ದಕ್ಷಿಣ ಕನ್ನಡ

ದ.ಕ.ಜಿಲ್ಲೆ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಆರ್.ಅಶೋಕ್‍

ಮಂಗಳೂರು: ರಾಜ್ಯ ವಿಪಕ್ಷ ನಾಯಕ ಆರ್.ಅಶೋಕ್ ಇಂದು ದ.ಕ.ಜಿಲ್ಲೆ ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್‍, ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಬಿಜೆಪಿ ಮುಖಂಡರು ಅವರನ್ನು ಸ್ವಾಗತಿಸಿದರು. ಬಳಿಕ ನೆರೆಪೀಡಿತ ಪ್ರದೇಶಗಳಿಗೆ ಅವರು ಭೇಟಿ ನೀಡಿ ವೀಕ್ಷಿಸಿದರು.

ದ.ಕ.ಜಿಲ್ಲೆ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಆರ್.ಅಶೋಕ್‍ Read More »

ಕಣಿಯ ದೊಡ್ಡಮನೆ ಬೆಳಿಯಪ್ಪ ಗೌಡ ನಿಧನ.

ಉಪ್ಪಿನಂಗಡಿ : ಬಜತ್ತೂರು ಗ್ರಾಮದ ಕಣಿಯ ದೊಡ್ಡಮನೆ ತರವಾಡು ಮನೆಯ ಯಜಮಾನ, ಕೆ ಎಸ್ ಆರ್ ಟಿ ಸಿಸಂಸ್ಥೆಯ ನಿವೃತ್ತ ಟಿಸಿ ಬೆಳಿಯಪ್ಪ ಗೌಡ (76) ಅವರು ಮಂಗಳವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಉಪ್ಪಿನಂಗಡಿಯಲ್ಲಿ ನೆರೆ ವೀಕ್ಷಿಸಿ ಅಂಚೆಕಚೇರಿಗೆ ತೆರಳಿ ಅಲ್ಲಿಂದ ಹೊರಬರುತ್ತಿರುವಾಗ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಉಪ್ಪಿನಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಚಿಕ್ಸಿತೆ ಫಲಕಾರಿಯಾಗದೆ ಮೃತಪಟ್ಟರು. ಪುತ್ತೂರು ಕೆ ಎಸ್ ಆರ್ ಟಿ ಸಿ ಯಲ್ಲಿ ನಿರ್ವಾಹಕನಾಗಿ ಸೇವೆಗೆ ಸೇರಿದ್ದ ಬೆಳಿಯಪ್ಪ ಗೌಡ ಅವರು

ಕಣಿಯ ದೊಡ್ಡಮನೆ ಬೆಳಿಯಪ್ಪ ಗೌಡ ನಿಧನ. Read More »

ಅಕ್ರಮ ಮರದ ದಿಮ್ಮಿ ಸಾಗಾಟ ಪತ್ತೆ ಹಚ್ಚಿದ ಅರಣ್ಯ ಸಂಚಾರಿ ದಳ

ಮಂಗಳೂರು : ಕೇರಳಕ್ಕೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನ ಸಮೇತ ರೂ. 5.50 ಲಕ್ಷ ಮೌಲ್ಯದ ಅಕೇಶಿಯ, ಮ್ಯಾಂಜಿಯಮ್ ದಿಮ್ಮಿಗಳನ್ನು ಮಂಗಳೂರಿನ ಅರಣ್ಯ ಸಂಚಾರಿ ದಳದ ವತಿಯಿಂದ ವಾಹನ ಸಮೇತ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಥೋನಿ ಮರಿಯಪ್ಪ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಅರಣ್ಯ ಸಂಚಾರಿದಳ ವಲಯ ಅರಣ್ಯಾಧಿಕಾರಿ ಪ್ರಶಾಂತ್‌ ಕುಮಾ‌ರ್ ಪೈ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಈ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಪ್ರಶಾಂತ್, ಶಿವಾನಂದ ಮಾದರ, ನವೀನ ರಿಚರ್ಡ್ ಡಿ’ಸೋಜ ಹಾಗೂ

ಅಕ್ರಮ ಮರದ ದಿಮ್ಮಿ ಸಾಗಾಟ ಪತ್ತೆ ಹಚ್ಚಿದ ಅರಣ್ಯ ಸಂಚಾರಿ ದಳ Read More »

