ದಕ್ಷಿಣ ಕನ್ನಡ

ಶ್ರೀ ದೇವಿ ಮಹಾತ್ಮೆ ಇನ್ನು ಪೂರ್ಣ ರಾತ್ರಿ ಪ್ರದರ್ಶನ | ಕಟೀಲು ಮೇಳಕ್ಕೆ ಹೈಕೋರ್ಟ್ ಅನುಮತಿ!

ಕಾಲಮಿತಿಯಲ್ಲಿ ನಡೆಯುತ್ತಿದ್ದ ಕಟೀಲು ಮೇಳದ ಯಕ್ಷಗಾನ ಇನ್ನು ಪೂರ್ಣರಾತ್ರಿ ನಡೆಯಲಿದೆ. ಹಳೆ ಪದ್ಧತಿಯಂತೆ ರಾತ್ರಿಯಿಡೀ ಯಕ್ಷಗಾನ ನಡೆಸಲು ಹೈಕೋರ್ಟ್ ಅನುಮತಿ ನೀಡಿದ್ದು, ಯಕ್ಷಗಾನ ಪ್ರಿಯರ ಸಂತಸಕ್ಕೆ ಕಾರಣವಾಗಿದೆ. ಜ. 14ರಿಂದ ಮತ್ತೆ ಹಿಂದಿನಂತೆ ಪೂರ್ಣರಾತ್ರಿ ಪ್ರದರ್ಶನ ನೀಡಲು ಕಟೀಲಿನ 6 ಮೇಳಗಳು ಸಿದ್ಧವಾಗಿವೆ. ಶಬ್ದಮಾಲಿನ್ಯ ಮಿತಿಯ ನಿಯಮದಿಂದಾಗಿ ಕಳೆದ ವರ್ಷದಿಂದ ಕಾಲಮಿತಿಗೆ ಒಳಪಟ್ಟಿದ್ದ ಕಟೀಲು ಮೇಳ ಈ ಬಾರಿಯೂ ಸುಮಾರು ಒಂದೂವರೆ ತಿಂಗಳ ಕಾಲ ಕಾಲಮಿತಿಯಲ್ಲಿ ಪ್ರದರ್ಶನ ನೀಡಿದೆ. ಹೈಕೋರ್ಟ್‌ ಆದೇಶ ಮತ್ತು ಶ್ರೀ ಕ್ಷೇತ್ರದ ಭಕ್ತರ […]

ಶ್ರೀ ದೇವಿ ಮಹಾತ್ಮೆ ಇನ್ನು ಪೂರ್ಣ ರಾತ್ರಿ ಪ್ರದರ್ಶನ | ಕಟೀಲು ಮೇಳಕ್ಕೆ ಹೈಕೋರ್ಟ್ ಅನುಮತಿ! Read More »

210 ರೂ. ಬದಲು ನೀಡಿದ್ದು ಕೇವಲ 10 ರೂ.!! | ಪೆಟ್ರೋಲ್ ಪಂಪ್ ಸಿಬ್ಬಂದಿ ಯಾಮಾರಿದ್ದು ಹೇಗೆ?

ಬೈಕಿಗೆ ಪೆಟ್ರೋಲ್ ಹಾಕಿದ ಬಳಿಕ ಸವಾರ 210 ರೂ. ನೀಡಬೇಕಿತ್ತು. ಆದರೆ ಆತ ನೀಡಿದ್ದು ಕೇವಲ 10 ರೂ. ಮಾತ್ರ. ಪೆಟ್ರೋಲ್ ಪಂಪ್ ಸಿಬ್ಬಂದಿಗಳಿಗೆ ತಾವು ಮೋಸ ಹೋಗಿದ್ದು ಅರಿವಾದಾಗ ತಡವಾಗಿತ್ತು. ಅಷ್ಟರಲ್ಲಿ ಬೈಕ್ ಸವಾರ ಪರಾರಿಯಾಗಿದ್ದ. ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಈ ಘಟನೆ ನಡೆದಿದ್ದು ಸುಳ್ಯದ ಜಾಲ್ಸೂರಿನಲ್ಲಿ. ರಾತ್ರಿ ಹೊತ್ತಿಗೆ ಆಗಮಿಸಿದ ಬೈಕ್ ಸವಾರ ತನ್ನ ಬೈಕಿಗೆ 210 ರೂ.ನ ಪೆಟ್ರೋಲ್ ಹಾಕಿಸಿದ್ದಾನೆ. ಹಣ ನೀಡುವ ಸಂದರ್ಭದಲ್ಲಿ ಗೂಗಲ್ ಪೇ ಮಾಡುವುದಾಗಿ ತಿಳಿಸಿದ್ದಾನೆ. ಅದರಂತೆ ಸಿಬ್ಬಂದಿಗಳು

