ದಕ್ಷಿಣ ಕನ್ನಡ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬಳಿ ಬಂದ ಕಾಡಾನೆ | ಸ್ಥಳೀಯರಿಗೆ  ಜಾಗರೂಕರಾಗಿರುವಂತೆ ಎಚ್ಚರಿಕೆ

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬಳಿಗೆ ಕಾಡಾನೆಯೊಂದು ಡಿ. 1 ರ ಸಂಜೆ 7.30 ಸುಮಾರಿಗೆ ಬಂದು ಮಠದ ಬಳಿ ಇದ್ದು ಮತ್ತೆ ಕಾಡು ಪ್ರವೇಶಿದ ಘಟನೆ ವರದಿಯಾಗಿದೆ. ದೇವರಗದ್ದೆ ಅರಣ್ಯ ಪ್ರದೇಶ ಭಾಗದಿಂದ ಬಂದ ಒಂಟಿ ಕಾಡಾನೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿಯಿರುವ ವ್ಯಾಸಮಂದಿರ ಬಳಿಗಾಗಿ ಬಂದು ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಹತ್ತಿರ ಬಂದಿದೆ. ಅಲ್ಲಿ ಅಲ್ಪ ಕಾಲ ಇದ್ದು ಮತ್ತೆ ಅರಣ್ಯ ಭಾಗಕ್ಕೆ ತೆರಳಿರುವುದಾಗಿ ತಿಳಿದು ಬಂದಿದೆ. ಕಾಡಾನೆ […]

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬಳಿ ಬಂದ ಕಾಡಾನೆ | ಸ್ಥಳೀಯರಿಗೆ  ಜಾಗರೂಕರಾಗಿರುವಂತೆ ಎಚ್ಚರಿಕೆ Read More »

ಕೆಲಸಕ್ಕೆಂದು ಮನೆಯಿಂದ ಹೊರ ಹೋದ ಯುವಕ ನಾಪತ್ತೆ

ಪುತ್ತೂರು: ಕೆಲಸಕ್ಕೆಂದು ಮನೆಯಿಂದ ಹೊರಹೋದ ಯುವಕನೋರ್ವ ನಾಪತ್ತೆಯಾದ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ಶಾಂತಪ್ಪ ಗೌಡರ ಪುತ್ರ ಸಂದೀಪ್ ಗೌಡ (29) ನಾಪತ್ತೆಯಾದವರು. ಸಂದೀಪ್ ಮರ್ದಾಳದಲ್ಲಿ ಶಾಮಿಯಾನ ಹಾಕುವ ಕೆಲಸ ಮಾಡುತ್ತಿದ್ದು ನ. 27 ರಂದು ಬೆಳಿಗ್ಗೆ ಕೆಲಸಕ್ಕೆಂದು ಮನೆಯಿಂದ ಹೋದವನು ಮನೆಗೆ ವಾಪಾಸಾಗಿರಲಿಲ್ಲ. ಈ ಬಗ್ಗೆ ವಿನಯ ಅವರಲ್ಲಿ ಸಂದೀಪ್‌ನ ತಾಯಿ ಸರೋಜ ವಿಚಾರಿಸಿದಾಗ ಸಂದೀಪ್ ನೆಟ್ಟಣ ನಿವಾಸಿ ಪ್ರತೀಕ್ ಎಂಬಾತನೊಂದಿಗೆ ಕಾರಿನಲ್ಲಿ ಹೋಗಿರುವುದಾಗಿ

ಕೆಲಸಕ್ಕೆಂದು ಮನೆಯಿಂದ ಹೊರ ಹೋದ ಯುವಕ ನಾಪತ್ತೆ Read More »

ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸನ್ಮಾನ ಸಮಾರಂಭ | ಸನ್ಮಾನ ಸ್ವೀಕರಿಸಿದ ಶಶಿಕುಮಾರ್ ರೈ ಬಾಲ್ಯೊಟ್ಟು, ಅಶ್ವಿನಿ ಎಲ್‍ ಶೆಟ್ಟಿ,,ಉದಯ ರೈ ಮಾದೋಡಿ

