ದಕ್ಷಿಣ ಕನ್ನಡ

ಮಂಗಳಾದೇವಿ ಅಂಗಳಕ್ಕೆ ಜಿಲ್ಲಾಡಳಿತ: ವಿಹಿಂಪ ಎಚ್ಚರಿಕೆ!

ಮಂಗಳೂರು: ಇತಿಹಾಸ ಪ್ರಸಿದ್ಧ ಮಂಗಳೂರು ಮಂಗಳಾದೇವಿ ದೇವಸ್ಥಾನದ ನವರಾತ್ರಿ ಸಂದರ್ಭ ಮಳಿಗೆಗಳಿಗೆ ಬಹಿರಂಗ ಹರಾಜು ಹಾಕುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ಜಿಲ್ಲಾಡಳಿತ ಸೂಚಿಸಿದೆ. ಇದು ಹೊಸ ವಿವಾದಕ್ಕೆ ದಾರಿ ಮಾಡಿಕೊಡಲಿದ್ದು, ಮುಂದೆ ಆಗುವ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆ ಎಂದು ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ ನೀಡಿದೆ. ನವರಾತ್ರಿ ಉತ್ಸವ ಸಂದರ್ಭ ಮಂಗಳಾದೇವಿ ದೇವಸ್ಥಾನದ ಎದುರು ರಸ್ತೆಯ ಎರಡೂ ಬದಿಯಲ್ಲಿ ಮಳಿಗೆಗಳನ್ನು ಹಾಕಲು ಅವಕಾಶ ಕಲ್ಪಿಸಲಾಗುತ್ತದೆ. ಇದೇ ಪ್ರಕಾರ ಈ ಬಾರಿ, ದೇವಸ್ಥಾನ ಆಡಳಿತ ಮಂಡಳಿ ಏಲಂ ಪ್ರಕ್ರಿಯೆ […]

ಮಂಗಳಾದೇವಿ ಅಂಗಳಕ್ಕೆ ಜಿಲ್ಲಾಡಳಿತ: ವಿಹಿಂಪ ಎಚ್ಚರಿಕೆ! Read More »

ಜನನ ಮರಣ ನೊಂದಣಿಗೆ ಆಧಾರ್ ಕಡ್ಡಾಯವಲ್ಲ: ಡಾ. ಆನಂದ್ ಕೆ.

ಮಂಗಳೂರು: ಜನನ ಮರಣ ನೋಂದಣಿಗೆ ಆಧಾರ್ ಕಡ್ಡಾಯವಲ್ಲ. ಬೇರೆ ದಾಖಲೆಗಳಾದ ಲೈಸನ್ಸ್ ಮುಂತಾದ ದಾಖಲೆಗಳನ್ನು ಬಳಸಬಹುದು ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ. ಆನಂದ್ ಕೆ. ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜನನ ಮರಣ ನೋಂದಣಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನನ ಮರಣ ನೋಂದಣಿಯಲ್ಲಿ ಯಾವುದೇ ವಿಳಂಬ ಹಾಗೂ ಸಾಮಾನ್ಯ ಜನರು ತೊಂದರೆಗಳಿಗೆ ಒಳಗಾಗಬಾರದು. ಇ-ಜನ್ಮ ತಂತ್ರಾಂಶದಲ್ಲಿ ನೋಂದಣಿಯಾಗುವ ಮರಣ ಘಟನೆಗಳಿಗೆ ಮರಣ ಕಾರಣಗಳನ್ನು ಸರಿಯಾಗಿ ನಮೂದಿಸಬೇಕು ಎಂಬ ಕಾರಣಕ್ಕಾಗಿ

ಜನನ ಮರಣ ನೊಂದಣಿಗೆ ಆಧಾರ್ ಕಡ್ಡಾಯವಲ್ಲ: ಡಾ. ಆನಂದ್ ಕೆ. Read More »

ರಸ್ತೆ ದಾಟುತ್ತಿದ್ದ ಯುವತಿಗೆ ಕಾರು ಡಿಕ್ಕಿ : ಸ್ಥಳದಲ್ಲೇ ಮೃತ್ಯು

ಬಂಟ್ವಾಳ : ರಸ್ತೆ ದಾಟುತ್ತಿದ್ದ ಯುವತಿಯೋರ್ವರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವತಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ದಾಸಕೋಡಿ ಎಂಬಲ್ಲಿ ನಡೆದಿದೆ.ವೀರಕಂಭ ಗ್ರಾಮದ ಬಾಯಿಲ ನಿವಾಸಿ ಶೇಖರ ಪೂಜಾರಿ ಎಂಬವರ ಪುತ್ರಿ ಪಾವನ (23) ಮೃತಪಟ್ಟವರು. ಬಿ.ಸಿ.ರೋಡಿನ ಸ್ಕ್ಯಾನಿಂಗ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿರುವ ಪಾವನಿ ಸಂಜೆ ಕೆಲಸ ಬಿಟ್ಟು ಬಸ್‍ ನಲ್ಲಿ ತೆರಳಿ ದಾಸಕೋಡಿಯಲ್ಲಿ ಇಳಿದು ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುವ ವೇಳೆ ಕಾರೊಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಯುವತಿ

