ದಕ್ಷಿಣ ಕನ್ನಡ

ಶಾಸಕರ ಬೆಂಗಳೂರು ಕಾರ್ಯಕ್ರಮ ರದ್ದು | ಪುತ್ತೂರಿಗೆ ಭೇಟಿ ನೀಡುವಂತೆ ಸಿಎಂ ಬಳಿ ಅಶೋಕ್ ರೈ ಮನವಿ

ಪುತ್ತೂರು: ದ ಕ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು ಕೆಲವೊಂದು ಅನಾಹುತಗಳು ಸಂಭವಿಸುತ್ತಿದ್ದು ಕ್ಷೇತ್ರದ ಭೇಟಿ ಹಾಗೂ ತುರ್ತು ವ್ಯವಸ್ಥೆ ಕೈಗೊಳ್ಳುವ ಉದ್ದೇಶದಿಂದ ಬೆಂಗಳೂರು ಕಾರ್ಯಕ್ರಮವನ್ನು ರದ್ದುಗೊಳಿಸಿದ ಶಾಸಕ ಅಶೋಕ್ ರೈ ಯವರು ಇಂದು ಪುತ್ತೂರಿನಲ್ಲಿ ವಿವಿಧ ಕಡೆಗಳಿಗೆ ಭೇಟಿ ನೀಡಲಿದ್ದಾರೆ. ಇಂದು ಬೆಂಗಳೂರಿನಲ್ಲಿ ವಿವಿಧ ಸಚಿವರ ಭೇಟಿ ಹಾಗೂ ಕಂಬಳ ಸಮಿತಿ ಸಭೆಯನ್ನು ಕರೆಯಲಾಗಿತ್ತು. ಎಲ್ಲಾ ಕಾರ್ಯಕ್ರಮವನ್ನು ರದ್ದುಗೊಳಿಸಿ ಇಂದು ಪುತ್ತೂರಿಗೆ ಬರಲಿದ್ದು ಮಳೆಯ ಕಾರಣಕ್ಕೆ ಅನೇಕ ಕಡೆಗಳಲ್ಲಿ ಧರೆ ಕುಸಿತ, ಮನೆಗಳಿಗೆ ಹಾಗೂ ಕೃಷಿಗಳಿಗೆ ಹಾನಿಯಾಗಿದ್ದು […]

ಶಾಸಕರ ಬೆಂಗಳೂರು ಕಾರ್ಯಕ್ರಮ ರದ್ದು | ಪುತ್ತೂರಿಗೆ ಭೇಟಿ ನೀಡುವಂತೆ ಸಿಎಂ ಬಳಿ ಅಶೋಕ್ ರೈ ಮನವಿ Read More »

ದಕ್ಷಿಣ ಕನ್ನಡ  : ನೆರೆ ಹಾವಳಿ ಪ್ರದೇಶಗಳಿಗೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾಮ್ ಭೇಟಿ

ಮಂಗಳೂರು : ಭಾರೀ ಮಳೆಯಿಂದಾಗಿ ನೆರೆ ಹಾವಳಿ ಪ್ರದೇಶಗಳಿಗೆ ಇಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅದ್ಯಪಾಡಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಅವಲೋಕಿಸಿದ ಸಚಿವ ದಿನೇಶ್ ಗುಂಡೂರಾವ್, ಅಕ್ಕ ಪಕ್ಕದ ಗ್ರಾಮಗಳು ಜಲಾವೃತವಾಗಿರುವ ಬಗ್ಗೆ ಸ್ಥಳೀಯ ನಿವಾಸಿಗಳ ಜೊತೆ ಸಚಿವರ ಜೊತೆ ಚರ್ಚೆ ನಡೆಸಿದರು. ಪ್ರತಿ ವರ್ಷ ಅದ್ಯಪಾಡಿಯಲ್ಲಿ ಫಲ್ಗುಣಿ ನದಿಯ ನೆರೆ ಪ್ರವಾಹದ ಬಗ್ಗೆ ಈ ವೇಳೆ ಸಚಿವರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ತೋಟ

