ದಕ್ಷಿಣ ಕನ್ನಡ

ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ

ಮಂಗಳೂರು: ಪತ್ರಕರ್ತ, ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಮುಖ್ಯ ವರದಿಗಾರ ಭುವನೇಂದ್ರ ಪುದುವೆಟ್ಟು (42) ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಪಿತ್ಥಕೋಶದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೇಳಲಾಗಿದೆ. ಧರ್ಮಸ್ಥಳ ಗ್ರಾಮದ ಪುದುವೆಟ್ಟು ನಿವಾಸಿ ನಾರಾಯಣ ಪೂಜಾರಿ ಮತ್ತು ಮೋಹಿನಿ ದಂಪತಿಯ ಪುತ್ರರಾದ ಭುವನೇಂದ್ರ ಅವರಿಗೆ ಎರಡು ದಿನಗಳ ಹಿಂದೆ ತೀವ್ರ ಹೊಟ್ಟೆನೋವು ಮತ್ತು ವಾಂತಿ ಕಾಣಿಸಿಕೊಂಡಿದ್ದರಿಂದ ಅವರನ್ನು ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ತಪಾಸಣೆ ವೇಳೆ ಪಿತ್ತಕೋಶದಲ್ಲಿ ಕಲ್ಲು ಇರುವುದರಿಂದ ಅಕ್ಯುಟ್ ಪ್ರಾಂಕಿಯಾಸಿಸ್ ಇರುವುದು […]

ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ Read More »

ಕೆದಿಲ ಗ್ರಾಮದ ಗಡಿಯಾರದಲ್ಲಿ ಸಿಡಿಲು ಬಡಿದು ಬಾಲಕ ಮೃತ್ಯು

ಬಂಟ್ವಾಳ: ಸಿಡಿಲು ಬಡಿದು ಬಾಲಕನೋರ್ವ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಗಡಿಯಾರದಲ್ಲಿ ಭಾನುವಾರ ಸಂಜೆ ನಡೆದಿದೆ. ಕೆದಿಲ ಗ್ರಾಮದ ಗಡಿಯಾರ ನಿವಾಸಿ ಸುಭೋದ್ ಸಿ. (14) ಸಿಡಿಲು ಬಡಿದು ಮೃತಪಟ್ಟವರು. ಈ ಕುರಿತು ಕಂದಾಯ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದು, ಮರಣೋತ್ತರ ಪರೀಕ್ಷೆಗಾಗಿ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕೆದಿಲ ಗ್ರಾಮದ ಗಡಿಯಾರದಲ್ಲಿ ಸಿಡಿಲು ಬಡಿದು ಬಾಲಕ ಮೃತ್ಯು Read More »

ಉಚ್ಚಿಲ ರೆಸಾರ್ಟ್‍ ನ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಮೃತ್ಯು

ಮಂಗಳೂರು: ಉಚ್ಚಿಲ ಸಮುದ್ರದ ಬಳಿಕ ರೆಸಾರ್ಟ್‍ ಒಂದರ ಈಜುಕೊಳದಲ್ಲಿ ಮೂವರು ಯುವತಿಯರು ಮುಳುಗಿ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಮೈಸೂರು ಕುರುಬರಹಳ್ಳಿ ನಾಲ್ಕನೇ ಕ್ರಾಸ್ ನಿವಾಸಿ ನಿಶಿತ ಎಂ.ಡಿ. (21), ಮೈಸೂರು ರಾಮಾನುಜ ರಸ್ತೆ, ಕೆ.ಆರ್ ಮೊಹಲ್ಲಾ ನಿವಾಸಿ ಪಾರ್ವತಿ ಎಸ್ (20) ಹಾಗೂ ಮೈಸೂರು ವಿಜಯ ನಗರ ದೇವರಾಜ ಮೊಹಲ್ಲ ನಿವಾಸಿ ಕೀರ್ತನ ಎನ್(21) ಮೃತಪಟ್ಟ ಯುವತಿಯರು ಮೈಸೂರು ಮೂಲದ ಯುವತಿಯರು ಉಚ್ಚಿಲ ಬೀಚ್ ಬಳಿಯ ರೆಸಾರ್ಟ್‌ ಸ್ವಮ್ಮಿಂಗ್‌ ಫುಲ್‌ನಲ್ಲಿ ಈಜಾಡುವಾಗ ಏಕಾಏಕಿ ಮುಳುಗಿ

ಉಚ್ಚಿಲ ರೆಸಾರ್ಟ್‍ ನ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಮೃತ್ಯು Read More »

