ದಕ್ಷಿಣ ಕನ್ನಡ

ಕಲ್ಲಡ್ಕ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿದ ಕ್ಯಾ.ಬ್ರಿಜೇಶ್ ಚೌಟ

ಕಲ್ಲಡ್ಕ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಕಲ್ಲಡ್ಕ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿದರು. ಅಲ್ಲಿ ಶ್ರೀದೇವರ ದರ್ಶನ ಪಡೆದು, ಹಿರಿಯರಾದ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಭೇಟಿ ಮಾಡಿದರು. ಬಳಿಕ ಪಕ್ಷದ ಹಿರಿಯ ಮುಖಂಡರು, ಮಾಜಿ ಶಾಸಕ ರುಕ್ಮಯ ಪೂಜಾರಿ ಅವರ ನಿವಾಸಕ್ಕೆ ಭೇಟಿ ನೀಡಿ ಮಾರ್ಗದರ್ಶನ ಪಡೆದರು

ಕಲ್ಲಡ್ಕ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿದ ಕ್ಯಾ.ಬ್ರಿಜೇಶ್ ಚೌಟ Read More »

ಸೌಜನ್ಯ ಪರ ಹೋರಾಟ ಸಮಿತಿಯಿಂದ ನೋಟ ಮತ ಚಲಾಯಿಸಲು ಅಭಿಯಾನ

ಮಂಗಳೂರು : ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ನಮಿತಿ ಮುಖಂಡ ಗಿರೀಶ್ ಮಟ್ಟನ್ನನವರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ನೋಟ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಪ್ರಕರಣ ನಡೆದು 11 ವರ್ಷ ಕಳೆದರೂ ಯಾವುದೇ ರಾಜಕೀಯ ಪಕ್ಷಗಳು ಸ್ಪಂದನೆ ನೀಡಿಲ್ಲ. ಆದ್ದರಿಂದ ಈ ಬಾರಿ

ಸೌಜನ್ಯ ಪರ ಹೋರಾಟ ಸಮಿತಿಯಿಂದ ನೋಟ ಮತ ಚಲಾಯಿಸಲು ಅಭಿಯಾನ Read More »

ಎಸ್‍ಸಿಡಿಸಿಸಿ ಬ್ಯಾಂಕ್ ಗೆ 79.09 ಕೋಟಿ ನಿವ್ವಳ ಲಾಭ | ಲಾಭದಲ್ಲಿ ಶೇ.29.04 ಏರಿಕೆ : ಪತ್ರಿಕಾಗೋಷ್ಠಿಯಲ್ಲಿ ಎಂ.ಎನ್‍.ರಾಜೇಂದ್ರ ಕುಮಾರ್

ಮಂಗಳೂರು: ಎಸ್‍ಸಿಡಿಸಿಸಿ ಬ್ಯಾಂಕ್ ಈ ಆರ್ಥಿಕ ವರ್ಷದಲ್ಲಿ ದಾಖಲೆಯ 79. 09 ಕೋಟಿ ರೂ. ಲಾಭ ಗಳಿಸಿದ್ದು, ಶೇ 29.04 ಏರಿಕೆ ಕಂಡಿದೆ. ಇದು ಬ್ಯಾಂಕ್‌ನ ಇತಿಹಾಸದಲ್ಲೇ ನೂತನ ದಾಖಲೆ ಆಗಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರಕುಮಾರ್ ತಿಳಿಸಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬ್ಯಾಂಕ್ ಅಭಿವೃದ್ಧಿ ಮುಂಚೂಣಿಯಲ್ಲಿದ್ದು, 110 ವರ್ಷಗಳ ಸಾರ್ಥಕ ಸೇವೆಯನ್ನು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನೀಡುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ 113

ಎಸ್‍ಸಿಡಿಸಿಸಿ ಬ್ಯಾಂಕ್ ಗೆ 79.09 ಕೋಟಿ ನಿವ್ವಳ ಲಾಭ | ಲಾಭದಲ್ಲಿ ಶೇ.29.04 ಏರಿಕೆ : ಪತ್ರಿಕಾಗೋಷ್ಠಿಯಲ್ಲಿ ಎಂ.ಎನ್‍.ರಾಜೇಂದ್ರ ಕುಮಾರ್ Read More »

ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ 21 ನಾಮಪತ್ರ ಸಲ್ಲಿಕೆ | ಒಟ್ಟು 11 ಅಭ್ಯರ್ಥಿಗಳಿಂದ ನಾಮಪತ್ರ

