ದಕ್ಷಿಣ ಕನ್ನಡ

ಹಿರಿಯ ಪತ್ರಕರ್ತ ವಿನಯ್ ಕುಮಾರ್ ಸೇಮಿತ ನಿಧನ

ಬೆಳ್ತಂಗಡಿ: ವೇಣೂರು ಕರಿಮಣೇಲು ಗುತ್ತು ನಿವಾಸಿ, ಹಿರಿಯ ಪತ್ರಕರ್ತ ವಿನಯ್ ಕುಮಾರ್ ಸೇಮಿತ (71) ಹೃದಯಾಘಾತದಿಂದ ಜೂ.12 ರಂದು ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಅವರು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿ, ಉದಯವಾಣಿ, ವಿಜಯ ಕರ್ನಾಟಕ, ಕನ್ನಡಪ್ರಭ ಪತ್ರಿಕೆಯ ವೇಣೂರು ಭಾಗದ ವರದಿಗಾರರಾಗಿ ಅನೇಕ ವರ್ಷ ಸೇವೆ ಸಲ್ಲಿಸಿದ್ದರು. ಜತೆಗೆ ವೇಣೂರು ಗ್ರಾ.ಪಂ. ಮಾಜಿ ಸದಸ್ಯರಾಗಿ, ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದರು. ಈ ಬಾರಿ 2024 ವೇಣೂರು ಬಾಹುಬಲಿ ಮಹಾಮಸ್ತಕಾಭೀಷಕದ ಮಾಧ್ಯಮ ಸಮಿತಿ ಸಂಚಾಲಕರಾಗಿ, 2012 […]

ಹಿರಿಯ ಪತ್ರಕರ್ತ ವಿನಯ್ ಕುಮಾರ್ ಸೇಮಿತ ನಿಧನ Read More »

ಬೆಳ್ಳಾರೆ ಮಹಿಳೆ ಕೊಲೆ ಆರೋಪಿ ಬಂಧನ

ಬೆಳ್ಳಾರೆ: ಬೆಳ್ಳಾರೆಯ ಎಪಿಎಂಸಿ ಸಂತೆ ಮಾರುಕಟ್ಟೆಯಲ್ಲಿ ನಡೆದ ಮಹಿಳೆಯ ಕೊಲೆಗೆ ಸಂಬಂಧಿಸಿ ಕೊಲೆ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಕಲ್ಮಡ್ಕದ ಜೋಗಿಯಡ್ಕದ ವೆಂಕಪ್ಪ ಎಂಬವರ ಪುತ್ರ ಜಯರಾಮ ನಾಯ್ಕ ಕೊಲೆ ಆರೋಪಿಯಾಗಿದ್ದು, ಆತನನ್ನು ಬಂಧಿಸಲಾಗಿದೆ. ಬೆಳ್ಳಾರೆ ಗ್ರಾಮದ ಪಾಟಾಜೆಯ ನಳಿನಿ (55) ಅವರನ್ನು ಭಾನುವಾರ ರಾತ್ರಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2 ವರ್ಷಗಳ ಹಿಂದೆ ಮನೆ ಬಿಟ್ಟಿದ್ದ ನಳಿನಿ ವಾರಕೊಮ್ಮೆ ಮನೆಗೆ ಹೋಗಿ ಬರುತ್ತಿದ್ದು, ಬಸ್

ಬೆಳ್ಳಾರೆ ಮಹಿಳೆ ಕೊಲೆ ಆರೋಪಿ ಬಂಧನ Read More »

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಬೆಂಗಳೂರು ಸ್ಕೈ ಬರ್ಡ್ ಏವಿಯೇಶನ್ ವತಿಯಿಂದ ಮಾಹಿತಿ ಕಾರ್ಯಾಗಾರ

