ದಕ್ಷಿಣ ಕನ್ನಡ

ಅನುಮತಿ ಪಡೆಯದೆ ಮದುವೆ ಮನೆಯಲ್ಲಿ ಡಿಜೆ ಬಳಕೆ : ಕೇಸ್‌ ದಾಖಲು

ಬಂಟ್ವಾಳ : ಸುತ್ತಮುತ್ತಲಿನವರಿಗೆ ಕಿರಿಕಿರಿಯಾಗುವಂತೆ ಕರ್ಕಶವಾಗಿ ಧ್ವನಿವರ್ಧಕ ಬಳಕೆಯ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವೆಂಬರ್ 22ರಂದು ರಾತ್ರಿ ಬಂಟ್ವಾಳ ಭಂಡಾರಿಬೆಟ್ಟು ಎಂಬಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿ ಹಾಗೂ ಕರ್ಕಶವಾಗಿ ಸಾರ್ವಜನಿಕ ಶಾಂತಿ ನೆಮ್ಮದಿಗೆ ತೊಂದರೆಯಾಗುವಂತೆ ಧ್ವನಿವರ್ಧಕ ಬಳಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿತ್ತು. ಈ ನಿಮಿತ್ತ ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮದುವೆ ಕಾರ್ಯಕ್ರಮದ ಹಿನ್ನೆಲೆ ಯಾವುದೇ ಪೂರ್ವಾನುಮತಿ ಪಡೆಯದೆ ಕರ್ಕಶವಾಗಿ ಡಿ.ಜೆ. […]

ಅನುಮತಿ ಪಡೆಯದೆ ಮದುವೆ ಮನೆಯಲ್ಲಿ ಡಿಜೆ ಬಳಕೆ : ಕೇಸ್‌ ದಾಖಲು Read More »

ತಲವಾರ್‌ ಹಿಡಿದು ಸಾಗುತ್ತಿದ್ದವರ ವಿಡಿಯೋ ಮಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ

ತಲವಾರ್‌ ಜಳಪಿಸುತ್ತಾ ಒಂದೇ ಬೈಕ್‌ನಲ್ಲಿ ಸಾಗುತ್ತಿದ್ದ ನಾಲ್ಕು ಮಂದಿ ಮಂಗಳೂರು: ಬೈಕ್‌ನಲ್ಲಿ ತಲವಾರ್‌ ಹಿಡಿದು ಸಾಗುತ್ತಿದ್ದವರ ವಿಡಿಯೋ ಮಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಿದ ಘಟನೆ ಮಂಗಳೂರು ಹೊರವಲಯದ ಬಜಪೆ ಸಮೀಪ ನಡೆದಿದೆ. ಬಜಪೆ ಸಮೀಪದ ಪೂಪಾಡಿಕಲ್ಲು ನಿವಾಸಿ ಅಖಿಲೇಶ್ ಎಂಬವರ ಮೇಲೆ ನಾಲ್ವರು ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಈ ಪೈಕಿ ಪೊಲೀಸರು ಓರ್ವ ಆರೋಪಿ ಸಿನಾನ್‌ನನ್ನು ಜನರೇ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಬಜಪೆ ಬಳಿ ನಾಲ್ವರು ಆರೋಪಿಗಳು ಒಂದೇ ಬೈಕ್‌ನಲ್ಲಿ ತಲವಾರ್ ಹಿಡಿದು ಸಾಗುತ್ತಿದ್ದರು. ಇದನ್ನು ನೋಡಿ

ತಲವಾರ್‌ ಹಿಡಿದು ಸಾಗುತ್ತಿದ್ದವರ ವಿಡಿಯೋ ಮಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ Read More »

