ದಕ್ಷಿಣ ಕನ್ನಡ

ಲೋಕಸಭೆ ಚುನಾವಣೆ : ದ.ಕ. ಶೇ.72.30, ಉಡುಪಿ ಶೇ.72.69 ಮತ ಚಲಾವಣೆ | ಎಲ್ಲೆಡೆ ಶಾಂತಿಯುತ ಮತದಾನ

ಪುತ್ತೂರು:  ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನವಾಗಿದ್ದು, ಬಹುತೇಕ ಕಡೆಗಳಲ್ಲಿ ಶಾಂತಿಯುತ ಮತದಾನವಾಗಿದೆ. ರಾಜ್ಯದಲ್ಲಿ ಶೇ.64.57 ಮತ ಚಲಾವಣೆಯಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.74.87ರಷ್ಟು ಮತದಾನ ಆಗಿದ್ದರೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ.49.37ರಷ್ಟು ಮತದಾನವಾಗಿದೆ. ಸಂಜೆ 6 ಗಂಟೆ ವೇಳೆಗೆ ಮತದಾನ ಪ್ರಕ್ರಿಯೆ ಮುಗಿದಿತ್ತು. ಮಂಡ್ಯ-ಶೇ.74.87, ಕೋಲಾರ-ಶೇ.73.25, ಉಡುಪಿ ಚಿಕ್ಕಮಗಳೂರು- ಶೇ.72.69, ದಕ್ಷಿಣ ಕನ್ನಡ-ಶೇ.72.30, ಹಾಸನ-ಶೇ.72.13, ತುಮಕೂರು-ಶೇ.72.10, ಚಿಕ್ಕಬಳ್ಳಾಪುರ-ಶೇ.71.85, ಚಾಮರಾಜನಗರ- ಶೇ.69.86, ಚಿತ್ರದುರ್ಗ-ಶೇ.67.52, ಮೈಸೂರು-ಶೇ.67.55, ಬೆಂಗಳೂರು ಗ್ರಾಮಾಂತರ-ಶೇ.61.78, ಬೆಂಗಳೂರು […]

ಲೋಕಸಭೆ ಚುನಾವಣೆ : ದ.ಕ. ಶೇ.72.30, ಉಡುಪಿ ಶೇ.72.69 ಮತ ಚಲಾವಣೆ | ಎಲ್ಲೆಡೆ ಶಾಂತಿಯುತ ಮತದಾನ Read More »

ಈ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್ ಗೆ ಪೋಲಿಂಗ್ ಏಜೆಂಟೇ ಇಲ್ಲ | ಯಾವ ಮತಗಟ್ಟೆ ? ಇಲ್ಲಿದೆ ಡಿಟೈಲ್ಸ್

ಎಣ್ಮೂರು: ಎಣ್ಮೂರು ಗ್ರಾಮದ ಹೇಮಳ ಶಾಲಾ ಮತದಾನ ಕೇಂದ್ರದಲ್ಲಿ ಮತದಾನ ಕೇಂದ್ರದ ಒಳಗಾಗಲೀ, ಹೊರಗಾಗಲಿ ಕಾಂಗ್ರೆಸ್ ಪಕ್ಷಕ್ಕೆ ಜನ ಇಲ್ಲದಿರುವ ಕುರಿತು ವರದಿಯಾಗಿದೆ. ಮತದಾನ ಕೇಂದ್ರದೊಳಗೆ ಪೋಲಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸಬೇಕಾದರೆ ಆ ಮತದಾನ ಕೇಂದ್ರಕ್ಕೆ ಒಳಪಟ್ಟ ಮತದಾರರ ಪಟ್ಟಿಯಲ್ಲಿ ಹೆಸರಿರುವವರು ಆಗಬೇಕು. ಈ ಕೇಂದ್ರದ ವ್ಯಾಪ್ತಿಯಲ್ಲಿ ಪಕ್ಷಕ್ಕೆ ಯಾರೂ ಕಾರ್ಯಕರ್ತರಿರದಿರುವ ಕಾರಣ ಕಾಂಗ್ರೆಸ್‌ಗೆ ಪೋಲಿಂಗ್ ಏಜೆಂಟ್ ಇಲ್ಲ. ಅದಲ್ಲದೆ ಮತದಾನ ಕೇಂದ್ರಕ್ಕಿಂತ 100 ಮೀಟರ್ ಅಂತರದಲ್ಲಿ ಪಕ್ಷ ಕಾರ್ಯಕರ್ತರು ಕುಳಿತು ಮತದಾರರಿಗೆ ಮಾಹಿತಿ ನೀಡಬಹುದಾದರೂ ಅಲ್ಲಿ