210 ರೂ. ಬದಲು ನೀಡಿದ್ದು ಕೇವಲ 10 ರೂ.!! | ಪೆಟ್ರೋಲ್ ಪಂಪ್ ಸಿಬ್ಬಂದಿ ಯಾಮಾರಿದ್ದು ಹೇಗೆ? Read More »

ಜೀವಾವಧಿ ಶಿಕ್ಷೆಗೊಳಗಾಗಿದ್ದ ಡಾ. ರೇಣುಕಾ ಪ್ರಸಾದ್ ಕೆ.ವಿ.ಗೆ ಸುಪ್ರೀಂ ಜಾಮೀನು!!

ಸುಳ್ಯ: ಪ್ರೊ. ಎ.ಎಸ್. ರಾಮಕೃಷ್ಣ ಅವರ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನಿರ್ದೇಶಕ ಡಾ. ರೇಣುಕಾ ಪ್ರಸಾದ್ ಕೆ.ವಿ. ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿರುವುದಾಗಿ ತಿಳಿದು ಬಂದಿದೆ. ನ್ಯಾಯಾಲಯಕ್ಕೆ ಶೂರಿಟಿ ಕೊಟ್ಟ ಬಳಿಕ ಡಾ. ರೇಣುಕಾ ಪ್ರಸಾದ್ ಕೆ.ವಿ. ಬಿಡುಗಡೆಯಾಗಲಿದ್ದು, ಮಂಗಳವಾರ ಬಿಡುಗಡೆ ಆಗಲಿದ್ದಾರೆ ಎಂದು ಹೇಳಲಾಗಿದೆ. ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿಯಾಗಿದ್ದ ಪ್ರೊಫೆಸರ್ ಎ.ಎಸ್. ರಾಮಕೃಷ್ಣ ಅವರ ಕೊಲೆ ಪ್ರಕರಣದಲ್ಲಿ ಡಾ. ರೇಣುಕಾ

ಜೀವಾವಧಿ ಶಿಕ್ಷೆಗೊಳಗಾಗಿದ್ದ ಡಾ. ರೇಣುಕಾ ಪ್ರಸಾದ್ ಕೆ.ವಿ.ಗೆ ಸುಪ್ರೀಂ ಜಾಮೀನು!! Read More »

ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ !

ಬೆಳ್ತಂಗಡಿ : ತನ್ನ ವಿದ್ಯಾರ್ಹತೆಗೆ ತಕ್ಕ ಕೆಲಸ ಸಿಗದ ಹಿನ್ನಲೆಯಲ್ಲಿ ಮನನೊಂದು ಯುವಕನೋರ್ವ ಕುತ್ತಿಗೆಗೆ ಚೂರಿಯಿಂದಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ಮಾದಾವರ ನಿವಾಸಿ ನಾರಾಯಣಪ್ಪ ಎಂಬವರ ಪುತ್ರ ಹಿತೇಶ್ (24) ಆತ್ಮಹತ್ಯೆಗೆ ಯತ್ನಿಸಿದಾತ. ಹಿತೇಶ್ ಸಿವಿಲ್ ಇಂಜಿನಿಯರಿಂಗ್‍ ಪದವಿ ಪಡೆದಿದ್ದು, ಎಷ್ಟೇ ಪ್ರಯತ್ನಿಸಿದರೂ ಕೆಲಸ ಸಿಗದೇ ಇರುವ ಹಿನ್ನಲೆಯಲ್ಲಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಂದು ಕಲ್ಲೇರಿ ಎಂಬಲ್ಲಿ ತನ್ನ ಬ್ಯಾಗ್‍ನಲ್ಲಿದ್ದ ಚೂರಿಯಿಂದ ಕುತ್ತಿಗೆಗೆ ಇರಿದುಕೊಂಡು ರಸ್ತೆ ಬದಿ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ.

ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ ! Read More »

40 ಸಿಸಿ ಕ್ಯಾಮರಾಗಳ ಪೂಟೇಜ್ ಪರಿಶೀಲನೆ | ಸುಳ್ಯ ಬ್ಯಾನರ್ ವಿವಾದಕ್ಕೆ ತೆರೆ !

ಸುಳ್ಯ: ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ, ಸುಳ್ಯ ಆಟೋ ರಿಕ್ಷಾ ಸಂಘದ ವತಿಯಿಂದ ಅಳವಡಿಸಿದ್ದ ಬ್ಯಾನರ್‌ನ ಮಧ್ಯಭಾಗವನ್ನು ಯಾರೋ ಹರಿದು ತೆಗೆದುಕೊಂಡು ಹೋಗಿರುವ ಬಗ್ಗೆ ಜ.06ರಂದು ಆಟೊ ರಿಕ್ಷಾ ಸಂಘದ ಅದ್ಯಕ್ಷರು ಸುಳ್ಯ ಪೊಲೀಸ್‌ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕೃತ್ಯವೆಸಗಿದವರ ಪತ್ತೆಗಾಗಿ ಪೋಲೀಸರು ಸುಳ್ಯದಲ್ಲಿರುವ ಸುಮಾರು 40 ಸಿಸಿ ಕ್ಯಾಮಾರಗಳ ಪೂಟೇಜ್‌ಗಳನ್ನು ಪರಿಶೀಲನೆ ಮಾಡಿದ್ದರು. ಜ.5 ರಂದು ಮಧ್ಯರಾತ್ರಿ ಮಾನಸಿಕ ಅಸ್ವಸ್ಥನಂತೆ ಕಂಡುಬರುತ್ತಿರುವ ಅಪರಿಚಿತ ವಯಸ್ಸಾದ ವ್ಯಕ್ತಿಯೋರ್ವ ಬ್ಯಾನರ್ ಹರಿದು ತನ್ನ

40 ಸಿಸಿ ಕ್ಯಾಮರಾಗಳ ಪೂಟೇಜ್ ಪರಿಶೀಲನೆ | ಸುಳ್ಯ ಬ್ಯಾನರ್ ವಿವಾದಕ್ಕೆ ತೆರೆ ! Read More »

ಬ್ಯಾನರ್ ಪ್ರಕರಣ : 24 ಗಂಟೆಯಲ್ಲಿ ಆರೋಪಿಗಳನ್ನು‌ ಬಂಧಿಸದಿದ್ದಲ್ಲಿ ಪ್ರತಿಭಟನೆ : ವರ್ಷಿತ್‌ ಚೊಕ್ಕಾಡಿ

ಸುಳ್ಯ: ಅಯೋಧ್ಯ ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಸಲುವಾಗಿ ಹಾಕಲಾದ ಬ್ಯಾನರ್ ನ್ನು ರಾತ್ರಿ ಹೊತ್ತಿನಲ್ಲಿ ಯಾರೋ ಕಿಡಿಗೇಡಿಗಳು ಹಾನಿ ಮಾಡಿದ್ದು, ಆರೋಪಿಗಳನ್ನು ಪೊಲೀಸ್ ಇಲಾಖೆ ಮುಂದಿನ 24 ಗಂಟೆಯೊಳಗೆ ಬಂಧಿಸದಿದ್ದರೆ ಪ್ರತಿಭಟನೆ ಮಾಡಲಿದ್ದೇವೆ ಎಂದು ಬಜರಂಗದಳ ಸುಳ್ಯ ನಗರ ಸಂಚಾಲಕರು ವರ್ಷಿತ್ ಚೊಕ್ಕಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಾಳೆ ಬೆಳಗ್ಗೆ 10.00 ಗಂಟೆಗೆ ರಾಜ್ಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ಮಾಡಲಿದ್ದೇವೆ. ಬ್ಯಾನರ್ ಹರಿಯುವ ಮೂಲಕ ಈ ರೀತಿಯ ವಿಕೃತಿ ಮರೆದು ಶಾಂತಿ ಭಂಗ ಉಂಟುಮಾಡುಲು

