ದಕ್ಷಿಣ ಕನ್ನಡ

ಚಾರ್ಮಾಡಿ ಘಾಟಿ : ಕಂದಕಕ್ಕೆ ಉರುಳಿದ ಕಾರು, ಮಹಿಳೆ ಮೃತ

ಉಜಿರೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಪ್ರಯಾಣಿಸುತ್ತಿದ್ದ ಕಾರು ಬೆಳ್ತಂಗಡಿ : ಚಾರ್ಮಾಡಿ ಘಾಟಿಯ ಎರಡನೇ ತಿರುವಿನಲ್ಲಿ ಕಾರು ಕಂದಕಕ್ಕೆ ಉರುಳಿ ಬಿದ್ದು ಉಜಿರೆ ಗ್ರಾಮ ಪಂಚಾಯತ್‌ ಅಧ್ಯಕ್ಷೆಯ ಸಂಬಂಧಿಕ ಮಹಿಳೆಯೋರ್ವರು ಮೃತಪಟ್ಟ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ಉಜಿರೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಪುಷ್ಪಾವತಿ ಆರ್‌.ಶೆಟ್ಟಿಯವರು ಕುಟುಂಬದ ಜತೆ ಕೊಪ್ಪದಲ್ಲಿ ಅಂತ್ಯಕ್ರಿಯೆಯೊಂದರಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದಾಗ ಚಾರ್ಮಾಡಿಯ ಎರಡನೇ ತಿರುವಿನಲ್ಲಿ ಕಾರು ಬ್ರೇಕ್‌ ಫೈಲ್‌ ಆಗಿ ಸುಮಾರು 100 ಅಡಿ ಆಳದ ಕಂದಕಕ್ಕೆ ಉರುಳಿದೆ. ಅಪಘಾತದಲ್ಲಿ ಪುಷ್ಪಾವತಿ ಆರ್‌. […]

ಚಾರ್ಮಾಡಿ ಘಾಟಿ : ಕಂದಕಕ್ಕೆ ಉರುಳಿದ ಕಾರು, ಮಹಿಳೆ ಮೃತ Read More »

ಬೆಳ್ತಂಗಡಿಯ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿ – ಕರಾವಳಿಯಲ್ಲಿ ಮಳೆ ಸಾಧ್ಯತೆ

ಬೆಳ್ತಂಗಡಿ/ಮಂಗಳೂರು : ಮನೆಯ ಮೇಲೆ ತೆಂಗಿನಮರ ಬಿದ್ದು ಸಂಪೂರ್ಣ ಹಾನಿಗೀಡಾಗಿರುವ ಘಟನೆ ಪಡಂಗಡಿ ಗ್ರಾಮದ ಬದ್ಯಾರು ಸಮೀಪದ ಕಳೆಂಜಿರೋಡಿ ಎಂಬಲ್ಲಿ ಎ.8 ರಂದು ಸಂಭವಿಸಿದೆ. ಪಡಂಗಡಿಯ ಜೊಬೆಲ್ಲಾ ಫೆಲಿಕ್ಸ್‌ ಅವರ ಮನೆಗೆ ಶುಕ್ರವಾರ ರಾತ್ರಿ ತೆಂಗಿನ ಮರ ಬಿದ್ದ ಪರಿಣಾಮ ಮನೆ ಸಂಪೂರ್ಣ ಹಾನಿಗೀಡಾಗಿದ್ದು, ಆ ಸಂದರ್ಭ ಮನೆಯಲ್ಲಿ ಯಾರೂ ಇಲ್ಲದ ಕಾರಣ ಜೀವಹಾನಿ ತಪ್ಪಿದೆ.ಫೆಲಿಕ್ಸ್‌ ಅವರ ಪುತ್ರ ನವೀನ ಹಾಗೂ ಆತನ ಪತ್ನಿ, ಇಬ್ಬರು ಮಕ್ಕಳು ಮನೆಯಲ್ಲಿ ವಾಸವಾಗಿದ್ದರು. ಆದರೆ ಪೂಜೆ ನಿಮಿತ್ತ ಅವರೆಲ್ಲರೂ ಚರ್ಚ್‌ಗೆ

ಬೆಳ್ತಂಗಡಿಯ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿ – ಕರಾವಳಿಯಲ್ಲಿ ಮಳೆ ಸಾಧ್ಯತೆ Read More »

