ದಕ್ಷಿಣ ಕನ್ನಡ

ಮಾಣಿಲ ಶಾಲೆಯಲ್ಲಿ 10 ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಕಾರ್ಯಕ್ರಮ

ಮಾಣಿಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಮಾಣಿಲ ಸರಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಫಲಿತಾಂಶ ಉನ್ನತೀಕರಣಕ್ಕಾಗಿ ವಿಶೇಷ ತರಬೇತಿ ಕಾರ್ಯಕ್ರಮ ಸೋಮವಾರ ಶಾಲೆಯಲ್ಲಿ ನಡೆಯಿತು. ತಾಲೂಕು ಆರೋಗ್ಯಾಧಿಕಾರಿ ಅಶೋಕ್ ರೈ, ಆರೋಗ್ಯ ಇಲಾಖೆ ವತಿಯಿಂದ ಕುಷ್ಠ ರೋಗ ಹಾಗೂ ಗಳಗಂಡ ರೋಗ (ಗಾಯ್ಟರ್) ನಿರ್ಮೂಲನೆ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಕೆ. ಜಿ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ […]

ಮಾಣಿಲ ಶಾಲೆಯಲ್ಲಿ 10 ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಕಾರ್ಯಕ್ರಮ Read More »

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಗೆ ಮುಂದಿನ 50 ವರ್ಷಕ್ಕೆ ಪೂರಕ ವ್ಯವಸ್ಥೆ : ಶಾಸಕ ಸಂಜೀವ ಮಠಂದೂರು

ಪುತ್ತೂರು : ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ  ಮುಂದಿನ 50 ವರ್ಷಕ್ಕೆ ಪೂರಕವಾದ ವ್ಯವಸ್ಥೆ ಆಗುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು ಸೋಮವಾರ 10 ಕೋಟಿ. ವೆಚ್ಚದಲ್ಲಿ ರಾಜ್ಯ ಹೆದ್ದಾರಿ ಪುತ್ತೂರು ಉಪ್ಪಿನಂಗಡಿ ರಸ್ತೆಯ ಕಾಮಗಾರಿಗೆ 34ನೇ ನೆಕ್ಕಿಲಾಡಿಯ ಶಕ್ತಿನಗರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ರಸ್ತೆಗಳ ಅಭಿವೃದ್ಧಿ ಆಗುತ್ತಿದ್ದಂತೆ ರಸ್ತೆಗಳನ್ನು ಮೇಲದರ್ಜೆಗೆ ಏರಿಸುವ ಕೆಲಸವೂ ಆಗುತ್ತಿದೆ. ಉಪ್ಪಿನಂಗಡಿ ಪ್ರವಾಸೋದ್ಯಮ ಕೇಂದ್ರ ಮಾಡುವ ಯೋಜನೆಗೆ ಪೂರಕವಾಗಿ ಸಂಗಮ ಕ್ಷೆತ್ರದಲ್ಲಿ ಬೋಟಿಗ್ ವ್ಯವಸ್ಥೆ ಮಾಡುವ

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಗೆ ಮುಂದಿನ 50 ವರ್ಷಕ್ಕೆ ಪೂರಕ ವ್ಯವಸ್ಥೆ : ಶಾಸಕ ಸಂಜೀವ ಮಠಂದೂರು Read More »

ಫೆ.13-14 : ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವ

ಬಂಟ್ವಾಳ : ಬಂಟ್ವಾಳ ತಾಲೂಕಿನ ಕುಳ-ವಿಟ್ಲ ಮುಡ್ನೂರು ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಹಾಗೂ ಮಾಡ ಶ್ರೀ ಮಲರಾಯ-ಮೂವರ್‍ ದೈವಂಗಳ ದೈವಸ್ಥಾನದ ವಾರ್ಷಿ‍ಕ ಜಾತ್ರಾ ಮಹೋತ್ಸವ ಫೆ.13  ಹಾಗೂ 14 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಫೆ.13 ಸೋಮವಾರ ಬೆಳಿಗ್ಗೆ 8.30 ಕ್ಕೆ ಕುಂಡಡ್ಕ ಶ್ರೀ ವಿಷ್ಣುಮೂತಿ‍್ ದೇವರ ಮೂಲಸ್ಥಳ ಕುಂಡಡ್ಕ ಬಡಿಕೆರೆಯಿಂದ ಕಲಶ ತರುವುದು. 9 ಗಂಟೆಗೆ ಕಂಪ ಬನತ್ತಡಿ ಶ್ರೀ ನಾಗದೇವರ ಪ್ರತಿಷ್ಠಾ ಮಹೋತ್ಸವ ಪ್ರಯುಕ್ತ ಹಾಲಾಭಿಷೇಕ, ತಂಬಿಲ ಮತ್ತು ಆಶ್ಲೇಷ ಬಲಿ

