ದಕ್ಷಿಣ ಕನ್ನಡ

ಸಹೋದರರೊಳಗೆ ಗಲಾಟೆ | ಹಲ್ಲೆ, ಜೀವ ಬೆದರಿಕೆ ಪ್ರಕರಣ ದಾಖಲು

ಕಡಬ: ಕಳೆ ಕೀಳುವ ವೇಳೆ ಸಹೋದರರೊಳಗೆ ಗಲಾಟೆ ನಡೆದು ಹಲ್ಲೆ ನಡೆದ ಘಟನೆ ಕಡಬದಲ್ಲಿ ಭಾನುವಾರ ನಡೆದಿದೆ. ವಸಂತ ಹಾಗೂ ಪತ್ನಿ ಹೇಮಲತಾ ಹಲ್ಲೆ ನಡೆಸಿದ ಆರೋಪಿಗಳೆಂದು ಗುರುತಿಸಲಾಗಿದೆ. ರೆಂಜಿಲಾಡಿ ಗ್ರಾಮದ ಗಂಗಾಧರ ಎಂಬವರು ತಮ್ಮ ಮನೆಯ ಎದುರು ಕಳೆಯನ್ನು ಮೆಷಿನ್‍ನಲ್ಲಿ ತೆಗೆಯುತ್ತಿದ್ದ ವೇಳೆ ಅವರ ಅಣ್ಣ ವಸಂತ ಸ್ಥಳಕ್ಕೆ ಬಂದು ಆಕ್ಷೇಪ ವ್ಯಕ್ತಪಡಿಸಿ ಮೆಷಿನನ್ನು ಎಳೆದು ಗಂಗಾಧರ ಹಾಗೂ ಪತ್ನಿ ಗುಣಶ್ರೀ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ಸಂದರ್ಭ ವಸಂತ ಅವರ […]

ಸಹೋದರರೊಳಗೆ ಗಲಾಟೆ | ಹಲ್ಲೆ, ಜೀವ ಬೆದರಿಕೆ ಪ್ರಕರಣ ದಾಖಲು Read More »

ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿ ಪ್ರಪಾತಕ್ಕೆ !

ಚಾರ್ಮಾಡಿ: ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿಯೊಂದು ಪ್ರಪಾತಕ್ಕೆ ಬಿದ್ದಿದ್ದು, ಚಾಲಕ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂಡಿಗೆರೆಯಿಂದ ಮಂಗಳೂರಿಗೆ ಹೋಗುತ್ತಿದ್ದ ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿದೆ. ಟಿಪ್ಪರ್ ಉರುಳಿ ಬಿಳುತ್ತಿದ್ದಂತೆ ಚಾಲಕ ಲಾರಿಯಿಂದ ಜಿಗಿದಿದ್ದಾನೆ ಎನ್ನಲಾಗಿದೆ. ಬಣಕಲ್ ಪೊಲೀಸರು ಹಾಗೂ ಸ್ಥಳೀಯರು ಪ್ರಪಾತಕ್ಕೆ ಇಳಿದು ಲಾರಿಗಾಗಿ ಶೋಧ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿ ಪ್ರಪಾತಕ್ಕೆ ! Read More »

ಕಾರು ಚಾಲಕನ ನಿಯಂತ್ರಣ ತಪ್ಪಿ ಮಹಿಳೆಗೆ ಡಿಕ್ಕಿ : ಗಂಭೀರ ಗಾಯ

ಬೆಳ್ತಂಗಡಿ: ಕಾರು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆ ಬದಿ ನಿಂತಿದ್ದ ಮಹಿಳೆಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಅಯ್ಯಪ್ಪನ ನಗರದ ಬಳಿ ನಡೆದಿದೆ. ಅಂಜಲಿ ಶೆಣೈ ಅಪಘಾತದಿಂದ ಗಂಭೀರ ಗಾಯಗೊಂಡವರು. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಘಾತದ ಬಳಿಕ ಕಾರು ಚಾಲಕ ಪರಾರಿಯಾಗಿದ್ದು, ಬಳಿಕ ಠಾಣೆಗೆ ಬಂದು ಶರಣಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಚಾಲಕನ ನಿಯಂತ್ರಣ ತಪ್ಪಿ ಮಹಿಳೆಗೆ ಡಿಕ್ಕಿ : ಗಂಭೀರ ಗಾಯ Read More »

ಅಯೋಧ್ಯೆ ಕಾರ್ಯಕ್ರಮದ ಬ್ಯಾನರ್ ಹರಿದ ಕಿಡಿಗೇಡಿಗಳು !

