ಶ್ರೀ ಮಹಾಭಾರತ ಸರಣಿಯ 50 ನೇ ತಾಳಮದ್ದಳೆ ಅಭಿಮನ್ಯು ಕಾಳಗ | ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘವು 50ನೇ ವರ್ಷಾಚರಣೆ
ಉಪ್ಪಿನಂಗಡಿ: ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘವು 50ನೇ ವರ್ಷಾಚರಣೆ ನಿಮಿತ್ತ ನಡೆಸುತ್ತಿರುವ ಮಹಾಭಾರತ ಸರಣಿಯ 100 ತಾಳಮದ್ದಳೆಗಳಲ್ಲಿ 50ನೇ ತಾಳಮದ್ದಳೆ ‘ಅಭಿಮನ್ಯು ಕಾಳಗ’ ಉಪ್ಪಿನಂಗಡಿ ಸಾರ್ವಜನಿಕ ಶ್ರೀ ಶಾರದೋತ್ಸವ ಪ್ರಯುಕ್ತ ರಾಮನಗರದ ಶ್ರೀ ಶಾರದಾ ಕಲಾಮಂಟಪದಲ್ಲಿ ಜರಗಿತು. ಶ್ರೀ ಶಾರದೋತ್ಸವ ಸಮಿತಿ ಪ್ರಾಯೋಜಕತ್ವದಲ್ಲಿ ನಡೆದ ತಾಳಮದ್ದಳೆಯಲ್ಲಿ ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ಡಿ.ಕೆ ಆಚಾರ್ಯ ಅಲಂಕಾರು, ಸುರೇಶ್ ರಾವ್ ಬನ್ನೆಂಗಳ, ಹಿಮ್ಮೇಳದಲ್ಲಿ ಶ್ರೀಪತಿಭಟ್ ಉಪ್ಪಿನಂಗಡಿ, ಪ್ರಚೇತ್ ಆಳ್ವ ಬಾರ್ಯ , ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ […]