ದಕ್ಷಿಣ ಕನ್ನಡ

ಸುಳ್ಯ : ಬೆನಿಫಿಟ್‌ ಸ್ಕೀಂ ಹೆಸರಿನಲ್ಲಿ ವಂಚಿಸಿದವರಿಗೆ ಜೈಲು ಶಿಕ್ಷೆ

ಶ್ರೀ ತತ್ವಮಸಿ ಹೆಸರಿನಲ್ಲಿ ಸಂಸ್ಥೆ ತೆರೆದು ಕೋಟಿಗಟ್ಟಲೆ ರೂ. ಗುಳುಂ ಮಾಡಿದ ಪ್ರಕರಣ ಸುಳ್ಯ : ಸುಳ್ಯದಲ್ಲಿ ಶ್ರೀ ತತ್ವಮಸಿ ಚಾರಿಟೇಬಲ್ ಟ್ರಸ್ಟ್ (ಆರ್) ಮತ್ತು ಶ್ರೀ ತತ್ವಮಸಿ ಎಂಟರ್‌ಪ್ರೈಸಸ್ (ಆರ್) ಹೆಸರಿನಲ್ಲಿ ‘ಬೆನಿಫಿಟ್ ಸ್ಕೀಮ್’ ಮೂಲಕ ಸಾರ್ವಜನಿಕರನ್ನು ವಂಚಿಸಿದ ಆರೋಪದ ಮೇಲೆ ಮೂವರು ವ್ಯಕ್ತಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಶಿಕ್ಷೆಗೊಳಗಾದ ಅಪರಾಧಿಗಳನ್ನು ಕೆ.ಪಿ. ಗಣೇಶ್, ಗೀತಾ ಕೆ.ಎಸ್. ಮತ್ತು ಭಾರತಿ ಎಂದು ಗುರುತಿಸಲಾಗಿದೆ. ಕೆ.ಪಿ. ಕೃಷ್ಣಪ್ಪ ಗೌಡ, ಗೀತಾ ಗಣೇಶ್, ಎನ್.ಇ.ವೈ. ಕಮಲಾಕ್ಷ ಮತ್ತು ಕೆ. […]

ಸುಳ್ಯ : ಬೆನಿಫಿಟ್‌ ಸ್ಕೀಂ ಹೆಸರಿನಲ್ಲಿ ವಂಚಿಸಿದವರಿಗೆ ಜೈಲು ಶಿಕ್ಷೆ Read More »

ವಾಯುಭಾರ ಕುಸಿತ : ಕರಾವಳಿಯಲ್ಲಿ ಮತ್ತೆ ಮಳೆ ಸಾಧ್ಯತೆ

ಮಂಗಳೂರು : ಬಂಗಾಲ ಕೊಲ್ಲಿಯಲ್ಲಿ ಮತ್ತೆ ವಾಯಬಾರ ಕುಸಿತದ ಸಾಧ್ಯತೆ ಗೋಚರಿಸಿದ್ದು, ಇದರ ಪರಿಣಾಮವಾಗಿ ಕರಾವಳಿಯ ಕೆಲವೆಡೆ ಒಂದೆರಡು ದಿನ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಬುಧವಾರದಿಂದ 2-3 ದಿನ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಭಾನುವಾರದಿಂದ ಮಳೆ ಕ್ಷೀಣಗೊಂಡಿತ್ತು. ಮಂಗಳವಾರ ಮೋಡ ಕವಿದ ವಾತಾವರಣವಿದ್ದು ಬೆಳಗ್ಗೆ ಅಲ್ಲಲ್ಲಿ ತುಂತುರ ಮಳೆಯಾಗಿದೆ. ಸೆಕೆಯ ತೀವ್ರತೆಯೂ ಇದ್ದು,

ವಾಯುಭಾರ ಕುಸಿತ : ಕರಾವಳಿಯಲ್ಲಿ ಮತ್ತೆ ಮಳೆ ಸಾಧ್ಯತೆ Read More »

