ದಕ್ಷಿಣ ಕನ್ನಡ

ಡಾ. ಅನುರಾಧಾ ಕುರುಂಜಿಯವರಿಗೆ  ಶಿವಶರಣೆ ನೀಲಾಂಬಿಕೆ  ಪ್ರಶಸ್ತಿ, ರಾಜ್ಯ ಮಟ್ಟದ ಕವಿಗೋಷ್ಠಿಗೆ ಆಯ್ಕೆ | ರಾಜ್ಯ ಮಟ್ಟದ  ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯದ 25 ಮಹಿಳಾ ಸಾಧಕಿಯರಿಗೆ ಪುರಸ್ಕಾರ

ಸುಳ್ಯ: ಉಪನ್ಯಾಸಕಿ, ವ್ಯಕ್ತಿತ್ವ ವಿಕಸನ ತರಬೇತುದಾರೆ ಡಾ. ಅನುರಾಧಾ ಕುರುಂಜಿಯವರು ಬೆಂಗಳೂರಿನ ವಿಶ್ವ ಕನ್ನಡ ಸಂಸ್ಥೆಯವರು ಕೊಡ ಮಾಡುವ  ಶಿವಶರಣೆ ನೀಲಾಂಬಿಕೆ  ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶೈಕ್ಷಣಿಕ ಕಾರ್ಯ ಚಟುವಟಿಕೆಯ ಜೊತೆಗೆ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿ ಬಿಡುವಿನ ವೇಳೆ ಸುಮಾರು 2100 ಕ್ಕೂ ಅಧಿಕ ತರಬೇತಿ ನೀಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮಾ.29 ರಂದು ಬೆಂಗಳೂರಿನ ಬಗಲಕುಂಟೆ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ  ನಡೆಯುವ ವಿಶ್ವ ಕನ್ನಡ […]

ಡಾ. ಅನುರಾಧಾ ಕುರುಂಜಿಯವರಿಗೆ  ಶಿವಶರಣೆ ನೀಲಾಂಬಿಕೆ  ಪ್ರಶಸ್ತಿ, ರಾಜ್ಯ ಮಟ್ಟದ ಕವಿಗೋಷ್ಠಿಗೆ ಆಯ್ಕೆ | ರಾಜ್ಯ ಮಟ್ಟದ  ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯದ 25 ಮಹಿಳಾ ಸಾಧಕಿಯರಿಗೆ ಪುರಸ್ಕಾರ Read More »

ವೀಸಾ ಕೊಡಿಸುವುದಾಗಿ ವಂಚನೆ | ಪ್ರಕರಣ ದಾಖಲು

ಬೆಳ್ತಂಗಡಿ: ಪೋಲಂಡ್ ದೇಶದಲ್ಲಿ ಕೆಲಸ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ ವಂಚಿಸಿದ ಘಟನೆ ನಡೆದಿದೆ. ಹತ್ಯಡ್ಕ ಗ್ರಾಮದ ಅರಸಿನಮಕ್ಕಿ ನಿವಾಸಿ ರೆಜಿ ಕೆ.ಎ ಅವರ ಪುತ್ರ ಆಲ್ವಿನ್ ಕೆ.ಆರ್‍. ಅವರಿಗೆ ಮನೋಜ್ ಎಂಬಾತ ವೀಸಾ ಕೊಡುವುದಾಗಿ ವಂಚಿಸಿರುವುದಾಗಿ ತಿಳಿದು ಬಂದಿದೆ. ಆರೋಪಿ ವೀಸಾ ಕೊಡಿಸುವುದಾಗಿ 2023 ಮೇ ತಿಂಗಳಿನಿಂದ 2024 ಮಾ.19 ರ ತನಕ ವಿವಿಧ ಕಾರಣ ನೀಡಿ ಹಂತ ಹಂತವಾಗಿ 2.50 ಲಕ್ಷ ರೂ. ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ವೀಸಾ ಕೊಡಿಸದೇ ವಮಚಿಸಿರುವುದಾಗಿ ಧರ್ಮಸ್ಥಳ ಠಾಣೆಗೆ ನೀಡಿದ

ವೀಸಾ ಕೊಡಿಸುವುದಾಗಿ ವಂಚನೆ | ಪ್ರಕರಣ ದಾಖಲು Read More »

ದೇಶದ ಅತೀ ದೊಡ್ಡ ಸಂಸ್ಥೆ ದಕ್ಷಿಣ ಕನ್ನಡ ರೈತ ಉತ್ಪಾದಕರ‌ ಕಂಪೆನಿಯ‌ ಷೇರು ಮಾರುಕಟ್ಟೆಗೆ ಬಿಡುಗಡೆ

