ದಕ್ಷಿಣ ಕನ್ನಡ

ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ ನಿಧನ !

ಮಂಗಳೂರು : ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ (70) ಅವರು ಮೇ 17ರಂದು ಮುಂಬೈಯಲ್ಲಿ ನಿಧನ ಹೊಂದಿದರು. ರಘುನಂದನ್‌ ಅವರು 1954ರಲ್ಲಿ ಮೂಲ್ಕಿಯಲ್ಲಿ ಬಡ ಕುಟಂಬವೊಂದರಲ್ಲಿ ಜನಿಸಿದ್ದರು. ಕಾಮತ್ ಅವರ ತಂದೆ ಹಣ್ಣಿನ ವ್ಯಾಪಾರಿಯಾಗಿದ್ದರು. ಕಾಮತ್ ಅವರು ತಮ್ಮ 15ನೇ ವಯಸ್ಸಿನಲ್ಲಿ ಅಣ್ಣನ ಹೊಟೇಲ್‌ಗೆ ಕೆಲಸಕ್ಕೆಂದು ಮುಂಬೈಗೆ ತೆರಳಿದ್ದರು. ಅನಂತರ ಹೊಟೇಲ್ ಉದ್ಯಮ ಆರಂಭಿಸಿ ಹಣ್ಣುಗಳಿಂದಲೇ ಐಸ್‌ಕ್ರೀಂ ತಯಾರಿಸಿ ಜನಪ್ರಿಯರಾದರು.ಮುಂಬೈಯಲ್ಲಿ 1984ರಲ್ಲಿ ನ್ಯಾಚುರಲ್ಸ್ ಐಸ್ ಕ್ರೀಂ ಆರಂಭಿಸಿದ್ದರು. ಅದು ದೇಶಾದ್ಯಂತ ಜನಪ್ರಿಯವಾಗಿ ದೊಡ್ಡ ಉದ್ಯಮವಾಗಿ ಬೆಳೆದಿದೆ. […]

ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ ನಿಧನ ! Read More »

ಮರದಿಂದ ಬಿದ್ದು ಗಾಯಗೊಂಡ ವ್ಯಕ್ತಿ ಮೃತ್ಯು

ನೆಲ್ಯಾಡಿ : ಕೆಲ ದಿನದ ಹಿಂದೆ ತೆಂಗಿನಮರದಿಂದ ಬಿದ್ದು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನೆಲ್ಯಾಡಿ ಗ್ರಾಮದ ತೋಟ ನಿವಾಸಿ ಧನಂಜಯ ಗೌಡ (43) ಅವರು ಮೇ 16ರಂದು ಸಂಜೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಧನಂಜಯ ಗೌಡ ಅವರು ಮೇ.11ರಂದು ನೆರೆಮನೆಯ ಚಂದ್ರ ಬಿರುವಳಿಕೆ ಎಂಬವರ ಮನೆಗೆ ಕೃಷಿ ಕೆಲಸಕ್ಕೆ ಹೋಗಿದ್ದು ಅಲ್ಲಿ ಸಂಜೆ 6 ಗಂಟೆ ವೇಳೆಗೆ ತೆಂಗಿನ ಮರದಿಂದ ಕಾಯಿ ಕೀಳುತ್ತಿರುವಾಗ ಆಕಸ್ಮಿಕವಾಗಿ ಕೈ ಜಾರಿ ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದರು. ಅವರನ್ನು

ಮರದಿಂದ ಬಿದ್ದು ಗಾಯಗೊಂಡ ವ್ಯಕ್ತಿ ಮೃತ್ಯು Read More »

ಉಗ್ರ ಸಂಘಟನೆ ಐಸಿಸ್ ಜತೆ ನಂಟು | ರಾಷ್ಟ್ರೀಯ ತನಿಖಾ ದಳದಿಂದ ಬಂಧಿಸಲ್ಪಟ್ಟ ಶಾಸಕ ದಿ.ಇದಿನಬ್ಬ ಮೊಮ್ಮಗ ಅಮರ್ ಅಬ್ದುಲ್ ರೆಹಮಾನ್ ಗೆ ಜಾಮೀನು ಮಂಜೂರು