ರೌಡಿ ತುಕ್ಕ ನೌಫಾಲ್‌ ಆತ್ಮಹತ್ಯೆ ಮಾಡಿಕೊಂಡನೇ? : ಕೇರಳ ಪೊಲೀಸರ ಅನುಮಾನ

ಹತ್ಯೆಯಲ್ಲ ಎಂದು ದೃಢಪಡಿಸಿದ ಪೋಸ್ಟ್‌ಮಾರ್ಟಂ ವರದಿ; ರೈಲು ಡಿಕ್ಕಿಯಾಗಿರುವ ಸಾಧ್ಯತೆ ಮಂಗಳೂರು: ಮಂಗಳೂರು ನಗರ ವ್ಯಾಪ್ತಿಯ ನಟೋರಿಯಸ್ ರೌಡಿಶೀಟರ್ ಬಜಾಲ್‌ ಟೋಪಿ ನೌಫಾಲ್ ಅಲಿಯಾಸ್‌ ತುಕ್ಕ ನೌಫಾಲ್‌ (42) ಕೊಲೆಯಾಗಿದ್ದಲ್ಲ. ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ್ದಾಗಿ ಮೃತದೇಹದ ಪೋಸ್ಟ್‌ಮಾರ್ಟಂ ನಡೆಸಿದ ಕಾಸರಗೋಡಿನ ವೈದ್ಯರು ಮಾಹಿತಿ ನೀಡಿದ್ದಾರೆ. ಶನಿವಾರ ಬೆಳಗ್ಗೆ ಮಂಜೇಶ್ವರ ಠಾಣೆ ವ್ಯಾಪ್ತಿಯ ಉಪ್ಪಳ ರೈಲ್ವೆ ಗೇಟ್ ಬಳಿಯಲ್ಲಿ ನೌಫಾಲ್ ಮೃತದೇಹ ಬಿದ್ದುಕೊಂಡಿತ್ತು. ನೌಫಾಲ್ ಮಂಗಳೂರಿನ ವಿವಿಧ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಕೇಸುಗಳನ್ನು ಎದುರಿಸುತ್ತಿದ್ದುದರಿಂದ ಯಾರೋ ಮಾತುಕತೆಗೆ ಕರೆದು

ರೌಡಿ ತುಕ್ಕ ನೌಫಾಲ್‌ ಆತ್ಮಹತ್ಯೆ ಮಾಡಿಕೊಂಡನೇ? : ಕೇರಳ ಪೊಲೀಸರ ಅನುಮಾನ Read More »

ಆನ್‌ಲೈನ್‌ ಟ್ರೇಡಿಂಗ್‌ ನೆಪದಲ್ಲಿ 32 ಲ. ರೂ. ವಂಚನೆ

ಮಂಗಳೂರು : ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೆಚ್ಚು ಲಾಭ ದೊರೆಯುವುದಾಗಿ ನಂಬಿಸಿ 32.06 ಲಕ್ಷ ರೂ. ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರು ಸೆ.9ರಂದು ಫೇಸ್‌ಬುಕ್ ನೋಡುತ್ತಿರುವಾಗ ಕಾವ್ಯ ಶೆಟ್ಟಿ ಹೆಸರಿನಲ್ಲಿ ಫ್ರೆಂಡ್ಸ್ ರಿಕ್ವೆಸ್ಟ್ ಬಂದಿದೆ. ಅದನ್ನು ಅಕ್ಸೆಪ್ಟ್ ಮಾಡಿ ಅವರೊಂದಿಗೆ ಚಾಟ್ ಮಾಡಿದ್ದಾರೆ. ಆಕೆ ತಾನು ಮುಂಬಯಿನಲ್ಲಿ ಟ್ರೇಡಿಂಗ್ ಕೆಲಸ ಮಾಡಿಕೊಂಡಿದ್ದು, ಅದರಿಂದ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿದ್ದಾಳೆ. ಇದರಿಂದ ಆಸಕ್ತಿಗೊಂಡು ಟ್ರೇಡಿಂಗ್‌ನಲ್ಲಿ ಕೆಲಸ ಮಾಡಲು ಒಪ್ಪಿದ ದೂರುದಾರಿಗೆ