ರಸ್ತೆ ದಾಟುತ್ತಿದ್ದ ಯುವತಿಗೆ ಕಾರು ಡಿಕ್ಕಿ : ಸ್ಥಳದಲ್ಲೇ ಮೃತ್ಯು Read More »

ರೈಲ್ವೆ ಪ್ಲಾಟ್ ಪಾರ್ಮ್‍ಗೆ ಬಿದ್ದ ಕಾಂಕ್ರೀಟ್ ಮಿಕ್ಸರ್!

ಬಂಟ್ವಾಳ: ಕಾಮಗಾರಿ ನಿರತ ಕಾಂಕ್ರೀಟ್ ಮಿಕ್ಸರ್ ವಾಹನ ರೈಲ್ವೇ ಹಳಿಗೆ ಬಿದ್ದ ಘಟನೆ ಬಂಟ್ವಾಳ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಅಭಿವೃದ್ಧಿ ಕಾಮಗಾರಿ ವೇಳೆ ಘಟನೆ ನಡೆದಿದೆ. ಹಳಿಯಲ್ಲಿ ರೈಲು ಆಗಮಿಸದೇ ಇದ್ದುದರಿಂದ, ಯಾವುದೇ ಅನಾಹುತ ಸಂಭವಿಸಿಲ್ಲ. ಚಾಲಕನ ನಿಯಂತ್ರಣ ತಪ್ಪಿ ಘಟನೆ ನಡೆದಿದೆಯಾದರೂ, ಬೇಜವಾಬ್ದಾರಿ ಬಗ್ಗೆ ಆಕ್ರೋಶವೂ ಕೇಳಿಬಂದಿದೆ. ರೈಲು ಆಗಮಿಸುವ ಮೊದಲು ಯಂತ್ರದ ತೆರವು ಆಗಬೇಕಾಗಿದ್ದು, ಕಾರ್ಯಾಚರಣೆ ನಡೆಯುತ್ತಿದೆ.

ರೈಲ್ವೆ ಪ್ಲಾಟ್ ಪಾರ್ಮ್‍ಗೆ ಬಿದ್ದ ಕಾಂಕ್ರೀಟ್ ಮಿಕ್ಸರ್! Read More »

ಮೀನಿನ ಲಾರಿಗೆ ಸ್ಕೂಟರ್ ಢಿಕ್ಕಿ; 21ರ ಹರೆಯದ ಯುವಕ ಮೃತ್ಯು

ಉಳ್ಳಾಲ: ಮೀನಿನ ಲಾರಿಗೆ ಸ್ಕೂಟರೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ರಾ.ಹೆ.66ರ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ. ಮೂಲತಃ ಉಳ್ಳಾಲ ನಿವಾಸಿ, ಕೋಟೆಕಾರ್‌ನಲ್ಲಿ ನೆಲೆಸಿರುವ ಹನೀಫ್ ಎಂಬವರ ಪುತ್ರ ಅಝ್‌ವೀನ್ (21) ಮೃತಪಟ್ಟ ಸ್ಕೂಟರ್ ಸವಾರ. ದಕ್ಕೆಗೆ ಮೀನುಗಾರಿಕೆಯ ಕೆಲಸಕ್ಕೆಂದು ಅಝ್‌ವೀನ್ ಬುಧವಾರ ಮುಂಜಾನೆ 3:30ರ ವೇಳೆಗೆ ತೊಕ್ಕೊಟ್ಟಿನಿಂದ ಮಂಗಳೂರು ಕಡೆಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಘಟನೆ ಸಂಭವಿಸಿದರ. ನೇತ್ರಾವತಿ ಸೇತುವೆಯಲ್ಲಿ ಮೀನಿನ ವಾಹನವೊಂದರ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಹಿಂದಿನಿಂದ ಸ್ಕೂಟರ್

ಮೀನಿನ ಲಾರಿಗೆ ಸ್ಕೂಟರ್ ಢಿಕ್ಕಿ; 21ರ ಹರೆಯದ ಯುವಕ ಮೃತ್ಯು Read More »

ಜಿ.ಪಂ. ಸಿಇಓ ನೇತೃತ್ವದಲ್ಲಿ ನಡೆಯಿತು ಆರ್ಯಾಪು ಗ್ರಾ.ಪಂ. ಜಮಾಬಂದಿ ಸಭೆ | ಆಸ್ತಿ ಪರಿಷ್ಕರಣೆ, ಜೆಜೆಎಂ ಯೋಜನೆ ಬಗ್ಗೆ ಮಹತ್ವದ ಚರ್ಚೆ!