ಬ್ಯಾನರ್ ಪ್ರಕರಣ : 24 ಗಂಟೆಯಲ್ಲಿ ಆರೋಪಿಗಳನ್ನು‌ ಬಂಧಿಸದಿದ್ದಲ್ಲಿ ಪ್ರತಿಭಟನೆ : ವರ್ಷಿತ್‌ ಚೊಕ್ಕಾಡಿ Read More »

ಸುಳ್ಯ ಬ್ಯಾನರ್ ಹರಿದ ಪ್ರಕರಣ | ಆರೋಪಿಗಳನ್ನು ಬಂಧಿಸುವಂತೆ ಆಗ್ರಹ

ಸುಳ್ಯ : ಶ್ರೀರಾಮಚಂದ್ರನ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಬ್ಯಾನರನ್ನು ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ನಳಿನ್ ಕುಮಾರ್ ಕಟೀಲ್ ಖಂಡನೆ ವ್ಯಕ್ತಪಡಿಸಿದ್ದಾರೆ. ಸುಳ್ಯ ಜಾತ್ರೆ ಹಾಗೂ ಅಯೋಧ್ಯೆ ರಾಮಮಂದಿರ ಮತ್ತು ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ ಬಿಎಂಎಸ್ ನ ಬೆಳ್ಳಿಹಬ್ಬಕ್ಕೆ ಶುಭಕೋರಿ ಬೃಹತ್ ಬ್ಯಾನರ್ ಅಳವಡಿಕೆ ಮಾಡಲಾಗಿತ್ತು. ಇದನ್ನು ಯಾರೋ ಕಿಡಿಗೇಡಿಗಳು ಶ್ರೀರಾಮ ದೇವರ ಸಹಿತ ರಾಮಮಂದಿರ ಲೋಕಾರ್ಪಣೆ ವಿಷಯದ ಬ್ಯಾನ‌ರ್ ನ್ನು ಹರಿದು ಹಾಕಿದ್ದಾರೆ. ಈ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್

ಸುಳ್ಯ ಬ್ಯಾನರ್ ಹರಿದ ಪ್ರಕರಣ | ಆರೋಪಿಗಳನ್ನು ಬಂಧಿಸುವಂತೆ ಆಗ್ರಹ Read More »

ಮಹಿಳೆಗೆ ಆ್ಯಸಿಡ್ ಎರಚುವ ಬೆದರಿಕೆ!!  ಪ್ರಕರಣ ದಾಖಲು

ಬೆಳ್ಳಾರೆ : ಮಹಿಳೆಯೋರ್ವರ ಮೇಲೆ ಆ್ಯಸಿಡ್ ಎರಚುವುದಾಗಿ ಬೆದರಿಕೆ ಹಾಕಿರುವ ಕುರಿತು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಳ್ತಿಗೆ ನಿವಾಸಿ ಚಿತ್ರಪ್ರಭಾ ರೈ ನೀಡಿರುವ ದೂರಿನ ಮೇರೆಗೆ ಪ್ರದೀಪ್ ಶೆಟ್ಟಿ, ಭಾಸ್ಕರ ರೈ ಧರ್ಮಸ್ಥಳ, ರವೀಂದ್ರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸರಳ ರೈ, ಜಯಶ್ರೀ ಶೆಟ್ಟಿ, ಕನ್ಯಾಕುಮಾರಿ ರೈ, ಕಾವ್ಯ ರೈ, ಅಮಿತಾ ರೈ, ವಾರಿಜ ರೈ, ಯತೀಂದ್ರನಾಥ ಶೆಟ್ಟಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಚಿತ್ರಪ್ರಭಾ ರೈ ಎಂಬವರು ಶುಕ್ರವಾರ ಸಂಜೆ ಮನೆಗೆ ನಡೆದುಕೊಂಡು