ಮಂಗಳೂರು: ಉಗ್ರ ಸಂಘಟನೆ ಐಸಿಸ್ ಜೊತೆ ನಂಟು ಹೊಂದಿದ್ದ ಪ್ರಕರಣದಲ್ಲಿ ಮೂರು ವರ್ಷಗಳ ಹಿಂದೆ ರಾಷ್ಟ್ರೀಯ ತನಿಖಾ ದಳದಿಂದ ಬಂಧಿಸಲ್ಪಟ್ಟಿದ್ದ ಮಾಜಿ ಶಾಸಕ ದಿವಂಗತ ಇದಿನಬ್ಬ ಮೊಮ್ಮಗ ಅಮ‌ರ್ ಅಬ್ದುಲ್ ರೆಹಮಾನ್ ಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಐಸಿಸ್ ಬಾವುಟ, ಕರಪತ್ರ ಮೊಬೈಲ್ ನಲ್ಲಿದ್ದರೆ ಉಗ್ರ ಎನ್ನಲು ಪೂರಕ ಸಾಕ್ಷ್ಯವಲ್ಲ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಐಸಿಸ್ ನಂಟಿನ ಆರೋಪದಡಿ ಯುಎಪಿಎ ಕಾಯ್ದೆಯಡಿ ಅಮ‌ರ್ ಅಬ್ದುಲ್ ರೆಹಮಾನ್ ನನ್ನು ಅಗಸ್ಟ್ 21,

ಉಗ್ರ ಸಂಘಟನೆ ಐಸಿಸ್ ಜತೆ ನಂಟು | ರಾಷ್ಟ್ರೀಯ ತನಿಖಾ ದಳದಿಂದ ಬಂಧಿಸಲ್ಪಟ್ಟ ಶಾಸಕ ದಿ.ಇದಿನಬ್ಬ ಮೊಮ್ಮಗ ಅಮರ್ ಅಬ್ದುಲ್ ರೆಹಮಾನ್ ಗೆ ಜಾಮೀನು ಮಂಜೂರು Read More »

ಕರ್ನಾಟಕದಲ್ಲಿ ಸಾಲು ಸಾಲಾಗಿ ಹಿಂದೂ ಯುವತಿಯರ ಹತ್ಯೆ | ಆರೋಪಿಗಳ ವಿರುದ್ಧ ಎನ್ಕೌಂಟರ್ ಅಸ್ತ್ರ ಉಪಯೋಗಿಸಿ | ವಿಶ್ವ ಹಿಂದೂ ಪರಿಷದ್ ಆಗ್ರಹ

ಮಂಗಳೂರು: ಕಳೆದ ಒಂದು ತಿಂಗಳಿನಿಂದ ಕರ್ನಾಟಕದಲ್ಲಿ ಪ್ರೀತಿಗಾಗಿ 3 ಯುವತಿಯರ ಹತ್ಯೆ, ಏಪ್ರಿಲ್ 18 ರಂದು  ಹುಬ್ಬಳ್ಳಿಯ ನೇಹಾ ಹತ್ಯೆ, ನಂತರ ಕೊಡಗಿನಲ್ಲಿ ಮೀನಾ ಹತ್ಯೆ, ಇದೀಗ ಮೇ 15ರಂದು ಹುಬ್ಬಳ್ಳಿಯ ಅಂಜಲಿ ಹತ್ಯೆ. ಪ್ರೀತಿಯ ಹೆಸರಲ್ಲಿ ಯುವತಿಯರ ಹತ್ಯೆ ಆಗುತ್ತಿರುವುದು ಬಹಳ ಕಳವಳಕಾರಿ ಸಂಗತಿಯಾಗಿದ್ದು ನಾಗರಿಕ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ ಎಂದು ವಿಶ್ವ ಹಿಂದೂ ಪರಿಷದ್ ಮನವಿ ಮಾಡಿದೆ. ಪತ್ರಿಕಾ ಪ್ರಕಟಣೆ ನೀಡಿರುವ ವಿಎಚ್ ಪಿ, 2013 ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಬಂದಾಗ ಸಾಲು ಸಾಲು

ಕರ್ನಾಟಕದಲ್ಲಿ ಸಾಲು ಸಾಲಾಗಿ ಹಿಂದೂ ಯುವತಿಯರ ಹತ್ಯೆ | ಆರೋಪಿಗಳ ವಿರುದ್ಧ ಎನ್ಕೌಂಟರ್ ಅಸ್ತ್ರ ಉಪಯೋಗಿಸಿ | ವಿಶ್ವ ಹಿಂದೂ ಪರಿಷದ್ ಆಗ್ರಹ Read More »

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಈಗಾಗಲೇ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿ ಗುಡುಗು-ಸಿಡಿಲಿನಿಂದ ಕೂಡಿದ ಉತ್ತಮ ಮಳೆಯಾಗಿದ್ದು ಇದೇ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮುಂದಿನ 3 ದಿನಗಳ ಕಾಲ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಉಡುಪಿ ಜಿಲ್ಲೆಯ ಹಲವೆಡೆ ಮಂಗಳವಾರ ಧಾರಾಕಾರ ಮಳೆಯಾಗಿದ್ದು, ಮಣಿಪಾಲ, ಮಲ್ಪೆ ಭಾಗದಲ್ಲಿ ಗುಡುಗು ಸಹಿತ ಕೆಲಕಾಲ ಉತ್ತಮ ಮಳೆಯಾಗಿದೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ Read More »