ಈ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್ ಗೆ ಪೋಲಿಂಗ್ ಏಜೆಂಟೇ ಇಲ್ಲ | ಯಾವ ಮತಗಟ್ಟೆ ? ಇಲ್ಲಿದೆ ಡಿಟೈಲ್ಸ್ Read More »

ಲೋಕಸಭಾ ಚುನಾವಣೆ: ಸುಳ್ಯ ದಲ್ಲಿ 3 ಗಂಟೆ ವೇಳೆಗೆ 64.46%  ಮತದಾನ

ಸುಳ್ಯ : ಲೋಕಸಭಾ ಚುನಾವಣೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಸುಮಾರು ಶೇ.64.46 ಮತದಾನವಾಗಿದೆ. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 233 ಬೂತ್ ಗಳಲ್ಲಿ ಮತದಾನ ನಡೆಯುತ್ತಿದೆ.  ಒಟ್ಟು 2 ಲಕ್ಷದ 8 ಸಾವಿರದ 853 ಮಂದಿ ಮತದಾರರಿದ್ದಾರೆ.

ಲೋಕಸಭಾ ಚುನಾವಣೆ: ಸುಳ್ಯ ದಲ್ಲಿ 3 ಗಂಟೆ ವೇಳೆಗೆ 64.46%  ಮತದಾನ Read More »

ಏ.26 -30ರವರೆಗೆ ಬಿಸಿಗಾಳಿಯ ಅಲೆ ಹೆಚ್ಚಳ

ಮಂಗಳೂರು: ಬೇಸಿಗೆಯ ತಾಪಮಾನ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚುತ್ತಲೇ ಇದ್ದು, ಏ.26ರಿಂದ 30ರವರೆಗೆ ಬಿಸಿಗಾಳಿಯ ಅಲೆ ಹೆಚ್ಚಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಆರೆಂಜ್ ಅಲರ್ಟ್ ಹೊರಡಿಸಿದೆ. ಭಾರತೀಯ ಹವಾಮಾನ ಇಲಾಖೆ ಮುಂದಿನ ಐದು ದಿನಗಳ ಕಾಲ ಕರ್ನಾಟಕದ ಒಳನಾಡು ಜಿಲ್ಲೆಗಳಲ್ಲಿ ಬಿಸಿಗಾಳಿ ಅಲೆ ಹೆಚ್ಚಾಗಲಿದೆ ಎಂದು ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ  ವಹಿಸುವಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಸಿದೆ. ಕಲಬುರ್ಗಿ, ವಿಜಯಪುರ, ಯಾದಗಿರಿ,

ಏ.26 -30ರವರೆಗೆ ಬಿಸಿಗಾಳಿಯ ಅಲೆ ಹೆಚ್ಚಳ Read More »

