ದಕ್ಷಿಣ ಕನ್ನಡ

ಸರಕಾರಿ ವಾಹನ ಡಿಕ್ಕಿ : ಪಾದಾಚಾರಿ ಮೃತ್ಯು !

ಬಂಟ್ವಾಳ: ಪಾದಚಾರಿಗೆ ಸರಕಾರಿ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿ ಮೃತಪಟ್ಟ ಘಟನೆ ಮಂಗಳವಾರ ಪರಂಗಿಪೇಟೆಯಲ್ಲಿ ತಡರಾತ್ರಿ ನಡೆದಿದೆ. ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಪಾದಚಾರಿಯನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಪುತ್ತೂರು ಅರಣ್ಯ ಇಲಾಖೆಗೆ ಸೇರಿದ ವಾಹನ ಇದಾಗಿದ್ದು, ಬೀಸಿರೋಡು ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸರಕಾರಿ ವಾಹನ ಡಿಕ್ಕಿ : ಪಾದಾಚಾರಿ ಮೃತ್ಯು ! Read More »

ಮಾ.7 : ಮಂಚಿ ಪುಚ್ಚೆಕೆರೆ ಮನೆಯಲ್ಲಿ ನೇಮೋತ್ಸವ

ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮದ ಪುಚ್ಚೆಕೆರೆ ಮನೆಯಲ್ಲಿ ಶ್ರೀ ರುದ್ರಾಂಡಿ ಧರ್ಮದೈವ, ಕಲ್ಲುರ್ಟಿ, ಪಂಜುರ್ಲಿ ಹಾಗೂ ರಾಹುಗುಳಿಗ ದೈವಗಳಿಗೆ ನೇಮೋತ್ಸವ ಸೇವೆ ಮಾ.7 ಗುರುವಾರ ರಾತ್ರಿ 8:30ಕ್ಕೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬಸ್ಥರು ಪಾಲ್ಗೊಂಡು ಗಂಧ ಪ್ರಸಾದ ಸ್ವೀಕರಿಸಿ, ಶ್ರೀ ದೈವಗಳ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಪುಚ್ಚೆಕೆರೆ ಮನೆಯ ಸೀತಾರಾಮ ಗೌಡ ತಿಳಿಸಿದ್ದಾರೆ.

ಮಾ.7 : ಮಂಚಿ ಪುಚ್ಚೆಕೆರೆ ಮನೆಯಲ್ಲಿ ನೇಮೋತ್ಸವ Read More »

ಮಾ.8 : ಕಜೆಮೂಲೆ ಕುಟುಂಬಸ್ಥರ ಶ್ರೀ ನಾಗದೇವರು ಹಾಗೂ ಭೂಮಿ ದೈವಗಳ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ | ನೇಮೋತ್ಸವ

ಸುಳ್ಯ: ಕಜೆಮೂಲೆ ಕುಟುಂಬಸ್ಥರ ಭೂಮಿ ದೈವಗಳ ದೈವಸ್ಥಾನದಲ್ಲಿ ಶ್ರೀ ನಾಗದೇವರು ಹಾಗೂ ಭೂಮಿ ದೈವಗಳಾದ ಕುಪ್ಪೆ ಪಂಜುರ್ಲಿ, ಪಾಷಾಣಮೂರ್ತಿ, ಗುಳಿಗ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ನೇಮೋತ್ಸವ ಮಾ.8 ಶುಕ್ರವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ 7.30 ರಿಂದ ಗಣಪತಿ ಹೋಮ, ಶುದ್ಧಕಲಶ, ನಾಗ ತಂಬಿಲ, ದೈವಗಳಿಗೆ ತಂಬಿಲ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ಜರಗಲಿದೆ. ರಾತ್ರಿ 7 ಕ್ಕೆ ದೈವಗಳ ಭಂಡಾರ ತೆಗೆಯುವುದು, ರಾತ್ರಿ 8.30

ಮಾ.8 : ಕಜೆಮೂಲೆ ಕುಟುಂಬಸ್ಥರ ಶ್ರೀ ನಾಗದೇವರು ಹಾಗೂ ಭೂಮಿ ದೈವಗಳ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ | ನೇಮೋತ್ಸವ Read More »