ಲಾರಿ-ಬೈಕ್ ಅಪಘಾತ, ಬೈಕ್ ಸವಾರ ಮೃತ್ಯು ಸಹಸವಾರ ಗಂಭೀರ

ಬಂಟ್ವಾಳ : ಬೈಕಿಗೆ ಲಾರಿ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದ ಸವಾರರ ಮೇಲೆ ಅದೇ ಲಾರಿ ಹರಿದ ಪರಿಣಾಮ ಸವಾರ ದಾರುಣವಾಗಿ ಮೃತಪಟ್ಟು, ಇನ್ನೋರ್ವ ಸಹಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪುದು ಗ್ರಾಮದ ಮಾರಿಪಳ್ಳ ಜಂಕ್ಷನ್ನಿನಲ್ಲಿ ಮಂಗಳವಾರ ಸಂಜೆ ನಡೆದಿದೆ. ಮೃತ ಬೈಕ್ ಸವಾರ ಮೂಲತಃ ಉತ್ತರ ಪ್ರದೇಶ ರಾಜ್ಯದ ನಿವಾಸಿ ಪ್ರಸ್ತುತ ಉಡುಪಿಯಲ್ಲಿ ವಾಸವಾಗಿರುವ ಸೋನು (19) ಹಾಗೂ ಗಾಯಾಳು ಸಹಸವಾರ ಕಾರ್ಕಳ ನಿವಾಸಿ ಪ್ರಸಾದ್ (22) ಎಂದು ಗುರುತಿಸಲಾಗಿದೆ. ಉಪ್ಪಿನಂಗಡಿ ಸಮೀಪದ

ಲಾರಿ-ಬೈಕ್ ಅಪಘಾತ, ಬೈಕ್ ಸವಾರ ಮೃತ್ಯು ಸಹಸವಾರ ಗಂಭೀರ Read More »

ಕುಂಬ್ರ ಮಂಡಲ ಪಂಚಾಯತ್ ಮಾಜಿ ಸದಸ್ಯ ಚಿಲ್ಮೆತ್ತಾರು ನಾರಾಯಣ ರೈ ನಿಧನ

ಕುಂಬ್ರ: ಒಳಮೊಗ್ರು ಗ್ರಾಮದ ಚಿಲ್ಮೆತ್ತಾರು ನಾರಾಯಣ ರೈ ಇಂದು ಮುಂಜಾನೆ ತಮ್ಮ ಸ್ವಗೃಹದಲ್ಲಿ ನಿಧನರಾದರು. ಪ್ರಗತಿಪರ ಕೃಷಿಕರಾಗಿದ್ದ ಇವರು ಕುಂಬ್ರ ಮಂಡಲ ಪಂಚಾಯತ್ ಸದಸ್ಯರಾಗಿ , ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಏಕತ್ತಡ್ಕ ಇದರ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾಗಿ , ಶ್ರೀ ವೀರಕೇಸರಿ ಸ್ಪೋರ್ಟ್ಸ್ ಕ್ಲಬ್ ನ ಗೌರವ ಸಲಹೆಗಾರರಾಗಿ , ಓಂ ಶಿವ ಭಜನಾ ಮಂದಿರ , ಓಂ ಶಿವ ಯುವಕ ಮಂಡಲದ ಗೌರವಾಧ್ಯಕ್ಷರಾಗಿ , ಊರಿನ ಅಭಿವೃದ್ಧಿಯಲ್ಲಿ ಯುವ ಸಮುದಾಯಕ್ಕೆ ಪ್ರೇರಣಾದಾಹಿಯಾಗಿ ಸೇವೆ

ಕುಂಬ್ರ ಮಂಡಲ ಪಂಚಾಯತ್ ಮಾಜಿ ಸದಸ್ಯ ಚಿಲ್ಮೆತ್ತಾರು ನಾರಾಯಣ ರೈ ನಿಧನ Read More »