ಪುತ್ತೂರು : ನಗರದ ಧರ್ಮಸ್ಥಳ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಬೆಂಗಳೂರು ಸ್ಕೈ ಬರ್ಡ್ ಏವಿಯೇಶನ್ ವತಿಯಿಂದ ಉದ್ಯೋಗಾಧಾರಿತ ಡಿಪ್ಲೋಮ ಮತ್ತು ಬಿಬಿಎ ಏವಿಯೇಶನ್ ಕೋರ್ಸ್ ಗೆ ಸಂಬಂಧಿಸಿದ ಮಾಹಿತಿ ಕಾರ್ಯಗಾರ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಬೆಂಗಳೂರು ಸ್ಕೈ ಬರ್ಡ್ ಏವಿಯೇಶನ್ ಸಂಸ್ಥೆಯ ಚೆಯರ್ ಮ್ಯಾನ್ ಸುಜಾತ ಬೈರಿ ದೀಪ ಬೆಳಗಿಸಿ ಉದ್ಘಾಟಿಸಿ, ತಮ್ಮ ಸಂಸ್ಥೆಯಲ್ಲಿ ಲಭ್ಯವಿರುವ ವಿವಿಧ ಕೋರ್ಸುಗಳ ಬಗ್ಗೆ ಹಾಗೂ ಸಂಸ್ಥೆಯು ನಡೆದು ಬಂದ ಹಾದಿಯನ್ನು ವಿವರಿಸಿದರು. ಬೆಂಗಳೂರು ಸ್ಕೈ ಬರ್ಡ್ ಏವಿಯೇಶನ್

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಬೆಂಗಳೂರು ಸ್ಕೈ ಬರ್ಡ್ ಏವಿಯೇಶನ್ ವತಿಯಿಂದ ಮಾಹಿತಿ ಕಾರ್ಯಾಗಾರ Read More »

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ  | ಜಿಲ್ಲೆಯಾದ್ಯಂತ  ಭಾರೀ ಮಳೆ ಮುನ್ಸೂಚನೆ  

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಗೆ ಮುಂಗಾರು ಪ್ರವೇಶಿಸಿದ ಬಳಿಕ ಜಿಲ್ಲೆಯಾದ್ಯಂತ ಧಾರಕಾರ ಮಳೆಯಾಗುತ್ತಿದೆ. ಕಳೆದ 10 ದಿನಗಳಿಂದ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಕಳೆದ 2-3 ದಿನಗಳಿಂದ ಇದರ ತೀವ್ರತೆ ಹೆಚ್ಚಿದೆ. ಸೋಮವಾರ ಜಿಲ್ಲೆಯಲ್ಲಿ ದಿನಪೂರ್ತಿ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ಬಳಿಕ ಮಳೆಯು ತುಸು ಬಿರುಸು ಪಡೆದುಕೊಂಡಿತ್ತು. ಮಂಗಳೂರು ನಗರದ ಮತ್ತು ಗ್ರಾಮಾಂತರ ಭಾಗದಲ್ಲಿ ಮುಂಜಾನೆ ವೇಳೆ ಸುಮಾರು ಒಂದು ಗಂಟೆಗಳ ಕಾಲ ಧಾರಾಕಾರ ಮಳೆಯಾಗಿದ್ದು, ಬಳಿಕ ಕಡಿಮೆಯಾಗಿದೆ. ಪುತ್ತೂರು, ಕಡಬ, ಸುಬ್ರಹ್ಮಣ್ಯ, ಬಂಟ್ವಾಳ ಭಾಗದಲ್ಲಿಯೂ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ  | ಜಿಲ್ಲೆಯಾದ್ಯಂತ  ಭಾರೀ ಮಳೆ ಮುನ್ಸೂಚನೆ   Read More »