ಫೆ.13-14 : ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವ Read More »

ಫೆ.8 : ಮೆಸ್ಕಾಂ ಜನಸಂಪರ್ಕ ಸಭೆ

ಪುತ್ತೂರು : ಮೆಸ್ಕಾಂ ಪುತ್ತೂರು ನಗರ ಹಾಗೂ ಕುಂಬ್ರ ಗ್ರಾಮಾಂತರ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆ ಫೆ.8 ಬುಧವಾರ ಬೆಳಿಗ್ಗೆ 11 ರಿಂದ ನಡೆಯಲಿದೆ. ಮಂಗಳೂರು ವೃತ್ತ ಕಚೇರಿ ಅಧೀಕ್ಷಕ ಇಂಜಿನಿಯರ್ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಗ್ರಾಹಕರು ತಮ್ಮ G-mail account ಮೂಲಕ Oo meet.google.com/vmc-jrey-tqq ಲಿಂಕ್ನಲ್ಲಿ ವೀಡಿಯೋ ಸಂವಾದ ಮತ್ತು ದೂರವಾಣಿ ಮೂಲಕ ತಮ್ಮ ದೂರುಗಳನ್ನು ಸಲ್ಲಿಸಬಹುದು ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಫೆ.8 : ಮೆಸ್ಕಾಂ ಜನಸಂಪರ್ಕ ಸಭೆ Read More »

ಇತಿಹಾಸ ಪ್ರಸಿದ್ಧ 30ನೇ ವರ್ಷದ ಪುತ್ತೂರು ಕೋಟಿ-ಚೆನ್ನಯ ಹೊನಲು ಬೆಳಕಿನ ಕಂಬಳ

ಪುತ್ತೂರು: ಇತಿಹಾಸ ಪ್ರಸಿದ್ಧ ಹೊನಲು ಬೆಳಕಿನ 30ನೇ ವರ್ಷದ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳದ ಅಂಗವಾಗಿ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಕಂಬಳದ 30ನೇ ವರ್ಷದ ನೆನಪಿಗಾಗಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ರಾಜ್ಯ ಸಹಕಾರ ಮಂಡಲದ ಅಧ್ಯಕ್ಷ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕಂಬಳ ಕೂಟಕ್ಕೆ ಮೂರನೇ ತೀರ್ಪುಗಾರರಾಗಿ ಸೆನ್ಸಾರ್ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಿದ ಡಾ.ಎಂ.ಎನ್.ರಾಜೇಂದ್ರ ಕುಮಾರ್

ಇತಿಹಾಸ ಪ್ರಸಿದ್ಧ 30ನೇ ವರ್ಷದ ಪುತ್ತೂರು ಕೋಟಿ-ಚೆನ್ನಯ ಹೊನಲು ಬೆಳಕಿನ ಕಂಬಳ Read More »

“ಪ್ರಭೋ ಶಕ್ತಿಮನ್ ಹಿಂದು ರಾಷ್ಟ್ರಾಂಗ ಭೂತಾ” | `ಪಂಚವಟಿ’ ಲೋಕಾರ್ಪಣೆ | ಶಿಸ್ತಿನ ಸಿಪಾಯಿಗಳ ಶಿಸ್ತುಬದ್ಧ ಕಾರ್ಯಾಲಯ

