ದಕ್ಷಿಣ ಕನ್ನಡ

ಸಂಗಡಿಗರೊಂದಿಗೆ ಈಜು: ವಿದ್ಯಾರ್ಥಿ ಮೃತ್ಯು!

ಬೆಳಪು: ಏಳನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಸಂಗಡಿಗರೊಂದಿಗೆ ಈಜಲು ತೆರಳಿದ್ದ ಸಂದರ್ಭ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳಪು ಕೆಐಎಡಿಬಿ ಯೋಜನಾ ಪ್ರದೇಶದಲ್ಲಿ ನಡೆದಿದೆ. ಬೆಳಪು ವಸತಿ ಬಡಾವಣೆ ಕಸ್ತೂರಿ ಎಂಬವರ ಪುತ್ರ ವಿಶ್ವಾಸ್ ನಾಯಕ್ (11) ಮೃತಪಟ್ಟ ಬಾಲಕ. ಈತ ಇನ್ನಂಜೆ ಎಸ್‍.ಎಸ್. ಆಂಗ್ಲ ಮಾಧ್ಯಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ. ಗುರುವಾರ ಶಾಲೆಯಿಂದ ಬಂದು ಸ್ನೇಹಿತರೊಂದಿಗೆ ಕೆರೆಗೆ ಈಜಲು ತೆರಳಿದ್ದ. ಈಜಾಡುತ್ತಿದ್ದ ಬಾಲಕ ಮುಳುಗಿ ಅಸ್ವಸ್ಥನಾಗಿದ್ದನ್ನು ಕಂಡ ಮಕ್ಕಳು ಮಹಿಳೆಯೊಬ್ಬರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು […]

ಸಂಗಡಿಗರೊಂದಿಗೆ ಈಜು: ವಿದ್ಯಾರ್ಥಿ ಮೃತ್ಯು! Read More »

‘ಮಂಗಳ’ ಹಾಡಿದ ವಾರಪತ್ರಿಕೆ ಮಂಗಳ!! | ಪ್ರಕಟಣೆ ನಿಲ್ಲಿಸಿದ ಓದುಗರ ಮನ ಗೆದ್ದಿದ್ದ ಕುಟುಂಬ ವಾರಪತ್ರಿಕೆ

ಮಂಗಳೂರು: ಶುಕ್ರವಾರಕ್ಕಾಗಿ ಓದುಗರ ದೊಡ್ಡ ಗುಂಪೇ ಕಾದು ಕುಳಿತುಕೊಳ್ಳುತ್ತಿದ್ದರು. ಕಾರಣ, ಮಂಗಳ ಕುಟುಂಬ ವಾರಪತ್ರಿಕೆ ಪ್ರಕಟವಾಗುತ್ತಿದ್ದ ದಿನವದು. ಆದರೆ ಇನ್ನು ಅಂತಹ ಕಾತರತೆ ಇರದು. 40 ವರ್ಷಗಳ ಪತ್ರಿಕಾ ಯಾನಕ್ಕೆ ಮಂಗಳ ವಾರಪತ್ರಿಕೆ ಮಂಗಳ ಹಾಡಿದೆ. ಓದುಗರು ನಿರಾಸೆಯ ನಿಟ್ಟುಸಿರನ್ನಷ್ಟೇ ಹೊರಹಾಕುವಂತಾಗಿದೆ. ಈ ವಾರ ಮಂಗಳ ವಾರಪತ್ರಿಕೆಯ ಕೊನೆಯ ಸಂಚಿಕೆ ಮುದ್ರಣಗೊಂಡಿದೆ. ಈ ಬಗ್ಗೆ ಸಂಪಾದಕರು ಪ್ರಕಟಣೆಯನ್ನು ನೀಡಿದ್ದಾರೆ. ಕನ್ನಡ ಪತ್ರಿಕಾರಂಗದಲ್ಲಿ ತನ್ನ ಛಾಯೆಯನ್ನು ಮೂಡಿಸಿದ್ದ ಮಂಗಳ, ಓದುಗ ವಲಯದಲ್ಲಿ ವಿಶೇಷ ಸ್ಥಾನಮಾನ ಪಡೆದುಕೊಂಡಿತ್ತು. ಬಾಲಮಂಗಳ, ಚಿತ್ರಕತೆಯಿಂದ

‘ಮಂಗಳ’ ಹಾಡಿದ ವಾರಪತ್ರಿಕೆ ಮಂಗಳ!! | ಪ್ರಕಟಣೆ ನಿಲ್ಲಿಸಿದ ಓದುಗರ ಮನ ಗೆದ್ದಿದ್ದ ಕುಟುಂಬ ವಾರಪತ್ರಿಕೆ Read More »