ಹಲ್ಲೆಗೊಳಗಾದ ಕಾರ್ಯಕರ್ತರ ಆರೋಗ್ಯ ವಿಚಾರಿಸಿದ ಸಂಸದ ಕ್ಯಾ. ಬ್ರಿಜೇಶ್‍ ಚೌಟ

ಮಂಗಳೂರು: ದ.ಕ. ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್ ಚೌಟ ದೆಹಲಿಯಿಂದ ಹಿಂದಿರುಗಿದ ತಕ್ಷಣವೇ ಹಲ್ಲೆಗೊಳಗಾದ ಕಾರ್ಯಕರ್ತರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಪದಗ್ರಹಣದ ಅಂಗವಾಗಿ ಬಂಟ್ವಾಳ ತಾಲೂಕಿನ ಬೋಳಿಯಾರಿನಲ್ಲಿ ನಡೆದ ಸಂಭ್ರಮಾಚರಣೆಯನ್ನು ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ನಮ್ಮ ಕಾರ್ಯಕರ್ತರಾದ ಹರೀಶ್ ಅಂಚನ್‌ ಹಾಗೂ ವಿನೋದ್ ಅವರ ಮೇಲೆ ಮತೀಯ ಶಕ್ತಿಗಳು ಮಾರಣಾಂತಿಕ ಹಲ್ಲೆ ನಡೆದಿದ್ದು,  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹರೀಶ್ ಮತ್ತು ವಿನೋದ್ ಅವರನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದರು. ಜಿಲ್ಲೆಯಲ್ಲಿ

ಹಲ್ಲೆಗೊಳಗಾದ ಕಾರ್ಯಕರ್ತರ ಆರೋಗ್ಯ ವಿಚಾರಿಸಿದ ಸಂಸದ ಕ್ಯಾ. ಬ್ರಿಜೇಶ್‍ ಚೌಟ Read More »

ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ | ಸೋರಿಕೆಯಾಗುತ್ತಿರುವ ಗ್ಯಾಸ್, ಸಂಚಾರ ಅಸ್ತವ್ಯಸ್ತ

ಸುಳ್ಯ: ಗ್ಯಾಸ್ ಸಿಲಿಂಡರ್ ಲಾರಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಲಾರಿ ಪಲ್ಟಿಯಾದ ಘಟನೆ ಇಂದು ಸಂಜೆ ಕನಕಮಜಲು ಗ್ರಾಮದ ಕೋಡಿ ತಿರುವಿನಲ್ಲಿ ನಡೆದಿದೆ. ಲಾರಿ ಪಲ್ಟಿಯಾದ ಪರಿಣಾಮ ಗ್ಯಾಸ್ ಸೋರೆಯಾಗುತ್ತಿದ್ದು, ಹೆದ್ದಾರಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಮಡಿಕೇರಿ ಕಡೆಯಿಂದ ಮಂಗಳೂರಿಗೆ ಗ್ಯಾಸ್ ಸಿಲಿಂಡರ್ ಸಾಗಾಟ ಮಾಡುತ್ತಿದ್ದ ಲಾರಿ ಜೋರಾಗಿ ಸುರಿಯುವ ಮಳೆಯ ಮಧ್ಯೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆಯಾಗುತ್ತಿರುವುದಾಗಿ ತಿಳಿದುಬಂದಿದೆ. ಇದೀಗ ಸ್ಥಳಕ್ಕೆ ಸುಳ್ಯ ಅಗ್ನಿಶಾಮಕ ದಳದ ಸಿಬ್ಬಂದಿಗಳು:

ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ | ಸೋರಿಕೆಯಾಗುತ್ತಿರುವ ಗ್ಯಾಸ್, ಸಂಚಾರ ಅಸ್ತವ್ಯಸ್ತ Read More »

ಸುಳ್ಯ ಕೆವಿಜಿ ಆಯುರ್ವೇದ ಕಾಲೇಜು & ಆಸ್ಪತ್ರೆಯಲ್ಲಿ ರಾಷ್ಟ್ರೀಯ ಮಟ್ಟದ “ಸೈನ್ಸ್ ಟಿಫಿಕ್ ರೈಟಿಂಗ್, ರಿಸರ್ಚ್‍ ಇಂಟಿಗ್ರಿಟಿ ಮತ್ತು ಪಬ್ಲಿಕೇಶನ್ ಎಥಿಕ್ಸ್” ಕುರಿತ ಕಾರ್ಯಾಗಾರಕ್ಕೆ ಚಾಲನೆ