ದಕ್ಷಿಣ ಕನ್ನಡ  : ನೆರೆ ಹಾವಳಿ ಪ್ರದೇಶಗಳಿಗೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾಮ್ ಭೇಟಿ Read More »

ಕುಮಾರಧಾರ ನದಿ ಸಮೀಪ  ಶವ ಪತ್ತೆ

ಕಡಬ: ಕುಮಾರಧಾರ ನದಿ ಸಮೀಪದ ಅರ್ಬಿತೋಡು ಎಂಬಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿರುವುದು ವರದಿಯಾಗಿದೆ. ಐತ್ತೂರು ಗ್ರಾ.ಪಂ ವ್ಯಾಪ್ತಿಯ ನೆಕ್ಕಿಲಾಡಿ ಗ್ರಾಮದ ಕೆರ್ಮಾಯಿಯ ರಮೇಶ ఎంబ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಕೆ.ಎಫ್,ಡಿ ಸಿ ಯ ಅರ್ಬಿತೋಡು ಬಳಿ ನದಿಯಲ್ಲಿ ಬರುವ ತೆಂಗಿನ ಕಾಯಿ ತೆಗೆಯುವ ಸಲುವಾಗಿ ನದಿ ಪಕ್ಕ ಇಳಿದಿರುವ ಶಂಕೆ ವ್ಯಕ್ತವಾಗಿದೆ. ಹೆಚ್ಚಿನ ಮಾಹಿತಿ ಪೊಲೀಸರ ಪರಿಶೀಲನೆ ಬಳಿಕ ತಿಳಿದು ಬರಲಿದೆ.

ಕುಮಾರಧಾರ ನದಿ ಸಮೀಪ  ಶವ ಪತ್ತೆ Read More »

ಭಾರೀ ಮಳೆಯ ಹಿನ್ನಲೆ ದ.ಕ ಜಿಲ್ಲಾದ್ಯಂತ ಆ. 2 ರಂದು ಶಾಲಾ- ಕಾಲೇಜುಗಳಿಗೆ ರಜೆ

ಮಂಗಳೂರು: ಭಾರೀ ಮಳೆಯ ಹಿನ್ನಲೆಯಲ್ಲಿ ದ.ಕ.ಜಿಲ್ಲಾದ್ಯಂತ ಆ.2 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದು, ದ.ಕ. ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಸಮುದ್ರ ತೀರ ಪ್ರದೇಶಗಳಿಗೆ, ತುಂಬಿ ಹರಿಯುತ್ತಿರುವ ನದಿ ಸಮೀಪ ಸಾರ್ವಜನಿಕರು ತೆರಳದಂತೆ, ಮೀನುಗಾರಿಕೆಗೆ ತೆರಳದಂತೆ ಆದೇಶ ನೀಡಲಾಗಿದೆ.

ಭಾರೀ ಮಳೆಯ ಹಿನ್ನಲೆ ದ.ಕ ಜಿಲ್ಲಾದ್ಯಂತ ಆ. 2 ರಂದು ಶಾಲಾ- ಕಾಲೇಜುಗಳಿಗೆ ರಜೆ Read More »