ಸುಳ್ಯ ಎಂ.ಎಸ್. ರಾಮಕೃಷ್ಣ ಕೊಲೆ ಪ್ರಕರಣದ ತೀರ್ಪು ಪ್ರಕಟ | ಡಾ. ರೇಣುಕಾ ಪ್ರಸಾದ್ ಸಹಿತ ಐವರಿಗೆ ಜೀವಾವಧಿ ಶಿಕ್ಷೆ

ಮಂಗಳೂರು: ಸುಳ್ಯದ ಕೆವಿಜಿ ಪಾಲಿಟೆಕ್ನಿಟ್ ಪ್ರಾಂಶುಪಾಲರಾಗಿದ್ದ ಎಂ.ಎಸ್. ರಾಮಕೃಷ್ಣ ಅವರ ಕೊಲೆ ಪ್ರಕರಣದಲ್ಲಿ ಕುರುಂಜಿ ವೆಂಕಟರಮಣ ಗೌಡರ ಪುತ್ರ ಡಾ| ರೇಣುಕಾ ಪ್ರಸಾದ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಹೈಕೋರ್ಟ್ ಆದೇಶಿಸಿದೆ. ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಹೈ ಕೋರ್ಟ್ ನ್ಯಾಯಧೀಶರಾದ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಬಸವರಾಜ ಅವರನ್ನೊಳಗೊಂಡ ವಿಭಾಗೀಯ ಪೀಠ ಶಿಕ್ಷೆ ಪ್ರಮಾಣ ಪ್ರಕಟ ಮಾಡಿದೆ. ಕೆಲ ದಿನಗಳ ಹಿಂದೆ ರೇಣುಕಾ ಪ್ರಸಾದ್ ಸೇರಿ ಆರು ಮಂದಿ ದೋಷಿಗಳೆಂದು ಹೈಕೋರ್ಟ್ ತೀರ್ಪು

ಸುಳ್ಯ ಎಂ.ಎಸ್. ರಾಮಕೃಷ್ಣ ಕೊಲೆ ಪ್ರಕರಣದ ತೀರ್ಪು ಪ್ರಕಟ | ಡಾ. ರೇಣುಕಾ ಪ್ರಸಾದ್ ಸಹಿತ ಐವರಿಗೆ ಜೀವಾವಧಿ ಶಿಕ್ಷೆ Read More »

ಸಾಕುಪ್ರಾಣಿಗಳ ಬಂಧನ, ಮಾಲಕರಿಗೆ ಶಿಕ್ಷೆ: ಎಚ್ಚರಿಕೆ! | ಸಾರ್ವಜನಿಕ ಸ್ಥಳದಲ್ಲಿ ಸಾಕುಪ್ರಾಣಿ ಬಿಟ್ಟರೆ ಶಿಕ್ಷೆ ಗ್ಯಾರೆಂಟಿ!!

ಕಡಬ: ಸಾಕುಪ್ರಾಣಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ಬಿಟ್ಟಿದ್ದೇ ಆದರೆ, ಆ ಸಾಕುಪ್ರಾಣಿಗಳನ್ನು ಬಂಧಿಸಲಾಗುವುದು. ಮಾತ್ರವಲ್ಲ, ಅದರ ಮಾಲಕರಿಗೆ ದಂಡ ವಿಧಿಸಲಾಗುವುದು. ಹೀಗೆಂದು ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಫಕೀರ ಮೂಲ್ಯ ಅವರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಸಾಕುಪ್ರಾಣಿಗಳನ್ನು ಸಾರ್ವಜನಿಕ ಪ್ರದೇಶದಲ್ಲಿ ಬಿಡುವುದರಿಂದ ನೂರಾರು ಸಮಸ್ಯೆಗಳು ಕಾಣಿಸಿಕೊಂಡಿದೆ. ಸಾರ್ವಜನಿಕರಿಗೆ ತೊಂದರೆ ಆಗುವ ಜೊತೆಗೆ, ಅಪಘಾತಗಳು ಸಂಭವಿಸುವ ಸಾಧ್ಯತೆಯೂ ಇದೆ. ಕೃಷಿ ಹಾನಿ ಆದ ಬಗ್ಗೆಯೂ ವರದಿಯಾಗಿದೆ. ಆದ್ದರಿಂದ ಸಾರ್ವಜನಿಕ ಸ್ಥಳದಲ್ಲಿ ಸಾಕುಪ್ರಾಣಿಗಳನ್ನು ಬಿಡದಂತೆ ಪಟ್ಟಣ ಪಂಚಾಯತ್ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಸಾಕುಪ್ರಾಣಿಗಳ ಬಂಧನ, ಮಾಲಕರಿಗೆ ಶಿಕ್ಷೆ: ಎಚ್ಚರಿಕೆ! | ಸಾರ್ವಜನಿಕ ಸ್ಥಳದಲ್ಲಿ ಸಾಕುಪ್ರಾಣಿ ಬಿಟ್ಟರೆ ಶಿಕ್ಷೆ ಗ್ಯಾರೆಂಟಿ!! Read More »