ಭಾರೀ ಮಳೆಯ ಹಿನ್ನಲೆಯಲ್ಲಿ ದ.ಕ.ಜಿಲ್ಲಾದ್ಯಂತ ಜು.31 ರಂದು ಶಾಲಾ-ಕಾಲೇಜುಗಳಿಗೆ ರಜೆ

ಮಂಗಳೂರು: ಭಾರೀ ಮಳೆಯ ಹಿನ್ನಲೆಯಲ್ಲಿ ದ,ಕ.ಜಿಲ್ಲಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದು, ದ.ಕ., ಕಾಸರಗೋಡು ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಸಮುದ್ರ ತೀರ ಪ್ರದೇಶಗಳಿಗೆ, ತುಂಬಿ ಹರಿಯುತ್ತಿರುವ ನದಿ ಸಮೀಪ ಸಾರ್ವಜನಿಕರು ತೆರಳದಂತೆ, ಮೀನುಗಾರಿಕೆಗೆ ತೆರಳದಂತೆ ಆದೇಶ ನೀಡಲಾಗಿದೆ.

ಭಾರೀ ಮಳೆಯ ಹಿನ್ನಲೆಯಲ್ಲಿ ದ.ಕ.ಜಿಲ್ಲಾದ್ಯಂತ ಜು.31 ರಂದು ಶಾಲಾ-ಕಾಲೇಜುಗಳಿಗೆ ರಜೆ Read More »

ಭಾರೀ ಮಳೆ : ಪುಣ್ಚತ್ತಾರಿನ ಭಜನಾ ಮಂದಿರ, ಅಂಗಡಿಗಳಿಗೆ ನುಗ್ಗಿದ ನೀರು | ಭಜನಾ ಮಂದಿರದ ಬಳಿ ಗಂಗಾರತಿ

ಕಾಣಿಯೂರು: ಪುಣ್ಚತ್ತಾರಿನಲ್ಲಿ ಪೇಟೆಯಲ್ಲಿರುವ ಭಜನಾಮಂದಿರ ಹಾಗೂ ಅಂಗಡಿಗಳಿಗೆ ನೀರು ನುಗ್ಗಿದ ಪರಿಣಾಮ ಕಾಣಿಯೂರು-ಸುಬ್ರಹ್ಮಣ್ಯ ಸಂಪರ್ಕ ಕಡಿತಗೊಂಡಿದೆ. ಈ ಸಂದರ್ಭದಲ್ಲಿ ನೀರು ಇಳಿಕೆಯಾಗಲು ಭಜನಾ ಮಂದಿರದ ಬಳಿ ಗಂಗಾರತಿ ನಡೆಸಲಾಯಿತು. ಕಾಣಿಯೂರಿನಲ್ಲೂ ಭಾರಿ ಪ್ರಮಾಣದಲ್ಲಿ ನೀರು ಏರಿಕೆಯಾಗಿ ತೋಟಗಳಿಗೆ ನುಗ್ಗಿದೆ. ಕಾಣಿಯೂರು ಮಠಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಈಗಾಗಲೇ ಸಂಚಾರ ಸ್ಥಗಿತವಾಗಿದೆ. ಈ ರಸ್ತೆಯಲ್ಲಿ ಸಂಚರಿಸುವವರು ಚಾರ್ವಾಕ ಮೂಲಕ ಎಡಮಂಗಲಕ್ಕೆ ಸಂಚರಿಸಿ ಅಲ್ಲಿಂದ ಸಾಗಬಹುದು ಮತ್ತು ಬೆಳ್ಳಾರೆ ಸುಬ್ರಹ್ಮಣ್ಯ ರಸ್ತೆಯಲ್ಲೂ ಸಂಚರಿಸಬಹುದು.

ಭಾರೀ ಮಳೆ : ಪುಣ್ಚತ್ತಾರಿನ ಭಜನಾ ಮಂದಿರ, ಅಂಗಡಿಗಳಿಗೆ ನುಗ್ಗಿದ ನೀರು | ಭಜನಾ ಮಂದಿರದ ಬಳಿ ಗಂಗಾರತಿ Read More »