ಪ್ರಗತಿ ಬಂಧು ಕೇಂದ್ರ ಒಕ್ಕೂಟ ಸಮಿತಿ ಸಭೆ

ಕಡಬ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಪ್ರಗತಿಬಂಧು ಕೇಂದ್ರ ಒಕ್ಕೂಟ ಸಮಿತಿ ಸಭೆ ಕಡಬ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಡಬ ತಾಲೂಕು ಅಧ್ಶಕ್ಷರು ಮಹೇಶ್ ಕೆ ಸವಣೂರು ಸಭೆಯನ್ನು ಉಧ್ಘಾಟಿಸಿ ಮಾತನಾಡಿ, ಕಡಬ ತಾಲೂಕಿನ 63 ಒಕ್ಕೂಟದ ಅಧ್ಶಕ್ಷರುಗಳು ಸೇರಿ ಒಕ್ಕೂಟದ ಬಲವರ್ಧನೆಯನ್ನು ನಿಸ್ವಾರ್ಥತೆಯಿಂದ ಮಾಡುತ್ತಿರುವುದು ಅಭಿನಂದನಾರ್ಹ. ಅಧ್ಶಕ್ಷ ಒಬ್ಬ ನಾಯಕನಾಗಿ ತಮ್ಮ ವ್ಶಾಪ್ತಿಯ ಒಕ್ಕೂಟದ ಸದಸ್ಶರ ಕಷ್ಟಗಳಿಗೆ ಸ್ಪಂದಿಸಿ ಗ್ರಾಮಾಭಿವೃಧ್ಧಿ ಯೋಜನೆಯ ಸೌಲಭ್ಶಗಳ ಒದಗಿಸಿಕೊಟ್ಟಲ್ಲಿ ಒಕ್ಕೂಟವು ಸಮರ್ಥವಾಗಿ

ಪ್ರಗತಿ ಬಂಧು ಕೇಂದ್ರ ಒಕ್ಕೂಟ ಸಮಿತಿ ಸಭೆ Read More »

ಬೆಳ್ಳಾರೆಯಲ್ಲಿ ಮನೆಯೊಂದಕ್ಕೆ ಎನ್.ಐ.ಎ ದಾಳಿ !

ಬೆಳ್ಳಾರೆ : ಬೆಳ್ಳಾರೆ ಠಾಣಾ ವ್ಯಾಪ್ತಿಯ ಎಣ್ಮೂರು ಸಮೀಪ ಕುಲಾಯಿತೋಡು ಎಂಬಲ್ಲಿ ಮನೆಯೊಂದಕ್ಕೆ  ಎನ್.ಐ.ಎ ಅಧಿಕಾರಿಗಳ ತಂಡ ದಾಳಿ ನಡೆಸಿದ ಘಟನೆ   ನಡೆದಿದೆ. ಮನೆಯೊಂದಕ್ಕೆ ದಿಢೀರ್ ದಾಳಿ ನಡೆಸಿದ ಎನ್‌.ಐ.ಎ ಅಧಿಕಾರಿಗಳ ತಂಡ ಮಾಹಿತಿ ಕಲೆ ಹಾಕಿದೆ. ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ನಡೆದ ದಾಳಿ ಇದಾಗಿದೆ ಎಂದು ತಿಳಿದು ಬಂದಿದೆ.

ಬೆಳ್ಳಾರೆಯಲ್ಲಿ ಮನೆಯೊಂದಕ್ಕೆ ಎನ್.ಐ.ಎ ದಾಳಿ ! Read More »

ಆ್ಯಸಿಡ್ ದಾಳಿಯಿಂದ ಗಾಯಗೊಂಡ ವಿದ್ಯಾರ್ಥಿನಿಯರು ದಾಖಲಾದ ಆಸ್ಪತ್ರೆಗೆ ಅರುಣ್ ಕುಮಾರ್ ಪುತ್ತಿಲ ಭೇಟಿ

ಮಂಗಳೂರು : ಕಡಬದಲ್ಲಿ ಅಬೀನ್ ಎಂಬ ಯುವಕ ಆ್ಯಸಿಡ್ ದಾಳಿ ನಡೆಸಿದ ಹಿನ್ನೆಲೆ ಗಾಯಗೊಂಡ ವಿದ್ಯಾರ್ಥಿನಿಯರಾದ ಅಲೀನಾ, ಅರ್ಚನ, ಅಮೃತ ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರುಣ್ ಕುಮಾ‌ರ್ ಪುತ್ತಿಲ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಮೂವರು ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿ ಕುಟುಂಬಸ್ಥರ ಜೊತೆ ಮಾತನಾಡಿದರು. ಆದಷ್ಟು ಶೀಘ್ರವಾಗಿ ಗುಣಮುಖರಾಗಿ ಬರಲೆಂದು ಹಾರೈಸಿದರು. ಮಂಗಳೂರಿನ ಹಿಂದೂ ಸಂಘಟನೆಯ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಆ್ಯಸಿಡ್ ದಾಳಿಯಿಂದ ಗಾಯಗೊಂಡ ವಿದ್ಯಾರ್ಥಿನಿಯರು ದಾಖಲಾದ ಆಸ್ಪತ್ರೆಗೆ ಅರುಣ್ ಕುಮಾರ್ ಪುತ್ತಿಲ ಭೇಟಿ Read More »