ಕೊರಗ ಭಾಷೆಯಲ್ಲಿ ಮೂಡಿಬಂದ ಮದುವೆ ಆಮಂತ್ರಣ! | ಪ್ರಶಂಸೆಗೆ ಪಾತ್ರವಾದ ಆಹ್ವಾನ ಪತ್ರಿಕೆಯ ದೇಸಿ ಭಾಷೆ | ಹೀಗಿದೆ ನೋಡಿ ಆಮಂತ್ರಣ

ಮಂಗಳೂರು: ದೇಸಿ ಭಾಷೆಗಳಿಗೆ ಬೆಂಬಲ ಸಿಗುತ್ತಿಲ್ಲ ಎನ್ನುವ ಕೊರಗಿನ ನಡುವೆ, ಇಲ್ಲೊಂದು ಜೋಡಿ ತಮ್ಮ ಮದುವೆ ಆಮಂತ್ರಣವನ್ನು ತಮ್ಮ ಮಾತೃಭಾಷೆಯಾದ ಕೊರಗ ಭಾಷೆಯಲ್ಲಿ ಮುದ್ರಿಸಿ ಗಮನ ಸೆಳೆದಿದೆ. ಮಂಗಳೂರಿನ ಕೋಡಿಬೆಟ್ಟುವಿನ ಅಕ್ಷತಾ ಹಾಗೂ ಬಾರ್ಕೂರಿನ ಅಮಿತ್ ಕುಮಾರ್ ಅವರ ವಿವಾಹ ನವಂಬರ್ 19ರಂದು ನಡೆಯಲಿದ್ದು, ಮದುವೆಯ ಆಮಂತ್ರಣ ಪತ್ರಿಕೆಯನ್ನು ಕೊರಗ ಭಾಷೆಯಲ್ಲೇ ಮುದ್ರಿಸಲಾಗಿದೆ. ಇದೀಗ ಈ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಎಲ್ಲೆಡೆಯಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಅರುಣ್ ಜೋಳದ ಕೂಡ್ಲಿಗಿ ಎನ್ನುವವರು ತಮ್ಮ

ಕೊರಗ ಭಾಷೆಯಲ್ಲಿ ಮೂಡಿಬಂದ ಮದುವೆ ಆಮಂತ್ರಣ! | ಪ್ರಶಂಸೆಗೆ ಪಾತ್ರವಾದ ಆಹ್ವಾನ ಪತ್ರಿಕೆಯ ದೇಸಿ ಭಾಷೆ | ಹೀಗಿದೆ ನೋಡಿ ಆಮಂತ್ರಣ Read More »

ಅನುಮತಿ ಪಡೆದಿದ್ದರೂ ಸೌಜನ್ಯ ಪ್ರಕರಣದ ಫ್ಲೆಕ್ಸ್ ತೆರವು!! | ಸುಳ್ಯದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡುವಂತೆ ಜಿಲ್ಲಾ ಹೋರಾಟ ಸಮಿತಿಯಿಂದ ಆಗ್ರಹ

ಸುಳ್ಯ: ಸೌಜನ್ಯ ಪ್ರಕರಣದ ಫ್ಲೆಕ್ಸನ್ನು ಅನುಮತಿ ಪಡೆದೇ ಸುಳ್ಯ ಪೇಟೆಯಲ್ಲಿ ಅಳವಡಿಸಿದ್ದರೂ, ಪೊಲೀಸರೇ ಮುಂದೆ ಬಂದು ಫ್ಲೆಕ್ಸ್ ತೆರವುಗೊಳಿಸಿದ್ದಾರೆ. ಇದು ಸೌಜನ್ಯ ಹೋರಾಟವನ್ನು ಹತ್ತಿಕ್ಕುವ ಷಡ್ಯಂತ್ರ ಎಂದು ಆರೋಪಿಸಿರುವ ಸೌಜನ್ಯ ಪ್ರಕರಣ ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿ, ಫ್ಲೆಕ್ಸ್ ತೆರವಿಗೆ ಕಾರಣವಾದ ಅಧಿಕಾರಿಯನ್ನು ತಕ್ಷಣ ಅಮಾನತು ಮಾಡಬೇಕು ಎಂದು ಎಸ್.ಪಿ. ರಿಷ್ಯಂತ್ ಸಿ.ಬಿ. ಅವರನ್ನು ಒತ್ತಾಯಿಸಿದೆ. ಸುಳ್ಯ ಪೇಟೆಯಲ್ಲಿ ಸೌಜನ್ಯ ಪ್ರಕರಣದ ನ್ಯಾಯಕ್ಕಾಗಿ ಫ್ಲೆಕ್ಸ್ ನ್ನು ಅನುಮತಿ ಪಡೆದು ಅಳವಡಿಸಲಾಗಿತ್ತು. ಆದರೆ ಇಂದು ಸುಳ್ಯಕ್ಕೆ ಕಾರ್ಯಕ್ರಮ ನಿಮಿತ್ತ