ಸುಳ್ಯ: ಕೆವಿಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನ್ಯಾಷನಲ್ ಕೌನ್ಸಿಲ್ ಆಫ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ಸ ಹಯೋಗದೊಂದಿಗೆ ನಡೆಯುವ ರಾಷ್ಟ್ರೀಯ ಮಟ್ಟದ “ಸೈನ್‌ಟಿಫಿಕ್ ರೈಟಿಂಗ್, ರಿಸರ್ಚ್ ಇಂಟೆಗ್ರಿಟಿ ಮತ್ತು ಪಬ್ಲಿಕೇಶನ್ ಎಥಿಕ್ಸ್”ನ ಸ್ನಾತಕೋತ್ತರ ಪದವಿ ಮಾರ್ಗದರ್ಶಕರ ಮೂರು ದಿನಗಳ ಕಾರ್ಯಾಗಾರಕ್ಕೆ ಆಡಿಟೋರಿಯಂನಲ್ಲಿ ಇಂದು ಚಾಲನೆ ನೀಡಲಾಯಿತು.   ಶ್ರೀ. ಶ್ರೀ ಕಾಲೇಜು ಆಫ್ ಆಯುರ್ವೇದಿಕ್ ಸೈನ್ಸ್ ಮತ್ತು ರಿಸರ್ಚ್ ಬೆಂಗಳೂರು ಇದರ ಪಂಚ ಕರ್ಮ ವಿಭಾಗದ ಮುಖ್ಯಸ್ಥರು, ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್

ಸುಳ್ಯ ಕೆವಿಜಿ ಆಯುರ್ವೇದ ಕಾಲೇಜು & ಆಸ್ಪತ್ರೆಯಲ್ಲಿ ರಾಷ್ಟ್ರೀಯ ಮಟ್ಟದ “ಸೈನ್ಸ್ ಟಿಫಿಕ್ ರೈಟಿಂಗ್, ರಿಸರ್ಚ್‍ ಇಂಟಿಗ್ರಿಟಿ ಮತ್ತು ಪಬ್ಲಿಕೇಶನ್ ಎಥಿಕ್ಸ್” ಕುರಿತ ಕಾರ್ಯಾಗಾರಕ್ಕೆ ಚಾಲನೆ Read More »

ಪುತ್ತೂರು,ಸುಬ್ರಹ್ಮಣ್ಯ,ಬೆಳ್ತಂಗಡಿ ,ಕಡಬದಲ್ಲಿ ಮಿಂಚು ನಿರ್ಬಂಧಕ ಅಳವಡಿಕೆ : ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸರಕಾರ

ಪುತ್ತೂರು : ಪ್ರತೀ ಮಳೆಗಾಲದಲ್ಲಿ‌ ಸಿಡಿಲು ಮತ್ತು ಮಿಂಚಿಗೆ ಅನೇಕ ಜೀವಗಳು ಬಲಿಯಾಗುತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಮಿಂಚು‌ಬಂಧಕ ಅಳವಡಿಸಲಯ ಸರಕಾರ ತೀರ್ಮಾನಿಸಿದ ಎಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವರು ಪುತ್ತೂರು ಭಾಗದಲ್ಲಿ ಹೆಚ್ಚಾಗಿ ಮಿಂಚಿಗೆ ಜೀವ ಬಲಿಯಾಗುತ್ತದ . ಮಳೆಗಾಲ ಆರಂಭ ಮತ್ತು ಕೊನೇಯ ದಿನಗಳಲ್ಲಿ ಮಿಂಚು ಹೆಚ್ಚಾಗಿ ಈ ಭಾಗದಲ್ಲೇ ಇರುತ್ತದೆ. ಶಾಸಕರಾದ ಅಶೋಕ್ ರೈ ಯವರು ಈಗಾಗಲೇ ಮನವಿ ಮಾಡಿದ್ದರು.‌ಮನವಿಯನ್ನು ಸರಕಾರ ಪುರಸ್ಕರಿಸಿದೆ. ಮಿಂಚು ಬಂಧಕ