ಚಾರ್ಮಾಡಿಯ ಮೃತ್ಯುಂಜಯ ನದಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ

ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಮೈಕಾನ್, ಪರ್ಲಾಣಿ ಎಂಬಲ್ಲಿರುವ ಮೃತ್ಯುಂಜಯ ನದಿಯಲ್ಲಿ  ಸ್ಥಳದಲ್ಲಿ  ಭಾನುವಾರ ಮುಂಜಾನೆ  7 ಗಂಟೆ ಸುಮಾರಿಗೆ ಮೃತ್ಯುಂಜಯ ನದಿಯಲ್ಲಿ ಒಂಟಿ ಸಲಗ ಇಂದು ಮುಂಜಾನೆ ಪ್ರತ್ಯಕ್ಷವಾಗಿದೆ. ಜನನಿಬಿಡ ಪ್ರದೇಶದ ಮೂಲಕವೇ ಬಳಿಕ ಸವಾರಿ ನಡೆಸಿ ಹೊಸಮಠ ಕಡೆಗೆ ತೆರಳಿದೆ. ಆದರೆ ಕೃಷಿ ಅಥವಾ ಇತರ ಯಾವುದೇ ಹಾನಿ ಮಾಡಿರುವುದಿಲ್ಲ. ಚಾರ್ಮಾಡಿ ಹಾಗೂ ಸುತ್ತಮುತ್ತಲ ಪರಿಸರದಲ್ಲಿ ಪದೇ ಪದೇ ಕಾಡಾನೆಗಳ ದಾಳಿಯಾಗುತ್ತಲೆ ಇದ್ದು ಆ ಭಾಗದ ಜನರು ಭಯಭೀತರಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ, ಸರಕಾರ

ಚಾರ್ಮಾಡಿಯ ಮೃತ್ಯುಂಜಯ ನದಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ Read More »

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ | ಜ್ಯೋತಿಷಿ ಪ್ರಸಾದ್ ಪಾಂಗಣ್ಣಾಯರಿಗೆ ಜಾಮೀನು ಮಂಜೂರು

ಸುಳ್ಯ: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಫೋಕ್ಸ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾದ ಕಾಣಿಯೂರು ಸಮೀಪದ ಜ್ಯೋತಿಷಿ ಪ್ರಸಾದ್ ಪಾಂಗಣ್ಯಾಯರಿಗೆ ಪುತ್ತೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನೀಡಿದೆ. ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಸೆ.19 ರಂದು ಬೆಳ್ಳಾರೆ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಇದೀಗ ಪ್ರಸಾದ್ ಪಾಂಗ್ರಣ್ಯಾಯರಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಘೋಷಣೆ ಮಾಡಿದೆ. ಆರೋಪಿಯ ಪರವಾಗಿ ಪುತ್ತೂರಿನ

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ | ಜ್ಯೋತಿಷಿ ಪ್ರಸಾದ್ ಪಾಂಗಣ್ಣಾಯರಿಗೆ ಜಾಮೀನು ಮಂಜೂರು Read More »

ಆಕಸ್ಮಿಕವಾಗಿ ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಪನ್ಯಾಸಕಿ ಗ್ಲೋರಿಯಾ ಆಶಾ ರೋಡ್ರಿಗಸ್ ನಿಧನ

ಮಂಗಳೂರು: ಕಾಲೇಜಿನಲ್ಲಿ ಆಕಸ್ಮಿಕವಾಗಿ ಬಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಉಪನ್ಯಾಸಕಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಂಗಳೂರು  ಅಲೋಶಿಯಸ್ ಪದವಿ ಕಾಲೇಜಿನ ಉಪನ್ಯಾಸಕಿ ಗ್ಲೋರಿಯಾ ಆಶಾ ರೋಡ್ರಿಗಸ್ (23) ಮೃತಪಟ್ಟವರು. ಬಜೆ ಪಡು ಪೆರಾರ ನಿವಾಸಿ ಗೋರಿಯಾ ಆಶಾ ರೋಡ್ರಿಗಸ್ ಒಂದು ವರ್ಷದ ಹಿಂದಷ್ಟೇ ಅಲೋಶಿಯಸ್‌ ಕಾಲೇಜಿನಲ್ಲಿಯೇ ಸ್ನಾತಕೋತ್ತರ ಪದವಿ ಪೂರೈಸಿದ್ದರು. ಬಳಿಕ ಅಲೋಶಿಯಸ್ ಕಾಲೇಜಿನಲ್ಲಿಯೇ ಬಿಕಾಂ ಪದವಿಗೆ ಕಾಮರ್ಸ್ ವಿಷಯದಲ್ಲಿ ಉಪನ್ಯಾಸಕಿಯಾಗಿ ಸೇರ್ಪಡೆಗೊಂಡಿದ್ದರು ನ.9ರಂದು ಕಾಲೇಜಿನಲ್ಲಿ ತಲೆಸುತ್ತು ಬಂದು ಬಿದ್ದ ಅವರಿಗೆ ಗಾಯವಾಗಿತ್ತು. ಅವರನ್ನು ಕಂಕನಾಡಿ