ಬೈಕ್- ಗೂಡ್ಸ್ ನಡುವೆ ಡಿಕ್ಕಿ | ವಿದ್ಯಾರ್ಥಿ ಮೃತ್ಯು

ಉಪ್ಪಿನಂಗಡಿ : ಬೈಕ್‌ ಹಾಗೂ ಮಿನಿ ಗೂಡ್ಸ್‌ ವಾಹನವೊಂದರ ನಡುವೆ ಡಿಕ್ಕಿ ಸಂಭವಿಸಿ ಬೈಕ್‌ ಸವಾರ ಮೃತಪಟ್ಟ ಘಟನೆ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ರಾಮಕುಂಜ ಗ್ರಾಮದ ಗೋಳಿತ್ತಡಿ ಸಮೀಪ ನಡೆದಿದೆ. ಪುತ್ತೂರು ವಿವೇಕಾನಂದ ಪದವಿ ಕಾಲೇಜಿನ ಅಂತಿಮ ಬಿ.ಎ. ವಿದ್ಯಾರ್ಥಿ, ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಅಜೀರ ನಿವಾಸಿ ಗುರುವಪ್ಪ ಅವರ ಪುತ್ರ ಶ್ರೀಜಿಸ್ (20) ಮೃತ ಯುವಕ. ಶ್ರೀಜಿಸ್ ರವರು ಚಿಕ್ಕಮ್ಮನ ಮನೆಗೆ ಬಂದು ರಾತ್ರಿ ಅಲ್ಲಿಂದ ಆಲಂಕಾರು ಸಮೀಪದ ನೆಕ್ಕರೆಯಲ್ಲಿರುವ ಪೆಟ್ರೋಲ್‌ ಪಂಪ್‌ನಲ್ಲಿ ಬೈಕ್‌ಗೆ ಪೆಟ್ರೋಲ್‌ ತುಂಬಿಸಿ

ಬೈಕ್- ಗೂಡ್ಸ್ ನಡುವೆ ಡಿಕ್ಕಿ | ವಿದ್ಯಾರ್ಥಿ ಮೃತ್ಯು Read More »

ರಾಜ್ಯ ಕಾಂಗ್ರೇಸ್ ಸರಕಾರದ ಹಿಂದೂ ವಿರೋಧಿ‌ ನೀತಿ ಖಂಡಿಸಿ ವಿಶ್ವಹಿಂದೂ ಪರಿಷತ್ ಬಜರಂಗದಳದಿಂದ ಬೃಹತ್ ಪ್ರತಿಭಟನೆ

ಬಂಟ್ವಾಳ: ರಾಜ್ಯ ಕಾಂಗ್ರೇಸ್ ಸರಕಾರದ ಹಿಂದೂ ವಿರೋಧಿ‌ ನೀತಿಯನ್ನು ಖಂಡಿಸಿ, ವಿಶ್ವಹಿಂದೂ ಪರಿಷತ್ ಬಜರಂಗದಳ ಪುತ್ತೂರು ಜಿಲ್ಲಾ ವತಿಯಿಂದ ಬಿಸಿರೋಡಿನಲ್ಲಿ ಬೃಹತ್ ಪ್ರತಿಭಟನೆ ನಡೆದು, ಬಳಿಕ ರಾಷ್ಟ್ರೀಯ ಹೆದ್ದಾರಿಯನ್ನು ತಡೆದ ವಿಶ್ವ ಹಿಂದೂ ಪರಿಷದ್ ಬಜರಂಗದಳದ ಕಾರ್ಯಕರ್ತರನ್ನು ಬಂಟ್ವಾಳ ಪೋಲೀಸರು ಬಂಧಿಸಿ ಬಿಡುಗಡೆಗೊಳಿಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿಶ್ವಹಿಂದೂ ಪರಿಷತ್ ಬಂಟ್ವಾಳ ಪ್ರಖಂಡದ ಅಧ್ಯಕ್ಷ ನ್ಯಾಯವಾದಿ ಪ್ರಸಾದ್ ಕುಮಾರ್ ರೈ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನಿರಂತರವಾಗಿ ಹಿಂದೂ ವಿರೋಧಿ ನೀತಿಯನ್ನು ಅನುಸರಿಸಿ ಅಶಾಂತಿಯನ್ನು ಸೃಷ್ಟಿ