ಪುತ್ತೂರು,ಸುಬ್ರಹ್ಮಣ್ಯ,ಬೆಳ್ತಂಗಡಿ ,ಕಡಬದಲ್ಲಿ ಮಿಂಚು ನಿರ್ಬಂಧಕ ಅಳವಡಿಕೆ : ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸರಕಾರ Read More »

ಬೆಳ್ಳಾರೆಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆ | ಕೊಲೆ ಶಂಕೆ

ಬೆಳ್ಳಾರೆ: ಬೆಳ್ಳಾರೆಯ ಎಪಿಎಂಸಿ ಸಂತೆ ಮಾರುಕಟ್ಟೆಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ. ತಲೆಗೆ ಕೆಂಪುಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ತಲೆ ಒಡೆದು ರಕ್ತ ಹರಿದುಹೋಗಿದೆ. ಸ್ಥಳದಲ್ಲಿ ಕೆಂಪು ಕಲ್ಲು ಇದ್ದು, ಅದನ್ನೇ ತಲೆಗೆ ಎತ್ತಿಹಾಕಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಬೆಳ್ಳಾರೆ ಪೊಲೀಸ್ ಠಾಣಾಧಿಕಾರಿ ಸಂತೋಷ್ ಮತ್ತು ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಮಹಿಳೆಯ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಹೆಚ್ಚಿನ ವಿವರ ತಿಳಿದು ಬರಬೇಕಿದೆ.

ಬೆಳ್ಳಾರೆಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆ | ಕೊಲೆ ಶಂಕೆ Read More »

ಸಾರ್ವಜನಿಕ ಸ್ಥಳದಲ್ಲಿ ತಲವಾರು ಪ್ರದರ್ಶಿಸಿದ ಐವರ ಬಂಧನ

ಬಂಟ್ವಾಳ : ಸಾರ್ವಜನಿಕ ಸ್ಥಳದಲ್ಲಿ ತಲವಾರು ಪ್ರದರ್ಶನ ಮಾಡುತ್ತಿದ್ದ ಆರೋಪದ ಹಿನ್ನೆಲೆ ಐವರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೂ. 9 ರಂದು ಸಂಜೆ, ಬಂಟ್ವಾಳ ಬಡಗಬೆಳ್ಳೂರು ಎಂಬಲ್ಲಿ ಅಪರಿಚಿತ ವ್ಯಕ್ತಿಗಳು, ಸಾರ್ಜಜನಿಕವಾಗಿ ಮಾರಕಾಸ್ತ್ರವನ್ನು ಪ್ರದರ್ಶಿಸುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಹರೀಶ್ ಎಮ್.ಆ‌ರ್, ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿದಾಗ ಬೋಜರಾಜ, ವಿನೋದ್, ವಿವೇಕ್, ರಕ್ಷೀತ್, ರಕ್ಷಕ್ ಎಂಬವರುಗಳು ಸಾರ್ವಜನಿಕ ಸ್ಥಳದಲ್ಲಿ ತಲವಾರು ಹಿಡಿದುಕೊಂಡು ಸಾರ್ವಜನಿಕವಾಗಿ ಭಯವನ್ನುಂಟು

ಸಾರ್ವಜನಿಕ ಸ್ಥಳದಲ್ಲಿ ತಲವಾರು ಪ್ರದರ್ಶಿಸಿದ ಐವರ ಬಂಧನ Read More »

error: Content is protected !!
Scroll to Top