ಪಬ್‌ಜಿ ಗೇಮ್‌ನ ಯುವತಿ ನಾಪತ್ತೆ

ಮಂಗಳೂರು : ಮೊಬೈಲ್‌ನಲ್ಲಿ ಪಬ್‌ಜಿ ಆಟವಾಡುವ ಹವ್ಯಾಸವಿದ್ದ ಯುವತಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಕೆಲಿಸ್ತಾ ಫೆರಾವೊ (18) ನಾಪತ್ತೆಯಾದ ಯುವತಿ. ಇವರು ಎಸ್ ಎಸ್ ಎಲ್ ಸಿ ಬಳಿಕ ಆಟೊಮೊಬೈಲ್‌ ಕೋರ್ಸ್‌ಗೆ ಸೇರ್ಪಡೆಗೊಂಡಿದ್ದರು. ಈಕೆ ಮಂಗಳವಾರ ಮಧ್ಯಾಹ್ನ 12.15ರ ಸುಮಾರಿಗೆ ಮನೆಯಿಂದ ಹೊರಗೆ ಹೋಗಿದ್ದರು‌.‌ ಇದು ಮನೆಯವರ ಗಮನಕ್ಕೆ ಬಂದ ಕೂಡಲೇ ಅವರು ಹುಡುಕಾಟ ಆರಂಭಿಸಿದರು. ಸಿಸಿ ಕ್ಯಾಮಾರದಲ್ಲಿ ಪರಿಶೀಲಿಸಿದಾಗ ಈಕೆ ಆಟೋರಿಕ್ಷಾದಲ್ಲಿ ಹೋಗುತ್ತಿರುವ ದೃಶ್ಯ ದಾಖಲಾಗಿತ್ತು. ಕೆಲಿಸ್ತಾ ಕನ್ನಡ, ತುಳು, ಇಂಗ್ಲಿಷ್‌, ಕೊಂಕಣಿ

ಪಬ್‌ಜಿ ಗೇಮ್‌ನ ಯುವತಿ ನಾಪತ್ತೆ Read More »

ಭಾರೀ ಮಳೆಯ ಹಿನ್ನಲೆಯಲ್ಲಿ ದ.ಕ.ಜಿಲ್ಲಾದ್ಯಂತ ಆ.1 ರಂದು ಶಾಲಾ-ಕಾಲೇಜುಗಳಿಗೆ ರಜೆ

ಮಂಗಳೂರು: ಭಾರೀ ಮಳೆಯ ಹಿನ್ನಲೆಯಲ್ಲಿ ದ,ಕ.ಜಿಲ್ಲಾದ್ಯಂತ ಆ.1 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದು, ದ.ಕ., ಕಾಸರಗೋಡು ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಸಮುದ್ರ ತೀರ ಪ್ರದೇಶಗಳಿಗೆ, ತುಂಬಿ ಹರಿಯುತ್ತಿರುವ ನದಿ ಸಮೀಪ ಸಾರ್ವಜನಿಕರು ತೆರಳದಂತೆ, ಮೀನುಗಾರಿಕೆಗೆ ತೆರಳದಂತೆ ಆದೇಶ ನೀಡಲಾಗಿದೆ.

ಭಾರೀ ಮಳೆಯ ಹಿನ್ನಲೆಯಲ್ಲಿ ದ.ಕ.ಜಿಲ್ಲಾದ್ಯಂತ ಆ.1 ರಂದು ಶಾಲಾ-ಕಾಲೇಜುಗಳಿಗೆ ರಜೆ Read More »

ಶಿರಾಡಿ ಘಾಟಿಯಲ್ಲಿ ಮತ್ತೆ ಭೂಕುಸಿತ | ವಾಹನ ಸಂಚಾರ ಸಂಪೂರ್ಣ ಬಂದ್

ಪುತ್ತೂರು: ಶಿರಾಡಿ ಘಾಟಿನ ಮಾರೇನಹಳ್ಳಿಯಲ್ಲಿ ಮತ್ತೊಮ್ಮೆ ಭಾರೀ ಭೂಕುಸಿತ ಉಂಟಾಗಿದೆ. ಭೂಕುಸಿತದಿಂದಾಗಿ ಹಲವು ವಾಹನಗಳು ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ವಿವರ ಇನ್ನಷ್ಟೇ ಲಭ್ಯವಾಗಿದೆ. ಭೂಕುಸಿತದ ಹಿನ್ನಲೆಯಲ್ಲಿ ಮಂಗಳೂರು – ಬೆಂಗಳೂರು ಸಂಚಾರ ಸಂಪೂರ್ಣ ಬಂದ್ ಆಗಿದೆ. ಆದ್ದರಿಂದ ತುರ್ತು ತೆರಳುವವರು ಸಂಪಾಜೆ – ಮಡಿಕೇರಿಯಾಗಿ ಅಥವಾ ಬೆಳ್ತಂಗಡಿ – ಚಾರ್ಮಾಡಿ ಘಾಟ್ ರಸ್ತೆಯ ಮೂಲಕ ತೆರಳಬಹುದು ಎಂದು ಮಾಹಿತಿ ಲಭ್ಯವಾಗಿದೆ.