ಪಿಕಪ್-ಕಾರು ಡಿಕ್ಕಿ : ಕಾರಿನಲ್ಲಿದ್ದ ಮಗುವಿಗೆ ಗಾಯ

ಸಂಪಾಜೆ: ಕಾರು ಹಾಗೂ ಪಿಕಪ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಇದೀಗ ಸಂಪಾಜೆ ಮಸೀದಿ ಸಮೀಪ ಅರೆಕಲ್ಲು ರೋಡಿಗೆ ತಿರುವಿನಲ್ಲಿ ಸಂಭವಿಸಿದೆ. ಕಾರು ಮಡಿಕೇರಿ ಕಡೆಯಿಂದ ಬರುತ್ತಿದ್ದು ಎನ್ನಲಾಗಿದ್ದು, ಕಾರಿನಲ್ಲಿದ್ದ ಮಗುವಿಗೆ ಅಲ್ಪ ಗಾಯವಾಗಿದೆ ಎಂದು ತಿಳಿದು ಬಂದಿದೆ. ನಿನ್ನೆ ಇದೇ ಜಾಗದಲ್ಲಿ ಮೂರು ಹಸುವಿಗೆ ವಾಹನವೊಂದು ಡಿಕ್ಕಿ ಹೊಡೆದು ಒಂದು ಹಸು ಮೃಪಟ್ಟಿತ್ತು. ಈ ಹಿಂದೆಯೂ ಕೂಡ ಹಲವು ಅಪಘಾತ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪಿಕಪ್-ಕಾರು ಡಿಕ್ಕಿ : ಕಾರಿನಲ್ಲಿದ್ದ ಮಗುವಿಗೆ ಗಾಯ Read More »

ರಾತ್ರಿ ಮಲಗಿದಲ್ಲೇ ಹೋಟೆಲ್ ಕಾರ್ಮಿಕ ಸಾವು

ಸುಳ್ಯ : ಸುಳ್ಯ ತಾಲೂಕಿನ ಸಂಪಾಜೆಯ ಕಲ್ಲುಗುಂಡಿಯ ಹೋಟೆಲ್ ವೊಂದರಲ್ಲಿ ಕೆಲಸಕ್ಕಿದ್ದ ವ್ಯಕ್ತಿಯೊಬ್ಬ ರಾತ್ರಿ ಮಲಗಿದಲ್ಲೇ ಸಾವಿಗೀಡಾಗಿರುವ ಘಟನೆ ವರದಿಯಾಗಿದೆ. ಶಬರಿಮಲೆಯ ಪಂದಳದಿಂದ ಬಂದು ಕಲ್ಲುಗುಂಡಿಯ ಹೋಟೆಲ್ ನಲ್ಲಿ ಕೆಲಸ ನಿರತನಾಗಿದ್ದ ವಿಶ್ವನಾಥ ಎಂಬ ವ್ಯಕ್ತಿ ಸಾವಿಗೀಡಾಗಿರುವ ನತದೃಷ್ಟ. ಈತ ರಾತ್ರಿ ಹೋಟೆಲ್ ನಲ್ಲಿ ಚೆನ್ನಾಗಿಯೇ ಕೆಲಸ ಮಾಡಿಕೊಂಡು ಇದ್ದ. ಆದರೆ ಊಟ ಮಾಡಿ ಮಲಗಿದವ ಬೆಳಗ್ಗಿನ ಸಮಯದಲ್ಲಿ ಮೃತಪಟ್ಟಿರುವುದು ಕಂಡುಬಂದಿದೆ. ಹೃದಯಾಘಾತ ಆಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ

ರಾತ್ರಿ ಮಲಗಿದಲ್ಲೇ ಹೋಟೆಲ್ ಕಾರ್ಮಿಕ ಸಾವು Read More »

ಬಾಲಕನಿಗೆ ಅನ್ಯ ಕೋಮಿನ ವ್ಯಕ್ತಿಯಿಂದ ಲೈಂಗಿಕ ಕಿರುಕುಳ : ಆರೋಪಿ ಬಂಧನ

ಉಪ್ಪಿನಂಗಡಿ: ಅಪ್ರಾಪ್ತ ಬಾಲಕನಿಗೆ ಅನ್ಯ ಕೋಮಿನ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಕ್ಕಳ ಸಹಾಯವಾಣಿಯ ಮೂಲಕ ಸಲ್ಲಿಸಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ದೋರ್ಮೆ ಎಂಬಲ್ಲಿನ ಅಬ್ದುಲ್ಲಾ ಬಿಳಿಯೂರು (36 ) ಬಂಧಿತ ಆರೋಪಿ. ಎರಡು ಮಕ್ಕಳ ತಂದೆಯಾಗಿರುವ ಈತ 13 ವರ್ಷದ ಬಾಲಕನನ್ನು ಮನೆಯಲ್ಲಿ ಕೆಲಸವಿದೆ ಎಂದು ಹಾಗೂ ಸ್ಕೂಟಿ ಸವಾರಿ ಹೇಳಿ ಕೊಡುತ್ತೇನೆಂದು ಕರೆಯಿಸಿ ವಿವಿಧ ದಿನಗಳಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ

ಬಾಲಕನಿಗೆ ಅನ್ಯ ಕೋಮಿನ ವ್ಯಕ್ತಿಯಿಂದ ಲೈಂಗಿಕ ಕಿರುಕುಳ : ಆರೋಪಿ ಬಂಧನ Read More »

error: Content is protected !!
Scroll to Top