ಮಂಗಳೂರು: ತೆಂಗು ಬೆಳೆಗಾರರೇ ಸ್ಥಾಪಿಸಿ, ಮುನ್ನಡೆಸುತ್ತಿರುವ ದೇಶದ ಅತೀ ದೊಡ್ಡ ಸಂಸ್ಥೆ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಕಂಪನಿಯು ತನ್ನ ಕಾರ್ಯ ವ್ಯಾಪ್ತಿ ಹಾಗೂ ಮಾರುಕಟ್ಟೆ ವಿಸ್ತರಣೆ ಉದ್ದೇಶದಿಂದ ಸಾರ್ವಜನಿಕರಿಂದ ಷೇರು ಸಂಗ್ರಹಕ್ಕೆ ಮುಂದಾಗಿದೆ. 15 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ತೆಂಗು ಬೆಳೆಗಾರರ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸಂಸ್ಥೆ 300 ಕೋಟಿ ರೂ. ಮೌಲ್ಯದ ವಿಸ್ತ್ರತ ಯೋಜನೆ ಕೈಗೆತ್ತಿಕೊಂಡಿದ್ದು, ಮೊದಲ ಹಂತದಲ್ಲಿ 50 ಕೋಟಿ ರೂ. ಮೌಲ್ಯದ ಷೇರು ಸಂಗ್ರಹಿಸುವ ಗುರಿ ಇಟ್ಟುಕೊಂಡಿದೆ.

ದೇಶದ ಅತೀ ದೊಡ್ಡ ಸಂಸ್ಥೆ ದಕ್ಷಿಣ ಕನ್ನಡ ರೈತ ಉತ್ಪಾದಕರ‌ ಕಂಪೆನಿಯ‌ ಷೇರು ಮಾರುಕಟ್ಟೆಗೆ ಬಿಡುಗಡೆ Read More »

ನೇತ್ರಾವತಿ ನದಿಗೆ ಬಿದ್ದು ಯುವಕ ಮೃತ್ಯು !

ಬಂಟ್ವಾಳ: ನೇತ್ರಾವತಿ ನದಿಗೆ ಬಿದ್ದು ಯುವಕ ಮೃತಪಟ್ಟ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಮಂಜೊಟ್ಟಿ ನಿವಾಸಿ ಲೋಹಿತಾಶ್ವ (30) ಮೃತ ಯುವಕ. ಲೋಹಿತಾಶ್ವ ಅವರು ಕಾರಿನಲ್ಲಿ ಊರಿನ ನಾಲ್ವರು ಸ್ನೇಹಿತರ ಜೊತೆ ಶಂಭೂರಿಗೆ ಬಂದಿದ್ದು, ಸ್ನೇಹಿತರು ಸ್ನಾನ ಮಾಡುವುದಕ್ಕೆ ನೀರಿಗೆ ಇಳಿದಿದ್ದರು, ಆದರೆ ಲೋಹಿತಾಶ್ವ ನದಿ ಕಿನಾರೆಯಲ್ಲೇ ಕುಳಿತ್ತಿದ್ದರು ಎನ್ನಲಾಗಿದೆ. ಆದರೆ ಸ್ನೇಹಿತರು ಸ್ನಾನ ಮುಗಿಸಿ ಬರುವ ವೇಳೆ ಲೋಹಿತಾಶ್ವ ಅವರು ನೀರಿನಲ್ಲಿ ಬಿದ್ದಿದ್ದರು. ನದಿ ಕಿನಾರೆಯಲ್ಲಿ ಕುಳಿತಿದ್ದ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದು

ನೇತ್ರಾವತಿ ನದಿಗೆ ಬಿದ್ದು ಯುವಕ ಮೃತ್ಯು ! Read More »

ಸೂಕ್ತ ದಾಖಲೆ ಪತ್ರ ಇಲ್ಲದೆ ಸಾಗಿಸುತ್ತಿದ್ದ 1.32 ಲಕ್ಷ ರೂ. | ವಶಕ್ಕೆ ಪಡೆದ ಚುನಾವಣಾಧಿಕಾರಿಗಳು

ಪುತ್ತೂರು: ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.32 ಲಕ್ಷ ರೂ. ನಗದನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದ ಘಟನೆ ಮಂಗಳೂರು ಹೊರವಲಯದ ಬಡಗ ಎಡಪದವು ಎಂಬಲ್ಲಿ ನಡೆದಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಕಾರಣ ಅಕ್ರಮ ಹಣ ವಹಿವಾಟಿನ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದ್ದರೂ ಈ ನಡುವೆ ಮಂಗಳೂರು ಹೊರವಲಯದ ಬಡಗ ಎಡಪದವು ಚೆಕ್‍ ಪೋಸ್ಟ್‍  ನಲ್ಲಿ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದಾಗ ನಗದನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಭಾನುವಾರ ತಡರಾತ್ರಿ ಕೈಕಂಬ ನಿವಾಸಿಯೊಬ್ಬರು ಹುಂಡೈ