ಮಹಿಳೆಗೆ ಆ್ಯಸಿಡ್ ಎರಚುವ ಬೆದರಿಕೆ!!  ಪ್ರಕರಣ ದಾಖಲು Read More »

ಬ್ಯಾನರ್ ಹರಿದ ಪ್ರಕರಣ : ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಸುಳ್ಯ: ಸುಳ್ಯ ಜಾತ್ರೋತ್ಸವ ಹಾಗೂ ಅಯೋಧ್ಯೆ ರಾಮಮಂದಿರ ಕುರಿತು ಹಾಕಿರುವ ಬ್ಯಾನರ್ ಒಂದನ್ನು ಹರಿದ ಪ್ರಕರಣ ಸುಳ್ಯದಲ್ಲಿ ನಡೆದಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಹಳೆ ಬಸ್ಸು ನಿಲ್ದಾಣದ ಬಳಿಯಲ್ಲಿ ಆಟೋ ಚಾಲಕ ಮಾಲಕರು ಸುಳ್ಯ ಜಾತ್ರೋತ್ಸವ, ಅಯೋಧ್ಯೆ ರಾಮ ಮಂದಿರ ಮತ್ತು ಬೆಳ್ಳಿ ಹಬ್ಬ ಸಂಭ್ರಮದ ಶುಭಕೋರುವ ಬ್ಯಾನರ್ ಕೆಲ ದಿನಗಳ ಹಿಂದೆ ಅಳವಡಿಸಲಾಗಿತ್ತು ಆದರೆ ಇಂದು ಮುಂಜಾನೆ ನೋಡಿದಾಗ ಬ್ಯಾನ‌ರ್ ನಲ್ಲಿ ರಾಮ ಮಂದಿರದ ಚಿತ್ರವಿರುವ ಸ್ಥಳವನ್ನು ಮಾತ್ರ ಹರಿದು

ಬ್ಯಾನರ್ ಹರಿದ ಪ್ರಕರಣ : ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ Read More »

ವಿದ್ಯುತ್ ಶಾಕ್ : ಲೈನ್‍ ಮ್ಯಾನ್ ಮೃತ್ಯು

ಸುಬ್ರಹ್ಮಣ್ಯ: ವಿದ್ಯುತ್ ಶಾಕ್ ತಗುಲಿ ಲೈನ್ ಮ್ಯಾನ್‌ ಓರ್ವರು ಮೃತಪಟ್ಟ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಬಳ್ಪದ ಪಾದೆ ಎಂಬಲ್ಲಿ ಶುಕ್ರವಾರ ನಡೆದಿದೆ. ಹಾಸನ ಜಿಲ್ಲೆಯ ಹೊಳೆನರಸಿಪುರ ಸಿಗರನಹಳ್ಳಿ ನಿವಾಸಿ ರಘು ಎಸ್‍.ಆರ್‍. (32) ಮೃತಪಟ್ಟವರು. ಬಳ್ಪದಲ್ಲಿ ಪವರ್‌ಮ್ಯಾನ್ ಆಗಿದ್ದ ರಘು ಎಸ್.ಆರ್. ಬಳ್ಪದ ಪಾದೆ ಸಮೀಪದ ನರಿಯಂಗ ಎಂಬಲ್ಲಿ ವಿದ್ಯುತ್‌ ಕಂಬ ಹತ್ತಿ ಕೆಲಸ ನಿರ್ವಹಣೆ ವೇಳೆ ಆಕಸ್ಮಿಕವಾಗಿ ವಿದ್ಯುತ್‌ ಪ್ರವಹಿಸಿ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಮೆಸ್ಕಾಂ

ವಿದ್ಯುತ್ ಶಾಕ್ : ಲೈನ್‍ ಮ್ಯಾನ್ ಮೃತ್ಯು Read More »

error: Content is protected !!
Scroll to Top