ಸುಳ್ಯ: ಕಳೆದ ವಾರವಷ್ಟೇ ಸದ್ದು ಮಾಡಿದ ಬ್ಯಾನ್ ಹರಿದ ವಿಚಾರ ಮಾಸುವ ಮುನ್ನವೇ ಇದೀಗ ಮತ್ತೊಂದು ಅಯೋಧ್ಯೆ ಕಾರ್ಯಕ್ರಮಕ್ಕೆ ಶುಭಕೋರಿ ಹಾಕಿದ ಬ್ಯಾನರನ್ನು ಕಿಡಿಗೇಡಿಗಳು ಹರಿದು ಹಾಕಿದ ಘಟನೆ ಸುಳ್ಯ ತಾಲೂಕಿನ ಅಡ್ಕಾರು ಬಳಿ ಗುರುವಾರ ನಡೆದಿದೆ. ಅಡ್ಕಾರು ಕಾರ್ತಿಕೇಯ ಯುವ ಸೇವಾ ಸಮಿತಿಯವರು ಜ.22 ರಂದು ಅಯೋಧ್ಯೆ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಶುಭಕೋರಿ ಬ್ಯಾನರ್ ಅಳವಡಿಸಿದ್ದರು. ಬುಧವಾರ ರಾತ್ರಿ ಯಾರೋ ಕಿಡಿಗೇಡಿಗಳು ಬ್ಯಾನರ್‍ ನ ಮಧ್ಯಭಾಗವನ್ನು ಹರಿದು ಹಾಕಿದ್ದಾರೆ. ಇದೀಗ ಈ ಘಟನೆಯಿಂದ ಆಕ್ರೋಶ

ಅಯೋಧ್ಯೆ ಕಾರ್ಯಕ್ರಮದ ಬ್ಯಾನರ್ ಹರಿದ ಕಿಡಿಗೇಡಿಗಳು ! Read More »

ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿದ ದರೋಡೆಕೋರರು | ಲಕ್ಷಾಂತರ ರೂ. ನಗ-ನಗದು ದೋಚಿ ಪರಾರಿ!!

ಬಂಟ್ವಾಳ: ಬೆಳ್ಳಂಬೆಳಗ್ಗೆ ಮನೆಯೊಂದಕ್ಕೆ ನುಗ್ಗಿದ  ನಾಲ್ವರು ಮುಸುಕುಧಾರಿ ತಂಡ ಮನೆಯಲ್ಲಿದ್ದ ತಾಯಿ ಮಗಳಿಗೆ ಚೂರಿ ತೋರಿಸಿ ಲಕ್ಷಾಂತರ ರೂ ನಗ-ನಗದನ್ನು ದೋಚಿದ ಘಟನೆ ವಗ್ಗ ಸಮೀಪದ ಅಂಚಿಕಟ್ಟೆ ಸಾಲುಮರ ತಿಮ್ಮಕ್ಕನ ಟೀ ಪಾರ್ಕ್ ಮುಂಭಾಗದಲ್ಲಿ ಗುರುವಾರ ನಡೆದಿದೆ. ಮನೆಯಲ್ಲಿ ತಾಯಿ ಪ್ಲೋರಿನಾ ಪಿಂಟೋ ಹಾಗೂ ಮಗಳು ಮರಿನಾ ಪಿಂಟೋ ಇಬ್ಬರೇ ಇದ್ದ ಸಂದರ್ಭ ಮನೆಗೆ ನುಗ್ಗಿದ ಕಳ್ಳರು ತಾಯಿ-ಮಗಳಿಗೆ ಚಾಕು ತೋರಿಸಿ ಕಪಾಟಿನಲ್ಲಿದ್ದ ಸುಮಾರು 2.90 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 30 ಸಾವಿರ ನಗದು ಹಾಗೂ

ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿದ ದರೋಡೆಕೋರರು | ಲಕ್ಷಾಂತರ ರೂ. ನಗ-ನಗದು ದೋಚಿ ಪರಾರಿ!! Read More »

ವಿಕಸಿತ ಭಾರತ ನನಸಾಗುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ ನಡೆಯುತ್ತಿದೆ | ಬಳ್ಪ ಗ್ರಾಮೋತ್ಸವ – 2024 ಕಾರ್ಯಕ್ರಮದಲ್ಲಿ ಸಚಿವ ಖೂಬ ಮೆಚ್ಚುಗೆ