ಶೇಖಮಲೆಯಲ್ಲಿ ಗುಡ್ಡ ಕುಸಿದು ಪುತ್ತೂರು – ಸುಳ್ಯ ರಾಷ್ಟ್ರೀಯ ಹೆದ್ದಾರಿ ಬಂದ್

ಪುತ್ತೂರು :  ಮೈಸೂರು – ಮಾಣಿ ಹೆದ್ದಾರಿಯ ಶೇಖಮಲೆ ಶಾಲೆಯ ಬಳಿ ಗುಡ್ಡ ಕುಸಿತ ಸಂಭವಿಸಿದೆ. ಭಾರೀ ಗುಡ್ಡ ಕುಸಿದ ಪ್ರಮಾಣದಲ್ಲಿ ಮಣ್ಣು ಕುಸಿದು ಬಿದ್ದು ರಸ್ತೆ ತಡೆ ಉಂಟಾಗಿದೆ. ಗುಡ್ಡ ಕುಸಿತದಿಂದಾಗಿ 4 ವಿದ್ಯುತ್ ಕಂಬಗಳು ನೆಲಕ್ಕುರುಳಿದೆ. ಗುಡ್ಡ ಕುಸಿತ ಮುಂದುವರಿದಿದ್ದು, 2 ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದೆ. ಪುತ್ತೂರು ಸುಳ್ಯ ರಸ್ತೆ ಸಂಚಾರ ಬಂದ್ ಆಗಿದೆ.

ಶೇಖಮಲೆಯಲ್ಲಿ ಗುಡ್ಡ ಕುಸಿದು ಪುತ್ತೂರು – ಸುಳ್ಯ ರಾಷ್ಟ್ರೀಯ ಹೆದ್ದಾರಿ ಬಂದ್ Read More »

ಗುಡ್ಡ ಕುಸಿದ : ಅಜಿಲಮೊಗರು- ಸರಳಿಕಟ್ಟೆ – ಉಪ್ಪಿನಂಗಡಿ ಸಂಚಾರ ಬಂದ್

ಉಪ್ಪಿನಂಗಡಿ :  ಭಾರೀ ಗುಡ್ಡ ಕುಸಿದ ಪರಿಣಾಮ ಸರಳಿಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ಅಜಿಲಮೊಗರು ಕಡಿತಗೊಂಡಿದೆ. ಸರಳಿಕಟ್ಟೆ – ಉಪ್ಪಿನಂಗಡಿ ಸಂಪರ್ಕ ಬಾರ್ಯ ಗ್ರಾಮದ ಪಂಜುಕ್ಕು ಎಂಬಲ್ಲಿ ಮಣಿಹಳ್ಳ ಉಪ್ಪಿನಂಗಡಿ ಸಂಪರ್ಕ ಕಲ್ಪಿಸುವ ರಸ್ತೆಗೆ ಗುಡ್ಡ ಕುಸಿದು ಬಿದ್ದ ಕಾರಣ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಬದಲಿ ರಸ್ತೆಯನ್ನು ಪ್ರಯಾಣಿಕರು ಬಳಸುತ್ತಿದ್ದಾರೆ. ಪಂಜುಕ್ಕು ಪ್ರಯಾಣಿಕರ ತಂಗುದಾಣದ ಬಳಿಯೇ ಈ ಘಟನೆ ನಡೆದಿದ್ದು, ಬಸ್‌ ನಿಲ್ದಾಣಕ್ಕೆ ಯಾವುದೇ ಹಾನಿಯಾಗಿಲ್ಲ. ಗುಡ್ಡ ಕುಸಿತದಿಂದ ವಿದ್ಯುತ್

ಗುಡ್ಡ ಕುಸಿದ : ಅಜಿಲಮೊಗರು- ಸರಳಿಕಟ್ಟೆ – ಉಪ್ಪಿನಂಗಡಿ ಸಂಚಾರ ಬಂದ್ Read More »

ಡ್ರಗ್ಸ್ ಜಾಲಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕಾಗಿದೆ | ಲೋಕಸಭೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಪ್ರಸ್ತಾಪ

ನವದೆಹಲಿ : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದಕದ್ರವ್ಯ ವ್ಯಸನೆ ಮತ್ತು ಮಾರಾಟದ ಚಟುವಟಿಗೆಗಳ ಬಗ್ಗೆ ಸದನದ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾದರು. ಪ್ರತಿ ತಿಂಗಳ ಮಾಧ್ಯಮಗಳ ಹೆಡ್‌ಲೈನ್‌ಗಳನ್ನು ನೋಡಿದರೆ, ನಗರದಲ್ಲಿ ಡ್ರಗ್ಸ್‌ನ ಅತಿರೇಕದ ಚಟುವಟಿಕೆಗಳನ್ನು ಸ್ಪಷ್ಟವಾಗಿ ಗಮನಿಸಬಹುದು. ಮಂಗಳೂರು ನಗರವು ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳ ಕೇಂದ್ರವಾಗಿರುವುದರಿಂದ ದೇಶದಾದ್ಯಂತದ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಮಾದಕದ್ರವ್ಯಗಳ ವ್ಯಾಪಾರಕ್ಕೆ ಹೆಚ್ಚಿನ ಅವಕಾಶಗಳು ಇದೆ ಎಂಬುವುದು ಅಲ್ಲಗಳೆಯಲಾಗದ ವಿಷಯ

