ಕೆದಿಲ ಸಾಕೇತನಗರ ಶ್ರೀ ರಾಮ ಭಜನಾ ಮಂದಿರದಲ್ಲಿ ಗಣೇಶೋತ್ಸವ | ಶೋಭಾಯಾತ್ರೆಗೆ ಅಡ್ಡಿಯಾಗದಂತೆ ರಸ್ತೆ ಶ್ರಮದಾನ
ಕೆದಿಲ: ಸಾಕೇತನಗರ ಶ್ರೀ ರಾಮ ಭಜನಾ ಮಂದಿರದಲ್ಲಿ ನಡೆಯುವ ಶ್ರೀ ಗಣೇಶೋತ್ಸವದ ಅಂಗವಾಗಿ ಶ್ರೀ ಗಣೇಶ ವಿಗ್ರಹ ಶೋಭಾಯಾತ್ರೆ ಮಂಗಳವಾರ ರಾತ್ರಿ ನಡೆಯಲಿರುವುದರಿಂದ ಶೋಭಾಯಾತ್ರೆ ಸಾಗುವ ಬೀಟಿಗೆ – ಕ್ಷೇತ್ರಪಳಿಕೆ – ಕಾಂತುಕೋಡಿ ರಸ್ತೆಯನ್ನು ಶ್ರಮದಾನದ ಮೂಲಕ ಸರಿಪಡಿಸಲಾಯಿತು. ಈ ರಸ್ತೆ ಗುಂಡಿಗಳಿಂದ ಕೂಡಿದ್ದು, ಶೋಭಾಯಾತ್ರೆಗೆ ಸಮಸ್ಯೆ ಉಂಟಾಗಲಿದೆ ಎಂಬ ಹಿನ್ನೆಲೆಯಲ್ಲಿ ಈ ವಾರ್ಡಿನ ಸದಸ್ಯ ಶ್ಯಾಮ ಪ್ರಸಾದ್ ತಾವೇ ಸ್ವತಃ ತಮ್ಮ ಪಿಕಪ್ ವಾಹನದಲ್ಲಿ ಜಲ್ಲಿಕಲ್ಲು ಹಾಗೂ ಕ್ರಶರ್ ಹುಡಿ ಹಾಕಿ ಸರಿಪಡಿಸಿದರು. ಈ ಸಂದರ್ಭದಲ್ಲಿ […]