ಸಂಪ್ಯ: ಆರ್ಯಾಪು ಗ್ರಾಮ ಪಂಚಾಯತ್ 2022-23ನೇ ಸಾಲಿನ ಜಮಾಬಂದಿ ಸಭೆ ಬುಧವಾರ ಗ್ರಾ.ಪಂ.ನ ನೇತಾಜಿ ಸುಭಾಸ್ ಚಂದ್ರ ಬೋಸ್ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ. ಅವರ ನೇತೃತ್ವದಲ್ಲಿ ಜಮಾಬಂದಿ ನಡೆಯಿತು. ಈ ಸಂದರ್ಭ ಮಾತನಾಡಿದ ಅವರು, ಗ್ರಾಮ ಪಂಚಾಯತ್’ನ ಸ್ವಂತ ಆದಾಯದ ಮೂಲವಾದ ಆಸ್ತಿ ತೆರಿಗೆಗಳನ್ನು ಕಡ್ಡಾಯವಾಗಿ 2 ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಬೇಕು. ಇದರಿಂದ ಸಂಪನ್ಮೂಲ ವೃದ್ಧಿಯಾಗುತ್ತದೆ ಎಂದು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಪ್ರತಿ 2 ವರ್ಷಕ್ಕೊಮ್ಮೆ ಆಸ್ತಿ

ಜಿ.ಪಂ. ಸಿಇಓ ನೇತೃತ್ವದಲ್ಲಿ ನಡೆಯಿತು ಆರ್ಯಾಪು ಗ್ರಾ.ಪಂ. ಜಮಾಬಂದಿ ಸಭೆ | ಆಸ್ತಿ ಪರಿಷ್ಕರಣೆ, ಜೆಜೆಎಂ ಯೋಜನೆ ಬಗ್ಗೆ ಮಹತ್ವದ ಚರ್ಚೆ! Read More »

ಅನಿರೀಕ್ಷಿತವಾಗಿ ಪತ್ತೆಯಾಯ್ತು ಕಳವಾಗಿದ್ದ ಬೈಕ್…!!

ಮಂಗಳೂರು: ಸುಮಾರು ಒಂದು ವರ್ಷ ಒಂಬತ್ತು ತಿಂಗಳ ಹಿಂದೆ ಕಳವಾಗಿದ್ದ ಬೈಕೊಂದು ಮತ್ತೆ ಅದರ ಮಾಲಕನಿಗೇ ಕಾಣಸಿಗುವ ಮೂಲಕ ಅವರ ಮುಖದಲ್ಲಿ ಹರ್ಷಕ್ಕೆ ಕಾರಣವಾಗಿದೆ. ಮಂಗಳೂರಿನ ಹಸುರು ದಳ ಎನ್‌ಜಿಒ ಸಂಸ್ಥೆಯ ಸದಸ್ಯರಾಗಿರುವ ನಾಗರಾಜ್‌ ಬಜಾಲ್‌ ಅವರೇ ಪತ್ತೆಯಾದ ಬೈಕ್‌ನ ಮಾಲಕ. 2022ರ ಮಾರ್ಚ್‌ನಲ್ಲಿ ಹಂಪನಕಟ್ಟೆಯ ರೂಪಾ ಹೊಟೇಲ್‌ ಬಳಿ ಪಾರ್ಕ್‌ ಮಾಡಿದ್ದ ಅವರ ಬಜಾಜ್‌ ಅವೆಂಜರ್‌ ಬೈಕ್‌ ಕಳುವಾಗಿತ್ತು. ಈ ಬಗ್ಗೆ ಬಂದರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಿಸಿ ಕೆಮರಾ ಪರಿಶೀಲಿಸಿದಾಗ ಯುವಕನೊಬ್ಬ ಬೈಕ್‌ ಕಳವು

ಅನಿರೀಕ್ಷಿತವಾಗಿ ಪತ್ತೆಯಾಯ್ತು ಕಳವಾಗಿದ್ದ ಬೈಕ್…!! Read More »

ಪ್ರವಾಸಿತಾಣಕ್ಕೆ ಹೋಗಿ ನಾಪತ್ತೆಯಾಗಿದ್ದ ಯುವಕ ಮೋರಿ ಪಕ್ಕ ಪತ್ತೆ!