ಆನ್‌ಲೈನ್‌ ಟ್ರೇಡಿಂಗ್‌ ನೆಪದಲ್ಲಿ 32 ಲ. ರೂ. ವಂಚನೆ Read More »

ಮೀನು ಮಾರಾಟಗಾರರ ನಡುವೆ ಹೊಡೆದಾಟ : ಕೇಸ್‌ ದಾಖಲು

ಕಡಬ: ಮೀನು ಮಾರಾಟದ ವಿಚಾರವಾಗಿ ಎರಡು ಅಂಗಡಿಯವರ ನಡುವೆ ಮಾತಿನ ಚಕಮಕಿ ನಡೆದು ಬಳಿಕ ಪರಸ್ಪರ ಹೊಡೆದಾಡಿಕೊಂಡ ಘಟನೆ ಕಡಬ ಗ್ರಾಮದ ಸಂತೆಕಟ್ಟೆ ಬಳಿ ಮೀನು ಮಾರುಕಟ್ಟೆಯಲ್ಲಿ ಶನಿವಾರ ನಡೆದಿದೆ. ಇದರ ವಿಡಿಯೋ ವೈರಲ್ ಆದ ಬಳಿಕ ಪೊಲೀಸರ ಗಮನಕ್ಕೆ ಬಂದಿದ್ದು, ಇದನ್ನು ಆಧರಿಸಿ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂತೆಕಟ್ಟೆ ಬಳಿಯ ಮೀನು ಮಾರುಕಟ್ಟೆಯಲ್ಲಿ ಶನಿವಾರ ಮೀನು ಮಾರಾಟದ ವಿಚಾರವಾಗಿ ರಾಜು ಮ್ಯಾಥ್ಯೂ ಹಾಗೂ ಆದಂ ಎಂಬ ಎರಡು ಅಂಗಡಿಯವರ ನಡುವೆ ಮಾತಿನ ಚಕಮಕಿ ನಡೆದಿದ್ದು,

ಮೀನು ಮಾರಾಟಗಾರರ ನಡುವೆ ಹೊಡೆದಾಟ : ಕೇಸ್‌ ದಾಖಲು Read More »

ಖಾದರ್‌ ಭ್ರಷ್ಟಾಚಾರದ ಕುರಿತು ನ್ಯಾಯಾಧೀಶರಿಂದ ತನಿಖೆ : ಕಾಗೇರಿ ಒತ್ತಾಯ

ತನಿಖೆ ನಡೆಸಿ ಕಳಂಕ ಮುಕ್ತರಾಗಲಿ ಎಂದು ಸಲಹೆ ಬೆಂಗಳೂರು: ಸ್ಪೀಕರ್ ಯು.ಟಿ ಖಾದರ್‌ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪದ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆ ಆಗಲಿ ಎಂದು ಮಾಜಿ ಸ್ಪೀಕರ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯಿಸಿದ್ದಾರೆ. ಯು.ಟಿ ಖಾದರ್ ಆಡಳಿತ ಸುಧಾರಣೆ ಭಾಗವಾಗಿ ಭ್ರಷ್ಟಾಚಾರದ ಪ್ರಕರಣ ಆಗಿದೆ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ. ಹೀಗಾಗಿ ನ್ಯಾಯಾಂಗ ತನಿಖೆಗೆ ವಹಿಸುವಂತೆ ನಾನು ಒತ್ತಾಯ ಮಾಡಿದ್ದೇನೆ. ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಲಿ ಎಂದಿದ್ದಾರೆ. ಸ್ಪೀಕರ್ ಸ್ಥಾನ

