸ್ ಜೆ.ಬಿ.ಪರ್ದಿವಾಲಾ, ಜಸ್ಟೀಸ್ ಮಹದೇವನ್​ ಪೀಠವು ಈ ಮಹತ್ವದ ತೀರ್ಪು ನೀಡಿದೆ. ಈ ಕೊಲೆ

ದರ್ಶನ್‌, ಪವಿತ್ರಾ ಸೇರಿ ಏಳು ಆರೋಪಿಗಳ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್‌ Read More »

ನಟ ಧ್ರುವ ಸರ್ಜಾ ವಿರುದ್ಧ 3.15 ಕೋ. ರೂ. ವಂಚನೆ ಆರೋಪ

ನಿರ್ಮಾಪಕರಿಂದ ಮುಂಬೈಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಬೆಂಗಳೂರು: ಕನ್ನಡ ನಟ ಧ್ರುವ ಸರ್ಜಾ ವಿರುದ್ಧ ಜಗ್ಗು ದಾದ ಸಿನಿಮಾದ ನಿರ್ದೇಶಕ ಹಾಗೂ ನಿರ್ಮಾಪಕ ರಾಘವೇಂದ್ರ ಹೆಗ್ಡೆ 9.58 ಕೋ. ರೂ. ವಂಚಿಸಿದ ಕುರಿತು ದೂರು ನೀಡಿದ್ದಾರೆ. ಮುಂಬೈಯ ಅಂಬೋಲಿ ಪೊಲೀಸ್​ ಠಾಣೆಯಲ್ಲಿ ರಾಘವೇಂದ್ರ ಹೆಗ್ಡೆ ದೂರು ದಾಖಲಿಸಿದ್ದಾರೆ. 3.15 ಕೋಟಿ ರೂಪಾಯಿ ವಂಚನೆ ಕೇಸ್ ಇದಾಗಿದ್ದು, ಬಡ್ಡಿ ಸೇರಿ ಆ ಹಣ ಈಗ 9 ಕೋಟಿ ರೂಪಾಯಿ ಆಗಿದೆ ಎಂದು ನಿರ್ಮಾಪಕ ಆರೋಪಿಸಿದ್ದಾರೆ. 2016ರಲ್ಲಿ ನನ್ನ

ನಟ ಧ್ರುವ ಸರ್ಜಾ ವಿರುದ್ಧ 3.15 ಕೋ. ರೂ. ವಂಚನೆ ಆರೋಪ Read More »

ಮೋಕೆದ ತಿರ್ಲ್ ಕಿರುಚಿತ್ರ ಬಿಡುಗಡೆ

ಬೆಳ್ತಂಗಡಿ : ವಾಗೀಶ್ ವಿ ತುಂಬೆತ್ತಡ್ಕ ನಿರ್ಮಾಣ ದ , ನಿರಂಜನ್ ಗೌಡ ಗುರುವಾಯನಕೆರೆ ಕಥೆ – ಚಿತ್ರಕಥೆ – ಸಂಭಾಷಣೆ – ಸಾಹಿತ್ಯ – ನಿರ್ದೇಶನ, ಭರತ್ ರಾಜ್ ಬಿ ಕುಲಾಲ್ ಇವರ ಛಾಯಾಗ್ರಹಣ ಹಾಗೂ ಹಲವಾರು ಕಲಾವಿದರಿಂದ ಮೂಡಿಬಂದ ಮೋಕೆದ ತಿರ್ಲ್ ಕಿರುಚಿತ್ರ 27 ಅದಿತ್ಯವಾರ ಬಿಡುಗಡೆಯಾಯಿತು. ಮೋಕೆದ ತಿರ್ಲ್ ಕಿರು ಚಿತ್ರವನ್ನು ಕಿರಣ್ ಚಂದ್ರ ಡಿ ಪುಷ್ಪಗಿರಿ ಬಿಡುಗಡೆಗೊಳಿಸಿದರು. ಈ ಸಂದರ್ಭ ಮೋಕೆದ ತಿರ್ಲ್ ತಂಡವನ್ನು ಸನ್ಮಾನಿಸಿ ಯುವ ಕಲಾವಿದರನ್ನು ಹರಸಿ ಶುಭಹಾರೈಸಿದರು.