ಪುತ್ತೂರು: ಮುನಿ ಪುಂಗವರ ತಪಸ್ಸಿನ ಕೇಂದ್ರ ಪಂಚವಟಿಗೆ ಪೌರಾಣಿಕ ಮಹತ್ವ. ಪುತ್ತೂರಿನ ಆರ್.ಎಸ್.ಎಸ್. ಶಿಸ್ತುಬದ್ಧ ಸಿಪಾಯಿಗಳ ಕಾರ್ಯಾಲಯ ಪಂಚವಟಿಗೆ ಐತಿಹಾಸಿಕ ಮಹತ್ವ. ಸೋಮವಾರ ನಡೆದ ಶಿಸ್ತಿನ ಸಮಾರಂಭದಲ್ಲಿ ಪಂಚವಟಿ ಲೋಕಾರ್ಪಣೆಗೊಂಡಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ್ ಅವರು ಬೌದ್ಧಿಕಲ್ಲಿ ತಿಳಿಸಿದಂತೆ, “ಪುತ್ತೂರು ಜಿಲ್ಲೆಯ ಆರ್.ಎಸ್.ಎಸ್ ಕಾರ್ಯಾಲಯ ದೇಶಕ್ಕೆ ಮಾದರಿಯಾಗಿ ನಿಂತಿದೆ”. ಹಿಂದೆ ಪಂಚವಟಿ ಇದ್ದ ಜಾಗದಲ್ಲೇ ಹೊಸ ಕಟ್ಟಡ ತಲೆಎತ್ತಿದೆ. ಎರಡಂತಸ್ತಿನ ಬೃಹತ್ ಕಟ್ಟಡ, ಆರ್.ಎಸ್.ಎಸ್. ಕಾರ್ಯಚಟುವಟಿಕೆಗಳಿಗೆ ತೆರೆದುಕೊಂಡಿದೆ. ಕೇಶವಸ್ಮೃತಿ ಸಂವರ್ಧನ ಸಮಿತಿಯಡಿ

“ಪ್ರಭೋ ಶಕ್ತಿಮನ್ ಹಿಂದು ರಾಷ್ಟ್ರಾಂಗ ಭೂತಾ” | `ಪಂಚವಟಿ’ ಲೋಕಾರ್ಪಣೆ | ಶಿಸ್ತಿನ ಸಿಪಾಯಿಗಳ ಶಿಸ್ತುಬದ್ಧ ಕಾರ್ಯಾಲಯ Read More »

ಕುಂಬ್ಲಾಡಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶ, ಮಾಚಿಲ ಶ್ರೀ ಉಳ್ಳಾಕ್ಲು ಶ್ರೀ ಉಳ್ಳಾಲ್ತಿ ಪ್ರತಿಷ್ಠೆ, ನೇಮೋತ್ಸವ

ಪುತ್ತೂರು: ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಮಣ್ಯ ದೇವಸ್ಥಾನದಲ್ಲಿಡಿ. 31ರಿಂದ ಜ. 7ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮಾಚಿಲ ಶ್ರೀ ಉಳ್ಳಾಕ್ಲು ಹಾಗೂ ಶ್ರೀ ಉಳ್ಳಾಲ್ತಿ ಪ್ರತಿಷ್ಠೆ ಮತ್ತು ನೇಮೋತ್ಸವ ನಡೆಯಲಿದೆ. 31ರಂದು ಬೆಳಿಗ್ಗೆ 8ಕ್ಕೆ ಅರುವಗುತ್ತು ಮನೆಯಿಂದ ದೇವರ ಆಭರಣ ತರುವುದು, 8:30ಕ್ಕೆ ನಾಲ್ಕಂಬ ಕ್ಷೇತ್ರದಲ್ಲಿ ಪ್ರಾರ್ಥನೆ, ಹೊರಕಾಣಿಕೆ ತರಲಾಗುವುದು. 9ಕ್ಕೆ ದೇವಾಲಯದಲ್ಲಿ ತೋರಣ ಮುಹೂರ್ತ, 12ಕ್ಕೆ ಮಹಾಪೂಜೆ, ಸಂಜೆ 5ಕ್ಕೆ ತಂತ್ರಿ ಪರಿವಾರದವರ ಆಗಮನ, ಸ್ವಾಗತ. ರಾತ್ರಿ 7ಕ್ಕೆ ಪ್ರಾಸಾದ ಪರಿಗ್ರಹ, ಪುಣ್ಯಾಹ, ಅಂಕುರಾರ್ಪಣೆ, ವಾಸ್ತು

ಕುಂಬ್ಲಾಡಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶ, ಮಾಚಿಲ ಶ್ರೀ ಉಳ್ಳಾಕ್ಲು ಶ್ರೀ ಉಳ್ಳಾಲ್ತಿ ಪ್ರತಿಷ್ಠೆ, ನೇಮೋತ್ಸವ Read More »