ರಾಜ್ಯ ಕಾಂಗ್ರೇಸ್ ಸರಕಾರದ ಹಿಂದೂ ವಿರೋಧಿ‌ ನೀತಿ ಖಂಡಿಸಿ ವಿಶ್ವಹಿಂದೂ ಪರಿಷತ್ ಬಜರಂಗದಳದಿಂದ ಬೃಹತ್ ಪ್ರತಿಭಟನೆ Read More »

ಸುಳ್ಯ ಲಾರಿ ಚಾಲಕ ಇಸಾಕ್‍ ಆತ್ಮಹತ್ಯೆ !

ಸುಳ್ಯ: ವ್ಯಕ್ತಿಯೊಬ್ಬರು ಸುಳ್ಯದ ರೆಸಿಡೆನ್ಸಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಪೈಚಾರ್ ನಿವಾಸಿ ಲಾರಿ ಚಾಲಕ ಇಸಾಕ್‍ ಆತ್ಮಹತ್ಯೆ ಮಾಡಿಕೊಂಡವರು. ಸುಳ್ಯ ಜೂನಿಯರ್ ಕಾಲೇಜು ರಸ್ತೆ ಬಳಿ ಇರುವ ಸದರ್ನ್ ರೆಸಿಡೆನ್ಸಿಯಲ್ಲಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಈ ಕುರಿತು ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಯ ಲಾರಿ ಚಾಲಕ ಇಸಾಕ್‍ ಆತ್ಮಹತ್ಯೆ ! Read More »

ಈ ಬಾರಿ ದ.ಕ.ಜಿಲ್ಲೆಯಿಂದ ಲೋಕಸಭಾ ಟಿಕೇಟ್ ಒಕ್ಕಲಿಗ ಸಮುದಾಯದ  ಪ್ರಭಾವಿ ನಾಯಕ ಕಿರಣ್ ಬುಡ್ಲೆಗುತ್ತುಗೆ | ಕಿರಣ್ ಬುಡ್ಲೆಗುತ್ತು ಹೆಸರು ಮುಂಚೂಣಿಯಲ್ಲಿ

ಮಂಗಳೂರು : ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಳ್ಯ ಮೂಲದ ಯುವ ನಾಯಕ ಕಿರಣ್ ಬುಡ್ಲೆಗುತ್ತು ಅವರಿಗೆ ಲೋಕಸಭಾ ಟಿಕೇಟ್ ನೀಡುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ. ಡಿಕೆಶಿ ಆಪ್ತ ವಲಯದಲ್ಲಿ ಕಾಣಿಸಿಕೊಂಡಿರುವ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಕಿರಣ್ ಬುಡ್ಲೆಗುತ್ತು ವಿಗೆ ಹೈಕಮಾಂಡ್ ಕೃಪಾಕಟಾಕ್ಷ ತೋರಿದೆ ಎಂಬುದು ಬಹಿರಂಗವಾಗಿದೆ. ಉಳಿದ ಆಕಾಂಕ್ಷಿಗಳಾದ ರಮಾನಾಥ ರೈ, ವಿನಯ್ ಕುಮಾರ್ ಸೊರಕೆ, ಪದ್ಮರಾಜ್ ಈ ಮೂವರ ನಡುವೆ ಕಿರಣ್ ಬುಡ್ಲೆಗುತ್ತು ಹೆಸರು ಮುಂಚೂಣಿಯಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಿರಣ್

ಈ ಬಾರಿ ದ.ಕ.ಜಿಲ್ಲೆಯಿಂದ ಲೋಕಸಭಾ ಟಿಕೇಟ್ ಒಕ್ಕಲಿಗ ಸಮುದಾಯದ  ಪ್ರಭಾವಿ ನಾಯಕ ಕಿರಣ್ ಬುಡ್ಲೆಗುತ್ತುಗೆ | ಕಿರಣ್ ಬುಡ್ಲೆಗುತ್ತು ಹೆಸರು ಮುಂಚೂಣಿಯಲ್ಲಿ Read More »

error: Content is protected !!
Scroll to Top