ಆಕಸ್ಮಿಕವಾಗಿ ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಪನ್ಯಾಸಕಿ ಗ್ಲೋರಿಯಾ ಆಶಾ ರೋಡ್ರಿಗಸ್ ನಿಧನ Read More »

ನ.15 : ಕಸ್ತೂರಿ ರಂಗನ್ ವರದಿ ವಿರೋಧಿಸಿ ಗುಂಡ್ಯದಲ್ಲಿ ಪ್ರತಿಭಟನೆ | ಜನರ ಭವಿಷ್ಯದ ಮೇಲಾಗುವ ಪರಿಣಾಮಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಸಮುದಾಯದವರು ಪಾಲ್ಗೊಳ್ಳಿ : ಸುರೇಶ್‍ ಬೈಲು

ಕಡಬ: ನ.15 ಶುಕ್ರವಾರ ಕಸ್ತೂರಿರಂಗನ್ ವರದಿ ವಿರೋಧಿಸಿ ಗುಂಡ್ಯದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಈ ಭಾಗದ ಜನರು ಭಾಗವಹಿಸುವ ಮೂಲಕ ಜನರ ಭವಿಷ್ಯದ ಮೇಲಾಗುವ ಪರಿಣಾಮಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಕರೆ ನೀಡಿದ್ದಾರೆ. ವರದಿ ಜಾರಿಗೆ ತುದಿಕಾಲಲ್ಲಿ ನಿಂತಿರುವ ವ್ಯವಸ್ಥೆಯ ವಿರುದ್ಧ ನಾವು ಸಂಘಟಿತವಾಗಿ ಹೋರಾಟ ಮಾಡಬೇಕಾಗಿತ್ತು. ಈ ಹಿನ್ನಲೆಯಲ್ಲಿ ನ.15ರಂದು ಗುಂಡ್ಯದಲ್ಲಿ ನಡೆಯುವ ಬೃಹತ್ ಪ್ರತಿಭಟನೆಗೆ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ

ನ.15 : ಕಸ್ತೂರಿ ರಂಗನ್ ವರದಿ ವಿರೋಧಿಸಿ ಗುಂಡ್ಯದಲ್ಲಿ ಪ್ರತಿಭಟನೆ | ಜನರ ಭವಿಷ್ಯದ ಮೇಲಾಗುವ ಪರಿಣಾಮಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಸಮುದಾಯದವರು ಪಾಲ್ಗೊಳ್ಳಿ : ಸುರೇಶ್‍ ಬೈಲು Read More »

ಕಡಬ : ಮನೆ ಕೆಡವಿದ ಅಧಿಕಾರಿಗಳು; ದಯಾಮರಣ ಯಾಚಿಸಿದ ವೃದ್ಧ ದಂಪತಿ

ಆರು ವರ್ಷಗಳಿಂದ ವಾಸವಾಗಿದ್ದ ಮನೆಯನ್ನು ದಿಢೀರ್‌ ತೆರವುಗೊಳಿಸಿದ ಕಾರಣ ವೃದ್ಧರು ಅತಂತ್ರ ಮಂಗಳೂರು : ಅಧಿಕಾರಿಗಳು ದಿಢೀರ್‌ ಎಂದು ಮನೆಯನ್ನು ಧ್ವಂಸ ಮಾಡಿದ ಕಾರಣ ಅತಂತ್ರವಾಗೊರುವ ವೃದ್ಧ ದಂಪತಿ ಮನೆ ನಿರ್ಮಿಸಕೊಡಿ ಅಥವಾ ಸಾಯಲು ಅನುಮತಿ ಕೊಡಿ ಎಂದು ಯಾಚಿಸಿ ರಾಷ್ಟ್ರಪತಿಗೆ ಪತ್ರ ಬರೆದಿರುವ ಘಟನೆ ಕಡಬದಲ್ಲಿ ಸಂಭವಿಸಿದೆ.ಕಡಬ ತಾಲೂಕಿನ ಕೌಕ್ರಾಡಿಯಲ್ಲಿ ವಾಸವಾಗಿರುವ ರಾಧಮ್ಮ ಮತ್ತು ಮುತ್ತುಸ್ವಾಮಿ ದಂಪತಿಯ ಮನೆಯನ್ನು ಇಂದು ಏಕಾಏಕಿ ಧ್ವಂಸಗೊಳಿಸಲಾಗಿದೆ. ಇದರಿಂದ ಕಂಗಾಲು ಆಗಿರುವ ದಂಪತಿ ದಯಾಮರಣಕ್ಕಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ದಂಪತಿ