ಮಂಗಳೂರು: ಏ.26ರಂದು ನಡೆಯಲಿರುವ ದ.ಕ. ಲೋಕಸಭಾ ಹಿನ್ನಲೆಯಲ್ಲಿ ದ.ಕ.ಜಿಲ್ಲೆಯಿಂದ ಒಟ್ಟು 11 ಅಭ್ಯರ್ಥಿಗಳಿಂದ 21 ನಾಮಪತ್ರ ಸಲ್ಲಿಕೆಯಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಕ್ಯಾ.ಬ್ರಿಜೇಶ್ ಚೌಟ(42), ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ಆರ್. (53),ಜನತಾ ಪಕ್ಷ ಹಾಗೂ ಜನತಾದಳ (ಯು) ಎರಡಕ್ಕೂ ಸುಪ್ರೀತ್ ಕುಮಾ‌ರ್ ಪೂಜಾರಿ (47), ಬಹುಜನ್ ಸಮಾಜ್ ಪಾರ್ಟಿ (ಬಿಎಸ್ಪಿ)ಯಿಂದ ಕಾಂತಪ್ಪ (63), ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಕೆ.ಇ.ಮನೋಹರ (47), ಕರ್ನಾಟಕ ರಾಷ್ಟ್ರ ಸಮಿತಿಯಿಂದ ರಂಜಿನಿ ಎಂ.(39) ಮತ್ತು ಕರುನಾಡ ಸೇವಕರ ಪಾರ್ಟಿಯಿಂದ ದುರ್ಗಾಪ್ರಸಾದ್ (33) ಹಾಗೂ ಪಕ್ಷೇತರ

ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ 21 ನಾಮಪತ್ರ ಸಲ್ಲಿಕೆ | ಒಟ್ಟು 11 ಅಭ್ಯರ್ಥಿಗಳಿಂದ ನಾಮಪತ್ರ Read More »

ಫೇಸ್ ಬುಕ್ ಆ್ಯಪ್ ಮೂಲಕ ವಂಚನೆ | ಸಾಲ ಪಡೆಯಲು ಹೋಗಿ ಸಾವಿರಾರು ರೂ. ಕಳೆದುಕೊಂಡ ಮಹಿಳೆ

ಬೆಳ್ತಂಗಡಿ: ಮಹಿಳೆಯೊಬ್ಬರು ಫೇಸ್ ಬುಕ್ ಆ್ಯಪ್ ಸಾಲದ ವಂಚನೆಗೆ ಬಲಿಯಾಗಿ ಸಾವಿರಾರು ರೂ. ಕಳೆದುಕೊಂಡ ಘಟನೆ ನಡೆದಿದೆ. ತೆಂಕಕಾರಂದೂರು ಗ್ರಾಮದ ಮಹಿಳೆ ನೆಬಿಸಾ (38) ವಂಚನೆಗೊಳಗಾದವರು. ಮಾ.21 ರಂದು ಫೇಸ್ ಬುಕ್ ನಲ್ಲಿ ಮನಿ ವ್ಯೂವ್ ಪರ್ಸನಲ್ ಲೋನ್ ಆ್ಯಪ್ ಮೂಲಕ ಅಪರಿಚಿತರು ಪರಿಚಯಿಸಿಕೊಂಡಿದ್ದರು. ನೆಬಿಸಾ ಸಾಲದ ಕುರಿತು ಅಪರಿಚಿತರಿಂದ ಮಾಹಿತಿ ಪಡೆದು ಐದು ಲಕ್ಷ ರೂ. ಸಾಲ ಪಡೆಯಲು ದಾಖಲೆಗಳನ್ನು ಕಳುಹಿಸಿದ್ದರು. ಬಳಿಕ ಫೋನ್ ಮೂಲಕ ನೆಬಿಸಾ ಅವರನ್ನು ಸಂಪರ್ಕಿಸಿದ ವಂಚಕರು ವಿವಿಧ ಹಂತದಲ್ಲಿ 96,743

ಫೇಸ್ ಬುಕ್ ಆ್ಯಪ್ ಮೂಲಕ ವಂಚನೆ | ಸಾಲ ಪಡೆಯಲು ಹೋಗಿ ಸಾವಿರಾರು ರೂ. ಕಳೆದುಕೊಂಡ ಮಹಿಳೆ Read More »

ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿ | ದ.ಕ.ದಲ್ಲಿ 90 ಸಾವಿರ ಲೀ. ಮದ್ಯ ಅಧಿಕಾರಿಗಳ ವಶ