ಧರ್ಮಸ್ಥಳ ಕೇಸ್‌ : 3 ತಿಂಗಳಿಂದ ಜೈಲಿನಲ್ಲಿರುವ ಚಿನ್ನಯ್ಯನಿಗೆ ಜಾಮೀನು

ಕಠಿಣ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದ ಕೋರ್ಟ್‌ ಧರ್ಮಸ್ಥಳ: ಧರ್ಮಸ್ಥಳದಲ್ಲಿ ಶವಗಳನ್ನ ಹೂತಿಟ್ಟ ಆರೋಪ ಪ್ರಕರಣ ಸಂಬಂಧ ಬುರುಡೆ ಗ್ಯಾಂಗಿನ ಮಾಸ್ಕ್​ಮ್ಯಾನ್​​​ ಚಿನ್ನಯ್ಯನಿಗೆ ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್ ಕೋರ್ಟ್​ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 1 ಲಕ್ಷ ರೂ. ಬಾಂಡ್ ಒದಗಿಸುವುದು ಸೇರಿ 12 ಷರತ್ತುಗಳನ್ನ ನ್ಯಾಯಾಲಯ ವಿಧಿಸಿದೆ. ಪ್ರಕರಣದಲ್ಲಿ ಅಗಸ್ಟ್ 23ರಂದು ಸುಧೀರ್ಘ ವಿಚಾರಣೆ ಬಳಿಕ ದೂರುದಾರ ಚಿನ್ನಯ್ಯನ ಬಂಧನವಾಗಿತ್ತು. ಸುಮಾರು ಮೂರು ತಿಂಗಳಿಂದ ಚಿನ್ನಯ್ಯ ಶಿವಮೊಗ್ಗದ ಜೈಲಿನಲ್ಲಿದ್ದಾನೆ. ಮುಂದೆ ಇದೇ ರೀತಿಯ ಅಪರಾಧಕ್ಕೆ

ಧರ್ಮಸ್ಥಳ ಕೇಸ್‌ : 3 ತಿಂಗಳಿಂದ ಜೈಲಿನಲ್ಲಿರುವ ಚಿನ್ನಯ್ಯನಿಗೆ ಜಾಮೀನು Read More »

ಯಕ್ಷಗಾನಕ್ಕೆ ಆತಂಕ ತಂದೊಡ್ಡಿದ ಅಕಾಲಿಕ ಮಳೆ

ಮೇಳಗಳ ತಿರುಗಾಟ ಆರಂಭವಾಗುವಾಗಲೇ ಮಳೆ ಕಾಟ ಮಂಗಳೂರು : ಶನಿವಾರ ರಾತ್ರಿ ದಕ್ಷಿಣ ಕನ್ನಡ ಜಿಲೆಯ ಬಹುತೇಕ ಕಡೆಗಳಲ್ಲಿ ಸಿಡಿಲು, ಮಿಂಚಿನೊಂದಿಗೆ ಭಾರಿ ಮಳೆ ಸುರಿದಿದ್ದು, ಸಿಡಿಲು ಬಡಿದು ಹಲವೆಡೆ ಹಾನಿ ಸಂಭವಿಸಿದೆ. ಕರಾವಳಿಯಲ್ಲಿ ಯಕ್ಷಗಾನ ಮೇಳಗಳು ಒಂದೊಂದಾಗಿ ತಿರುಗಾಟ ಪ್ರಾರಂಭಿಸುವ ಸಮಯದಲ್ಲೇ ಅಕಾಲಿಕವಾಗಿ ಮಳೆ ಸುರಿಯುತ್ತಿರುವುದು ಮೇಳಗಳಿಗೆ ಮತ್ತು ಯಕ್ಷಗಾನ ಅಭಿಮಾನಿಗಳಿಗೆ ಆತಂತ ತಂದೊಡ್ಡಿದೆ. ಇದಲ್ಲದೆ ಜಿಲ್ಲೆಯ ಎಲ್ಲ ದೇವಸ್ಥಾನಗಳಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವ ಮತ್ತಿತರ ಧಾರ್ಮಿಕ ಕಾರ್ಯಗಳೂ ಪ್ರಾರಂಭವಾಗಿವೆ. ಇವುಗಳಿಗೆಲ್ಲ ಮಳೆ ಅಡ್ಡಿಯಾಗುತ್ತಿದೆ.

ಯಕ್ಷಗಾನಕ್ಕೆ ಆತಂಕ ತಂದೊಡ್ಡಿದ ಅಕಾಲಿಕ ಮಳೆ Read More »

ರಸ್ತೆ ಅಪಘಾತ ಗಾಯಾಳು ಚಿಕಿತ್ಸೆ ಫಲಿಸದೆ ಸಾವು

ಸುಳ್ಯ : ಬೈಕ್ ಸ್ಕಿಡ್‌ ಆಗಿ ರಸ್ತೆಗೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲ ನೀಡದೆ ಮಂಗಳೂರಿನ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ. ಸುಳ್ಯದ ಹಳೆಗೇಟು ತಮಿಳು ಕಾಲನಿ ನಿವಾಸಿ ರಾಮಕೃಷ್ಣ (52) ಮೃತಪಟ್ಟವರು. ಅವರು ನ.19ರಂದು ರಾತ್ರಿ ಹಳೆಗೇಟಿನಿಂದ ತಮಿಳು ಕಾಲನಿಯ ಮನೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭ ಬೈಕ್‌ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದರು. ಗಂಭೀರ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಕೂಡಲೇ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ

ರಸ್ತೆ ಅಪಘಾತ ಗಾಯಾಳು ಚಿಕಿತ್ಸೆ ಫಲಿಸದೆ ಸಾವು Read More »