ಸೂಕ್ತ ದಾಖಲೆ ಪತ್ರ ಇಲ್ಲದೆ ಸಾಗಿಸುತ್ತಿದ್ದ 1.32 ಲಕ್ಷ ರೂ. | ವಶಕ್ಕೆ ಪಡೆದ ಚುನಾವಣಾಧಿಕಾರಿಗಳು Read More »

ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ರಾಘವ ಎಚ್.ಗೇರುಕಟ್ಟೆ

ಬೆಳ್ತಂಗಡಿ: ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ರಾಘವ ಎಚ್. ಗೇರುಕಟ್ಟೆ ನೇಮಕಗೊಂಡಿದ್ದಾರೆ. ರಾಘವ ಅವರು ನಾಳ ಶ್ರೀ ದುರ್ಗಾಪರಮೇಶ್ವರಿ ಚಿಕ್ಕಮೇಳದ ಸಂಚಾಲಕರಾಗಿ ಮತ್ತು ನಾಳ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ವ್ಯವಸ್ಥಾಪಕರಾಗಿ ಯಕ್ಷಗಾನ ಮತ್ತು ತಾಳಮದ್ದಳೆಯ ಸಂಯೋಜಕರಾಗಿ, ಕಲಾವಿದರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾಳ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸಂಘ ಮತ್ತು ಉಪ್ಪಿನಂಗಡಿಯ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷ ದಿವಾಕರ್ ಆಚಾರ್ಯ ಗೇರುಕಟ್ಟೆ ಅಭಿನಂದನೆ ಸಲ್ಲಿಸಿದ್ದಾರೆ.

ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ರಾಘವ ಎಚ್.ಗೇರುಕಟ್ಟೆ Read More »

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಸಹಿತ ಮೂರು ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗೆ ತಾತ್ಕಾಲಿಕ ತಡೆ | ಧಾರ್ಮಿಕದತ್ತಿ ಇಲಾಖೆ ಆಯುಕ್ತರಿಂದ ಆದೇಶ

ಪುತ್ತೂರು: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ರಚಿಸಿ ಹೊರಡಿಸಲಾದ ಆದೇಶಕ್ಕೆ ಸರಕಾರ ತಾತ್ಕಾಲಿಕ ತಡೆ ನೀಡಿ ಮತ್ತೊಂದು ಆದೇಶ ಹೊರಡಿಸಿದೆ. ಎ ಗ್ರೇಡೆ ದೇವಸ್ಥಾನವಾಗಿರುವ ಪಂಜ ದೇವಸ್ಥಾನಕ್ಕೆ ಡಾ.ದೇವಿಪ್ರಸಾದ್ ಕಾನತ್ತೂರು ಹಾಗೂ ಇತರರನ್ನು ಸದಸ್ಯರಾಗಿ ನೇಮಿಸಿ ಎರಡು ದಿನಗಳ ಹಿಂದೆ ಧಾರ್ಮಿಕದತ್ತಿ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದರು. ಆದೇಶ ಬಂದ ಬೆನ್ನಲ್ಲೇ ವ್ಯವಸ್ತಾಪನಾ ಸಮಿತಿ ಸದಸ್ಯರು ಸಭೆ ಸೇರಿ ದೇವಿಪ್ರಸಾದ್ ಕಾನತ್ತೂರು ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಪದಗ್ರಹಣವೂ ನಡೆದಿತ್ತು. ಇದೀಗ

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಸಹಿತ ಮೂರು ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗೆ ತಾತ್ಕಾಲಿಕ ತಡೆ | ಧಾರ್ಮಿಕದತ್ತಿ ಇಲಾಖೆ ಆಯುಕ್ತರಿಂದ ಆದೇಶ Read More »

