ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮಂಗಳೂರು ಶಾಖಾಮಠದ ಸುವರ್ಣ ಮಹೋತ್ಸವದ ಸಂಭ್ರಮ | ಪೂಜ್ಯ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರಿಂದ ಚಪ್ಪರ ಮುಹೂರ್ತ
ಮಂಗಳೂರು : ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮಂಗಳೂರು ಶಾಖಾಮಠದ ಸುವರ್ಣ ಮಹೋತ್ಸವವು ಜನವರಿ 1 ಮತ್ತು 2 ರಂದು ನಡೆಯಲಿದ್ದು, ಕಾರ್ಯಕ್ರಮದ ಪೂರ್ವಭಾವಿ ತಯಾರಿಯ ಅಂಗವಾಗಿ ನಿರ್ಮಾಣಗೊಳ್ಳಲಿರುವ ಯಾಗಶಾಲೆ, ಪಾಕಶಾಲೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ಮುಂತಾದವುಗಳ ನಿರ್ಮಾಣ ಕಾರ್ಯದ ಪ್ರಾರಂಭೋತ್ಸವದ ಸಲುವಾಗಿ ಇಂದು ಬೆಳಿಗ್ಗೆ ಚಪ್ಪರ ಮುಹೂರ್ತ ನಡೆಯಿತು. ಪೂಜ್ಯ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರು ಚಪ್ಪರ ಮುಹೂರ್ತ ನಡೆಸಿದರು. ಕಾರ್ಯಕ್ರಮದಲ್ಲಿ ಸುಬ್ಬಕಾರಡ್ಕ, ಸುಬ್ರಹ್ಮಣ್ಯ ಭಟ್, ಕುಮಾರ. ಬಿ. ಕೆ. , ಸ್ವಾಮಿರಾವ್ , ರಣದೀಪ […]