ಕಡಬ : ಮನೆ ಕೆಡವಿದ ಅಧಿಕಾರಿಗಳು; ದಯಾಮರಣ ಯಾಚಿಸಿದ ವೃದ್ಧ ದಂಪತಿ Read More »

ಅನಾರೋಗ್ಯದಿಂದ ವಿದ್ಯಾರ್ಥಿ ಚಿನ್ಮಯಿ ನಿಧನ

ಬೆಳ್ತಂಗಡಿ: ಅನಾರೋಗ್ಯದಿಂದ ವಿದ್ಯಾರ್ಥಿ ಚಿನ್ಮಯಿ ಮೃತಪಟ್ಟ ಘಟನೆ ನಡೆದಿದೆ. ಚಿನ್ಮಯಿ ಎರಡು ದಿನದ ಹಿಂದೆ ಮೈಸೂರಿನಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಎನ್ನಲಾಗಿದೆ. ಮೃತರು ತಂದೆ ತಾಯಿ ಹಾಗೂ ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ.

ಅನಾರೋಗ್ಯದಿಂದ ವಿದ್ಯಾರ್ಥಿ ಚಿನ್ಮಯಿ ನಿಧನ Read More »

ಬಿ.ವೈ.ವಿಜಯೇಂದ್ರ ಅಂಬೆಗಾಲಿಡುವ ಕೂಸು ಎಂದು ಟೀಕಿಸಿದ ಸಿದ್ಧರಾಮಯ್ಯ | ಶ್ರೀ ಕೃಷ್ಣ ಪರಮಾತ್ಮ ಅಂಬೆಗಾಲಿಡುವಾಗಲೇ ಅಸುರೀ ಶಕ್ತಿಗಳನ್ನು ನಾಶಪಡಿಸಿರುವುದನ್ನ ಸಿದ್ಧರಾಮಯ್ಯನವರು ನೆನಪಿಸಿಕೊಳ್ಳಲಿ : ತಿರುಗೇಟು ನೀಡಿದ ಕಿಶೋರ್ ಕುಮಾರ್ ಪುತ್ತೂರು

ಸಂಡೂರು: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಉದ್ದೇಶಿಸಿ ‘ಅಂಬೆಗಾಲಿಡುವ ಕೂಸು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಖಡಕ್ ತಿರುಗೇಟು ನೀಡಿದ್ದಾರೆ. ‘ಶ್ರೀ ಕೃಷ್ಣ ಪರಮಾತ್ಮ ಅಂಬೆಗಾಲಿಡುವಾಗಲೇ ಅಸುರೀ ಶಕ್ತಿಗಳನ್ನು ನಾಶಪಡಿಸಿರುವುದನ್ನ ಸಿದ್ಧರಾಮಯ್ಯನವರು ನೆನಪಿಸಿಕೊಳ್ಳಲಿ” ಎಂದು ತೀಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ಸಂಡೂರಿನಲ್ಲಿ ಮಾತನಾಡಿದ ಅವರು, ತಮ್ಮ ಪಕ್ಷದ ರಾಜ್ಯಾಧ್ಯಕ್ಷರ ಕುರಿತು ಸಿಎಂ ನೀಡಿದ ಹೇಳಿಕೆಯನ್ನು ಭಾರೀ ತರಾಟೆಗೆ ತೆಗೆದುಕೊಂಡರು. ಶ್ರೀಕೃಷ್ಣನನ್ನು ವಿಜಯೇಂದ್ರನಿಗೆ ಹೋಲಿಸಿ ಮಾತನಾಡಿದ ವಿಧಾನ ಪರಿಷತ್‌

ಬಿ.ವೈ.ವಿಜಯೇಂದ್ರ ಅಂಬೆಗಾಲಿಡುವ ಕೂಸು ಎಂದು ಟೀಕಿಸಿದ ಸಿದ್ಧರಾಮಯ್ಯ | ಶ್ರೀ ಕೃಷ್ಣ ಪರಮಾತ್ಮ ಅಂಬೆಗಾಲಿಡುವಾಗಲೇ ಅಸುರೀ ಶಕ್ತಿಗಳನ್ನು ನಾಶಪಡಿಸಿರುವುದನ್ನ ಸಿದ್ಧರಾಮಯ್ಯನವರು ನೆನಪಿಸಿಕೊಳ್ಳಲಿ : ತಿರುಗೇಟು ನೀಡಿದ ಕಿಶೋರ್ ಕುಮಾರ್ ಪುತ್ತೂರು Read More »

error: Content is protected !!
Scroll to Top