ಮೋಕೆದ ತಿರ್ಲ್ ಕಿರುಚಿತ್ರ ಬಿಡುಗಡೆ Read More »

ನಟಿ ರಮ್ಯಾಗೆ ಅಸಭ್ಯ ಕಮೆಂಟ್‌ : 43 ಮಂದಿ ವಿರುದ್ಧ ಕೇಸ್‌

ಸೋಷಿಯಲ್‌ ಮೀಡಿಯಾದಲ್ಲಿ ರಮ್ಯಾ V/S ದರ್ಶನ್‌ ಅಭಿಮಾನಿಗಳ ಜಟಾಪಟಿ ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಹಾಗೂ ನಟ ದರ್ಶನ್‌ ಅಭಿಮಾನಿಗಳ ನಡುವಿನ ಜಟಾಪಟಿ ತೀವ್ರಗೊಂಡಿದ್ದು, ನಟಿಗೆ ಕುರಿತು ಅವಹೇಳನಕಾರಿ ಹಾಗೂ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದ ಮೇಲೆ ದರ್ಶನ್ ಅವರ 43 ಅಭಿಮಾನಿಗಳ ವಿರುದ್ಧ ಬೆಂಗಳೂರು ಪೊಲೀಸರು ಸೋಮವಾರ ರಾತ್ರಿ ಎಫ್ಐಆರ್ ದಾಖಲಿಸಿದ್ದಾರೆ. ತಮ್ಮ ವಿರುದ್ಧ ಅಶ್ಲೀಲ ಕಾಮೆಂಟ್ ಮಾಡಿದ ದರ್ಶನ್ ಫ್ಯಾನ್ಸ್ ವಿರುದ್ಧ ಕಿಡಿಕಾರಿರುವ ನಟಿ ರಮ್ಯಾ, ಮಹಿಳಾ ಆಯೋಗ

ನಟಿ ರಮ್ಯಾಗೆ ಅಸಭ್ಯ ಕಮೆಂಟ್‌ : 43 ಮಂದಿ ವಿರುದ್ಧ ಕೇಸ್‌ Read More »

NG ಗುರುವಾಯನಕೆರೆಯ ತಂಡದಿಂದ ಹೊಸ ಸಂಚಲನ ಮೂಡಿಸುವ ಕಥೆ……

ಸಿಂಗಾರ ಕಲಾವಿದೆರ್ ಗುರುವಾಯನಕೆರೆ ಇವರ ಅಭಿನಯದಲ್ಲಿ ,ಅಮ್ಮ ಮಗನ ಬಾಂಧವ್ಯದಲ್ಲಿ ಒಂದಷ್ಟು ನಗೆಯ ವಾತಾವರಣದಲ್ಲಿ ತಿಳಿಯದ ಸತ್ಯ ಏನಿರಬಹುದು ಎಂಬ ಕುತೂಹಲಕಾರಿ ತುಳು ಸಾಮಾಜಿಕ ಹಾಸ್ಯಮಯ ನಾಟಕ ಪೆದ್ಯಪ್ಪೆ(ತೆರಿಯಂದಿನ ಸತ್ಯ) ಕಥೆ – ಚಿತ್ರಕಥೆ – ಸಂಭಾಷಣೆ – ಗೀತರಚನೆ – ನಿರ್ದೇಶನ ನಿರಂಜನ್ ಗೌಡ ಗುರುವಾಯನಕೆರೆ, ನಿರ್ಮಾಣ ಪಿ.ಎನ್.ಜಿ ಪ್ರೊಡಕ್ಷನ್ ಗುರುವಾಯನಕೆರೆ, ಸಹ ಸಂಭಾಷಣೆ ಶಿವಪ್ಪ ಬಿರ್ವ, ಸಹ ನಿರ್ದೇಶನ ಪ್ರಕಾಶ್ ಬಿ ಸವಣಾಲ್ ( ಕಲಾರತ್ನ ಪ್ರಶಸ್ತಿ ಪುರಸ್ಕೃತ) , ಕೃಷ್ಣ ಕಿಟ್ಟಿ ಬಿಸಿರೋಡ್

NG ಗುರುವಾಯನಕೆರೆಯ ತಂಡದಿಂದ ಹೊಸ ಸಂಚಲನ ಮೂಡಿಸುವ ಕಥೆ…… Read More »

