ಅಕ್ರಮ ಮರಳುಗಾರಿಕೆ ಕುರಿತು ಇಲಾಖಾಧಿಕಾರಿಗಳಿಗೆ ಸ್ಥಳೀಯರಿಂದ ದೂರು | ಮರಳುಗಾರಿಕೆ ಸಕ್ರಮ ಎಂದು ಪರಿಶೀಲಿಸಿದ ಅಧಿಕಾರಿಗಳಿಂದ ಸ್ಪಷ್ಟನೆ | ಇನ್ನುಮುಂದೆ ಅಡ್ಡಿಪಡಿಸಿದರೆ ಕಾನೂನು ಕ್ರಮದ ಎಚ್ಚರಿಕೆ
ಕಡಬ: ತಾಲೂಕಿನ ಪೇರಾಬೆ ಗ್ರಾಮದ ಕುಮಾರಧಾರ ನದಿಯಲ್ಲಿ ಪರವಾನಿಗೆ ಪಡೆದು ಮರುಳುಗಾರಿಕೆ ನಡೆಸುತ್ತಿದ್ದರೂ, ಸ್ಥಳೀಯರಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಬಗ್ಗೆ ಆರೋಪಗಳು ಕೇಳಿ ಬಂದಿದ್ದು, ಇಲಾಖೆಗಳಿಗೂ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಗಣಿ ಇಲಾಖೆ ಅಧಿಕಾರಿಗಳಾದ ವಸುದ ಜಿಪಿಎಸ್ ಅಧಿಕಾರಿ ಯಶವಂತ್, ಕಡಬ ಪೊಲೀಸ್ ಇಲಾಖೆ ಸಬ್ ಇನ್ಸ್ಪೆಕ್ಟರ್, ಸಿಬ್ಬಂದಿ ವರ್ಗ ಕಂದಾಯ ಇಲಾಖೆ ಅಧಿಕಾರಿ ಸಂತೋಷ್, ಪೇರಾಬೆ ಗ್ರಾಮ ಪಂಚಾಯಿತಿ ಪಿಡಿಯೋ ಉಪಸ್ಥಿತಿಯಲ್ಲಿ ತನಿಖೆ ನಡೆಸಿ ಗಡಿ ಗುರುತು ಮಾಡಿದ್ದು, ಇಲ್ಲಿ ನಡೆಯುತ್ತಿರುವ ಮರಳುಗಾರಿಕೆ […]