ಮೂರು ವರ್ಷದ ಮಗುವಿಗೆ ಆಟೋ ಡಿಕ್ಕಿ : ಮಗು ಮೃತ್ಯು

ಬೆಳ್ತಂಗಡಿ: ಮೂರು ವರ್ಷ ಮಗುವೊಂದು ಮನೆಯಿಂದ ರಸ್ತೆಗೆ ಬಂದಾಗ ಆಟೋ ರಿಕ್ಷಾ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಸೋಣಂದೂರಿನ ಪಣಕಜೆಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಪಣಕಜೆ ಮುಂಡಾಡಿ ನಿವಾಸಿ ಚಂದ್ರಶೇಖರ್ ಹಾಗೂ ಉಷಾ ದಂಪತಿ ಪುತ್ರ ಕೌಶಿಕ್‍ ಮೃತಪಟ್ಟ ಮಗು. ರಸ್ತೆ ಬದಿಯಲ್ಲೇ ಮನೆಯಿದ್ದು, ಯಾರೂ ಇಲ್ಲದ ವೇಳೆ ಮಗು ರಸ್ತೆಗೆ ಓಡಿಬಂದಿದೆ. ಈ ಸಂದರ್ಭ ಬಂದ ಆಟೋ ರಿಕ್ಷಾ ಮಗುವಿಗೆ ಡಿಕ್ಕಿ ಹೊಡದಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗದೆ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಬೆಳ್ತಂಗಡಿ

ಮೂರು ವರ್ಷದ ಮಗುವಿಗೆ ಆಟೋ ಡಿಕ್ಕಿ : ಮಗು ಮೃತ್ಯು Read More »

ಐದು ಗೋಣಿ ಸುಲಿದ ಅಡಿಕೆ ಕಳವು : ಪ್ರಕರಣ ದಾಖಲು

ಬೆಳ್ಳಾರೆ: ಸುಲಿದು ದಾಸ್ತಾನಿಟ್ಟಿದ್ದ ಐದು ಗೋಣಿ ಅಡಿಕೆ ಕಳವಾದ ಘಟನೆ ಸುಳ್ಯ ತಾಲೂಕಿನ ಕುಳ್ಳಂಪಾಡಿಯಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕಳವು ನಡೆದಿದ್ದು, ಕುಳ್ಳಂಪಾಡಿ ನಿವಾಸಿ ಹಿರಿಯಣ್ಣ ಗೌಡರು ಮೂರು ದಿನಗಳ ಹಿಂದೆ ಕುಟುಂಬ ಸಮೇತ ತನ್ನ ಅಕ್ಕನ ಮನೆಗೆ ಹೋದವರು ಮನೆಗೆ ಬಂದು ನೋಡಿದಾಗ ಸುಲಿದಿಟ್ಟಿದ್ದ ಅಡಿಕೆ ಐದು ಗೋಣಿ ಅಡಿಕೆ ಕಳವಾಗಿರುವುದು ಬೆಳಕಿ ಬಂದಿದೆ. ಕಳವಾದ ಅಡಿಕೆ ಮೌಲ್ಯ ಒಂದು ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಕುರಿತು ಬೆಳ್ಳಾರೆ ಠಾಣೆಗೆ ದೂರು

ಐದು ಗೋಣಿ ಸುಲಿದ ಅಡಿಕೆ ಕಳವು : ಪ್ರಕರಣ ದಾಖಲು Read More »

ಅರುಣ್ ಕುಮಾರ್ ಪುತ್ತಿಲ ಮಂಗಳೂರು ಬಿಜೆಪಿ ಕಚೇರಿಗೆ ಭೇಟಿ | ಸ್ವಾಗತಿಸಿದ ಕಾರ್ಯಕರ್ತರು

ಮಂಗಳೂರು: ಅರುಣ್ ಕುಮಾರ್ ಪುತ್ತಿಲ ಇಂದು ಸಂಜೆ ಮಂಗಳೂರು ಬಿಜೆಪಿ ಕಚೇರಿಗೆ ಭೇಟಿ ನೀಡಿದಾಗ ಅವರನ್ನು ಶಾಲು ಹಾಕಿ ಸ್ವಾಗತಿಸಲಾಯಿತು. ಅರುಣ್ ಕುಮಾರ್ ಪುತ್ತಿಲ ಮಂಗಳೂರಿಗೆ ಭೇಟಿ ನೀಡುವ ಸುದ್ದಿ ತಿಳಿಯುತ್ತಿದ್ದಂತೆ ಹಲವಾರು ಕಾರ್ಯಕರ್ತರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಹಲವಾರು ಮಂದಿ ಬಿಜೆಪಿ ಕಚೇರಿ ಮುಂದೆ ಜಮಾಯಿಸಿದ್ದಾರೆ ಎನ್ನಲಾಗಿದೆ.

ಅರುಣ್ ಕುಮಾರ್ ಪುತ್ತಿಲ ಮಂಗಳೂರು ಬಿಜೆಪಿ ಕಚೇರಿಗೆ ಭೇಟಿ | ಸ್ವಾಗತಿಸಿದ ಕಾರ್ಯಕರ್ತರು Read More »

error: Content is protected !!
Scroll to Top