ತಾಲೂಕು ದಂಢಾಧಿಕಾರಿಗಳಿಗೆ ಅವಾಚ್ಯ ಶಬ್ಧಗಳ ನಿಂದನೆ , ದೂರು ದಾಖಲು ಪ್ರಕರಣ ಇತ್ಯರ್ಥ

ಸುಳ್ಯ: ತಾಲೂಕು ದಂಢಾಧಿಕಾರಿಗಳಾದ ಜಿ ಮಂಜುನಾಥ್ ರವರಿಗೆ ಸಂಪಾಜೆ ಮೂಲದ ವ್ಯಕ್ತಿಯೋರ್ವರು ದೂರವಾಣಿ ಮೂಲಕ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಪೋಲಿಸ್ ಇಲಾಖೆಗೆ ದೂರು ನೀಡಿ ಪ್ರಕರಣ ಠಾಣೆಯಲ್ಲೆ ಇತ್ಯರ್ಥವಾದ ಘಟನೆ ವರದಿಯಾಗಿದೆ.  ಸಂಪಾಜೆ ಮೂಲದ ಧೀರಜ್ ಎಂಬುವ ವ್ಯಕ್ತಿ ತಮ್ಮ ಜಮೀನಿನ ಕುರಿತಾದ ವಿಚಾರದಲ್ಲಿ ದೂರವಾಣಿ ಕರೆ ಮಾಡಿದ್ದು ಈ ಸಂದರ್ಭದಲ್ಲಿ ತಾಲೂಕು ದಂಢಾಧಿಕಾರಿಗಳು ಚುನಾವಣಾ ಕರ್ತವ್ಯದ  ಹಿನ್ನಲೆ ಸಭೆಯಲ್ಲಿ ಭಾಗವಹಿಸಿದ್ದರು. ತಾವು ಸಭೆಯಲ್ಲಿರುವುದಾಗಿ ದೂರವಾಣಿ ಕರೆದಾರರಿಗೆ ತಿಳಿಸಿದ್ದರು ನಿರಂತರವಾಗಿ ಹಲವಾರು ಭಾರಿ ಕರೆ ಮಾಡತೊಡಗಿದರು

ತಾಲೂಕು ದಂಢಾಧಿಕಾರಿಗಳಿಗೆ ಅವಾಚ್ಯ ಶಬ್ಧಗಳ ನಿಂದನೆ , ದೂರು ದಾಖಲು ಪ್ರಕರಣ ಇತ್ಯರ್ಥ Read More »

ದ.ಕ ಕ್ಷೇತ್ರದಲ್ಲಿ ಮೊದಲ 4 ಗಂಟೆಯ ವೇಳೆಗೆ ಶೇ 30.96  ಮತದಾನ

ಸುಳ್ಯ: ಲೋಕಸಭಾ ಚುನಾವಣೆಯಲ್ಲಿ ದ.ಕ.ಲೋಕಸಭಾ ಕ್ಷೇತ್ರದಲ್ಲಿ ಮೊದಲ 4 ಗಂಟೆಯಲ್ಲಿ ಶೇ.30.96 ಮತದಾನವಾಗಿದೆ. 7 ಗಂಟೆಗೆ ಮತದಾನ ಆರಂಭಗೊಂಡಿದ್ದು 11 ಗಂಟೆಯ ವೇಳೆಗೆ ಶೇ.30.96 ಮತದಾರರು ಮತ ಚಲಾಯಿಸಿದ್ದಾರೆ. ಸುಳ್ಯದಲ್ಲಿ ಅತೀ ಹೆಚ್ಚು ಅಂದರೆ ಶೇ. 35.05 ಮತದಾನ ಆಗಿದೆ. ಬೆಳ್ತಂಗಡಿ 32.39, ಮೂಡಬಿದ್ರೆ 27.46, ಮಂಗಳೂರು ಉತ್ತರ 30.39, ಮಂಗಳೂರು ದಕ್ಷಿಣ 26.54, ಮಂಗಳೂರು 31.63, ಬಂಟ್ವಾಳ 32.28, ಪುತ್ತೂರು 32.98 ಶೇಖಡಾ ಮತದಾನ ಆಗಿದೆ. ಸುಳ್ಯದಲ್ಲಿ 73,209 ಮಂದಿ ಮತ ಚಲಾಯಿಸಿ ಶೆ.35.05 ಮತದಾನ ಆಗಿದೆ.

ದ.ಕ ಕ್ಷೇತ್ರದಲ್ಲಿ ಮೊದಲ 4 ಗಂಟೆಯ ವೇಳೆಗೆ ಶೇ 30.96  ಮತದಾನ Read More »

ಮತದಾನ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್‌ ಆ‌ರ್. ಪೂಜಾರಿ

ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್‌ ಆ‌ರ್. ಪೂಜಾರಿ ಮತದಾನ ಮಾಡಿದರು. ಅವರು ಶುಕ್ರವಾರ ಮಂಗಳೂರಿನ ಕಪಿತಾನಿಯೋ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಪತ್ನಿ ಸಾಯಿರಶ್ಮಿರಾಜ್ ಪೂಜಾರಿ ಹಾಗೂ ಪುತ್ರಿ ರಿತುರಾಜ್ ಹಾಗೂ ಹಿತೈಷಿಗಳೊಂದಿಗೆ ಆಗಮಿಸಿದ ಅವರು ಮತ ಚಲಾಯಿಸಿದರು.