ಕೊಟ್ಟಿಗೆಹಾರ: ಪ್ರವಾಸಿತಾಣಕ್ಕೆ ಹೋಗಿ ನಾಪತ್ತೆಯಾಗಿದ್ದ ಯುವಕನೋರ್ವ, ಇದೀಗ ಮನೆ ಸಮೀಪದ ಮೋರಿ ಸಮೀಪ ಪತ್ತೆಯಾಗಿದ್ದಾನೆ. ಮೂಡಿಗೆರೆ ತಾಲೂಕಿನ ಐತಿಹಾಸಿಕ ಹಾಗೂ ಪ್ರವಾಸಿ ತಾಣ ದೇವರ ಮನೆ ಪ್ರವಾಸಕ್ಕೆ ಬಂದಿದ್ದ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ದೀಕ್ಷಿತ್ (27) ಅಕ್ಟೋಬರ್ 10 ರಂದು ಮಂಗಳವಾರ ಸಂಜೆ ನಾಪತ್ತೆಯಾಗಿದ್ದ. ಇದೀಗ ಆಕ್ಟೋಬರ್ 11 ರಂದು ಬೆಳಗ್ಗೆ ಮನೆಯ ಹತ್ತಿರದ ಮೋರಿ ಬಳಿ ಕುಳಿತಿದ್ದನ್ನು ಊರವರು ಪತ್ತೆ ಹಚ್ಚಿ ಮನೆಗೆ ಸೇರಿಸಿದ್ದಾರೆ. ಪ್ರಕರಣ ಸಂಬಂಧಿಸಿದಂತೆ ಸ್ಥಳೀಯರು ಹಾಗೂ ಬಣಕಲ್ ಪೊಲೀಸರು ಹಾಗೂ

ಪ್ರವಾಸಿತಾಣಕ್ಕೆ ಹೋಗಿ ನಾಪತ್ತೆಯಾಗಿದ್ದ ಯುವಕ ಮೋರಿ ಪಕ್ಕ ಪತ್ತೆ! Read More »

ದೈವಸ್ಥಾನದಲ್ಲಿ ನೇಣು ಬಿಗಿದು ಆತ್ಮಹತ್ಯೆ

ಪಣಂಬೂರು: ವ್ಯಕ್ತಿಯೊಬ್ಬರು ಪಣಂಬೂರು ಸಮೀಪದ ಬಬ್ಬುಸ್ವಾಮಿ ದೈವಸ್ಥಾನದ ಪ್ರಾಂಗಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಗೋಪಾಲ (64) ಈ ಕೃತ್ಯ ಎಸಗಿದವರು. ಗೋಪಾಲ ಅವರು ಮಡಿಕೇರಿಯಿಂದ ತಣ್ಣೀರು ಬಾವಿ ಬೀಚ್ ಗೆ ಬಂದಿದ್ದು, ಬಳಿಕ ದೈವಸ್ಥಾನ ಪ್ರಾಂಗಣದಲ್ಲಿ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಘಟನೆಗೆ ಸಂಬಂಧಿಸಿ ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ದೈವಸ್ಥಾನದಲ್ಲಿ ನೇಣು ಬಿಗಿದು ಆತ್ಮಹತ್ಯೆ Read More »

ಗಡಿಯಿಂದ ಘಾಟ್’ವರೆಗೆ ಸ್ವಚ್ಛತೆ, ಬೀಜ ಬಿತ್ತುವ ಅಭಿಯಾನ

ಸುಬ್ರಹ್ಮಣ್ಯ: ಇಲ್ಲಿನ ರೋಟರಿ, ಲಯನ್ಸ್, ಇನ್ನರ್ ವ್ಹೀಲ್ ಕ್ಲಬ್, ಅರಣ್ಯ ಇಲಾಖೆ ಆಶ್ರಯದಲ್ಲಿ ಬೀಜ ಬಿತ್ತುವ ಹಾಗೂ ಬೃಹತ್ ಸ್ವಚ್ಚತಾ ಅಭಿಯಾನಕ್ಕೆ ಕುಲುಕುಂದ ಶ್ರೀ ಚಾಮುಂಡೇಶ್ವರಿ ಗಡಿಯಲ್ಲಿ ಚಾಲನೆ ನೀಡಲಾಯಿತು. ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಮಲ್ ಬಾಬು, ಅರಣ್ಯ ಪೋಷಣೆ, ಬೆಳವಣಿಗೆ ಹಾಗೂ ಸಂರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಇದರೊಂದಿಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ

ಗಡಿಯಿಂದ ಘಾಟ್’ವರೆಗೆ ಸ್ವಚ್ಛತೆ, ಬೀಜ ಬಿತ್ತುವ ಅಭಿಯಾನ Read More »

error: Content is protected !!
Scroll to Top