ಸವಣೂರು:  ದ.ಕ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲೊಟ್ಟು, ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾ ಮಂಡಲದ ನಿರ್ದೇಶಕರಾಗಿ ಎರಡನೇ ಬಾರಿಗೆ ಆಯ್ಕೆಯಾದ ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ನಿರ್ದೇಶಕ ಉದಯ ರೈ ಮಾದೋಡಿ ಹಾಗೂ ಯುಡೋ ಪ್ರಶಸ್ತಿ ಪುರಸ್ಕೃತರಾದ ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ನಿರ್ದೇಶಕ ಅಶ್ವಿನ್ ಎಲ್. ಶೆಟ್ಟಿಯವರಿಗೆ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸನ್ಮಾನ ಸಮಾರಂಭ ಸಂಘದ ಸಭಾಭವನದಲ್ಲಿ ನಡೆಯಿತು. ಸಮಾರಂಭದಲ್ಲಿ ಶಶಿಕುಮಾರ್ ರೈ

ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸನ್ಮಾನ ಸಮಾರಂಭ | ಸನ್ಮಾನ ಸ್ವೀಕರಿಸಿದ ಶಶಿಕುಮಾರ್ ರೈ ಬಾಲ್ಯೊಟ್ಟು, ಅಶ್ವಿನಿ ಎಲ್‍ ಶೆಟ್ಟಿ,,ಉದಯ ರೈ ಮಾದೋಡಿ Read More »

ನದಿಗೆ ಈಜಲು ತೆರಳಿದ ಇಬ್ಬರು ನೀರಿನಲ್ಲಿ ಮುಳುಗಿ ಮೃತ್ಯು

ನದಿಗೆ ಈಜಲು ಹೋದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳ್ವೆ ಸಮೀಪ ಇಂದು ಮಧ್ಯಾಹ್ನ ನಡೆದಿದೆ. ಗುಮೊಲ ನಿವಾಸಿ ಜಯಂತ ನಾಯ್ಕ್‍ ಹಾಗೂ ಬೆಳ್ವೆ ಶ್ರೀಶ ಆಚಾರ್ ಮೃತಪಟ್ಟವರು ಬೆಳ್ವೆ ಸಮೀಪದ ಗೊಮ್ಮೋಲ್‍ ಚರ್ಚ್‍ ಹಿಂಭಾಗ ಒಳ್ಳೆ ಹೊಂಡಕಜ್ಕೆ ಸಂಪರ್ಕ ರಸ್ತೆಯ ಬಳಿ ಇರುವ ಕಿಂಡಿ ಅಣೆಕಟ್ಟಿನ ಮೇಲ್ಭಾಗದಲ್ಲಿ ಈಜಲು ತೆರಳಿದ್ದ ಸಂದರ್ಭ ಈ ಘಟನೆ ನಡೆದಿದೆ ಎನ್ನಲಾಗಿದೆ.

ನದಿಗೆ ಈಜಲು ತೆರಳಿದ ಇಬ್ಬರು ನೀರಿನಲ್ಲಿ ಮುಳುಗಿ ಮೃತ್ಯು Read More »

ಡಿ.25 : ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಆಡಳಿತ ಕಚೇರಿ ಉದ್ಘಾಟನೆ, ವಾರ್ಷಿಕ ಕ್ರೀಡಾಕೂಟ | ಆಮಂತ್ರಣ ಪತ್ರಿಕೆ ಬಿಡುಗಡೆ

ಕಡಬ: ಒಕ್ಕಲಿಗ ಗೌಡ ಸೇವಾ ಸಂಘದ ಮಹತ್ವಾಕಾಂಕ್ಷಿ ಯೋಜನೆಯಾದ ನೂತನ ಸಮುದಾಯ ಭವನದಲ್ಲಿ ಸಂಘದ ಆಡಳಿತ ಕಛೇರಿ ಉದ್ಘಾಟನಾ ಸಮಾರಂಭ ಹಾಗೂ ವಾರ್ಷಿಕ ಕ್ರೀಡಕೂಟ ಡಿ.25 ರಂದು ನಡೆಯಲಿದ್ದು, ಆಮಂತ್ರಣ ಪತ್ರಿಕೆ ಬಿಡುಗಡೆ ಭಾನುವಾರ ನಿವೇಶದ ನಾಗದೇವರ ಸನ್ನಿಧಿಯಲ್ಲಿ ನಡೆಯಿತು. ನಾಗಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಮಾತೃ ಸಮಿತಿ ಅಧ್ಯಕ್ಷ ಸುರೇಶ್ ಗೌಡ ಬೈಲು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ತಾಲೂಕು ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದು, ಕಡಬ ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮದ ಸಮುದಾಯ ಭಾಂದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ

ಡಿ.25 : ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಆಡಳಿತ ಕಚೇರಿ ಉದ್ಘಾಟನೆ, ವಾರ್ಷಿಕ ಕ್ರೀಡಾಕೂಟ | ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಸವಣೂರು ಶಕ್ತಿ ಕೇಂದ್ರದ ಬೂತ್ 65 ರ ಸಂಘಟನಾ ಪರ್ವ ಕಾರ್ಯಚಟುವಟಿಕೆಗಳ ಅಂಗವಾಗಿ ಬೂತ್ ಸಮಿತಿ ಸಭೆ

ಸವಣೂರು: ಸುಳ್ಯ ಮಂಡಲದ ಕುಟ್ರುಪ್ಪಾಡಿ ಮಹಾ ಶಕ್ತಿ ಕೇಂದ್ರ, ಸವಣೂರು ಶಕ್ತಿ ಕೇಂದ್ರದ ಬೂತ್ ಸಂಖ್ಯೆ 65 ರ ಸವಣೂರು ಯುವ ಸಭಾ ಭವನದಲ್ಲಿ ಸಂಘಟನಾ ಪರ್ವ ಕಾರ್ಯ ಚಟುವಟಿಕೆಯ ಅಂಗವಾಗಿ  ಬೂತ್ ಸಮಿತಿ ಸಭೆ ನಡೆಯಿತು. ಪಕ್ಷದ ಸೂಚನೆಯ0ತೆ 12 ಜನರ ಬೂತ್ ಸಮಿತಿಯಲ್ಲಿ ಮೂವರು ಮಹಿಳೆಯರು ಮನ್ ಕೀ ಬಾತ್ ಪ್ರಮುಕ್, ಸೋಶಿಯಲ್ ಮಿಡಿಯಾ ಪ್ರಮುಖ್, ಲಾಭಾರ್ಥಿ ಪ್ರಮುಖ್ ರನ್ನು ಆಯ್ಕೆ ಮಾಡಲಾಯಿತು. ಬಿಜೆಪಿ ಸದಸ್ಯತನ, ಮತದಾರರ ಪಟ್ಟಿಗೆ ಸೇರ್ಪಡೆ ಕುರಿತಾದ ವಿಚಾರಗಳ ಕುರಿತಾಗಿ

ಸವಣೂರು ಶಕ್ತಿ ಕೇಂದ್ರದ ಬೂತ್ 65 ರ ಸಂಘಟನಾ ಪರ್ವ ಕಾರ್ಯಚಟುವಟಿಕೆಗಳ ಅಂಗವಾಗಿ ಬೂತ್ ಸಮಿತಿ ಸಭೆ Read More »

ಹರೇಕಳದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ | ಹಲ್ಲೆ ನಡೆಸಿದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಿ : ಕಿಶೋರ್ ಕುಮಾರ್ ಪುತ್ತೂರು

ಮಂಗಳೂರು: ಹರೇಕಳದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದು,ಗಾಯಾಳುವನ್ನು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದುಕೊಂಡರು‌. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹರೇಕಳ ಬಿಜೆಪಿ ಬೂತ್ ಅಧ್ಯಕ್ಷ ಶರತ್ ಕುಮಾರ್ ಗಟ್ಟಿ ಅವರ ಮೇಲೆ ಪಂಚಾಯತ್ ನೀರಿನ ಕ್ಷುಲ್ಲಕ ಕಾರಣಕ್ಕಾಗಿ ಮಸೀದಿಯಿಂದ ಬಂದ ಸರಿ ಸುಮಾರು 15-20 ಜನರ ತಂಡ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದು, ಹಲ್ಲೆಕೋರ ಮತಾಂತರನ್ನು ತಡೆಯಲು ಬಂದ ಅವರ

ಹರೇಕಳದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ | ಹಲ್ಲೆ ನಡೆಸಿದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಿ : ಕಿಶೋರ್ ಕುಮಾರ್ ಪುತ್ತೂರು Read More »

ಯುವಕ ಆತ್ಮ ಹತ್ಯೆಗೆ ಶರಣು

ಬೆಳ್ತಂಗಡಿ : ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮ ಹತ್ಯೆಗೆ ಶರಣಾಗಿರುವ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದಿದೆ. ಪುಂಜಾಲಕಟ್ಟೆ ರಾಯಿ ಗ್ರಾಮದ ಮಾಬೆಟ್ಟ ನಿವಾಸಿ ಸುದರ್ಶನ್ ಶೆಟ್ಟಿ (26) ಆತ್ಮ ಹತ್ಯೆ ಮಾಡಿಕೊಂಡವರು. ಪಿತ್ತಜನಕಾಂಗದಿಂದ  ಬಳಲುತ್ತಿದ್ದ ಸುದರ್ಶನ್ ಶೆಟ್ಟಿ ಮಂಗಳೂರಿನ ವೆನ್ಲಾಕ್‍ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಪಿತ್ತಜನಕಾಂಗ ಖಾಯಿಲೆ ಕಡಿಮೆಯಾಗದೆ ಇದ್ದರಿಂದ ಮನನೊಂದು ಸುದರ್ಶನ್ ಶೆಟ್ಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಯುವಕ ಆತ್ಮ ಹತ್ಯೆಗೆ ಶರಣು Read More »