ಮತದಾನ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್‌ ಆ‌ರ್. ಪೂಜಾರಿ Read More »

ಮತದಾನಕ್ಕಾಗಿ ಸರದಿ ಸಾಲಿನಲ್ಲಿ ನಿಂತ ಬ್ರಿಜೇಶ್ ಚೌಟ

ಮಂಗಳೂರು : ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಪ್ರತೀ ಬೂತ್‍ ಗಳಲ್ಲಿ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ನಡೆಯುತ್ತಿದೆ. ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಕ್ಕು ಚಲಾಯಿಸಿದರು. ಅವರು ಮಂಗಳೂರಿನ ರಥಬೀದಿಯ ಮತಗಟ್ಟೆಯಲ್ಲಿ ಮತದಾನ  ಮಾಡಿದರು.

ಮತದಾನಕ್ಕಾಗಿ ಸರದಿ ಸಾಲಿನಲ್ಲಿ ನಿಂತ ಬ್ರಿಜೇಶ್ ಚೌಟ Read More »

ಮತದಾನಕ್ಕಾಗಿ ಸರತಿ ಸಾಲಿನಲ್ಲಿ ನಿಂತ ಶಾಸಕಿ ಭಾಗೀರಥಿ ಮುರುಳ್ಯ

ಪುತ್ತೂರು: ಬೂತ್ ನಂ -84 ಶಾಂತಿನಗರ ಮುರುಳ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಸಕರಾದ ಭಾಗೀರಥಿ ಮುರುಳ್ಯ ಮತದಾನ ಮಾಡಿದರು. ಗುತ್ತಿಗಾರಿನ ಮೊಗ್ರದಲ್ಲಿ ಮತಯಂತ್ರ ಕೈಕೊಟ್ಟಿದ್ದು, ಇನ್ನೂ ಮತದಾನ ಆರಂಭವಾಗಿಲ್ಲ ಎಂದು ತಿಳಿದು ಬಂದಿದೆ. ಗುತ್ತಿಗಾರು ಗ್ರಾಮದ ಮೊಗ್ರ ಹಿರಿಯ ಪ್ರಾಥಮಿಕ ಶಾಲೆಯ ಮತದಾನ ಕೇಂದ್ರದಲ್ಲಿ ವೋಟಿಂಗ್ ಮೆಷಿನ್ ಹಾಳಾಗಿರುವುದು.

ಮತದಾನಕ್ಕಾಗಿ ಸರತಿ ಸಾಲಿನಲ್ಲಿ ನಿಂತ ಶಾಸಕಿ ಭಾಗೀರಥಿ ಮುರುಳ್ಯ Read More »

ಬಸ್ಸಿನಡಿಗೆ ಸಿಲುಕಿ ಮಹಿಳೆ ಮೃತ್ಯು

ಧರ್ಮಸ್ಥಳ: ಬಸ್ಸಿನಡಿಗೆ ಸಿಲುಕಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಧರ್ಮಸ್ಥಳ ಕೆ ಎಸ್‌ ಆರ್‌ ಟಿ ಸಿ ಬಸ್‌ ನಿಲ್ದಾಣದಲ್ಲಿ ನಡೆದಿದೆ. ಧರ್ಮಸ್ಥಳ ಬಸ್‌ ನಿಲ್ದಾಣದಲ್ಲಿ ಸುಬ್ರಹ್ಮಣ್ಯಕ್ಕೆ ಹೋಗುವ ಕೆ ಎಸ್‌ ಆರ್‌ ಟಿ ಸಿ ಬಸ್ ರಿವರ್ಸ್ ತೆಗೆಯುವ ವೇಳೆ ಮಹಿಳೆ ಆಕಸ್ಮಿಕವಾಗಿ ಟಯರ್‌ನಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಮಹಿಳೆ ಸೇರಿ 8 ಜನ ಮಂಡ್ಯ ಜಿಲ್ಲೆಯ ಮೇಲುಕೋಟೆಯಿಂದ ಧರ್ಮಸ್ಥಳಕ್ಕೆ ಬಂದಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿರುವ ಮಹಿಳೆ ಆಕಸ್ಮಿಕವಾಗಿ ಟಯರ್

ಬಸ್ಸಿನಡಿಗೆ ಸಿಲುಕಿ ಮಹಿಳೆ ಮೃತ್ಯು Read More »

error: Content is protected !!
Scroll to Top