ಜು.11(ನಾಳೆ) : ‘ಧರ್ಮ ಚಾವಡಿ’ ತುಳು ಚಿತ್ರ ದ.ಕ., ಉಡುಪಿ ಜಿಲ್ಲಾದ್ಯಂತ ತೆರೆಗೆ

ಪುತ್ತೂರು: ಮಂಗಳೂರು ಕೃಷ್ಣವಾಣಿ ಪಿಕ್ಚರ್ಸ್‍ ಲಾಂಛನದಲ್ಲಿ ತಯಾರಾದ ನಡುಬೈಲ್‍ ಜಗದೀಶ್‍ ಅಮೀನ್‍ ನಿರ್ಮಾಣದಲ್ಲಿ, ನಿತಿನ್‍ ರೈ ಕುಕ್ಕುವಳ್ಳಿ ನಿರ್ದೇಶನದಲ್ಲಿ ತಯಾರಾದ ‘ ಧರ್ಮ ಚಾವಡಿ’ ತುಳು ಚಿತ್ರ ಜು.11 ರಂದು ದ.ಕ ಹಾಗೂ ಉಡುಪಿ ಜಿಲ್ಲಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರ ನಿರ್ದೇಶಕ ನಿತಿನ್‍‍ ರೈ ಕುಕ್ಕುವಳ್ಳಿ ತಿಳಿಸಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಧರ್ಮ ದೈವ ಚಿತ್ರ ಬಳಿಕ ಇದು ಎರಡನೇ ಚಿತ್ರವಾಗಿದ್ದು, ಧರ್ಮ ಚಾವಡಿ ಈಗಾಗಲೇ ಮುಂಬೈಯಲ್ಲಿ ವೀಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ತಿಳಿಸಿದರು.

ಜು.11(ನಾಳೆ) : ‘ಧರ್ಮ ಚಾವಡಿ’ ತುಳು ಚಿತ್ರ ದ.ಕ., ಉಡುಪಿ ಜಿಲ್ಲಾದ್ಯಂತ ತೆರೆಗೆ Read More »

ಹಾಲಿವುಡ್ ವಾಕ್ ಆಫ್ ಫೇಮ್ ಸ್ಟಾರ್‌ ಹಿರಿಮೆಗೆ ಪಾತ್ರರಾದ ದೀಪಿಕಾ ಪಡುಕೋಣೆ

ನವದೆಹಲಿ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆಗೆ ಹಾಲಿವುಡ್ ಚೇಂಬರ್ಸ್ ಆಫ್ ಕಾಮರ್ಸ್ 2026 ನ ಮೋಷನ್ ಪಿಕ್ಚರ್ಸ್‌ ವಿಭಾಗದಲ್ಲಿ ಹಾಲಿವುಡ್ ವಾಕ್ ಆಫ್ ಫೇಮ್‌ನಲ್ಲಿ ಸ್ಟಾರ್ ನೀಡಿ ಗೌರವಿಸಲಾಗಿದೆ. ದೀಪಿಕಾ ಪಡುಕೋಣೆ ಅವರು ಜಾಗತಿಕ ಮಟ್ಟದಲ್ಲಿ ಮನರಂಜನಾ ವಲಯಕ್ಕೆ ಕೊಡುಗೆಗಳನ್ನು ನೀಡುವ ಮೂಲಕ ಗಮನಾರ್ಹ ಉಪಸ್ಥಿತಿಯನ್ನು ಉಳಿಸಿಕೊಂಡಿದ್ದಾರೆ. ಟಿಮೊಥಿ ಚಲವೆಟ್, ಎಮಿಲಿ ಬ್ಲಂಟ್, ರಾಚೆಲ್ ಮ್ಯಾಕ್ ಆ್ಯಡಮ್ಸ್, ರಾಮ್ ಮಲೆಕ್, ಸ್ಟಾನ್ಲಿ ಟುಸಿ, ಡೆಮಿ ಮೂರ್ ಮೊದಲಾದ ಪ್ರಸಿದ್ಧ ಕಲಾಕಾರರ ಜೊತೆಗೆ ಪಡುಕೋಣೆ ಈ ಹಿರಿಮೆಯನ್ನು ಹಂಚಿಕೊಂಡವರಾಗಿದ್ದಾರೆ.

ಹಾಲಿವುಡ್ ವಾಕ್ ಆಫ್ ಫೇಮ್ ಸ್ಟಾರ್‌ ಹಿರಿಮೆಗೆ ಪಾತ್ರರಾದ ದೀಪಿಕಾ ಪಡುಕೋಣೆ Read More »

error: Content is protected !!
Scroll to Top