ಖಾದರ್‌ ಭ್ರಷ್ಟಾಚಾರದ ಕುರಿತು ನ್ಯಾಯಾಧೀಶರಿಂದ ತನಿಖೆ : ಕಾಗೇರಿ ಒತ್ತಾಯ Read More »

ಕಳವಾಗಿದ್ದ 233 ಮೊಬೈಲ್ ಫೋನ್‌ಗಳು ಮರಳಿ ಮಾಲೀಕರಿಗೆ

ಒಂದೂವರೆ ತಿಂಗಳಲ್ಲಿ ಕಳವಾಗಿದ್ದ ಫೋನ್‌ಗಳು ಮಂಗಳೂರು : ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 15ರಿಂದ ಅಕ್ಟೋಬರ್ 30ರವರೆಗೆ ಕಳವಾಗಿದ್ದ 233 ಮೊಬೈಲ್ ಫೋನ್‌ಗಳನ್ನು ನಗರ ಪೊಲೀಸರು ವಶಪಡಿಸಿಕೊಂಡು ಅ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ ಎಂದು ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಮಿಥುನ್ ಎಚ್‌.ಎನ್ ತಿಳಿಸಿದ್ದಾರೆ. ಡಿಸಿಪಿ, ಕದ್ದ ಫೋನ್‌ಗಳನ್ನು ಪತ್ತೆಹಚ್ಚಲು ಸಿಇಎನ್ ಪೊಲೀಸ್ ಠಾಣೆಯ ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ. ಕಳ್ಳತನ ಅಥವಾ ಅನುಮಾನಾಸ್ಪದ ಕರೆಗಳ ಸಂದರ್ಭದಲ್ಲಿ ತಮ್ಮ ಮೊಬೈಲ್ ಸಂಖ್ಯೆಗಳನ್ನು ನಿರ್ಬಂಧಿಸಲು ‘ಸಂಚಾರ್ ಸಾಥಿ’

ಕಳವಾಗಿದ್ದ 233 ಮೊಬೈಲ್ ಫೋನ್‌ಗಳು ಮರಳಿ ಮಾಲೀಕರಿಗೆ Read More »

ಸರ್ದಾರ್‌@ 150 ಏಕತಾ ನಡಿಗೆ : ಪುತ್ತೂರಿನಲ್ಲಿ ನ.12ರಂದು ಬೃಹತ್‌ ಪಾದಯಾತ್ರೆ

ಸರ್ದಾರ್ ವಲ್ಲಭಭಾಯಿ ಪಟೇಲ್ 150ನೇ ಜನ್ಮ ದಿನದ ಸ್ಮರಣಾರ್ಥ ಕಾರ್ಯಕ್ರಮ ಮಂಗಳೂರು : ದೇಶದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನದ ಸ್ಮರಣಾರ್ಥ ಯುವಜನ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯವು ದೇಶಾದ್ಯಂತ ‘ಸರ್ದಾರ್‌@ 150 ಏಕತಾ ನಡಿಗೆʼಯನ್ನು ಹಮ್ಮಿಕೊಂಡಿದೆ. ಅದರಂತೆ, ದಕ್ಷಿಣ ಕನ್ನಡದಲ್ಲಿಯೂ ವಲ್ಲಭಭಾಯಿ ಪಟೇಲ್‌ ಅವರ ಜನ್ಮದಿನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವುದಕ್ಕೆ ನಿರ್ಧರಿಸಲಾಗಿದ್ದು, ಮಂಗಳೂರಿನಲ್ಲಿ ನ.10ರಂದು ಹಾಗೂ ಪುತ್ತೂರಿನಲ್ಲಿ ನ.12ರಂದು ಪಾದಯಾತ್ರೆ ನಡೆಸಲಾಗುವುದು ಎಂದು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಅವರು

ಸರ್ದಾರ್‌@ 150 ಏಕತಾ ನಡಿಗೆ : ಪುತ್ತೂರಿನಲ್ಲಿ ನ.12ರಂದು ಬೃಹತ್‌ ಪಾದಯಾತ್ರೆ Read More »

ಸುಹಾಸ್‌ ಶೆಟ್ಟಿ ಹತ್ಯೆ ಮಾಡಿರುವುದು ಪಿಎಫ್‌ಐ : ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

ನಿಷೇಧಿಸಲ್ಪಟ್ಟಿದ್ದರೂ ಕರಾವಳಿಯಲ್ಲಿ ಈಗಲೂ ಪಿಎಫ್‌ಐ ಗುಪ್ತವಾಗಿ ಸಕ್ರಿಯ ಎಂದು ಮಾಹಿತಿ ಮಂಗಳೂರು: ಮಂಗಳೂರಿನ ಬಜ್ಬೆ ಬಳಿ ಕಳೆದ ಮೇ 1ರಂದು ನಡೆದಿದ್ದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಇದೀಗ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. ಈ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಅಂಶಗಳನ್ನು ಎನ್ಐಎ ಉಲ್ಲೇಖಿಸಿದ್ದು, ಸುಹಾಸ್ ಶೆಟ್ಟಿ ಹತ್ಯೆ ಹಿಂದೆ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಿ ನಿಷೇಧಗೊಂಡಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆ ಸದಸ್ಯರ ಕೈವಾಡ

ಸುಹಾಸ್‌ ಶೆಟ್ಟಿ ಹತ್ಯೆ ಮಾಡಿರುವುದು ಪಿಎಫ್‌ಐ : ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ Read More »

ಆಂಬುಲೆನ್ಸ್‌ಗೆ ಸೈಡ್‌ ಕೊಡದ ಸ್ಕೂಟರ್‌ ಸವಾರ ಸೆರೆ

ಅಪಘಾತ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಆಂಬುಲೆನ್ಸ್‌ ಸತಾಯಿಸಿದ್ದ ಸವಾರ ಬಂಟ್ವಾಳ : ಬಿಸಿಲೆ ಘಾಟ್‌ನಲ್ಲಿ ಗುರುವಾರ ಮಿನಿಬಸ್‌ ಪಲ್ಟಿಯಾಗಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸುತ್ತಿದ್ದ ಆಂಬುಲೆನ್ಸ್‌ನ ಸಂಚಾರಕ್ಕೆ ತಡೆಯೊಡ್ಡಿದ ಸ್ಕೂಟರ್‌ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತದ ಗಾಯಾಳುಗಳನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸಿಗೆ ಸ್ಕೂಟರ್ ಸವಾರ ಅಡ್ಡಿಪಡಿಸಿದ ಘಟನೆ ಬಿ.ಸಿ. ರೋಡಿನಲ್ಲಿ ನಡೆದಿದೆ. ಆಂಬುಲೆನ್ಸ್‌ ಹಾರ್ನ್‌ ಮೊಳಗಿಸುತ್ತಿದ್ದರೂ ಸ್ಕೂಟರ್‌ ಸವಾರ ಕೇರ್‌ ಮಾಡದೆ ಉದ್ದೇಶಪೂರ್ವಕವಾಗಿ ಅಡ್ಡಾದಿಡ್ಡಿ ಸ್ಕೂಟರ್‌ ಚಲಾಯಿಸುತ್ತಾ ಆಂಬುಲೆನ್ಸ್‌ಗೆ ಸೈಡ್‌ ಕೊಡದೆ ಸತಾಯಿಸಿದ ವಿಡಿಯೋ ಸೋಷಿಯಲ್‌

ಆಂಬುಲೆನ್ಸ್‌ಗೆ ಸೈಡ್‌ ಕೊಡದ ಸ್ಕೂಟರ್‌ ಸವಾರ ಸೆರೆ Read More »

error: Content is protected !!
Scroll to Top