ಗಡಾಯಿಕಲ್ಲು ಚಾರಣಕ್ಕೆ ತಾತ್ಕಾಲಿಕ ನಿಷೇಧ
ಬೆಳ್ತಂಗಡಿ: ತಾಲೂಕಿನ ನಡ ಗ್ರಾಮದ ಇತಿಹಾಸ ಪ್ರಸಿದ್ಧ ಗಡಾಯಿಕಲ್ಲು ಚಾರಣಕ್ಕೆ ಜು.7 ರಿಂದ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಭಾರೀ ಮಳೆ ಸುರಿಯುತ್ತಿದ್ದು, ಕಲ್ಲುಗಳಿಂದ ಆವೃತವಾಗಿರುವ ಈ ಸ್ಥಳ ಜಾರುವ ಪ್ರದೇಶವಾಗಿದ್ದು, ಚಾರಣಿಗರಿಗೆ ಸಮಸ್ಯೆ ಉಂಟಾಗುವ ಮೊದಲೇ ಈ ಆದೇಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿರುವ ಗಡಾಯಿಕಲ್ಲಿಗೆ ಜು.7ರಿಂದ ಮುಂದಿನ ಆದೇಶದ ತನಕ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ ಎಂದು ವನ್ಯ ಜೀವಿ ವಿಭಾಗದ ಬೆಳ್ತಂಗಡಿ ಆರ್ ಎಫ್ ಒ ಸ್ವಾತಿ ತಿಳಿಸಿದ್ದಾರೆ.
ಗಡಾಯಿಕಲ್ಲು ಚಾರಣಕ್ಕೆ ತಾತ್ಕಾಲಿಕ ನಿಷೇಧ Read More »