ಶಿರಾಡಿ ಘಾಟಿಯಲ್ಲಿ ಮತ್ತೆ ಭೂಕುಸಿತ | ವಾಹನ ಸಂಚಾರ ಸಂಪೂರ್ಣ ಬಂದ್ Read More »

ಈಶ್ವರಮಂಗಲ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದಿಂದ ಕಂಡಡೊಂಜಿ ದಿನ ಕಾರ್ಯಕ್ರಮ |  ಸಾಂಪ್ರದಾಯಿಕ ಆಟಗಳಲ್ಲಿ ಸಂಭ್ರಮಿಸಿದ ಜನರು | ಕಾರ್ಯಕ್ರಮಕ್ಕೆ ಮೆರುಗು ತಂದ ಜಾನಪದ ಸೊಗಡು ವಿಷಯಾಧಾರೀತ  ನೃತ್ಯ ಗಾನ ಸಾಂಸ್ಕೃತಿಕ ವೈಭವ

ಕಾವು : ಈಶ್ವರಮಂಗಲ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘ ಇದರ ನೇತೃತ್ವದಲ್ಲಿ  ಒಕ್ಕಲಿಗ ಗೌಡ ಸೇವಾ ಸಂಘ,ಮಹಿಳಾ ಸಂಘ ಮತ್ತು ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಈಶ್ವರಮಂಗಲ ವಲಯ ಇದರ ಸಹಕಾರದೊಂದಿಗೆ  ಕಂಡಡೊಂಜಿ ದಿನ ಕಾರ್ಯಕ್ರಮ ಈಶ್ವರಮಂಗಲ ಮರಕ್ಕಡ ಗದ್ದೆಯಲ್ಲಿ ಜು 28 ರಂದು ನಡೆಯಿತು.   ಕಾರ್ಯಕ್ರಮವನ್ನು ಈಶ್ವರಮಂಗಲ   ಮರಕ್ಕಡ ಗದ್ದೆಯ ಮಾಲಕ  ಗಿರೀಶ್ ರೈ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭಹಾರೈಸಿದರು. ಅಧ್ಯಕ್ಷತೆಯನ್ನು  ಒಕ್ಕಲಿಗ ಗೌಡ ಸೇವಾ ಸಂಘ ಅಧ್ಯಕ್ಷ ನಾಗಪ್ಪ

ಈಶ್ವರಮಂಗಲ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದಿಂದ ಕಂಡಡೊಂಜಿ ದಿನ ಕಾರ್ಯಕ್ರಮ |  ಸಾಂಪ್ರದಾಯಿಕ ಆಟಗಳಲ್ಲಿ ಸಂಭ್ರಮಿಸಿದ ಜನರು | ಕಾರ್ಯಕ್ರಮಕ್ಕೆ ಮೆರುಗು ತಂದ ಜಾನಪದ ಸೊಗಡು ವಿಷಯಾಧಾರೀತ  ನೃತ್ಯ ಗಾನ ಸಾಂಸ್ಕೃತಿಕ ವೈಭವ Read More »