ಬಳ್ಪ; ಬಳ್ಪ ಗ್ರಾಮ ಪಂಚಾಯಿತಿಯಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆಯ ಮೂಲಕ 58 ಕೋಟಿ ರೂ. ವೆಚ್ಚದಲ್ಲಿ ಗ್ರಾಮದ ಅಭಿವೃದ್ಧಿ ನಡೆದಿರುವುದು ದೇಶಕ್ಕೆ ಮಾದರಿ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆಯ ಸಚಿವ ಭಗವಂತ ಖೂಬ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬುಧವಾರ ಬಳ್ಪ – ಕೇನ್ಯದ ಗ್ರಾಮ ಉತ್ಸವ ಸಮಿತಿ ಆಶ್ರಯದಲ್ಲಿ ನಡೆದ ಸಂಸದರ ಆದರ್ಶ ಗ್ರಾಮದ ಗ್ರಾಮೋತ್ಸವ -2024 ಕಾರ್ಯಕ್ರಮದಲ್ಲಿ ಮಾತನಾಡಿದರು. ಕುಗ್ರಾಮದಲ್ಲೂ ಕಡುಬಡವರ ಅಭಿವೃದ್ಧಿಗಾಗಿ ಸಂಸದರ ಆದರ್ಶ ಗ್ರಾಮದ ಜೊತೆ ಹಲವು

ವಿಕಸಿತ ಭಾರತ ನನಸಾಗುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ ನಡೆಯುತ್ತಿದೆ | ಬಳ್ಪ ಗ್ರಾಮೋತ್ಸವ – 2024 ಕಾರ್ಯಕ್ರಮದಲ್ಲಿ ಸಚಿವ ಖೂಬ ಮೆಚ್ಚುಗೆ Read More »

ಸ್ಕೂಟರ್ ಗೆ ಸರಕಾರಿ ಬಸ್ ಡಿಕ್ಕಿ | ವಿದ್ಯಾರ್ಥಿನಿಗೆ ಗಂಭೀರ ಗಾಯ !

ಪುಂಜಾಲಕಟ್ಟೆ: ಸ್ಕೂಟರ್ ಗೆ ಸರಕಾರಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರೆ, ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡ ಘಟನೆ ವಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ನಡೆದಿದೆ. ಅಲ್ಲಿಪಾದೆ ಪೆರಿಯಾರ್ ದೋಟ ನಿವಾಸಿ ಗೋಪಾಲ ಸಫಲ್ಯರ ಪುತ್ರಿ, ವಾಮದಪದವು ಕಾಲೇಜು ವಿದ್ಯಾರ್ಥಿನಿ ಪಲ್ಲವಿ ಗಂಭೀರ ಗಾಯಗೊಂಡವರು. ಧರ್ಮಸ್ಥಳದಿಂದ ಮಂಗಳೂರಿಗೆ ಹೋಗುತ್ತಿದ್ದ ಸರಕಾರಿ ಬಸ್ ಇನ್ನೊಂದು ಬಸ್ ನ್ನು ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರ್ ಗೆ ಡಿಕ್ಕಿಯಾದ ಪರಿಣಾಮ ಪಲ್ಲವಿ ಗಂಭೀರ ಗಾಯಗೊಂಡರೆನ್ನಲಾಗಿದೆ. ಅವರನ್ನು ಮಂಗಳೂರು ಫಾದ‌ರ್ ಮುಲ್ಲರ್

ಸ್ಕೂಟರ್ ಗೆ ಸರಕಾರಿ ಬಸ್ ಡಿಕ್ಕಿ | ವಿದ್ಯಾರ್ಥಿನಿಗೆ ಗಂಭೀರ ಗಾಯ ! Read More »

ತೋಟಕ್ಕೆ ನುಗ್ಗಿದ ಕಾಡಾನೆ : ಕೃಷಿ ಹಾನಿ !

ಬೆಳ್ತಂಗಡಿ: ಒಂಟಿಸಲಗವೊಂದು ಕೃಷಿ ಭೂಮಿಗೆ ನುಗ್ಗಿ ಕೃಷಿಗೆ ಹಾನಿಯುಂಟುಮಾಡಿದ ಘಟನೆ ಧರ್ಮಸ್ಥಳ ಗ್ರಾಮದ ಮುಳಿಕಾರಿನಲ್ಲಿ ನಡೆದಿದೆ. ಬುಧವಾರ ಬೆಳಗ್ಗಿನ ಜಾವ ಮುಳಿಕಾರು ನಿವಾಸಿ ಡೀಕಯ್ಯ ಮಲೆಕುಡಿಯ ಎಂಬವರ ತೋಟಕ್ಕೆ ನುಗ್ಗಿ ತೆಂಗಿನ ಮರವನ್ನು ನೆಲಕ್ಕುರುಳಿಸಿ ಪುಡಿಗೈದ ಕಾಡಾನೆ, ಅಡಿಕೆ, ಬಾಳೆ ಗಿಡಗಳಿಗೂ ಹಾನಿಯುಂಟುಮಾಡಿದೆ. ಕಳೆದ ಕೆಲದಿನಗಳಿಂದ ಕಾಡಾನೆಯೊಂದು ಇದೇ ಪರಿಸರದ ಅರಣ್ಯದಲ್ಲಿ ತಿರುಗಾಟ ನಡೆಸುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮುಳಿಕಾರಿನ ಅರಣ್ಯದಲ್ಲಿಯೇ ತಿರುಗಾಡುತ್ತಿರುವ ಆನೆ ರಾತ್ರಿ ಮತ್ತೆ ಕೃಷಿ ಭೂಮಿಗೆ ಹಾನಿ ಮಾಡುವ ಅಪಾಯವಿದ್ದು ಸ್ಥಳೀಯರಲ್ಲಿ

