“ಪ್ರಭೋ ಶಕ್ತಿಮನ್ ಹಿಂದು ರಾಷ್ಟ್ರಾಂಗ ಭೂತಾ” | `ಪಂಚವಟಿ’ ಲೋಕಾರ್ಪಣೆ | ಶಿಸ್ತಿನ ಸಿಪಾಯಿಗಳ ಶಿಸ್ತುಬದ್ಧ ಕಾರ್ಯಾಲಯ
ಪುತ್ತೂರು: ಮುನಿ ಪುಂಗವರ ತಪಸ್ಸಿನ ಕೇಂದ್ರ ಪಂಚವಟಿಗೆ ಪೌರಾಣಿಕ ಮಹತ್ವ. ಪುತ್ತೂರಿನ ಆರ್.ಎಸ್.ಎಸ್. ಶಿಸ್ತುಬದ್ಧ ಸಿಪಾಯಿಗಳ ಕಾರ್ಯಾಲಯ ಪಂಚವಟಿಗೆ ಐತಿಹಾಸಿಕ ಮಹತ್ವ. ಸೋಮವಾರ ನಡೆದ ಶಿಸ್ತಿನ ಸಮಾರಂಭದಲ್ಲಿ ಪಂಚವಟಿ ಲೋಕಾರ್ಪಣೆಗೊಂಡಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ್ ಅವರು ಬೌದ್ಧಿಕಲ್ಲಿ ತಿಳಿಸಿದಂತೆ, “ಪುತ್ತೂರು ಜಿಲ್ಲೆಯ ಆರ್.ಎಸ್.ಎಸ್ ಕಾರ್ಯಾಲಯ ದೇಶಕ್ಕೆ ಮಾದರಿಯಾಗಿ ನಿಂತಿದೆ”. ಹಿಂದೆ ಪಂಚವಟಿ ಇದ್ದ ಜಾಗದಲ್ಲೇ ಹೊಸ ಕಟ್ಟಡ ತಲೆಎತ್ತಿದೆ. ಎರಡಂತಸ್ತಿನ ಬೃಹತ್ ಕಟ್ಟಡ, ಆರ್.ಎಸ್.ಎಸ್. ಕಾರ್ಯಚಟುವಟಿಕೆಗಳಿಗೆ ತೆರೆದುಕೊಂಡಿದೆ. ಕೇಶವಸ್ಮೃತಿ ಸಂವರ್ಧನ ಸಮಿತಿಯಡಿ […]