ಪಯಸ್ವಿನಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಪತ್ತೆ
ಸುಳ್ಯ: ಯುವಕನ ಮೃತದೇಹವೊಂದು ಕೊಳೆತ ಸ್ಥಿತಿಯಲ್ಲಿ ಪಯಸ್ವಿನಿ ನದಿಯಲ್ಲಿ ಭಾನುವಾರ ಪತ್ತೆಯಾಗಿದೆ. ಪಿರಿಯಾಪಟ್ಟಣ ನಿವಾಸಿ ಅಜಿತ್ (24) ಮೃತಪಟ್ಟವರು. ಅಜಿತ್ ಸುಳ್ಯದ ಹೊಟೇಲೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಕೆಲವು ತಿಂಗಳ ಹಿಂದೆ ಊರಿಗೆ ಹೋಗಿದ್ದವರು ಮರಳಿ ಬಂದಿರಲಿಲ್ಲ. ಭಾನುವಾರ ಪಯಸ್ವಿನಿ ನದಿ ಹರಿಯುವ ಸುಳ್ಯದ ಅಂಗಡಿಮಠ ಗೋಳಿಮೂಲೆ ಯಲ್ಲಿ ಮಹಿಳೆಯೋರ್ವರಿಗೆ ಶವ ಕಂಡುಬಂದಿದ್ದು, ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಶವದ ಬಳಿಯಲ್ಲಿದ್ದ ದಾಖಲೆಗಳ ಮೂಲಕ ಮೃತರ ಗುರುತು ಪತ್ತೆ ಹಚ್ಚಿದರು.
ಪಯಸ್ವಿನಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಪತ್ತೆ Read More »