ತೋಟಕ್ಕೆ ನುಗ್ಗಿದ ಕಾಡಾನೆ : ಕೃಷಿ ಹಾನಿ ! Read More »

ಸುಳ್ಯ ಸಹಕಾರಿ ಬ್ಯಾಂಕ್‍ ಅಧ್ಯಕ್ಷರಾಗಿ ವಿಕ್ರಂ ಎ.ವಿ.ಅಡ್ಪಂಗಾಯ, ಉಪಾಧ್ಯಕ್ಷರಾಗಿ ಚಂದ್ರಶೇಖರ ಆಯ್ಕೆ

ಸುಳ್ಯ: ಸುಳ್ಯದ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾಗಿ ವಿಕ್ರಂ ಎ.ವಿ.ಅಡ್ಪಂಗಾಯ, ಉಪಾಧ್ಯಕ್ಷರಾಗಿ ನ್ಯಾಯವಾದಿ ಚಂದ್ರಶೇಖರ ಆಯ್ಕೆಯಾಗಿದ್ದಾರೆ. ಬುಧವಾರ ನಡೆದ ಚುನಾವಣೆಯಲ್ಲಿ ಬ್ಯಾಂಕ್‍ ನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಿತು. ಈ ಸಂದರ್ಭದಲ್ಲಿ ನಿರ್ದೇಶಕರು, ಚುನಾವಣಾ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಸುಳ್ಯ ಸಹಕಾರಿ ಬ್ಯಾಂಕ್‍ ಅಧ್ಯಕ್ಷರಾಗಿ ವಿಕ್ರಂ ಎ.ವಿ.ಅಡ್ಪಂಗಾಯ, ಉಪಾಧ್ಯಕ್ಷರಾಗಿ ಚಂದ್ರಶೇಖರ ಆಯ್ಕೆ Read More »

ಬಳ್ಪ ‘ಸಂಸದರ ಆದರ್ಶ ಗ್ರಾಮ’ ಕಾರ್ಯಕ್ರಮಕ್ಕೆ ಚಾಲನೆ

ಬಳ್ಪ: ಬಳ್ಪ-ಕೇನ್ಯ ಗ್ರಾಮ ವಿಕಾಸ ಪ್ರತಿಷ್ಠಾನದ ಹಾಗೂ ಗ್ರಾಮ ಉತ್ಸವ ಸಮಿತಿ ವತಿಯಿಂದ ಸಂಸದರ ಆದರ್ಶ ಗ್ರಾಮದ ಗ್ರಾಮೋತ್ಸವ-2024 ಕಾರ್ಯಕ್ರಮಗಳಿಗೆ ಬುಧವಾರ ಚಾಲನೆ ನೀಡಲಾಯಿತು. ಸಂಸದ ನಳಿನ ಕುಮಾರ್ ಕಟೀಲ್ ಅವರು ಅಡಕೆ ಟ್ರಾಲಿಗೆ ಚಾಲನೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಆಶಯವಾಗಿ ಬಳ್ಪ ಗ್ರಾಮವನ್ನು ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಅಭಿವೃದ್ಧಿಪಡಿಸಿದ್ದು, ರಾಜ್ಯದಲ್ಲಿ ಅತೀ ಹೆಚ್ಚುನ ಅನುದಾನ ಬಳಕೆಯ ಗ್ರಾಮವಾಗಿ ಬಳ್ಪ ಗ್ರಾಮ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾರ್ಯಕ್ರಮದಲ್ಲಿ ಬಾಲಕೃಷ್ಣ

ಬಳ್ಪ ‘ಸಂಸದರ ಆದರ್ಶ ಗ್ರಾಮ’ ಕಾರ್ಯಕ್ರಮಕ್ಕೆ ಚಾಲನೆ Read More »

error: Content is protected !!
Scroll to Top