ಅನುಮತಿ ಪಡೆದಿದ್ದರೂ ಸೌಜನ್ಯ ಪ್ರಕರಣದ ಫ್ಲೆಕ್ಸ್ ತೆರವು!! | ಸುಳ್ಯದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡುವಂತೆ ಜಿಲ್ಲಾ ಹೋರಾಟ ಸಮಿತಿಯಿಂದ ಆಗ್ರಹ Read More »

ವಿಷಕಾರಿ ಹಣ್ಣಿನ ಜ್ಯೂಸ್ ಸೇವಿಸಿ ಗೃಹಿಣಿ ಲೀಲಾವತಿ ಮೃತ್ಯು!

ಸುಳ್ಯ: ವಿಷಕಾರಿ ಹಣ್ಣಿನ ಜ್ಯೂಸ್ ತಯಾರಿಸಿ ಕುಡಿದ ಪರಿಣಾಮ ಮಹಿಳೆಯೋರ್ವಳು ಮೃತಪಟ್ಟ ಘಟನೆ ಅ. 2ರಂದು ಅಮರಪಡ್ಡೂರು ಗ್ರಾಮದ ಕುಳ್ಳಾಜಿ ಎಂಬಲ್ಲಿ ನಡೆದಿದೆ. ಮೃತರನ್ನು ಜಗನ್ನಾಥ ನಾಯ್ಕ ದೊಡ್ಡೇರಿ ಅವರ ಪತ್ನಿ ಲೀಲಾವತಿ (35) ಎಂದು ಗುರುತಿಸಲಾಗಿದೆ. ಒಂದು ವಾರದ ಹಿಂದೆ ಕಾಡಿನಲ್ಲಿ ಸಿಗುವ ಮೈರೋಳ್ ಹಣ್ಣನ್ನು ಮನೆಗೆ ತಂದು, ಅದರ ರಸ ತೆಗೆದು ಶರ್ಬತ್ ಮಾಡಿ ಲೀಲಾವತಿ ಹಾಗೂ ಅವರ ತಂದೆ ಸೇವನೆ ಮಾಡಿದ್ದರು. ಇದರ ಪರಿಣಾಮ ತಂದೆ ಮಗಳಿಬ್ಬರೂ ಅಸ್ವಸ್ಥರಾಗಿದ್ದರು. ಮಗಳು ಮೂರು ಮಕ್ಕಳ

ವಿಷಕಾರಿ ಹಣ್ಣಿನ ಜ್ಯೂಸ್ ಸೇವಿಸಿ ಗೃಹಿಣಿ ಲೀಲಾವತಿ ಮೃತ್ಯು! Read More »

ಕೆಲಸಕ್ಕೆಂದು ತೆರಳಿದ್ದ ಇಚ್ಲಂಪಾಡಿಯ ಯುವಕ ನಾಪತ್ತೆ; ದೂರು

ಉಪ್ಪಿನಂಗಡಿ: ಇಚ್ಲಂಪಾಡಿ ಗ್ರಾಮದ ಯುವಕನೋರ್ವ ಕಾಣೆಯಾಗಿರುವ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉರೆಜಾಲು ನಿವಾಸಿ  ಜೋಜು ಜೋಸೆಫ್ (35) ನಾಪತ್ತೆಯಾದವರು. ಕೂಲಿ ಕೆಲಸ ಮಾಡುತ್ತಿದ್ದ ಇವರು   ಸೆ. 30ರಂದು ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಸುಬ್ರಹ್ಮಣ್ಯಕ್ಕೆ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋಗಿದ್ದು ರಾತ್ರಿಯಾದರೂ ವಾಪಾಸು ಮನೆಗೆ ಬಂದಿಲ್ಲ. ಪೋನ್ ಮಾಡಿ ಸಂಪರ್ಕಿಸಲು ಪ್ರಯತ್ನಿಸಿದಾಗ ಪೋನ್ ಸ್ವಿಚ್ ಆಪ್ ಆಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಇವರನ್ನು  ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ ಮೇಸ್ತ್ರಿ ಪ್ರಶಾಂತ್‌ ಅವರಿಗೆ ರಾತ್ರಿ ಕರೆ