ಪುತ್ತೂರು : ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆದಂಬಾಡಿ ಗ್ರಾಮದ ಗುತ್ತು ಎಂಬಲ್ಲಿ ಎ. 7 ರಂದು ಸಂಭವಿಸಿದೆ. ಯಶವಂತ ಜಿ ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ಇವರು ಎ. 5 ರ ರಾತ್ರಿ ತನ್ನ ಅಣ್ಣನ ಮೊಬೈಲ್ ಗೆ ಕರೆ ಮಾಡಿ ಮಾತನಾಡಿದ್ದು, ಆ ಬಳಿಕ ಕರೆ ಮಾಡಿದರೂ ಸ್ವೀಕರಿಸದೇ, ತನ್ನ ಮನೆಗೂ ಬಾರದೇ, ಎ. 7 ರ ಸಂಜೆ ಕೆದಂಬಾಡಿ ಗ್ರಾಮದ ಗುತ್ತು ಎಂಬಲ್ಲಿ ಮ್ಯಾಂಜಿಯಮ್ ಮರಕ್ಕೆ ನೈಲಾನ್

ಪುತ್ತೂರು : ನೇಣು ಬಿಗಿದು ಆತ್ಮಹತ್ಯೆ Read More »

ಸತತ ನಾಲ್ಕು ದಿನಗಳ ರಜೆಯ ಹಿನ್ನೆಲೆ ದೇವಸ್ಥಾನಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಜನಸಾಗರ

​​ಗೋ ಗರ್ಭ ಅಣೆಕಟ್ಟು ದಾಟಿದ ತಿಮ್ಮಪ್ಪನ ದರ್ಶನದ ಸಾಲು ಕೊಲ್ಲೂರು ಶ್ರೀ ಮೂಕಾಂಬಿಕೆ ಕ್ಷೇತ್ರದಲ್ಲಿ ಸಾಲುಗಟ್ಟಿ ನಿಂತ ಭಕ್ತಸಮೂಹ ಪುತ್ತೂರು : ರಜೆಯ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಭಕ್ತಜನಸಾಗರವೇ ಹರಿದು ಬರುತ್ತಿದೆ. ಈ ವಾರಾಂತ್ಯದಲ್ಲಿ ಬರೋಬ್ಬರಿ ನಾಲ್ಕು ದಿನಗಳ ರಜೆ ಇರುವುದರಿಂದ ಅಧಿಕ ಸಂಖ್ಯೆಯಲ್ಲಿ ಜನರು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ತಿರುಮಲದಲ್ಲಿ ದೇವರ ದರ್ಶನಕ್ಕೆ ಎರಡು ದಿನ ಬೇಕಾಗುವುದರಿಂದ ಟ್ರಾಫಿಕ್ ಅನ್ನು ಗಮನದಲ್ಲಿಟ್ಟುಕೊಂಡು ಭಕ್ತರು ತಮ್ಮ ಪ್ರವಾಸವನ್ನು ಯೋಜಿಸಬೇಕೆಂದು ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಕೋರಿದೆ. ತಿರುಮಲ

ಸತತ ನಾಲ್ಕು ದಿನಗಳ ರಜೆಯ ಹಿನ್ನೆಲೆ ದೇವಸ್ಥಾನಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಜನಸಾಗರ Read More »

ಡಿವೈಡರ್‌ ಗೆ ಕಾರು ಡಿಕ್ಕಿ : ನಂದರಬೆಟ್ಟು ಸದಾಶಿವ ಆಚಾರ್ಯ ಮೃತ್ಯು

ಬಂಟ್ವಾಳ : ಕಾರೊಂದು ಡಿವೈಡರ್ ಗೆ ಡಿಕ್ಕಿ ಹೊಡೆದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಎ. 7 ರಂದು ರಾಷ್ಟ್ರೀಯ ಹೆದ್ದಾರಿ ಮಂಗಳೂರು – ಬೆಂಗಳೂರು ರಸ್ತೆಯ ಬಿಸಿರೋಡಿನಲ್ಲಿ ಸಂಭವಿಸಿದೆ. ನಂದರಬೆಟ್ಟು ನಿವಾಸಿ ಸದಾಶಿವ ಆಚಾರ್ಯ (77) ಎಂಬವರೇ ಮೃತಪಟ್ಟ ವ್ಯಕ್ತಿ. ಮಂಗಳೂರು – ಬೆಂಗಳೂರು ರಸ್ತೆಯ ಬಿಸಿರೋಡಿನಲ್ಲಿ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ, ಸದಾಶಿವ ಆಚಾರ್ಯ ಮೃತಪಟ್ಟು, ಅವರ ಮೊಮ್ಮಗ ಚಾಲಕ ಅಕಾಶ್, ಅಳಿಯ ಸುರೇಶ್ ಆಚಾರ್ಯ, ಮಗ ಗಣೇಶ್ ಆಚಾರ್ಯ ಅವರು ಅಲ್ಪಸ್ವಲ್ಪ

ಡಿವೈಡರ್‌ ಗೆ ಕಾರು ಡಿಕ್ಕಿ : ನಂದರಬೆಟ್ಟು ಸದಾಶಿವ ಆಚಾರ್ಯ ಮೃತ್ಯು Read More »