ಸುಳ್ಯ: ಜಾಗದ ತಕರಾರಿನ ಹಿನ್ನೆಲೆಯಲ್ಲಿ ಕತ್ತಿಯಿಂದ ಹಲ್ಲೆ

ಸುಳ್ಯ : ಜಾಗದ ವಿವಾದಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಸುಳ್ಯದ ಕೊಲ್ಲಮೊಗ್ರದ ಶಿವಾಲದಲ್ಲಿ ನಡೆದಿದೆ. ಕೊಲ್ಲಮೊಗ್ರ ಗ್ರಾಮದ ಶಿವಾಲ ವಿಶ್ವನಾಥ ರೈ ಹಲ್ಲೆಗೊಳಗಾದವರು. ಭರತ್ ಶಿವಾಲ ಹಲ್ಲೆ ನಡೆಸಿದ ಆರೋಪಿ. ವಿಶ್ವನಾಥ ರೈ ಮತ್ತು ಭರತ್ ಶಿವಾಲ ನಡುವೆ ಹಲವು ಸಮಯಗಳಿಂದ ಜಾಗದ ತಕರಾರು ಇತ್ತು. ಈ ನಡುವೆ ಭರತ್ ಶಿವಾಲ ರಸ್ತೆಯನ್ನು ಅಗಲೀಕರಣಗೊಳಿಸಿದ್ದರು. ಇದೇ ಸಂದರ್ಭ ವಿಶ್ವನಾಥ ರೈ ತನ್ನ ಜಾಗಕ್ಕೆ ಬೇಲಿ ಹಾಕುತ್ತಿದ್ದಾಗ ಮತ್ತೆ ವಿವಾದ ಉಂಟಾಗಿದೆ. ಬೇಲಿ ತೆಗೆಯುವ

ಸುಳ್ಯ: ಜಾಗದ ತಕರಾರಿನ ಹಿನ್ನೆಲೆಯಲ್ಲಿ ಕತ್ತಿಯಿಂದ ಹಲ್ಲೆ Read More »

ಯಕ್ಷಗಾನ ಕಲಾವಿದರಿಗೆ ಅವಮಾನ ಉದ್ದೇಶಪೂರ್ವಕ : ಭರತ್‌ ಶೆಟ್ಟಿ

ಪುರುಷೋತ್ತಮ ಬಿಳಿಮಲೆ ಮೂಲಕ ಕಾಂಗ್ರೆಸ್‌ ಷಡ್ಯಂತ್ರ ಎಂದು ಆರೋಪ ಮಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಯಕ್ಷಗಾನ ಕಲಾವಿದರ ಕುರಿತು ನೀಡಿರುವ ಅವಮಾನಕಾರಿ ಹೇಳಿಕೆ ಉದ್ದೇಶಪೂರ್ವಕ. ಹಿಂದೂ ಸಂಪ್ರದಾಯಯ ಆಚಾರ, ವಿಚಾರಗಳಿಗೆ ಧಕ್ಕೆ ತರುವ ಕೆಲಸ ಕರ್ನಾಟಕದ ಕಾಂಗ್ರೆಸ್ ಸರಕಾರದಿಂದ ನಿರಂತರವಾಗಿ ನಡೆಯುತ್ತಿದೆ. ಕರಾವಳಿ ಭಾಗದಲ್ಲಿ ಯಕ್ಷಗಾನಕ್ಕೆ ಅದರದ್ದೇ ಆದ ಮಹತ್ವವಿದೆ. ಯಕ್ಷಗಾನವನ್ನು ದೈವಿಕ ಕಲೆಯನ್ನಾಗಿ ಆಚರಿಸುವವರು ನಾವುಗಳು. ಯಕ್ಷಗಾನದಲ್ಲಿ ದೇವರ ವೇಷ ಹಾಕಿದ ಕಲಾವಿದರನ್ನು ಕಂಡಾಗ ಕೈಮುಗಿಯುವವರು ನಾವು. ಬಹಳ ಶ್ರದ್ದಾ ,

ಯಕ್ಷಗಾನ ಕಲಾವಿದರಿಗೆ ಅವಮಾನ ಉದ್ದೇಶಪೂರ್ವಕ : ಭರತ್‌ ಶೆಟ್ಟಿ Read More »