ಕೆಲಸಕ್ಕೆಂದು ತೆರಳಿದ್ದ ಇಚ್ಲಂಪಾಡಿಯ ಯುವಕ ನಾಪತ್ತೆ; ದೂರು Read More »

ಗುತ್ತಿಗಾರಿನಲ್ಲಿ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ!

ಪಂಜ: ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುತ್ತಿಗಾರಿನಲ್ಲಿ ನಡೆದಿದೆ. ಪ್ರೇಮಾ (55) ಆತ್ಮಹತ್ಯೆ ಮಾಡಿಕೊಂಡವರು. ಪ್ರೇಮಾ ಅವರು ಗುತ್ತಿಗಾರಿನ ವಳಲಂಬೆಯ ಲಕ್ಷ್ಮಣ ಆಚಾರ್ಯ ಅವರ ಪತ್ನಿ. ಮೃತ ಪ್ರೇಮಾ ಅವರು ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುತ್ತಿಗಾರಿನಲ್ಲಿ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ! Read More »

ಮಂಗಳೂರು ಬೆಡಗಿ ಮುಡಿಗೆ ಮಿಸ್ ಟೀನ್ ಗ್ಲೋಬ್ ಇಂಟರ್ ನ್ಯಾಷನಲ್ 2023 ಕಿರೀಟ | ಅಂತಾರಾಷ್ಟ್ರೀಯ ಮಟ್ಟದ ಬ್ಯೂಟಿ ಕಾಂಟೆಸ್ಟ್ ನಲ್ಲಿ ಗೆದ್ದ ಯಶಸ್ವಿನಿ ದೇವಾಡಿಗ

ಮಂಗಳೂರು: ಥಾಯ್ಲೆಂಡ್ ನಲ್ಲಿ ನಡೆದ ಮಿಸ್ ಟೀನ್ ಗ್ಲೋಬ್ ಇಂಟರ್ ನ್ಯಾಷನಲ್ 2023 ಕಿರೀಟವನ್ನು ಕರ್ನಾಟಕದ ಕುವರಿ ಮಂಗಳೂರು ಬೆಡಗಿ ಯಶಸ್ವಿನಿ ದೇವಾಡಿಗ ತನ್ನ ಮುಡಿಗೇರಿಸಿಕೊಂಡಿದ್ದಾರೆ. ವರ್ಷದ ಆರಂಭದಲ್ಲಿ ನಡೆದ ಮಿಸ್ ಟೀನ್ ಇಂಡಿಯಾ ಗ್ಲೋಬ್ ಬ್ಯೂಟಿ ಕಾಂಟೆಸ್ಟ್ ನಲ್ಲಿ ಸ್ಪರ್ಧಿಸಿ ರನ್ನರ್ ಅಪ್ ಪ್ರಶಸ್ತಿ ಪಡೆದು, ಥಾಯ್ಲೆಂಡ್ ನಲ್ಲಿ ನಡೆದ ಫೈನಲ್ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದರು. ಇದೀಗ ಯಶಸ್ವಿನಿ ದೇವಾಡಿಗ ಅವರು ಮಿಸ್ ಟೀನ್ ಗ್ಲೋಬ್ ಇಂಟರ್ ನ್ಯಾಷನಲ್ 2023 ಆಗಿ ಹೊರಹೊಮ್ಮಿದರು. ಇಂಡೋನೇಷ್ಯಾದ

ಮಂಗಳೂರು ಬೆಡಗಿ ಮುಡಿಗೆ ಮಿಸ್ ಟೀನ್ ಗ್ಲೋಬ್ ಇಂಟರ್ ನ್ಯಾಷನಲ್ 2023 ಕಿರೀಟ | ಅಂತಾರಾಷ್ಟ್ರೀಯ ಮಟ್ಟದ ಬ್ಯೂಟಿ ಕಾಂಟೆಸ್ಟ್ ನಲ್ಲಿ ಗೆದ್ದ ಯಶಸ್ವಿನಿ ದೇವಾಡಿಗ Read More »

error: Content is protected !!
Scroll to Top