ಮಂಗಳೂರು : ಮೂರು ಶೂಟೌಟ್‌ ಪ್ರಕರಣದಲ್ಲಿ ಬನ್ನಂಜೆರಾಜ ಖುಲಾಸೆ

ಮಂಗಳೂರು : ಕುಖ್ಯಾತ ಪಾತಕಿ ಬನ್ನಂಜೆರಾಜನ ವಿರುದ್ದ ಮಂಗಳೂರಿನಲ್ಲಿ ದಾಖಲಾಗಿದ್ದ 3 ಶೂಟೌಟ್‌ ಪ್ರಕರಣಗಳಲ್ಲಿ ಖುಲಾಸೆಗೊಂಡಿದೆ. ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೂರೂ ಪ್ರಕರಣಗಳಲ್ಲಿ ಖುಲಾಸೆಗೊಳಿಸಿ ತೀರ್ಪು ನೀಡಿದೆ.ಈತನ ವಿರುದ್ದ ಪಾಂಡೇಶ್ವರ ಪೊಲೀಸ್‌ ಠಾಣೆ, ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಮೂರೂ ಪ್ರಕರಣಗಳಲ್ಲಿ ಪೊಲೀಸರು ತನಿಖೆ ನಡೆಸಿ ಬನ್ನಂಜೆರಾಜ ಮತ್ತು ಆತನ ಸಹಚರರ ಮೇಲೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಘಟನೆಗಳ ವೇಳೆಯಲ್ಲಿ ಬನ್ನಂಜೆರಾಜ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. 2015 ನೇ ಇಸವಿಯಲ್ಲಿ

ಮಂಗಳೂರು : ಮೂರು ಶೂಟೌಟ್‌ ಪ್ರಕರಣದಲ್ಲಿ ಬನ್ನಂಜೆರಾಜ ಖುಲಾಸೆ Read More »

ಹಿರಿಯ ದೈವಪಾತ್ರಿ ಅಣ್ಣು ಶೆಟ್ಟಿ ದೈವಾಧೀನ

ಮೂಡುಬಿದಿರೆ : ಹಿರಿಯ ದೈವಪಾತ್ರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಾಡಿ ಅಣ್ಣು ಶೆಟ್ಟಿ(78) ಅವರು ಅಲ್ಪಕಾಲದ ಅಸೌಖ್ಯದಿಂದ ಏ. 7 ರಂದುನ ನಿಧನ ಹೊಂದಿದರು. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಇವರು ಶುಕ್ರವಾರದ ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಲಾಡಿ ಹಜಂಕಾಲಬೆಟ್ಟು, ಮಾರ್ನಾಡು, ತೋಡಾರು ಸಹಿತ ದ.ಕ ಜಿಲ್ಲೆಯ ಕಾರ್ಕಳ ತಾಲೂಕಿನ ಹಲವಾರು ದೈವಸ್ಥಾನಗಳಲ್ಲಿ ದೈವಪಾತ್ರಿಯಾಗಿ ಸೇವೆ ಸಲ್ಲಿಸಿದ್ದರು. ಮೂಡಬಿದಿರೆಯ ಮಾಸ್ತಿಕಟ್ಟೆಯಲ್ಲಿ ವಾಸವಾಗಿದ್ದ ಇವರ ಅಂತ್ಯಸಂಸ್ಕಾರವು ಮಾರ್ನಾಡು ಕಲ್ಲಬೆಟ್ಟು ಗುತ್ತುಮನೆಯಲ್ಲಿ ನಡೆಯಿತು. ಅವರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು

ಹಿರಿಯ ದೈವಪಾತ್ರಿ ಅಣ್ಣು ಶೆಟ್ಟಿ ದೈವಾಧೀನ Read More »