ಡ್ರಗ್ಸ್ ಜಾಲಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕಾಗಿದೆ | ಲೋಕಸಭೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಪ್ರಸ್ತಾಪ Read More »

ಉತ್ತರ ಕನ್ನಡದ ಐದು ಮಂದಿ ಪಿಎಸ್‍ ಐಗಳು ದಕ್ಷಿಣ ಕನ್ನಡಕ್ಕೆ ವರ್ಗಾವಣೆ

ಮಂಗಳೂರು: ಉತ್ತರ ಕನ್ನಡದಿಂದ ಐದು ಮಂದಿ ಪಿಎಸ್‍ ಐಗಳನ್ನು ದಕ್ಷಿಣ ಕನ್ನಡಕ್ಕೆ ವರ್ಗಾವಣೆ ಮಾಡಲಾಗಿದೆ. ಉತ್ತರಕನ್ನಡದಿಂದ ಗೋಪಾಲ ಎನ್. ನೆಗಳೂರು ಬಂಟ್ವಾಳ ನಗರ ಠಾಣೆಗೆ, ದುರ್ಗಪ್ಪ ಹೆಚ್ ಕಲಘಟಗಿ ಬಂಟ್ವಾಳ ನಗರ ಠಾಣೆಗೆ, ತಿಮ್ಮಪ್ಪ ಎಸ್ ಬೆಡುಮನೆ ಬೆಳ್ಳಾರೆ ಠಾಣೆಗೆ, ಪ್ರಕಾಶ್ ಜಿ ಕಟ್ಟಿ ಉಪ್ಪಿನಂಗಡಿ ಠಾಣೆಗೆ (ಸಂಚಾರ ), ಅಶೋಕ್ ಡಿ ತಳದಪ್ಪನವರ್ ವಿಟ್ಲ ಠಾಣೆಗೆ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಲಾಗಿದೆ. ಪ್ರಮುಖವಾಗಿ ಹಲವು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದ ಪಿ ಎಸ್ ಐ ಗಳನ್ನು ಪದೋನ್ನತಿ ಹೊಂದಿ

ಉತ್ತರ ಕನ್ನಡದ ಐದು ಮಂದಿ ಪಿಎಸ್‍ ಐಗಳು ದಕ್ಷಿಣ ಕನ್ನಡಕ್ಕೆ ವರ್ಗಾವಣೆ Read More »

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರಿಗೆ ಅಂಗರಕ್ಷಕನ ನೇಮಕ

ಬೆಳ್ತಂಗಡಿ : ಶಾಸಕ ಹರೀಶ್ ಪೂಂಜಾ ಅವರಿಗೆ ಬೆದರಿಕೆ ಕರೆ ಬರುವ ಸಾಧ್ಯತೆ ಯ ಹಿನ್ನಲೆಯಲ್ಲಿ ಅಂಗರಕ್ಷಕನನ್ನು ನಿಯೋಜಿಸಲಾಗಿದೆ. ರಾಜ್ಯ ಅಂಗರಕ್ಷಕ ಭದ್ರತಾ ಪುನರ್ ವಿಮರ್ಶನ ಸಮಿತಿ ಸೂಚನೆ ಮೇರೆಗೆ ತಕ್ಷಣ ಜಾರಿಗೆ ಬರುವಂತೆ ಆದೇಶಿಸಲಾಗಿದೆ. ದ.ಕ.ಪೊಲೀಸ್ ಅಧೀಕ್ಷಕರ ಆದೇಶದ ಮೇರೆಗೆ ಓರ್ವ ಅಂಗರಕ್ಷಕನನ್ನು ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರಿಗೆ ಅಂಗರಕ್ಷಕನ ನೇಮಕ Read More »

error: Content is protected !!
Scroll to Top