ಪಂಜಳದಲ್ಲಿ ಅತೀ ಶೀಘ್ರ ಅಂತರಾಷ್ಟ್ರೀಯ ಗುಣಮಟ್ಟದ ಜೇನು ಸಂಸ್ಕರಣಾ ಘಟಕ ಉದ್ಘಾಟನೆ | ಪುತ್ತೂರಿನಲ್ಲಿ ಗ್ರಾಮಜನ್ಯ ರೈತ ಉತ್ಪಾದಕ ಕಂಪೆನಿಯಿಂದ ಲೋಗೋ ಅನಾವರಣ.

ಪುತ್ತೂರು: 2020ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ರೈತರಲ್ಲಿ ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಉದ್ದೇಶದಿಂದ ಸ್ಥಾಪಿತಗೊಂಡ ಗ್ರಾಮಜನ್ಯ ರೈತ ಉತ್ಪಾದಕರ ಸಂಸ್ಥೆಯ ನೂತನ ಲೋಗೋ ನ.28ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸತ್ಯಧರ್ಮ ನಡೆಯಲ್ಲಿ ಅನಾವರಣಗೊಳಿಸಲಾಯಿತು. ಲೋಗೋ ಅನಾವರಣಕ್ಕೂ ಮುಂಚಿತವಾಗಿ ಸಂಸ್ಥೆಯ ಸಂಸ್ಥೆಯ ನಿರ್ದೇಶಕ ನಿರಂಜನ್ ಪೋಳ್ಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೃಹತ್ ಕಲ್ಪನೆ ಇಟ್ಟುಕೊಂಡಿದ್ದೇವೆ. ಸಣ್ಣ ಹೆಜ್ಜೆ ಈಗಷ್ಟೆ ಇಟ್ಟಿದ್ದೇವೆ. ಈ ನಿಟ್ಟಿನಲ್ಲಿ ಸಂಸ್ಥೆಯಿಂದ ಅಂತರಾಷ್ಟ್ರೀಯ ಮಟ್ಟದ ಜೇನು ಸಂಸ್ಕರಣಾ ಘಟಕ ಅತಿ ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ.

ಪಂಜಳದಲ್ಲಿ ಅತೀ ಶೀಘ್ರ ಅಂತರಾಷ್ಟ್ರೀಯ ಗುಣಮಟ್ಟದ ಜೇನು ಸಂಸ್ಕರಣಾ ಘಟಕ ಉದ್ಘಾಟನೆ | ಪುತ್ತೂರಿನಲ್ಲಿ ಗ್ರಾಮಜನ್ಯ ರೈತ ಉತ್ಪಾದಕ ಕಂಪೆನಿಯಿಂದ ಲೋಗೋ ಅನಾವರಣ. Read More »

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

ಬಂಟ್ವಾಳ : ಗಿರಿಯಪ್ಪ ಎಂಬುವವರು ತೆಂಗಿನಕಾಯಿ ಕೀಳಲು ಹೋಗಿ ಆಯಾ ತಪ್ಪಿ ಕೆಳಗೆ ಬಿದ್ದ ಘಟನೆ ಬಂಟ್ವಾಳ ತಾಲೂಕಿನಲ್ಲಿ  ನಡೆದಿದೆ. ಅವರ ತೋಟದ ತೆಂಗಿನ ಮರದಿಂದ ಕಾಯಿ ಕೀಳಲು ಮರಕ್ಕೆ ಹತ್ತಿದ್ದರು. ಈ ವೇಳೆ ಜಾರಿ ಕೆಳಗೆ ಬಿದ್ದು ಗಂಭೀರ ಗಾಯವಾಗಿದೆ. ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ದಿನದ 24 ಗಂಟೆಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದ ಗಿರಿಯಪ್ಪ ಇಂದು ಬೆಳಿಗ್ಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಗಿರಿಯಪ್ಪ ಅವರನ್ನು ಬದುಕಿಸಲು

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು Read More »

error: Content is protected !!
Scroll to Top