ಕೈತಪ್ಪಿದ ಟಿಕೆಟ್​ಗಾಗಿ ಬಹಿರಂಗ ಪತ್ರದ ಮೂಲಕ ಅಭಿಮಾನಿಗಳಿಗೊಂದು ಮನವಿ ಮಾಡಿದ ದತ್ತಾ

ಚಿಕ್ಕಮಗಳೂರು : ಟಿಕೆಟ್​ ಖಚಿತ ಎಂದು ಭರವಸೆ ಸಿಕ್ಕ ಮೇಲೆಯೇ ಜೆಡಿಎಸ್​ ಬಿಟ್ಟು ಕಾಂಗ್ರೆಸ್​ ಸೇರ್ಪಡೆಯಾಗಿದ್ದ ಮಾಜಿ ಶಾಸಕ ವೈಎಸ್​ವಿ ದತ್ತಾಗೆ ಕಾಂಗ್ರೆಸ್ ಟಿಕೆಟ್​ ತಪ್ಪಿದೆ. ಕಾಂಗ್ರಸ್ ಸಿಗುತ್ತೆ ಎಂದು ಬಹಳ ನಿರೀಕ್ಷೆಗಳೊಂದಿಗೆ ದತ್ತಾ ಜೆಡಿಎಸ್ ಬಿಟ್ಟುಬಂದಿದ್ದರು. ಆದ್ರೆ, ಅಂತಿಮವಾಗಿ ಕಾಂಗ್ರೆಸ್​, ಆನಂದ್​ ಅವರಿಗೆ ಮಣೆ ಹಾಕಿದೆ. ಇದರಿಂದ ದತ್ತಾ ಅಸಮಾಧಾನಗೊಂಡಿದ್ದು, ಅಭಿಮಾನಿಗಳಿಗೆ ಒಂದು ಬಹಿರಂಗಪತ್ರ ಬರೆದಿದ್ದಾರೆ. ಇದರೊಂದಿಗೆ ಕಾಂಗ್ರೆಸ್​ ನಾಯಕರ ವಿರುದ್ಧ ಸಿಡಿದೆದ್ದಿದ್ದು, ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನಿಸಲು ಅಭಿಮಾನಿಗಳ ಸಭೆ ಕರೆದಿದ್ದಾರೆ.ನನ್ನ ಮತ್ತು

ಕೈತಪ್ಪಿದ ಟಿಕೆಟ್​ಗಾಗಿ ಬಹಿರಂಗ ಪತ್ರದ ಮೂಲಕ ಅಭಿಮಾನಿಗಳಿಗೊಂದು ಮನವಿ ಮಾಡಿದ ದತ್ತಾ Read More »

ವಿಮಾನ ಲ್ಯಾಂಡಿಂಗ್‌ ವೇಳೆ ತೊಡಕು

ಪ್ರಯಾಣಿಕರು ಪಾರು ಮಂಗಳೂರು : ಬೆಂಗಳೂರಿನಿಂದ ಮಂಗಳೂರಿಗೆ ಬಂದ ಇಂಡಿಗೋ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ಆಗುವ ವೇಳೆ ತೊಡಕು ಉಂಟಾದ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದ ಇಂಡಿಗೋ 6E6858 ವಿಮಾನ ಲ್ಯಾಂಡಿಂಗ್‌ ಆಗುವ ವೇಳೆ ತೊಂದರೆ ಉಂಟಾಗಿದೆ. ಈ ವೇಳೆ ಮತ್ತೊಮ್ಮೆ ವಿಮಾನವನ್ನು ಟೇಕ್‌ ಆಫ್‌ ಮಾಡಿ ಪುನಃ ಲ್ಯಾಂಡ್‌ ಮಾಡಲಾಗಿದೆ. ಪ್ರಯಾಣಿಕರು ಸುರಕ್ಷಿತವಾಗಿ ಬಂದಿಳಿದಿದ್ದಾರೆ.

ವಿಮಾನ ಲ್ಯಾಂಡಿಂಗ್‌ ವೇಳೆ ತೊಡಕು Read More »

ಬಲ್ಗೇರಿಯಾದಲ್ಲಿ ಉದ್ಯೋಗ ಕೊಡಿಸುವುದಾಗಿ 50 ಲಕ್ಷ ರೂಪಾಯಿ ವಂಚನೆ : ಆರೋಪಿ ಬಂಧನ

ಮಂಗಳೂರು : ಬಲ್ಗೇರಿಯಾದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, 30ಕ್ಕೂ ಹೆಚ್ಚು ಮಂದಿಗೆ ವಂಚಿಸಿ, 50 ಲಕ್ಷಕ್ಕೂ ಹೆಚ್ಚು ಹಣ ವಸೂಲಿ ಮಾಡಿದ ಆರೋಪದ ಮೇಲೆ ಮಂಗಳೂರಿನ ವ್ಯಕ್ತಿಯೊಬ್ಬನನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಿಜೈ ಮೂಲದ ಸುಧೀರ್ ರಾವ್ ವಿ ಆರ್. ಬಲ್ಗೇರಿಯಾದಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಹಲವರಿಂದ 50 ಲಕ್ಷ ರೂ.ಗೂ ಹೆಚ್ಚು ಹಣವನ್ನು ವಸೂಲಿ ಮಾಡಿದ್ದನು. ಹಣ ಪಡೆದಿದ್ದ ಆತ ನಂತರ ವೀಸಾ ಕೊಡಿಸಿಲ್ಲ ಅಥವಾ ಹಣವನ್ನು ಹಿಂದಿರುಗಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿ

ಬಲ್ಗೇರಿಯಾದಲ್ಲಿ ಉದ್ಯೋಗ ಕೊಡಿಸುವುದಾಗಿ 50 ಲಕ್ಷ ರೂಪಾಯಿ ವಂಚನೆ : ಆರೋಪಿ ಬಂಧನ Read More »

error: Content is protected !!
Scroll to Top