ಧರ್ಮಸ್ಥಳ ಪ್ರಕರಣ : ಚಿನ್ನಯ್ಯನ ಜಾಮೀನು ಅರ್ಜಿ ಸೋಮವಾರ ವಿಚಾರಣೆ

ಬೆಳ್ತಂಗಡಿ : ಧರ್ಮಸ್ಥಳ ಬುರುಡೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿರುವ ಚಿನ್ನಯ್ಯ ಜಾಮೀನು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ. ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಕಳೆದ 90 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಚಿನ್ನಯ್ಯನಿಗೆ ಸುಳ್ಳು ಸಾಕ್ಷಿ ವರದಿ ಸಲ್ಲಿಕೆಯಾದ ಬಳಿಕ ಜಾಮೀನು ನೀಡಲು ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಚಿನ್ನಯ್ಯ ಪರ ವಕೀಲರು ನ.21ರಂದು ಎರಡನೇ ಭಾರಿಗೆ ಜಾಮೀನು ನೀಡಲು ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯೇಂದ್ರ

ಧರ್ಮಸ್ಥಳ ಪ್ರಕರಣ : ಚಿನ್ನಯ್ಯನ ಜಾಮೀನು ಅರ್ಜಿ ಸೋಮವಾರ ವಿಚಾರಣೆ Read More »

ಸುಳ್ಯ : ಕಾರು ಮೋರಿಗೆ ಗುದ್ದಿ ಮೂವರಿಗೆ ಗಾಯ

ಸುಳ್ಯ : ಕಾರು ರಸ್ತೆ ಬದಿಯ ಮೋರಿಗೆ ಗುದ್ದಿದ ಪರಿಣಾಮ ಮೂವರು ಗಾಯಗೊಂಡ ಘಟನೆ ಶುಕ್ರವಾರ ಕನಕಮಜಲು ಸಮೀಪ ಕನ್ನಡ್ಕ ಎಂಬಲ್ಲಿ ನಡೆದಿದೆ. ಕಾರು ಚಾಲಕ ಮಂಡೆಕೋಲಿನ ಖಲೀಲ್ ಸಹಿತ ಮೂವರು ಗಾಯಗೊಂಡಿದ್ದಾರೆ. ಪುತ್ತೂರು ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಗೆ ಗುದ್ದಿದೆ. ಗಾಯಾಳುಗಳನ್ನು ಕೂಡಲೇ ಆಟೊ ರಿಕ್ಷಾದಲ್ಲಿ ಸುಳ್ಯದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತು.

ಸುಳ್ಯ : ಕಾರು ಮೋರಿಗೆ ಗುದ್ದಿ ಮೂವರಿಗೆ ಗಾಯ Read More »

ಸುರತ್ಕಲ್-ಬಿ.ಸಿ.ರೋಡ್ ಹೆದ್ದಾರಿ ನಿರ್ವಹಣೆ ಎನ್‌ಎಚ್‌ಎಐಗೆ ಹಸ್ತಾಂತರಿಸಲು ಸಮ್ಮತಿ

ಪ್ರತಿವರ್ಷ ಗುಂಡಿಬಿದ್ದು ಸವಾರರ ಪ್ರಾಣಕ್ಕೆ ಸಂಚಕಾರ ತರುತ್ತಿದ್ದ ಹೆದ್ದಾರಿ ಮಂಗಳೂರು : ನವಮಂಗಳೂರು ಬಂದರು ವ್ಯಾಪ್ತಿಗೆ ಸೇರಿದ ಸುರತ್ಕಲ್-ನಂತೂರು-ಬಿ.ಸಿ.ರೋಡ್ ಬಂದರು ಸಂಪರ್ಕ ರಸ್ತೆಯ ನಿರ್ವಹಣೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಅನುಮೋದನೆ ನೀಡಿದೆ ಎಂದು ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಹೆದ್ದಾರಿ ಪ್ರಾಧಿಕಾರದ ಈ ಮಹತ್ವದ ನಿರ್ಧಾರದಿಂದಾಗಿ ಮಂಗಳೂರಿನ ಅತ್ಯಂತ ನಿರ್ಣಾಯಕ ರಸ್ತೆ ಕಾರಿಡಾರ್‌ಗಳಲ್ಲಿ ಒಂದಾದ ಸುರತ್ಕಲ್-ನಂತೂರು-ಬಿ.ಸಿ.ರೋಡ್ ಹೆದ್ದಾರಿಯ ಸಮರ್ಪಕ ನಿರ್ವಹಣೆ ಮತ್ತು ಸುಧಾರಣೆಗೆ ಕಾಯಕಲ್ಪ ದೊರೆತಿದೆ.

ಸುರತ್ಕಲ್-ಬಿ.ಸಿ.ರೋಡ್ ಹೆದ್ದಾರಿ ನಿರ್ವಹಣೆ ಎನ್‌ಎಚ್‌ಎಐಗೆ ಹಸ್ತಾಂತರಿಸಲು ಸಮ್ಮತಿ Read More »

error: Content is protected !!
Scroll to Top