ಚಲಿಸುತ್ತಿದ್ದ ಬಸ್ ನಲ್ಲಿ ಕಾಣಿಸಿಕೊಂಡ ಬೆಂಕಿ | ತಪ್ಪಿದ ಅನಾಹುತ

ಸುಳ್ಯ : ಸುಳ್ಯ ಸಮೀಪ ಚಲಿಸುತ್ತಿದ್ದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಸುಳ್ಯ ಬಸ್ ನಿಲ್ದಾಣದಿಂದ ಸುಳ್ಯ-ಕೊಯನಾಡು ಮಾರ್ಗವಾಗಿ ಹೊರಡಬೇಕಿದ್ದ ಬಸ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಡೆದಿದೆ. ಬಸ್ ನಲ್ಲಿದ್ದವರನ್ನು ತಕ್ಷಣ ಕೆಳಗೆ ಇಳಿಸಲಾಯಿತು. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯನಡೆಸಿದರು.

ಚಲಿಸುತ್ತಿದ್ದ ಬಸ್ ನಲ್ಲಿ ಕಾಣಿಸಿಕೊಂಡ ಬೆಂಕಿ | ತಪ್ಪಿದ ಅನಾಹುತ Read More »

ಚಲಿಸುತ್ತಿದ್ದ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಹೃದಯಾಘಾತ | ಬಸ್‍ ನ್ನು ತುರ್ತು ವಾಹನವಾಗಿ ಪರಿವರ್ತಿಸಿ ಆಸ್ಪತ್ರೆಗೆ ಕರೆದೊಯ್ದ ಚಾಲಕ

ಮಂಗಳೂರು : ಚಲಿಸುತ್ತಿದ್ದ ಬಸ್‌ನಲ್ಲಿ ವಿದ್ಯಾರ್ಥಿನಿಗೆ ಹೃದಯಾಘಾತವಾಗಿದ್ದ ಘಟನೆ ಮಂಗಳೂರಿನಲ್ಲಿ ನಡೆದಿದೆ.  ಬಸ್ ಚಾಲಕ ಹಾಗೂ ನಿರ್ವಾಹಕ ಸಮಯ ಪ್ರಜ್ಞೆ ಮೆರೆದು ಜೀವ ರಕ್ಷಿಸಿದರು.   ಮಂಗಳೂರಿನ ಕೂಳೂರು ಮಾರ್ಗ 13ಎಫ್‌ನಲ್ಲಿ ಎಂದಿನಂತೆ ಕೃಷ್ಣ ಪ್ರಸಾದ್ ಬಸ್ ಪ್ರಯಾಣಿಕರೊಂದಿಗೆ ತೆರಳುತ್ತಿದ್ದಾಗ ಕಾಲೇಜು ವಿದ್ಯಾರ್ಥಿನಿಯೊಬ್ಬರಲ್ಲಿ ಹಠಾತ್ ಹೃದಯಾಘಾತದ ಲಕ್ಷಣಗಳು ಕಾಣಿಸಿವೆ. ತಕ್ಷಣವೇ ಬಸ್‌ ಚಾಲಕ ಗಜೇಂದ್ರ ಕುಂದ‌ರ್ ಮತ್ತು ಕಂಡಕ್ಟರ್ ಮಹೇಶ್ ಪೂಜಾರಿ ಬಸ್ ಅನ್ನು ತುರ್ತು ವಾಹನವನ್ನಾಗಿ ಪರಿವರ್ತಿಸಿದರು. ಬಸ್‌ನಲ್ಲಿದ್ದ ಎಮರ್ಜೆನ್ಸಿ ಸೈರನ್ ಚಾಲೂ ಮಾಡಿದ ಅವರು

ಚಲಿಸುತ್ತಿದ್ದ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಹೃದಯಾಘಾತ | ಬಸ್‍ ನ್ನು ತುರ್ತು ವಾಹನವಾಗಿ ಪರಿವರ್ತಿಸಿ ಆಸ್ಪತ್ರೆಗೆ ಕರೆದೊಯ್ದ ಚಾಲಕ Read More »

error: Content is protected !!
Scroll to Top