ಮಂಗಳೂರು: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ನಿಟ್ಟಿನಲ್ಲಿ ದ.ಕ.ಜಿಲ್ಲೆಯಲ್ಲಿ 90,443 ಲೀಟರ್ ಮದ್ಯವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ನೀತಿ ಸಂಹಿತೆ ಜಾರಿಯಾದ ಬಳಿಕ 1,95,47,179 ರೂ. ಮೌಲ್ಯದ ಮದ್ಯ ವಶಪಡಿಸಲಾಗಿದೆ. ಜತೆಗೆ 8,69,950 ರೂ. ಮೌಲ್ಯದ ಡ್ರಗ್ಸ್‍ ವಶಕ್ಕೆ ಪಡೆಯಲಾಗಿದೆ. 278 ಎಫ್‍.ಐ.ಆರ್‍. ದಾಖಲಾಗಿದೆ. ರಾಷ್ಟ್ರೀಯ ಕುಂದುಕೊರತೆ ನಿವಾರಣಾ ವ್ಯವಸ್ಥೆ ಮೂಲಕ ಜಿಲ್ಲೆಯಲ್ಲಿ 92 ದೂರುಗಳು ಬಂದಿದ್ದು ಅವುಗಳಲ್ಲಿ 90 ದೂರುಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿ | ದ.ಕ.ದಲ್ಲಿ 90 ಸಾವಿರ ಲೀ. ಮದ್ಯ ಅಧಿಕಾರಿಗಳ ವಶ Read More »

ಲೋಕಸಭೆ ಚುನಾವಣೆ : ದ.ಕ.ಜಿಲ್ಲಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಗುರುವಾರ ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿಯಾಗಿ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಬಂಟ್ಸ್ ಹಾಸ್ಟೆಲ್ ನ ಬಿಜೆಪಿ ಚುನಾವಣಾ ಕಚೇರಿಯಿಂದ ಮಂಗಳೂರು ಪುರಭವನವರೆಗೆ ಮೆರವಣಿಯಲ್ಲಿ ಸಾಗಿಬಂದರು. ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಪುರಭವನದ ಹೊರಭಾಗದಲ್ಲಿ ಬಿಜೆಪಿ ಪ್ರಚಾರ ಸಮಾವೇಶ ನಡೆಯಿತು.ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಂಸದ ನಳಿನ್ ಕುಮಾರ್ ಕಟೀಲ್, ಜೆಡಿಎಸ್ ಜಿಲ್ಲಾಧ್ಯಕ್ಷ

ಲೋಕಸಭೆ ಚುನಾವಣೆ : ದ.ಕ.ಜಿಲ್ಲಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ Read More »

ಮಹಿಳೆ ನೇಣು ಬಿಗಿದು ಆತ್ಮಹತ್ಯೆ  !

ವಿಟ್ಲ: ಮಹಿಳೆಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಪಡ್ನೂರು ಗ್ರಾಮದ ಕುಂಟುಕುಡೇಲು ಕಾಪಿಕಾಡ್ ಎಂಬಲ್ಲಿ ನಡೆದಿದೆ. ಕುಂಟುಕುಡೇಲು ಕಾಪಿಕಾಡ್ ನಿವಾಸಿ ಸುಶೀಲಾ (60) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಸುಶೀಲಾ ಅವರ ಪತಿ ಮೂರು ತಿಂಗಳ ಹಿಂದೆಯಷ್ಟೇ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದಾದ ಬಳಿಕ ಸುಶೀಲಾ ಅವರು ಜೀವನದಲ್ಲಿ ಜಿಗುಪ್ಸೆ ಹೊಂದಿದ್ದು, ತನ್ನ ಮನೆ ಸಮೀಪದ ಗುಡ್ಡದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ನೇಣು ಬಿಗಿದು ಆತ್ಮಹತ್ಯೆ  ! Read More »

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್’ಗೆ ‘ಜ್ಞಾನ ಭಂಡಾರ’ದ ಉಡುಗೊರೆ ನೀಡಿದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ

ಮಂಗಳೂರು: ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರನ್ನು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಭೇಟಿ ನೀಡಿ ಆಶೀರ್ವಾದ ಪಡೆದರು. ಇದೇ ಸಂದರ್ಭ ಸ್ವಾಮೀಜಿ ಅವರು ಪದ್ಮರಾಜ್ ಅವರನ್ನು ಸನ್ಮಾನಿಸಿ, ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಕಿರಣ್ ಬುಡ್ಲೆಗುತ್ತು, ಗಿರೀಶ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್’ಗೆ ‘ಜ್ಞಾನ ಭಂಡಾರ’ದ ಉಡುಗೊರೆ ನೀಡಿದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ Read More »

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ನಾಮಪತ್ರ ಸಲ್ಲಿಕೆ

ಮಂಗಳೂರು: ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಇಂದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ಮೊದಲು ಹಮ್ಮಿಕೊಂಡ ಮೆರವಣಿಗೆಗೆ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಚಾಲನೆ ನೀಡಿದರು. ಬುಧವಾರ ಬೆಳಿಗ್ಗೆ ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರೋಡಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಅರ್ಚನೆ ಸಲ್ಲಿಸಿದ ಬಳಿಕ ಮೆರವಣಿಗೆಗೆ ಚಾಲನೆ

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ನಾಮಪತ್ರ ಸಲ್ಲಿಕೆ Read More »

error: Content is protected !!
Scroll to Top