ಜ. 1: ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯ

ಪುತ್ತೂರು: ಕೆಲಿಂಜ ಕೇಸರಿ ಫ್ರೆಂಡ್ಸ್, ಬಂಟ್ವಾಳ ತಾಲೂಕು ಅಮೆಚೂರು ಅಸೊಸಿಯೇಶನ್ ಆಶ್ರಯದಲ್ಲಿ 65 ಕೆ.ಜಿ. ವಿಭಾಗದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಜ. 1ರಂದು ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ ನಡೆಯಲಿದೆ. ಬಿಪಿನ್ ರಾವತ್ ವೇದಿಕೆಯಲ್ಲಿ ಬೆಳಿಗ್ಗೆ 9.30ಕ್ಕೆ ಆರಂಭವಾಗುವ ಕಾರ್ಯಕ್ರಮವನ್ನು ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಶಂಕರನಾರಾಯಣ ಭಟ್ ಪುಂಡಿಕೈ ಉದ್ಘಾಟಿಸಲಿದ್ದಾರೆ. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ವೀರಕಂಭ ಗ್ರಾ.ಪಂ. ಅಧ್ಯಕ್ಷ ದಿನೇಶ್ ಪೂಜಾರಿ ವೀರಕಂಭ, ನೇರಳಕಟ್ಟೆ ಸಹಕಾರಿ ವ್ಯವಸಾಯಿಕ ಬ್ಯಾಂಕ್

ಜ. 1: ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯ Read More »

ಸನ್ಮಾನ: ಗೌಡ ಸಮಾಜದ ಸಾಧಕರ ಮಾಹಿತಿಗೆ ಮನವಿ

ಪುತ್ತೂರು: ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ವತಿಯಿಂದ ಗೌಡ ಸಮಾಜದ ರಾಜ್ಯಮಟ್ಟದ, ರಾಷ್ಟ್ರಮಟ್ಟದ, ಅಂತಾರಾಷ್ಟ್ರೀಯ ಮಟ್ಟದ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಸಮಾಜದ ಸಾಧಕರ ಪರಿಚಯವನ್ನು ನೀಡುವಂತೆ ಪ್ರಕಟಣೆ ತಿಳಿಸಿದೆ. ಜ. 8ರಂದು ಬೆಂಗಳೂರಿನ ಲಗ್ಗೆರೆ ಕೆಡಿಕೆ ನಮ್ಮನೆಯಲ್ಲಿ ಗೌಡ ಸಮಾಜದ ಹತ್ತು ಕುಟುಂಬ ಹದಿನೆಂಟು ಗೋತ್ರದ 5 ಸಾಧಕರಿಗೆ ಸನ್ಮಾನಿಸು ಕಾರ್ಯಕ್ರಮ ನಡೆಯಲಿದೆ. ಗೌಡ ಸಮಾಜದ ರಾಜ್ಯಮಟ್ಟದ, ರಾಷ್ಟ್ರಮಟ್ಟದ, ಅಂತಾರಾಷ್ಟ್ರೀಯ ಮಟ್ಟದ ಸಾಧಕರ ಪರಿಚಯ ನೀಡಲು ಕೊನೆ ದಿನ ಡಿ.

ಸನ್ಮಾನ: ಗೌಡ ಸಮಾಜದ ಸಾಧಕರ ಮಾಹಿತಿಗೆ ಮನವಿ Read More »

ಕೋವಿಡ್ ಮುನ್ನೆಚ್ಚರಿಕೆ ಪಾಲಿಸಲು ದ.ಕ. ಜಿಲ್ಲಾಧಿಕಾರಿ ಸೂಚನೆ

ಮಂಗಳೂರು: ಕೋವಿಡ್ ಸೋಂಕಿನ ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲ ಕ್ರಮಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.ಚೀನಾ, ಅಮೆರಿಕ ಮೊದಲಾದ ದೇಶಗಳಲ್ಲಿ ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದ್ದರಿಂದ ಭಾರತದಲ್ಲೂ ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಇದರಂತೆ ದ.ಕ. ಜಿಲ್ಲೆಯಲ್ಲೂ ಮಾರ್ಗಸೂಚಿಯನ್ನು ಪಾಲಿಸುವಂತೆ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರ ಹೊರಡಿಸುವ ಎಲ್ಲಾ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.

ಕೋವಿಡ್ ಮುನ್ನೆಚ್ಚರಿಕೆ ಪಾಲಿಸಲು ದ.ಕ. ಜಿಲ್ಲಾಧಿಕಾರಿ ಸೂಚನೆ Read More »

error: Content is protected !!
Scroll to Top